Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಫಿಲಿಪ್ಪಿಯವರಿಗೆ 2:25 - ಕನ್ನಡ ಸತ್ಯವೇದವು C.L. Bible (BSI)

25 ನನಗೆ ನೆರವಾಗಲು ನೀವು ಕಳುಹಿಸಿದ ಸಹೋದರ ಎಪಫ್ರೋದಿತನು ನಿಮ್ಮಲ್ಲಿಗೆ ಹಿಂದಿರುಗುವುದು ಅವಶ್ಯವೆಂದು ಭಾವಿಸುತ್ತೇನೆ. ಅವನು ನನ್ನೊಂದಿಗೆ ದುಡಿಯುತ್ತಾ, ಹೋರಾಡುತ್ತಾ ಬಂದಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ನನ್ನ ಕೊರತೆಯನ್ನು ನೀಗುವುದಕ್ಕೆ ನೀವು ಕಳುಹಿಸಿದಂಥ, ನನ್ನ ಸಹೋದರನೂ, ಜೊತೆಸೇವಕನೂ, ಸಹಸೇನಾನಿಯೂ ಆಗಿರುವಂಥ ಎಪಫ್ರೊದೀತನನ್ನು ನಿಮ್ಮ ಬಳಿಗೆ ಕಳುಹಿಸುವುದು ಅವಶ್ಯವೆಂದು ಭಾವಿಸಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ನನ್ನ ಕೊರತೆಯನ್ನು ನೀಗುವದಕ್ಕೆ ನೀವು ಕಳುಹಿಸಿದಂಥ, ನನ್ನ ಸಹೋದರನೂ ಜೊತೆಕೆಲಸದವನೂ ಸಹಭಟನೂ ಆಗಿರುವಂಥ ಎಪಫ್ರೊದೀತನನ್ನು ನಿಮ್ಮ ಬಳಿಗೆ ಕಳುಹಿಸುವದು ಅವಶ್ಯವೆಂದು ನೆನಸಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 ಎಪಫ್ರೊದೀತನು ಕ್ರಿಸ್ತನಲ್ಲಿ ನನ್ನ ಸಹೋದರನಾಗಿದ್ದಾನೆ. ಕ್ರಿಸ್ತನ ಸೈನ್ಯದಲ್ಲಿ ಅವನು ನನ್ನೊಂದಿಗೆ ಕೆಲಸ ಮಾಡುತ್ತಿದ್ದಾನೆ ಮತ್ತು ಸೇವೆ ಮಾಡುತ್ತಿದ್ದಾನೆ. ನನಗೆ ಸಹಾಯಬೇಕಿದ್ದಾಗ, ನೀವು ಅವನನ್ನು ನನ್ನ ಬಳಿಗೆ ಕಳುಹಿಸಿಕೊಟ್ಟಿರಿ. ಈಗ ನಾನು ಅವನನ್ನು ನಿಮ್ಮ ಬಳಿಗೆ ಮತ್ತೆ ಕಳುಹಿಸಬೇಕೆಂದಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 ಆದರೂ ನನ್ನ ಸಹೋದರನೂ ಜೊತೆ ಕೆಲಸದವನೂ ಸಹಸೈನಿಕನೂ ಆಗಿರುವ ಎಪಫ್ರೊದೀತನನ್ನು ನಿಮ್ಮ ಬಳಿಗೆ ಕಳುಹಿಸುವುದು ಅವಶ್ಯವೆಂದು ನಾನು ನೆನೆಸಿದ್ದೇನೆ. ಅವನು ನನ್ನ ಕೊರತೆಯಲ್ಲಿ ಸೇವೆ ಮಾಡುವಂತೆ ನೀವು ಕಳುಹಿಸಿದ ನಿಮ್ಮ ಸಂದೇಶಕನೂ ಆಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

25 ಮಾಜೊ ಕಸ್ಟ್ ಧುರ್ ಕರುಕ್ ಸಾಟ್ನಿ ತುಮಿ ಧಾಡಲೊ ಮಾಜೊ ಭಾವ್ ವಾಂಗ್ಡಿ ಸೆವಾಕಾರಿ, ಅನಿ ವಾಂಗ್ಡಿ ಸೈನಿಕ್ ಹೊವ್ನ್ ಹೊತ್ತ್ಯಾ ಎಪಾಪ್ರೊದಿತಾಕ್ ತುಮ್ಚ್ಯಾ ಜಗ್ಗೊಳ್ ಧಾಡುಕುಚ್ ಪಾಜೆ ಮನುನ್ ಮಾಕಾ ದಿಸ್ಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಫಿಲಿಪ್ಪಿಯವರಿಗೆ 2:25
19 ತಿಳಿವುಗಳ ಹೋಲಿಕೆ  

ನೀವು ಕಳುಹಿಸಿಕೊಟ್ಟಿದ್ದೆಲ್ಲವೂ ನನಗೆ ಸಂದಾಯವಾಗಿದೆ. ಈಗ ಅಗತ್ಯಕ್ಕಿಂತಲೂ ಅಧಿಕವಾಗಿದೆ, ಯಥೇಚ್ಛವಾಗಿದೆ. ಎಪಫ್ರೋದಿತನ ಮೂಲಕ ನೀವು ಕಳುಹಿಸಿದ್ದೆಲ್ಲವೂ ನನಗೆ ತಲುಪಿದೆ. ನಿಮ್ಮ ಕೊಡುಗೆ ಸುಗಂಧ ಕಾಣಿಕೆಯಾಗಿದೆ, ದೇವರಿಗೆ ಮೆಚ್ಚಿಗೆಯಾದ ಇಷ್ಟಾರ್ಥ ಬಲಿಯಾಗಿದೆ.


ಈ ಶುಭಸಂದೇಶವನ್ನು ಕ್ರಿಸ್ತಯೇಸುವಿನ ನಂಬಿಕಸ್ಥ ದಾಸನೂ ನಮ್ಮ ಜೊತೆಯ ಸೇವಕನೂ ಆದ ಎಪಫ್ರನಿಂದ ಕಲಿತುಕೊಂಡಿದ್ದೀರಿ.


ನನ್ನ ಜೊತೆ ಸೇವಕನಾದ ನೀನು ಈ ಮಹಿಳೆಯರಿಗೆ ನೆರವಾಗಬೇಕು. ಇವರು ಸಹ ಕ್ಲೇಮಂತನು ಮತ್ತು ಇತರ ಸಹಸೇವಕರೊಡನೆ ನನ್ನೊಂದಿಗೆ ಶುಭಸಂದೇಶದ ಪ್ರಚಾರಕಾರ್ಯದಲ್ಲಿ ಸಹಕರಿಸಿರುತ್ತಾರೆ. ಇವರೆಲ್ಲರ ಹೆಸರುಗಳು ನಿತ್ಯಜೀವಬಾಧ್ಯರ ಪಟ್ಟಿಯಲ್ಲಿವೆ.


ನಾವು ದೇವರ ಸಹಕಾರ್ಮಿಕರು. ನೀವು ದೇವರೆ ಸಾಗುವಳಿಮಾಡುವ ಹೊಲ; ಅವರೆ ನಿರ್ಮಿಸುತ್ತಿರುವ ಮಂದಿರ.


ಸುಗ್ಗಿಯ ಕಾಲದಲ್ಲಿ ಹಿಮದ ತಂಪು ಹೇಗೋ ಹಾಗೆ ಕಳುಹಿಸುವ ಒಡೆಯನಿಗೆ ಪ್ರಾಮಾಣಿಕ ದೂತನೂ ಹಾಗೆ.


ಹೀಗಿರುವಲ್ಲಿ ದೇವಜನರಾದ ಸಹೋದರರೇ, ಸ್ವರ್ಗಸೌಭಾಗ್ಯದಲ್ಲಿ ಸಹಭಾಗಿಗಳಾಗಲು ಕರೆ ಹೊಂದಿದವರೇ, ದೇವರು ಕಳುಹಿಸಿದಂಥವರು ಹಾಗೂ ನಾವು ವಿಶ್ವಾಸಿಸುವ ಧರ್ಮದ ಪ್ರಧಾನಯಾಜಕರು ಆದ ಯೇಸುವನ್ನು ಭಕ್ತಿಯಿಂದ ಧ್ಯಾನಿಸಿರಿ.


ತಿಮೊಥೇಯನು ಯೇಸುಕ್ರಿಸ್ತರ ಶುಭಸಂದೇಶದ ಪ್ರಚಾರಕಾರ್ಯದಲ್ಲಿ ನಮ್ಮ ಸಹೋದರ ಹಾಗೂ ದೇವರ ದಾಸ; ನೀವು ವಿಶ್ವಾಸದಲ್ಲಿ ಅಚಲರಾಗಿ ನೆಲೆನಿಲ್ಲುವಂತೆ ಆತನು ನಿಮ್ಮನ್ನು ಉತ್ತೇಜಿಸುವನು.


ಯುಸ್ತನೆನಿಸಿಕೊಳ್ಳುವ ಯೇಸು ಕೂಡ ನಿಮಗೆ ವಂದನೆಗಳನ್ನು ತಿಳಿಸಿದ್ದಾನೆ. ಕ್ರೈಸ್ತರಾದ ಯೆಹೂದ್ಯರಲ್ಲಿ ಇವರೇ ನನ್ನೊಡನೆ ದೇವರ ಸಾಮ್ರಾಜ್ಯದ ಏಳಿಗೆಗಾಗಿ ದುಡಿಯುತ್ತಿರುವವರು. ಇವರಿಂದ ನನಗೆ ತುಂಬಾ ಆದರಣೆ ದೊರಕಿದೆ.


ಆದರೆ ನನ್ನ ಸಹೋದರ ತೀತನನ್ನು ಅಲ್ಲಿ ಕಾಣದೆಹೋದುದರಿಂದ ನನ್ನ ಮನಸ್ಸಿಗೆ ನೆಮ್ಮದಿ ಇಲ್ಲವಾಯಿತು. ಕೂಡಲೇ ಅಲ್ಲಿಯ ಜನರಿಂದ ಬೀಳ್ಕೊಂಡು ಮಕೆದೋನಿಯಕ್ಕೆ ಹೊರಟೆ.


ನೀವು ನನ್ನನ್ನು ಲೋಕಕ್ಕೆ ಕಳಿಸಿದಂತೆ ನಾನು ಇವರನ್ನು ಲೋಕಕ್ಕೆ ಕಳಿಸಿದ್ದೇನೆ.


ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ; ಧಣಿಗಿಂತ ದಾಸನು ದೊಡ್ಡವನಲ್ಲ. ಅಂತೆಯೇ ಕಳುಹಿಸಲಾದವನು ಕಳುಹಿಸುವವನಿಗಿಂತ ಶ್ರೇಷ್ಠನಲ್ಲ.


ಕ್ರಿಸ್ತಯೇಸುವಿನ ಸೇವೆಯಲ್ಲಿ ನನ್ನ ಸಹೋದ್ಯೋಗಿಗಳಾದ ಪ್ರಿಸಿಲ್ಲಳಿಗೂ ಅಕ್ವಿಲನಿಗೂ ನನ್ನ ವಂದನೆಗಳನ್ನು ತಿಳಿಸಿರಿ.


ಯೇಸುಕ್ರಿಸ್ತರ ಸೇವೆಯಲ್ಲಿ ನನ್ನ ಸಹೋದ್ಯೋಗಿಯಾದ ಉರ್ಬಾನನಿಗೂ ನನ್ನ ಮಿತ್ರ ಸ್ತಾಕುನಿಗೂ ವಂದನೆಗಳು.


ನಿಮ್ಮನ್ನೆಲ್ಲಾ ನೋಡಲು ಅವನು ಹಂಬಲಿಸುತ್ತಿದ್ದಾನೆ. ತಾನು ಅಸ್ವಸ್ಥನಾದ ಸುದ್ದಿಯು ನಿಮ್ಮ ಕಿವಿಗೆ ಮುಟ್ಟಿತೆಂದು ತಿಳಿದು ಬಹಳ ವ್ಯಸನಪಡುತ್ತಿದ್ದಾನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು