Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಸಂಗಿ 7:5 - ಕನ್ನಡ ಸತ್ಯವೇದವು C.L. Bible (BSI)

5 ಅಜ್ಞಾನಿಗಳ ಸ್ತುತಿಗೀತೆಗಿಂತ ಸುಜ್ಞಾನಿಗಳ ಗದರಿಕೆ ಲೇಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಮೂಢರ ಗಾನಕ್ಕಿಂತ ಜ್ಞಾನಿಗಳ ಗದರಿಕೆಯನ್ನು ಕೇಳುವುದು ಲೇಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಅಜ್ಞಾನಿಗಳ ಗಾನಕ್ಕಿಂತ ಜ್ಞಾನಿಗಳ ಗದರಿಕೆಯನ್ನು ಕೇಳುವದು ಲೇಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಮೂಢರ ಹೊಗಳಿಕೆಗಿಂತ ಜ್ಞಾನಿಗಳ ಗದರಿಕೆಯೇ ಉತ್ತಮ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಮೂಢರ ಹಾಡನ್ನು ಕೇಳುವುದಕ್ಕಿಂತ, ಜ್ಞಾನಿಗಳ ಗದರಿಕೆಯನ್ನು ಕೇಳುವುದು ಲೇಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಸಂಗಿ 7:5
14 ತಿಳಿವುಗಳ ಹೋಲಿಕೆ  

ಸಜ್ಜನರು ವಿಧಿಸುವಾ ಶಿಕ್ಷೆ ಎನಗೆ ಕಟಾಕ್ಷ I ದುರ್ಜನರಿಂದ ನನಗಾಗದಿರಲಿ ಅಭಿಷೇಕ I ಸತತ ಪ್ರಾರ್ಥಿಸುವೆ ಆ ದುಷ್ಕೃತ್ಯಗಳ ವಿರುದ್ಧ II


ನನ್ನ ಪ್ರೀತಿಪಾತ್ರರನ್ನು ನಾನು ಖಂಡಿಸುತ್ತೇನೆ ಮತ್ತು ದಂಡಿಸುತ್ತೇನೆ. ಆದುದರಿಂದ ಉತ್ಸಾಹದಿಂದಿರು, ದೇವರಿಗೆ ಅಭಿಮುಖನಾಗಿರು.


ಶಿಕ್ಷೆಯನ್ನು ಉಪೇಕ್ಷಿಸುವವನಿಗೆ ಕಾದಿದೆ ಬಡತನ ಹಾಗು ಅವಮಾನ; ಗದರಿಕೆಯನ್ನು ಗಮನಿಸುವವ ಹೊಂದುವನು ಸನ್ಮಾನ.


ಮಿತ್ರನು ಕೊಡುವ ಗುದ್ದು ಹಿತಕರ; ಶತ್ರುವು ಕೊಡುವ ಮುದ್ದು ಮೋಸಕರ.


ಮಂದಮತಿಗೆ ನೂರು ಗುದ್ದು; ಬುದ್ಧಿವಂತನಿಗೆ ಒಂದು ಮಾತು.


ದೇವವಾಕ್ಯವನ್ನು ಉಲ್ಲಂಘಿಸುವವನು ನಾಶವಾಗುವನು; ಆಜ್ಞೆಯನ್ನು ನಿಷ್ಠೆಯಿಂದ ಪಾಲಿಸುವವನು ಫಲಪಡೆಯುವನು.


ಕುಚೋದ್ಯಗಾರನನ್ನು ಗದರಿಸಬೇಡ, ಅವನು ನಿನ್ನನ್ನು ದ್ವೇಷಿಸುವನು. ಜ್ಞಾನವಂತನನ್ನು ಗದರಿಸು, ಅವನು ನಿನ್ನನ್ನು ಪ್ರೀತಿಸುವನು.


ಊರ ಬಾಗಿಲಲಿ ಕೂರುವವರ ಹರಟೆಗೆ ಕಾರಣನಾದೆನಯ್ಯಾ I ಸಾರಾಯಿ ಮದ್ಯಸಾರ ಕುಡಿವವರ ಪದ್ಯವಸ್ತುವಾದೆನಯ್ಯಾ II


ಏಕೆಂದರೆ ಆಜ್ಞೆಯೇ ಜ್ಯೋತಿ, ಬೋಧನೆಯೇ ಬೆಳಕು, ಶಿಸ್ತಿನಿಂದ ಕೂಡಿದ ಶಿಕ್ಷಣವೇ ಜೀವನಕ್ಕೆ ಮಾರ್ಗ.


ಕೇಳುವ ಕಿವಿಗೆ ಕೊಡುವ ಬುದ್ಧಿವಾದವು ಹೊನ್ನಿನ ಮುರುವು, ಅಪರಂಜಿಯ ಆಭರಣವು.


ಜ್ಞಾನಿಯ ಹೃದಯ ಶೋಕದ ಆಲಯ; ಮೂಢನ ಹೃದಯ ಹಿಗ್ಗಿನ ನಿಲಯ.


ಹುಚ್ಚರ ಕೂಟದಲ್ಲಿ ಕೇಳಿಬರುವ ಅಧ್ಯಕ್ಷನ ಕೂಗಾಟಕ್ಕಿಂತ ಜ್ಞಾನಿಯ ಮೆಲ್ಲನೆಯ ಮಾತು ಕಿವಿಗೆ ಲೇಸು.


ಜ್ಞಾನಿಗಳ ನುಡಿಗಳು ಮೊನೆಗೋಲುಗಳು, ಅವರು ಸಂಗ್ರಹಿಸಿದ ವಚನಗಳು ಬಿಗಿಯಾಗಿ ಜಡಿದ ಮೊಳೆಗಳು. ಅವುಗಳ ಮೂಲಕರ್ತನು ಎಲ್ಲರ ಏಕೈಕ ಮೇಷಪಾಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು