ಪ್ರಸಂಗಿ 9:7 - ಕನ್ನಡ ಸತ್ಯವೇದವು C.L. Bible (BSI)7 ಹೋಗು, ನಿನ್ನ ಅನ್ನವನ್ನು ಸಂತೋಷದಿಂದ ತಿನ್ನು; ದ್ರಾಕ್ಷಾರಸವನ್ನು ಉಲ್ಲಾಸದಿಂದ ಕುಡಿ; ದೇವರು ನಿನ್ನ ನಡತೆಯನ್ನು ಈಗಾಗಲೇ ಮೆಚ್ಚಿಕೊಂಡಿದ್ದಾರೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20197 ಹೋಗು, ನಿನ್ನ ಅನ್ನವನ್ನು ಸಂತೋಷದಿಂದ ಉಣ್ಣು. ನಿನ್ನ ದ್ರಾಕ್ಷಾರಸವನ್ನು ಒಳ್ಳೆಯ ಮನಸ್ಸಿನಿಂದ ಕುಡಿ. ದೇವರು ನಿನ್ನ ಕೆಲಸಗಳನ್ನು ಈಗ ಒಪ್ಪಿಕೊಳ್ಳುತ್ತಾನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)7 ಹೋಗು, ನಿನ್ನ ಅನ್ನವನ್ನು ಸಂತೋಷದಿಂದ ಉಣ್ಣು; ನಿನ್ನ ದ್ರಾಕ್ಷಾರಸವನ್ನು ಒಳ್ಳೆಯ ಮನಸ್ಸಿನಿಂದ ಕುಡಿ; ದೇವರು ನಿನ್ನ ನಡತೆಗೆ ಈಗ ಮೆಚ್ಚಿದನಷ್ಟೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್7 ಆದ್ದರಿಂದ ಹೋಗು, ಊಟಮಾಡಿ ಸಂತೋಷಪಡು; ದ್ರಾಕ್ಷಾರಸವನ್ನು ಕುಡಿದು ಉಲ್ಲಾಸಿಸು; ನಿನ್ನ ಈ ನಡತೆಯು ದೇವರಿಗೆ ಮೆಚ್ಚಿಕೆಯಾಗಿದೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ7 ನೀನು ಹೋಗಿ ನಿನ್ನ ಆಹಾರವನ್ನು ಸಂತೋಷದಿಂದ ತಿಂದು ಹರ್ಷ ಹೃದಯದಿಂದ ನಿನ್ನ ದ್ರಾಕ್ಷಾರಸವನ್ನು ಕುಡಿ. ಏಕೆಂದರೆ ನಿನ್ನ ಕೆಲಸಗಳನ್ನು ದೇವರು ಈಗಾಗಲೇ ಮೆಚ್ಚಿಕೊಂಡಿದ್ದಾರೆ. ಅಧ್ಯಾಯವನ್ನು ನೋಡಿ |
ಇತ್ತ ಬೋವಜನು ಅನ್ನಪಾನ ಮಾಡಿ ಸಂತುಷ್ಟನಾಗಿದ್ದನು. ಅನಂತರ ಜವೆಗೋದಿಯ ರಾಶಿಯ ಬಳಿ ಹೋಗಿ ಮಲಗಿಕೊಂಡನು. ರೂತಳು ನಿಶ್ಯಬ್ಧವಾಗಿ ಅವನ ಬಳಿಗೆ ಹೋದಳು. ಅವನ ಪಾದಗಳ ಮೇಲಿದ್ದ ಹೊದಿಕೆಯನ್ನು ಮೆತ್ತಗೆ ಸರಿಸಿ, ಅಲ್ಲೇ ಮಲಗಿಕೊಂಡಳು. ಸುಮಾರು ನಡುರಾತ್ರಿಯಲ್ಲಿ ಅವನಿಗೆ ತಟ್ಟನೆ ಎಚ್ಚರವಾಯಿತು. ಬಗ್ಗಿ ನೋಡಿದಾಗ ಸ್ತ್ರೀಯೊಬ್ಬಳು ಪಾದಗಳ ಬಳಿ ಮಲಗಿರುವುದನ್ನು ಕಂಡು ಚಕಿತಗೊಂಡು, “ನೀನು ಯಾರು?” ಎಂದು ಕೇಳಿದನು.