Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 12:10 - ಕನ್ನಡ ಸತ್ಯವೇದವು C.L. Bible (BSI)

10 ಬತ್ತಿದ ಕೈಯುಳ್ಳ ಒಬ್ಬ ವ್ಯಕ್ತಿ ಅಲ್ಲಿದ್ದನು. ಯೇಸುವಿನ ಮೇಲೆ ತಪ್ಪುಹೊರಿಸುವ ಉದ್ದೇಶದಿಂದ ಕೆಲವರು, “ಸಬ್ಬತ್ ದಿನ ಸ್ವಸ್ಥಗೊಳಿಸುವುದು ಶಾಸ್ತ್ರಬದ್ಧವೇ?" ಎಂದು ಯೇಸುವನ್ನು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಆಗ ಅಲ್ಲಿ ಕೈಬತ್ತಿದವನೊಬ್ಬನಿದ್ದನು. ಫರಿಸಾಯರು ಯೇಸುವಿನ ಮೇಲೆ ತಪ್ಪು ಹೊರಿಸಬೇಕೆಂದು ಆತನನ್ನು, “ಸಬ್ಬತ್ ದಿನದಲ್ಲಿ ಸ್ವಸ್ಥಮಾಡುವುದು ನ್ಯಾಯವೋ?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಆಗ ಅವರು ಆತನ ಮೇಲೆ ತಪ್ಪುಹೊರಿಸಬೇಕೆಂದು ಆತನನ್ನು - ಸಬ್ಬತ್ ದಿನದಲ್ಲಿ ಸ್ವಸ್ಥಮಾಡುವದು ಸರಿಯೋ ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಆ ಸಭಾಮಂದಿರದಲ್ಲಿ ಒಬ್ಬನ ಕೈ ಊನವಾಗಿತ್ತು. ಯೆಹೂದ್ಯರಲ್ಲಿ ಕೆಲವರು ಯೇಸುವಿನ ಮೇಲೆ ತಪ್ಪು ಹೊರಿಸುವುದಕ್ಕಾಗಿ ಕಾರಣ ಹುಡುಕುತ್ತಿದ್ದರು. ಆದ್ದರಿಂದ ಅವರು ಯೇಸುವಿಗೆ “ಸಬ್ಬತ್‌ದಿನದಲ್ಲಿ ಗುಣಪಡಿಸುವುದು ಸರಿಯೇ?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಅಲ್ಲಿ ಕೈ ಬತ್ತಿದ ಒಬ್ಬ ಮನುಷ್ಯನಿದ್ದನು. ಆಗ ಫರಿಸಾಯರು ಯೇಸುವಿನ ಮೇಲೆ ತಪ್ಪು ಹೊರಿಸಬೇಕೆಂದು ಆತನಿಗೆ, “ಸಬ್ಬತ್ ದಿನದಲ್ಲಿ ಸ್ವಸ್ಥಮಾಡುವುದು ನ್ಯಾಯಸಮ್ಮತವೋ?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

10 ಥೈ ವಾರ್‍ಯಾನ್‍ಮಾರಲ್ಲ್ಯಾ ಹಾತಾಚೊ ಎಕ್ ಮಾನುಸ್ ಹೊತ್ತೊ. ಉಲ್ಲಿ ಲೊಕಾ ಜೆಜು ಕಾಯ್ತರ್ ಚುಕ್ ಕರ್‍ತಾ ಕಾಯ್ ಬಗುನ್ ತೆಚೆ ವರ್‍ತಿ ಝುಟೊ ಅಪ್ವಾದ್ ಘಾಲುಚೆ ಮನುನ್ ರಾಕುಂಗೆತ್ ಹೊತ್ತಿ. ತೆಚೆಸಾಟ್ನಿ ತೆನಿ ಜೆಜುಕ್, “ಅರಾಮ್ ಘೆತಲ್ಯಾ ದಿಸಿ ಮಟ್ಲ್ಯಾರ್ ಸಾಬ್ಬತಾಚ್ಯಾ ದಿಸಿ ಎಕ್ಲ್ಯಾಕ್ ಗುನ್ ಕರ್‍ತಲೆ ಅಮ್ಚ್ಯಾ ಖಾಯ್ದ್ಯಾ ಪರ್‍ಕಾರ್ ಚುಕ್ ನ್ಹಯ್ ಕಾಯ್?” ಮನುನ್ ಇಚಾರ್‍ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 12:10
21 ತಿಳಿವುಗಳ ಹೋಲಿಕೆ  

ಯೇಸು ಸಬ್ಬತ್‍ದಿನದಲ್ಲಿ ಗುಣಮಾಡಿದ್ದನ್ನು ಕಂಡು, ಪ್ರಾರ್ಥನಾಮಂದಿರದ ಅಧಿಕಾರಿ ಕುಪಿತನಾದನು. ಕೂಡಿದ್ದ ಜನರನ್ನು ಉದ್ದೇಶಿಸಿ, “ಕೆಲಸ ಮಾಡಲು ಆರು ದಿನಗಳಿವೆ, ಆ ದಿನಗಳಲ್ಲಿ ಬಂದು ಗುಣಮಾಡಿಸಿಕೊಳ್ಳಿರಿ; ಸಬ್ಬತ್‍ದಿನದಲ್ಲಿ ಮಾತ್ರ ಕೂಡದು,” ಎಂದನು.


ಫರಿಸಾಯರಲ್ಲಿ ಕೆಲವರು, “ಹೀಗೆ ಮಾಡಿದವನು ದೇವರಿಂದ ಬಂದವನಲ್ಲ, ಅವನು ಸಬ್ಬತ್ ನಿಯಮವನ್ನು ಪಾಲಿಸುವುದಿಲ್ಲ,” ಎಂದರು. ಇತರರು, “ಪಾಪಿಯಾದವನು ಇಂಥ ಸೂಚಕಕಾರ್ಯಗಳನ್ನು ಮಾಡಲು ಸಾಧ್ಯವೆ?” ಎಂದರು. ಹೀಗೆ ಅವರಲ್ಲೇ ಭಿನ್ನಬೇಧವುಂಟಾಯಿತು.


ಯೇಸುವನ್ನು ಮಾತಿನಲ್ಲಿ ಸಿಕ್ಕಿಸಿ ಅವರ ಮೇಲೆ ತಪ್ಪುಹೊರಿಸಬೇಕೆಂಬುದೇ ಅವರ ಉದ್ದೇಶವಾಗಿತ್ತು. ಯೇಸುವಾದರೋ ಬಗ್ಗಿಕೊಂಡು ಬೆರಳಿನಿಂದ ಮರಳ ಮೇಲೆ ಏನನ್ನೋ ಬರೆಯುತ್ತಾ ಕುಳಿತರು. ಬಂದವರಾದರೋ ಮೇಲಿಂದ ಮೇಲೆ ಪ್ರಶ್ನೆಹಾಕುತ್ತಲೇ ಇದ್ದರು.


ಅದು ಸಬ್ಬತ್ತಿನ ದಿನವಾಗಿತ್ತು. ಆದುದರಿಂದ ಯೆಹೂದ್ಯ ಅಧಿಕಾರಿಗಳು ಗುಣಹೊಂದಿದ ಆ ಮನುಷ್ಯನಿಗೆ, “ಇಂದು ಸಬ್ಬತ್ತಿನ ದಿನ, ನೀನು ಹಾಸಿಗೆಯನ್ನು ಎತ್ತಿಕೊಂಡು ನಡೆಯುವುದು ನಿಷಿದ್ಧ,” ಎಂದು ಹೇಳಿದರು.


ಅವರ ಮಾತಿನಲ್ಲಿ ಏನಾದರೂ ತಪ್ಪು ಕಂಡು ಹಿಡಿಯಲೇಬೇಕೆಂದು ಹೊಂಚುಹಾಕುತ್ತಿದ್ದರು.


ಇದನ್ನು ಕಂಡ ಫರಿಸಾಯರು, “ನೋಡು, ನೋಡು, ನಿನ್ನ ಶಿಷ್ಯರು ಸಬ್ಬತ್ ದಿನದಲ್ಲಿ ನಿಷಿದ್ಧವಾದುದನ್ನು ಮಾಡುತ್ತಿದ್ದಾರೆ,” ಎಂದರು.


ಮಂದೆಕಾಯದ ಕುರುಬನಿಗೆ ಧಿಕ್ಕಾರ! ತಾಕುವುದು ಅವನ ತೋಳಿಗೂ ಬಲಗಣ್ಣಿಗೂ ಖಡ್ಗ ತೀರಾ ಬತ್ತಿಹೋಗಲಿ ಅವನ ತೋಳು ಪೂರಾ ಮಬ್ಬಾಗಲಿ ಅವನ ಬಲಗಣ್ಣು.


ಮೂರ್ಖನು ಆಡುವುದು ಕೆಡುಕನ್ನೇ, ಅವನು ಮಾಡುವುದು ಅಧರ್ಮವನ್ನೇ, ನುಡಿಯುವುದು ಸರ್ವೇಶ್ವರ ಸ್ವಾಮಿಗೆ ವಿರುದ್ಧವಾದ ಅಸತ್ಯವನ್ನೇ. ಆತ ಹಸಿದವರಿಗೆ ಆಹಾರವನ್ನು ಕೊಡುವುದಿಲ್ಲ. ಬಾಯಾರಿದವರಿಗೆ ನೀರನ್ನು ಕೊಡಿಸುವುದಿಲ್ಲ.


ಕುರುಡರು, ಕುಂಟರು, ಪಾರ್ಶ್ವವಾಯು ಪೀಡಿತರು ಮೊದಲಾದ ಅನೇಕ ರೋಗಿಗಳು ಆ ಮಂಟಪಗಳಲ್ಲಿ ಬಿದ್ದುಕೊಳ್ಳುತ್ತಾ ಇದ್ದರು.


ಅಲ್ಲಿ ಆತನ ಮುಂದೆ, “ಇವನು ರೋಮ್ ಚಕ್ರವರ್ತಿಗೆ ತೆರಿಗೆ ಕೊಡುವುದನ್ನು ನಿಷೇಧಿಸುತ್ತಾನೆ. ತಾನೇ ‘ಕ್ರಿಸ್ತ, ಒಬ್ಬ ಅರಸ,’ ಎಂದು ಹೇಳಿಕೊಳ್ಳುತ್ತಾನೆ. ಹೀಗೆ ನಮ್ಮ ಜನತೆ ದಂಗೆಯೇಳುವಂತೆ ಪ್ರಚೋದಿಸುತ್ತಾನೆ. ಇದನ್ನೆಲ್ಲಾ ನಾವು ಕಂಡುಹಿಡಿದಿದ್ದೇವೆ,” ಎಂದು ದೂರತೊಡಗಿದರು.


“ಜನರು ದಂಗೆಯೇಳುವಂತೆ ಈ ಮನುಷ್ಯ ಪ್ರೇರೇಪಿಸುತ್ತಾನೆಂದು ಇವನನ್ನು ನನ್ನ ಬಳಿಗೆ ಕರೆತಂದಿರಲ್ಲವೇ? ಇಗೋ, ನಿಮ್ಮ ಎದುರಿಗೇ ವಿಚಾರಣೆ ಮಾಡಿದ್ದೇನೆ; ಇವನಲ್ಲಿ ನೀವು ಆರೋಪಿಸುವಂಥ ದೋಷಗಳೊಂದೂ ನಮಗೆ ಕಾಣಲಿಲ್ಲ;


ಹೀಗಿರುವಲ್ಲಿ, ನಾವು ರೋಮ್‍ ಚಕ್ರಾಧಿಪತಿಗೆ ತೆರಿಗೆ ಕೊಡುವುದು ಧರ್ಮಸಮ್ಮತವೋ ಅಲ್ಲವೋ ತಿಳಿಸಿ,” ಎಂದು ಕೇಳಿದರು.


ಫರಿಸಾಯರಲ್ಲಿ ಕೆಲವರು ಯೇಸುವಿನ ಬಳಿಗೆ ಬಂದು ಅವರನ್ನು ಮಾತಿನಲ್ಲಿ ಸಿಕ್ಕಿಸುವ ಉದ್ದೇಶದಿಂದ, “ಯಾವುದಾದರೂ ಕಾರಣದಿಂದ ಗಂಡನು ತನ್ನ ಹೆಂಡತಿಯನ್ನು ಬಿಟ್ಟುಬಿಡುವುದು ಧರ್ಮಸಮ್ಮತವೋ?” ಎಂದು ಕೇಳಿದರು.


ಹೌದು, ನಿಮಗೆ ತಪ್ಪುಮಾಡಿ ನಿಮ್ಮನ್ನು ಅಲ್ಲಗಳೆದಿದ್ದೇವೆ. ನಮ್ಮ ದೇವರಾದ ನಿಮ್ಮನ್ನು ಹಿಂಬಾಲಿಸದೆ ಹಿಂದಿರುಗಿದ್ದೇವೆ; ಹಿಂಸಾಚಾರವನ್ನೂ ದಂಗೆ ಏಳುವುದನ್ನೂ ಪ್ರಚೋದಿಸಿದ್ದೇವೆ. ನಮ್ಮ ಅಂತರಾಲೋಚನೆಗಳು ಹುಸಿ; ನಮ್ಮ ಬಾಯಿಮಾತು ಸುಳ್ಳು.


ನ್ಯಾಯಸ್ಥಾನದಲ್ಲಿ ನ್ಯಾಯಾನುಸಾರ ವಾದಿಸುವವನು ಯಾರೂ ಇಲ್ಲ; ಸತ್ಯಾನುಸಾರ ತೀರ್ಪುಕೊಡುವವನು ಯಾರೂ ಇಲ್ಲ; ನೀವು ಶೂನ್ಯವಾದುದ್ದನ್ನೇ ನಂಬುತ್ತೀರಿ, ಅಬದ್ಧವಾದುದನ್ನೇ ಆಡುತ್ತೀರಿ, ಕೇಡನ್ನು ಬಸಿರಿಸಿ ಅಕ್ರಮವನ್ನು ಹೆರುತ್ತೀರಿ.


ಅವನನ್ನು ಸಬ್ಬತ್‍ದಿನದಲ್ಲಿ ಗುಣಪಡಿಸಿದ್ದೇ ಆದರೆ ಯೇಸುವಿನ ವಿರುದ್ಧ ತಪ್ಪುಹೊರಿಸಬಹುದೆಂಬ ಉದ್ದೇಶದಿಂದ ಕೆಲವರು ಹೊಂಚುಹಾಕುತ್ತಿದ್ದರು.


ಮೋಶೆಯ ನಿಯಮವನ್ನು ಉಲ್ಲಂಘಿಸದೆ ನೀವು ಸಬ್ಬತ್ ದಿನದಲ್ಲಿ ಒಬ್ಬನಿಗೆ ಸುನ್ನತಿ ಮಾಡಬಹುದಾದರೆ ಅದೇ ಸಬ್ಬತ್ ದಿನದಲ್ಲಿ ನಾನು ಒಬ್ಬ ಮನುಷ್ಯನನ್ನು ಸಂಪೂರ್ಣ ಸ್ವಸ್ಥಪಡಿಸಿದ್ದಕ್ಕೆ ನೀವು ಸಿಟ್ಟಾಗಬೇಕೆ?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು