Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 15:14 - ಕನ್ನಡ ಸತ್ಯವೇದವು C.L. Bible (BSI)

14 ಅವರನ್ನು ಅವರಷ್ಟಕ್ಕೇ ಬಿಡಿ; ಅವರೊ ಕುರುಡರು, ಮತ್ತೊಬ್ಬರಿಗೆ ದಾರಿ ತೋರಿಸಲು ಹೋಗುತ್ತಾರೆ. ಕುರುಡನು ಕುರುಡನಿಗೆ ದಾರಿ ತೋರಿಸಿದರೆ ಇಬ್ಬರೂ ಹಳ್ಳದಲ್ಲಿ ಬೀಳುತ್ತಾರಷ್ಟೆ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಅವರನ್ನು ಬಿಡಿರಿ, ಅವರು ಕುರುಡರಿಗೆ ದಾರಿ ತೋರಿಸುವವರು ಕುರುಡರ ಹಾಗಿದ್ದಾರೆ. ಕುರುಡನು ಕುರುಡನಿಗೆ ದಾರಿ ತೋರಿಸಿದರೆ ಅವರಿಬ್ಬರೂ ಕುಣಿಯೊಳಗೆ ಬೀಳುವರು” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಅವರ ಮಾತನ್ನು ಬಿಡಿರಿ; ತಾವೇ ಕುರುಡರು, ಮತ್ತೊಬ್ಬರಿಗೆ ದಾರಿ ತೋರಿಸುವದಕ್ಕೆ ಹೋಗುತ್ತಾರೆ; ಕುರುಡನು ಕುರುಡನಿಗೆ ದಾರಿತೋರಿಸಿದರೆ ಅವರಿಬ್ಬರೂ ಕುಣಿಯಲ್ಲಿ ಬೀಳುವರು ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಫರಿಸಾಯರಿಂದ ದೂರವಾಗಿರಿ. ಅವರೇ ಕುರುಡರು, ಮತ್ತೊಬ್ಬರಿಗೆ ದಾರಿ ತೋರಿಸಲು ಹೋಗುತ್ತಾರೆ. ಕುರುಡನು ಕುರುಡನಿಗೆ ದಾರಿ ತೋರಿಸಿದರೆ ಅವರಿಬ್ಬರೂ ಹಳ್ಳದಲ್ಲಿ ಬೀಳುವರು” ಎಂದು ಉತ್ತರಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಅವರನ್ನು ಬಿಡಿರಿ, ಅವರು ಕುರುಡರಿಗೆ ದಾರಿತೋರಿಸುವ ಕುರುಡರು. ಕುರುಡನು ಕುರುಡನಿಗೆ ದಾರಿತೋರಿಸಿದರೆ ಅವರಿಬ್ಬರೂ ಹಳ್ಳಕ್ಕೆ ಬೀಳುವರು,” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

14 ತೆಂಚ್ಯಾ ವಿಶಯಾತ್ ತುಮಿ ಚಿಂತಾ ಕರುನಕಾಸಿ. ಕುಡ್ಡ್ಯಾ ಲೊಕಾಕ್ನಿ ವಾಟ್ ದಾಕ್ವುತಲಿ ಕುಡ್ಡಿ ಮುಖಂಡಾ ತೆನಿ. ಎಕ್ ಕುಡ್ಡ್ಯಾ ಮಾನ್ಸಾನ್ ಅನಿ ಎಕ್ ಕುಡ್ಡ್ಯಾಕ್ ವಾಟ್ ದಾಕ್ವುಕ್ ಗೆಲ್ಯಾರ್ ತೆನಿ ದೊಗೆಬಿ ಖಡ್ಡ್ಯಾತ್ ಪಡ್ತ್ಯಾತ್.” ಮನುನ್ ಜಬಾಬ್ ದಿಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 15:14
19 ತಿಳಿವುಗಳ ಹೋಲಿಕೆ  

ಯೇಸುಸ್ವಾಮಿ ಅವರಿಗೆ ಈ ಸಾಮತಿಯನ್ನೂ ಹೇಳಿದರು: “ಕುರುಡನು ಕುರುಡನಿಗೆ ದಾರಿ ತೋರಿಸಲಾದೀತೆ? ಇಬ್ಬರೂ ಹಳ್ಳದಲ್ಲಿ ಬೀಳುವುದಿಲ್ಲವೆ?


ಈ ಕಾವಲುಗಾರರು ಕುರುಡರು, ಇವರಿಗೆ ತಿಳುವಳಿಕೆಯಿಲ್ಲ. ಇವರೆಲ್ಲರೂ ಬೊಗಳಲಾರದ ಮೂಕನಾಯಿಗಳು, ಮಲಗಿಕೊಂಡು ಕನವರಿಸುವ ನಿದ್ದೆಕೋರ ನಾಯಿಗಳು.


“ಈಗಲಾದರೋ ಯಾಜಕರೇ, ನೀವು ದಾರಿ ತಪ್ಪಿದ್ದೀರಿ. ನಿಮ್ಮ ಉಪದೇಶದಿಂದ ಅನೇಕರು ಮುಗ್ಗರಿಸಿಬೀಳುವಂತೆ ಮಾಡಿದ್ದೀರಿ. ಲೇವಿಯ ಒಡಂಬಡಿಕೆಯನ್ನು ಭಂಗಪಡಿಸಿದ್ದೀರಿ.” ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿಯಿದು.


ಈ ಜನರನ್ನು ನಡೆಸುವವರು ತಪ್ಪುದಾರಿಗೆ ಎಳೆಯುವಂಥವರು. ಅವರನ್ನು ಹಿಂಬಾಲಿಸುವವರೆಲ್ಲ ನಾಶವಾಗುವರು.


ಇಸ್ರಯೇಲ್ ಜನರಲ್ಲೇ ಕಪಟ ಪ್ರವಾದಿಗಳು ಕಾಣಿಸಿಕೊಂಡರು. ಅಂತೆಯೇ, ನಿಮ್ಮಲ್ಲೂ ಸುಳ್ಳುಬೋಧಕರು ಕಾಣಿಸಿಕೊಳ್ಳುವರು. ಹಾನಿಕರವಾದ ದುರ್ಬೋಧನೆಗಳನ್ನು ಗೋಪ್ಯವಾಗಿ ಪ್ರಸರಿಸುವರು. ಒತ್ತೆಯಿಟ್ಟು ತಮ್ಮನ್ನು ರಕ್ಷಿಸಿದ ಒಡೆಯನನ್ನೇ ಅರಿಯೆವೆಂದು ನಿರಾಕರಿಸುವರು. ಹೀಗೆ ತಮ್ಮ ವಿನಾಶವನ್ನು ತಾವೇ ಬೇಗನೆ ಬರಮಾಡಿಕೊಳ್ಳುವರು.


ಪ್ರವಾದಿಗಳೇ ಸುಳ್ಳು ಪ್ರವಾದನೆಮಾಡುತ್ತಾರೆ. ಯಾಜಕರು ಅಂಥವರಿಂದ ಅಧಿಕಾರ ಪಡೆದು ದೊರೆತನಮಾಡುತ್ತಾರೆ. ನನ್ನ ಜನರಿಗೆ ಚೆನ್ನಾಗಿ ಹಿಡಿಸುವುದು ಇಂಥದ್ದೇ. ಆದರೆ ಅಂತ್ಯ ಬಂದಾಗ ಏನು ಮಾಡುವರು?”


ನನ್ನ ಸೇವಕನಿಗಿಂತ ಕುರುಡರು ಯಾರು? ನನ್ನ ದೂತನಿಗಿಂತ ಕಿವುಡರು ಯಾರು? ನನ್ನ ಭಕ್ತನಿಗಿಂತ ಕುರುಡರು ಯಾರು? ಸರ್ವೇಶ್ವರನ ದಾಸನಿಗಿಂತ ಅಂಧಕರು ಯಾರು?


ಆದರೆ ಶುನಕ ಸಮಾನರೂ ಮಾಟಮಂತ್ರಗಾರರೂ ಕಾಮುಕರೂ ಕೊಲೆಗಾರರೂ ವಿಗ್ರಹಾರಾಧಕರೂ ಅಸತ್ಯವಾದಿಗಳೂ ನಗರದ ಹೊರಗೆ ಬಿದ್ದಿರುವರು.


ಮೃಗವನ್ನು ಸೆರೆಹಿಡಿಯಲಾಯಿತು. ಅದರ ಜೊತೆಯಲ್ಲಿ ಕಪಟ ಪ್ರವಾದಿಯೂ ಸೆರೆಸಿಕ್ಕಿಬಿದ್ದನು. ಮೃಗದ ಮುಂದೆ ಪವಾಡ ಕಾರ್ಯಗಳನ್ನೆಸಗಿ ಅದರ ಮುದ್ರೆ ಒತ್ತಿಸಿಕೊಂಡವರನ್ನೂ ಅದರ ವಿಗ್ರಹಕ್ಕೆ ಪೂಜೆ ಮಾಡಿದವರನ್ನು ಮರುಳುಗೊಳಿಸಿದವನು ಇವನೇ. ಇವರಿಬ್ಬರನ್ನೂ ಜೀವಸಹಿತ ಹಿಡಿದು ಗಂಧಕದಿಂದ ಉರಿಯುವ ಅಗ್ನಿಸರೋವರಕ್ಕೆ ಎಸೆಯಲಾಯಿತು.


ಈ ಕಳ್ಳಬೋಧಕರು ನೀರಿಲ್ಲದ ಬಾವಿಗಳು, ಬಿರುಗಾಳಿಯಿಂದ ಚದರಿಹೊಗುವ ಮಂಜುಮೋಡಗಳು, ಕಾರ್ಗತ್ತಲಿನ ಕಂದಕವೇ ಅವರ ಪಾಲಿಗೆ ಕಟ್ಟಿಟ್ಟ ಬುತ್ತಿ.


ಮತಿಗೆಟ್ಟ ಅಂಥವರಲ್ಲಿ ಸತ್ಯವೆಂಬುದು ಇರದು. ಧಾರ್ಮಿಕ ಸೇವೆಯು ಧನಗಳಿಕೆಯ ಸಾಧನವೆಂದೇ ಇವರ ನಂಬಿಕೆ.


ಎಫ್ರಯಿಮ್ ವಿಗ್ರಹಗಳ ಪ್ರಭಾವಕ್ಕೆ ಒಳಗಾಗಿದೆ. ಅದನ್ನು ಅದರಷ್ಟಕ್ಕೆ ಬಿಟ್ಟುಬಿಡಿ.


ಅಸಹ್ಯಕಾರ್ಯಗಳನ್ನು ಮಾಡಿ ಅವಮಾನಕ್ಕೆ ಗುರಿಯಾಗಿದ್ದರೂ ಎಳ್ಳಷ್ಟೂ ನಾಚಿಕೆ ಇಲ್ಲದಿದ್ದಾರೆ. ಲಜ್ಜೆಯ ಗಂಧವೂ ಅವರಿಗಿಲ್ಲ. ಆದಕಾರಣ ಬೇರೆಯವರಂತೆ ಅವರೂ ಬೀಳುವರು. ನಾನು ದಂಡಿಸುವಾಗ ಅವರು ಏಳಲಾಗದಂತೆ ಮುಗ್ಗರಿಸಿ ಬೀಳುವರು. ಇದು ಸರ್ವೇಶ್ವರನಾದ ನನ್ನ ನುಡಿ.


ಅಸಹ್ಯಕಾರ್ಯಗಳನ್ನು ಮಾಡಿ ಅವಮಾನಕ್ಕೆ ಗುರಿಯಾಗಿದ್ದರೂ ಎಳ್ಳಷ್ಟೂ ನಾಚಿಕೆ ಇಲ್ಲದಿದ್ದಾರೆ. ಅವರಿಗೆ ಲಜ್ಜೆಯ ಗಂಧವೂ ಇಲ್ಲ. ಆದಕಾರಣ ಬೇರೆಯವರಂತೆ ಅವರೂ ಬೀಳುವರು. ನಾನು ದಂಡಿಸುವಾಗ ಅವರು ಏಳಲಾಗದಂತೆ ಮುಗ್ಗರಿಸಿ ಬೀಳುವರು. ಇದು ಸರ್ವೇಶ್ವರನಾದ ನನ್ನ ನುಡಿ,” ಎಂದರು.


ಈಜಿಪ್ಟಿನವರು ಕೇವಲ ಮನುಷ್ಯರೇ ಹೊರತು ದೇವರಲ್ಲ. ಅವರ ಅಶ್ವಗಳು ಮೂಳೆಮಾಂಸವೇ ಹೊರತು ಆಧ್ಯಾತ್ಮಿಕ ದಿವ್ಯಶಕ್ತಿಯಲ್ಲ. ಸರ್ವೇಶ್ವರ ಕೈಯೆತ್ತುವಾಗ ಅದಕ್ಕೆ ವಿರುದ್ಧ ಸಹಾಯ ಮಾಡಿದ ಅವನು ಮುಗ್ಗರಿಸುವನು. ಆ ಸಹಾಯ ಪಡೆದ ಅವನು ಬಿದ್ದುಹೋಗುವನು. ಎಲ್ಲರೂ ಒಟ್ಟಿಗೆ ಅಳಿದುಹೋಗುವರು.


ಆಗ ಯೇಸು, “ಕುರುಡರು ಕಾಣುವಂತೆಯೂ ಕಾಣುವವರು ಕುರುಡರಾಗುವಂತೆಯೂ ತೀರ್ಪುಕೊಡಲೆಂದೇ ನಾನು ಈ ಲೋಕಕ್ಕೆ ಬಂದುದು,” ಎಂದು ನುಡಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು