Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 10:34 - ಕನ್ನಡ ಸತ್ಯವೇದವು C.L. Bible (BSI)

34 “ನಾನು ಲೋಕಕ್ಕೆ ಸಮಾಧಾನವನ್ನು ತರಲು ಬಂದೆನೆಂದು ಭಾವಿಸಬೇಡಿ; ಸಮಾಧಾನವನ್ನಲ್ಲ, ಛೇದಿಸುವ ಖಡ್ಗವನ್ನು ತರಲು ಬಂದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

34 “ಭೂಲೋಕದ ಮೇಲೆ ಸಮಾಧಾನ ತರುವುದಕ್ಕೆ ಬಂದೆನೆಂದು ನೆನಸಬೇಡಿರಿ; ಸಮಾಧಾನವನ್ನು ಹುಟ್ಟಿಸುವುದಕ್ಕೆ ನಾನು ಬಂದಿಲ್ಲ, ಖಡ್ಗವನ್ನು ಹಾಕುವುದಕ್ಕೆ ಬಂದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

34 ಭೂಲೋಕದ ಮೇಲೆ ಸಮಾಧಾನ ಹುಟ್ಟಿಸುವದಕ್ಕೆ ಬಂದೆನೆಂದು ನೆನಸಬೇಡಿರಿ; ಸಮಾಧಾನವನ್ನು ಹುಟ್ಟಿಸುವದಕ್ಕೆ ನಾನು ಬಂದಿಲ್ಲ, ಖಡ್ಗವನ್ನು ಹಾಕುವದಕ್ಕೆ ಬಂದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

34 “ಭೂಲೋಕದಲ್ಲಿ ಶಾಂತಿಯನ್ನು ಉಂಟುಮಾಡಲು ನಾನು ಬಂದಿದ್ದೇನೆಂದು ಯೋಚಿಸಬೇಡಿ. ನಾನು ಶಾಂತಿಯನ್ನು ಉಂಟುಮಾಡಲು ಬರಲಿಲ್ಲ, ಖಡ್ಗ ಹಾಕಲು ಬಂದಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

34 “ನಾನು ಭೂಮಿಯ ಮೇಲೆ ಸಮಾಧಾನವನ್ನು ತರಲು ಬಂದೆನೆಂದು ಭಾವಿಸಬೇಡಿರಿ. ಸಮಾಧಾನವನ್ನಲ್ಲ, ಖಡ್ಗವನ್ನು ತರಲು ಬಂದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

34 “ಮಿಯಾ ಹ್ಯಾ ಜಗಾತ್ ಸಮಾದಾನ್ ಹಾನುಕ್ ಯೆಲಾ ಮನುನ್ ಯವ್ಜುನಕಾಶಿ, ಸಮಾದಾನ್ ನ್ಹಯ್ ಎಕಾಮೆಕಾಚ್ಯಾಮದ್ದಿ ಆಗ್ ಲಾವುಕ್ ಮನುನ್ ಯೆಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 10:34
9 ತಿಳಿವುಗಳ ಹೋಲಿಕೆ  

ಪಟ್ಟಣದ ಜನರಲ್ಲಿ ಭಿನ್ನಾಭಿಪ್ರಾಯ ಉಂಟಾಯಿತು. ಕೆಲವರು ಯೆಹೂದ್ಯರ ಪರವಾಗಿಯೂ ಮತ್ತೆ ಕೆಲವರು ಪ್ರೇಷಿತರ ಪರವಾಗಿಯೂ ವಿಂಗಡವಾಗಿ ಹೋದರು.


ವಿಶ್ವಾಸಿಸಲೊಲ್ಲದ ಯೆಹೂದ್ಯರಾದರೋ ಅನ್ಯಧರ್ಮೀಯರನ್ನು ಪ್ರಚೋದಿಸಿ ಭಕ್ತರ ವಿರುದ್ಧ ಎತ್ತಿಕಟ್ಟಿದರು.


“ನನ್ನ ಹೆತ್ತತಾಯೇ, ನನ್ನ ಗತಿಯನ್ನು ಏನು ಹೇಳಲಿ! ಜಗದ ಜನರಿಗೆಲ್ಲ ನಾನೊಬ್ಬ ಜಗಳಗಂಟಿಗ, ವ್ಯಾಜ್ಯಗಾರ. ನಾನು ಹಣವನ್ನು ಸಾಲವಾಗಿ ಕೊಟ್ಟವನಲ್ಲ, ಕೊಂಡವನೂ ಅಲ್ಲ. ಆದರೂ ನನ್ನನ್ನು ಎಲ್ಲರು ಶಪಿಸುವವರೇ.


ಆಗ ಕೆಂಪು ಕುದುರೆ ಒಂದು ಹೊರಟುಬಂದಿತು. ಅದರ ಮೇಲೆ ಒಬ್ಬನು ಕುಳಿತಿದ್ದನು. ವಿಶ್ವದಲ್ಲಿ ಶಾಂತಿಯನ್ನು ಅಳಿಸಿಹಾಕಿ ಲೋಕದ ಜನರು ಒಬ್ಬರನ್ನೊಬ್ಬರು ಕೊಲ್ಲುವಂತೆ ಮಾಡುವ ಅಧಿಕಾರವನ್ನು ಅವನಿಗೆ ಕೊಡಲಾಗಿತ್ತು. ಇದಲ್ಲದೆ, ಅವನಿಗೆ ದೊಡ್ಡ ಖಡ್ಗವನ್ನೂ ಸಹ ಕೊಡಲಾಗಿತ್ತು.


ಇಸ್ರಯೇಲ್ ಸಂತತಿಯವರಲ್ಲಿ ಯುದ್ಧವಿದ್ಯೆ ಅರಿಯದವರಿಗೆ ಅದನ್ನು ಕಲಿಸುವುದಕ್ಕೂ ಸರ್ವೇಶ್ವರ ಆ ನಾಡಿನಲ್ಲೇ ಉಳಿಸಿದ ಅನ್ಯಜನಾಂಗದವರು ಇವರು:


ಈ ಮಾತುಗಳನ್ನು ಕೇಳಿ ಆದಮೇಲೆ ಯೆಹೂದ್ಯರು ತಮ್ಮತಮ್ಮೊಳಗೆ ತೀವ್ರವಾಗಿ ಚರ್ಚಿಸುತ್ತಾ ಹೊರಟುಹೋದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು