Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಸಂಗಿ 9:11 - ಕನ್ನಡ ಸತ್ಯವೇದವು C.L. Bible (BSI)

11 ಲೋಕದಲ್ಲಿ ನಾನು ಇನ್ನೊಂದು ವಿಷಯವನ್ನು ಗಮನಿಸಿದೆ; ಓಟ ಪಂದ್ಯದಲ್ಲಿ ವೇಗವಾಗಿ ಓಡುವವನೇ ಯಾವಾಗಲೂ ಗೆಲ್ಲುವನು ಎನ್ನುವಂತಿಲ್ಲ; ಬಲಿಷ್ಠರಿಗೇ ಯುದ್ಧದಲ್ಲಿ ಜಯಗಿಟ್ಟುತ್ತದೆ ಎನ್ನುವಹಾಗಿಲ್ಲ. ಜ್ಞಾನಿಗೆ ಜೀವನಾಂಶ ದೊರಕುವುದು, ಜಾಣನಿಗೆ ಹಣ ಲಭಿಸುವುದು, ಪ್ರವೀಣನಿಗೆ ಪಟ್ಟಪದವಿ ಸಿಕ್ಕುವುದು ಎನ್ನುವಂತಿಲ್ಲ. ಇವರೆಲ್ಲರೂ ಸಮಯ ಸಂದರ್ಭಗಳಿಗೆ ಒಳಪಟ್ಟಿರುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ನಾನು ಲೋಕದಲ್ಲಿ ತಿರುಗಿ ದೃಷ್ಟಿಸಲು ವೇಗಿಗಳಿಗೆ ಓಟದಲ್ಲಿ ಗೆಲುವಿಲ್ಲ. ಬಲಿಷ್ಠರಿಗೆ ಯುದ್ಧದಲ್ಲಿ ಜಯವಿಲ್ಲ. ಜ್ಞಾನಿಗಳಿಗೆ ಅನ್ನ ಸಿಕ್ಕದು. ವಿವೇಕಿಗಳಿಗೆ ಧನ ಲಭಿಸದು. ಪ್ರವೀಣರಿಗೆ ದಯೆ ದೊರಕದು. ಕಾಲವೂ, ಗತಿಯೂ ಅವರೆಲ್ಲರಿಗೆ ಸಂಭವಿಸುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ನಾನು ಲೋಕದಲ್ಲಿ ತಿರಿಗಿ ದೃಷ್ಟಿಸಲು ವೇಗಿಗಳಿಗೆ ಓಟದಲ್ಲಿ ಗೆಲವಿಲ್ಲ, ಬಲಿಷ್ಠರಿಗೆ ಯುದ್ಧದಲ್ಲಿ ಜಯವಾಗದು, ಜ್ಞಾನಿಗಳಿಗೆ ಅನ್ನ ಸಿಕ್ಕದು, ವಿವೇಕಿಗಳಿಗೆ ಧನ ಲಭಿಸದು, ಪ್ರವೀಣರಿಗೆ ದಯೆ ದೊರೆಯದು; ಕಾಲವೂ ಪ್ರಾಪ್ತಿಯೂ ಯಾರಿಗೂ ತಪ್ಪಿದ್ದಲ್ಲ ಎಂದು ತಿಳಿದುಕೊಂಡೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಇದಲ್ಲದೆ ಲೋಕದಲ್ಲಿ ಇನ್ನೂ ಕೆಲವು ಅನ್ಯಾಯಗಳನ್ನು ಗಮನಿಸಿದ್ದೇನೆ. ಅತಿವೇಗದ ಓಟಗಾರನಿಗೆ ಓಟದಲ್ಲಿ ಯಾವಾಗಲೂ ಗೆಲುವಾಗದು; ಬಲಿಷ್ಠವಾದ ಸೈನ್ಯಕ್ಕೆ ಯುದ್ಧದಲ್ಲಿ ಯಾವಾಗಲೂ ಜಯವಾಗದು; ಜ್ಞಾನಿಗೆ ಯಾವಾಗಲೂ ಆಹಾರ ದೊರಕದು; ಜಾಣನಿಗೆ ಯಾವಾಗಲೂ ಐಶ್ವರ್ಯ ದೊರೆಯದು; ಪ್ರವೀಣರಿಗೆ ಯಾವಾಗಲೂ ಹೊಗಳಿಕೆಬಾರದು; ಸಮಯ ಬಂದಾಗ, ಪ್ರತಿಯೊಬ್ಬರಿಗೂ ಕೇಡುಗಳಾಗುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ನಾನು ಮತ್ತೆ ಸೂರ್ಯನ ಕೆಳಗೆ ನೋಡಿದ್ದೇನೆಂದರೆ, ವೇಗಿಗಳಿಗೆ ಓಟವೂ ಪರಾಕ್ರಮಶಾಲಿಗಳಿಗೆ ಯುದ್ಧವೂ ಜ್ಞಾನಿಗಳಿಗೆ ಆಹಾರವೂ ವಿವೇಕಿಗಳಿಗೆ ಐಶ್ವರ್ಯವೂ ಪ್ರವೀಣರಿಗೆ ದಯೆಯೂ ಸಿಗುವುದು ಎಂಬ ನಿಶ್ಚಯ ಇಲ್ಲ. ಏಕೆಂದರೆ ಕಾಲವೂ ಅವಕಾಶವೂ ಅವರೆಲ್ಲರಿಗೆ ಒಳಪಟ್ಟಿರುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಸಂಗಿ 9:11
35 ತಿಳಿವುಗಳ ಹೋಲಿಕೆ  

ಸರ್ವೇಶ್ವರ ಸ್ವಾಮಿ : “ಜ್ಞಾನಿ ತನ್ನ ಜ್ಞಾನಕ್ಕಾಗಿ, ಪರಾಕ್ರಮಿ ತನ್ನ ಪರಾಕ್ರಮಕ್ಕಾಗಿ ಐಶ್ವರ್ಯವಂತ ತನ್ನ ಐಶ್ವರ್ಯಕ್ಕಾಗಿ ಹೆಚ್ಚಳಪಡದಿರಲಿ.


ಆಗ ನಾನು ಮನಸ್ಸಿನಲ್ಲೇ, “ದೇವರು ಸಜ್ಜನರಿಗೂ ದುರ್ಜನರಿಗೂ ನ್ಯಾಯತೀರಿಸುವರು. ಅವರ ನ್ಯಾಯಕ್ರಮದಲ್ಲಿ ಎಲ್ಲ ಕೆಲಸಕಾರ್ಯಗಳಿಗೂ ತಕ್ಕ ಸಮಯ ಉಂಟಲ್ಲವೆ?” ಎಂದುಕೊಂಡೆ.


ದೇವರ ಕಾರ್ಯವೆಲ್ಲವು ಶಾಶ್ವತವಾದುದು ಎಂದು ಬಲ್ಲೆ. ಅದಕ್ಕೆ ಯಾವುದನ್ನೂ ಸೇರಿಸಲಾಗದು. ಅದರಿಂದ ಯಾವುದನ್ನೂ ಕಳೆಯಲಾಗದು. ತಮ್ಮ ಸನ್ನಿಧಿಯಲ್ಲಿ ಮಾನವರು ಭಯಭಕ್ತಿಯಿಂದ ಇರಬೇಕೆಂಬ ಕಾರಣದಿಂದಲೇ ದೇವರು ಹೀಗೆ ಮಾಡಿದ್ದಾರೆ.


ದೈವಯೋಜನೆಯಂತೆಯೇ ಸಕಲವೂ ಸಂಭವಿಸುತ್ತದೆ. ದೇವರು ಆದಿಯಲ್ಲೇ ಸಂಕಲ್ಪಿಸಿದ್ದಂತೆ ತಮ್ಮ ಚಿತ್ತಕ್ಕನುಗುಣವಾಗಿ ಕ್ರಿಸ್ತಯೇಸುವಿನ ಅನ್ಯೋನ್ಯತೆಯಲ್ಲಿ ನಮ್ಮನ್ನು ತಮ್ಮವರನ್ನಾಗಿ ಆರಿಸಿಕೊಂಡರು.


ಅವನು , “ಜುದೇಯದ ಹಾಗು ಜೆರುಸಲೇಮಿನ ಎಲ್ಲ ಜನರೇ, ಅರಸ ಯೆಹೋಷಾಫಾಟನೇ, ಸರ್ವೇಶ್ವರ ಸ್ವಾಮಿ ಹೇಳುವುದನ್ನು ಕೇಳಿರಿ: ಈ ಮಹಾಸೈನ್ಯಸಮೂಹದ ನಿಮಿತ್ತ ಕಳವಳಗೊಳ್ಳಬೇಡಿ; ಹೆದರಬೇಡಿ. ಈ ಯುದ್ಧ ನಿಮ್ಮದಲ್ಲ, ದೇವರದೇ.


ನಿಮ್ಮ ದೇವರಾದ ಸರ್ವೇಶ್ವರಸ್ವಾಮಿಯೇ ನಿಮ್ಮ ಪಿತೃಗಳಿಗೆ ಪ್ರಮಾಣಪೂರ್ವಕವಾಗಿ ಮಾಡಿದ ವಾಗ್ದಾನವನ್ನು ಈಗ ನಿಮಗೆ ಮನಮುಟ್ಟುವ ರೀತಿಯಲ್ಲಿ ನೆರವೇರಿಸಿದ್ದಾರೆ. ನಿಮಗೆ ಇಷ್ಟು ಭಾಗ್ಯವನ್ನು ಸಂಪಾದಿಸುವ ಸಾಮರ್ಥ್ಯವನ್ನು ಕೊಟ್ಟಿದ್ದಾರೆ ಎಂಬುದನ್ನು ಜ್ಞಾಪಕಮಾಡಿಕೊಳ್ಳಿ.


ಮಾನವನು ಪಡುವ ಸಮಸ್ತ ಪರಿಶ್ರಮವನ್ನು ಹಾಗೂ ಸಾಧಿಸುವ ಸಕಲ ಕಾರ್ಯಗಳನ್ನು ಅವಲೋಕಿಸಿದೆ. ಇವಕ್ಕೆಲ್ಲ ಪರರ ಬಗ್ಗೆ ಅವನಿಗಿರುವ ಮತ್ಸರವೇ ಕಾರಣವೆಂದು ತೋರಿಬಂತು. ಇದೂ ಕೂಡ ಗಾಳಿಯನ್ನು ಹಿಡಿಯಲು ಬೆನ್ನಟ್ಟಿದಂತೆ ವ್ಯರ್ಥ.


“ವೇಗಶಾಲಿಗಳು ಓಡಿಹೋಗಲಾರರು ಬಲಿಷ್ಟರು ತಪ್ಪಿಸಿಕೊಳ್ಳಲಾರರು. ಉತ್ತರದಲ್ಲಿ, ಯೂಫ್ರೆಟಿಸ್ ನದಿಯ ಹತ್ತಿರದಲ್ಲಿ, ಎಡವಿಬಿದ್ದಿರುವರು.


ದೇವರ ಸೃಷ್ಟಿಕಾರ್ಯವನ್ನು ಗಮನಿಸು; ಅವರು ಸೊಟ್ಟಗೆ ಮಾಡಿದ್ದನ್ನು ನೆಟ್ಟಗೆ ಮಾಡುವವರು ಯಾರು?


ಇದಾದ ಮೇಲೆ ಈ ಜಗದಲ್ಲಿ ಎಲ್ಲಾ ತರದ ಚಿತ್ರಹಿಂಸೆಗಳನ್ನು ಕುರಿತು ಯೋಚಿಸಿದೆ. ಅಯ್ಯೋ, ಹಿಂಸೆಗೆ ಈಡಾದವರ ಕಣ್ಣೀರನ್ನು ಕುರಿತು ಏನೆಂದು ಹೇಳಲಿ? ಅವರನ್ನು ಸಂತೈಸುವವರು ಯಾರೂ ಇಲ್ಲ. ಹಿಂಸಾಚಾರಿಗಳು ಶಕ್ತಿಸಾಮರ್ಥ್ಯ ಉಳ್ಳವರು. ಸಂತೈಸುವವರಾದರೋ ಒಬ್ಬರೂ ಇರಲಿಲ್ಲ.


ರಾಜನ ಪ್ರಯತ್ನವೇ ಹೀಗಾದ ಮೇಲೆ ಮತ್ತೊಬ್ಬನಿಂದ ಏನಾದೀತು? ಆದದ್ದೇ ಆಗುತ್ತದೆ ಎಂದುಕೊಂಡೆ. ಜ್ಞಾನವೆಂದರೇನು? ಮೂಢತನವೆಂದರೇನು? ಬುದ್ಧಿಹೀನತೆ ಎಂದರೇನು? ಇವುಗಳ ಬಗ್ಗೆ ಮತ್ತೆ ಚಿಂತಿಸಿದೆ.


ವ್ಯಕ್ತಿಯಾಗಿರಲಿ, ರಾಷ್ಟ್ರವಾಗಿರಲಿ, ಯಾರಾಗಿದ್ದರೇನು? ದೇವರು ಸುಮ್ಮನಿದ್ದರೆ ತಪ್ಪುಹೊರಿಸುವವರಾರು? ವಿಮುಖನಾದರೆ ಆತನ ದರ್ಶನ ಪಡೆಯಬಲ್ಲವರಾರು?


ಇದನ್ನು ಕೇಳಿ ಅಬ್ಷಾಲೋಮನೂ ಎಲ್ಲ ಇಸ್ರಯೇಲರೂ, “ಅರ್ಕಿಯನಾದ ಹೂಷೈಯ ಆಲೋಚನೆಯು ಅಹೀತೋಫೆಲನ ಆಲೋಚನೆಗಿಂತ ಒಳ್ಳೆಯದಾಗಿದೆ,” ಎಂದರು. ಹೀಗೆ ಸರ್ವೇಶ್ವರ ಅಬ್ಷಾಲೋಮನಿಗೆ ಕೇಡನ್ನುಂಟುಮಾಡಬೇಕೆಂದು, ಅಹೀತೋಫೆಲನ ಆಲೋಚನೆಯನ್ನು ವ್ಯರ್ಥಮಾಡಿದರು.


ಆಗ ಸಜ್ಜನರಿಗೂ ದುರ್ಜನರಿಗೂ, ದೇವರಸೇವೆ ಮಾಡುವವರಿಗೂ ಮಾಡದವರಿಗೂ ಇರುವ ವ್ಯತ್ಯಾಸವನ್ನು ಮತ್ತೆ ನೀವು ಮನಗಾಣುವಿರಿ.


ಕೂಡಲೆ ದಾವೀದನು ಹೋಗಿ ಆ ಫಿಲಿಷ್ಟಿಯನ ಮೇಲೆ ನಿಂತು, ಅವನ ಕತ್ತಿಯನ್ನೇ ಹಿರಿದು, ಅವನ ತಲೆಯನ್ನು ಕಡಿದು ಸಾಯಿಸಿದನು.


ಆತನ ದೃಷ್ಟಿಯಲ್ಲಿ ಭೂನಿವಾಸಿಗಳೆಲ್ಲರು ಶೂನ್ಯರು ಇಹದ ಜನರೂ ಪರದ ದೂತರೂ ಆತನಿಗೆ ಅಧೀನರು. ಆತನ ಶಕ್ತಿಯುತ ಹಸ್ತವನ್ನು ಯಾರಿಂದಲೂ ತಡೆಯಲಾಗದು. ‘ನೀನು ಮಾಡುತ್ತಿರುವುದೇನು?’ ಎಂದು ಯಾರೂ ಆತನನ್ನು ಪ್ರಶ್ನಿಸಲಾರರು.


ಅಹೀತೋಫೆಲನು ತನ್ನ ಆಲೋಚನೆ ನಡೆಯಲಿಲ್ಲವೆಂದು ತಿಳಿದು, ಕತ್ತೆಗೆ ತಡಿಹಾಕಿಸಿ ಕುಳಿತುಕೊಂಡು ತನ್ನ ಊರಿಗೆ ಹೋಗಿದ್ದನು. ಮನೆಯ ವ್ಯವಸ್ಥೆಮಾಡಿ ಅನಂತರ ಉರ್ಲು ಹಾಕಿಕೊಂಡು ಸತ್ತನು. ಅವನ ಶವವನ್ನು ಅವನ ತಂದೆಯ ಸ್ಮಶಾನಭೂಮಿಯಲ್ಲಿ ಸಮಾಧಿ ಮಾಡಿದರು.


‘ಈ ಭಾಗ್ಯ ನಮ್ಮ ಸಾಮರ್ಥ್ಯ ಸಾಹಸಗಳಿಂದಲೇ ನಮಗೆ ಲಭಿಸಿತು’ ಎಂದುಕೊಂಡೀರಿ ಎಚ್ಚರಿಕೆ!


ಬಂಡಿ ಹೋಗುವ ದಾರಿಯನ್ನು ಗಮನಿಸಿರಿ. ಅದು ತಾನಾಗಿ ಸ್ವದೇಶದ ದಾರಿಹಿಡಿದು ಬೇತ್‍ಷೆಮೆಷಿನ ಕಡೆಗೆ ಹೋದರೆ ಈಗ ಬಂದಿರುವ ಕೇಡನ್ನು ಕಳುಹಿಸಿದವನು ಆ ಸರ್ವೇಶ್ವರನೇ ಎಂದು ತಿಳಿಯಿರಿ. ಬಂಡಿ ಆ ಮಾರ್ಗವನ್ನು ಹಿಡಿಯದಿದ್ದರೆ ಆ ಸರ್ವೇಶ್ವರನ ಹಸ್ತ ನಮ್ಮನ್ನು ಮುಟ್ಟಲಿಲ್ಲ, ಈ ಕೇಡು ಆಕಸ್ಮಿಕವಾಗಿ ಬಂದಿದೆ ಎಂದು ತಿಳಿದುಕೊಳ್ಳಿ,” ಎಂದು ಹೇಳಿದರು.


ಕೆಚ್ಚೆದೆಯ ವೀರರು ಸುಲಿಗೆಯಾಗಿ ಚಿರನಿದ್ರೆಯಲಿಹರು I ಕೈಕತ್ತರಿಸಿದಂತಿರುವರು ಆ ರಣಧೀರರೆಲ್ಲರು II


ಇವುಗಳನ್ನು ಕೇಳಿ ಜಾಣನು ಇನ್ನೂ ಜಾಣ ನಾಗುವನು, ವಿವೇಕಿಯು ಮತ್ತಷ್ಟು ಜ್ಞಾನಸಂಪನ್ನನಾಗುವನು.


ಎಲ್ಲವೂ ಎಲ್ಲರಿಗೂ ಒಂದೇ ಬಗೆಯಾಗಿ ಸಂಭವಿಸುವುದು; ಸಜ್ಜನನಿಗೂ ದುರ್ಜನನಿಗೂ, ಒಳ್ಳೆಯವನಿಗೂ (ಕೆಟ್ಟವನಿಗೂ), ಶುದ್ಧನಿಗೂ, ಅಶುದ್ಧನಿಗೂ ಬಲಿಯನ್ನರ್ಪಿಸುವವನಿಗೂ ಅರ್ಪಿಸದವನಿಗೂ ಒಂದೇ ಗತಿ ಕಾದಿದೆ; ನಿರ್ದೋಷಿಯಂತೆ ದೋಷಿಯೂ ಇರುವನು; ಆಣೆಯಿಡುವವನ ಹಾಗೆ ಆಣೆಗೆ ಅಂಜುವವನೂ ಇರುವನು.


ದೂತನು ನನಗೆ ಹೀಗೆಂದು ಹೇಳಿದನು: “ಜೆರುಬ್ಬಾಬೆಲನಿಗೆ ಈ ಸಂದೇಶವನ್ನು ಕೊಡು - ನಿನಗೆ ಜಯ ದೊರಕುವುದು. ನಿನ್ನ ಶಕ್ತಿಸಾಮರ್ಥ್ಯದಿಂದಲ್ಲ, ಸೇನಾಬಲದಿಂದಲೂ ಅಲ್ಲ; ನನ್ನ ಆತ್ಮಶಕ್ತಿಯಿಂದ, ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ.


ಎಲ್ಲರಿಗೂ ಒಂದೇ ಗತಿಯೆಂಬ ಸಂಕಟವು ಲೋಕ ವ್ಯವಹಾರಗಳಲ್ಲೆಲ್ಲಾ ಸೇರಿಕೊಂಡಿದೆ. ಇದಲ್ಲದೆ, ನರಮಾನವರ ಎದೆಯಲ್ಲಿ ಕೆಟ್ಟತನ ತುಂಬಿದೆ; ಅವರು ಬದುಕಿರುವ ತನಕ ಮರುಳುತನ ಅವರ ಮನಸ್ಸನ್ನು ಸೆರೆಹಿಡಿದಿರುತ್ತದೆ. ಅನಂತರ ಸತ್ತವರನ್ನು ಸೇರಿಕೊಳ್ಳುತ್ತಾರೆ.


‘ನಾವು ಶೂರರು, ಯುದ್ಧ ಪ್ರವೀಣರು, ಪರಾಕ್ರಮಿಗಳು’ ಎಂದು ನೀವು ಹೇಳುವುದೆಂತು?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು