Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಸಂಗಿ 7:25 - ಕನ್ನಡ ಸತ್ಯವೇದವು C.L. Bible (BSI)

25 ನಾನು ಮತ್ತೆ ಜ್ಞಾನವನ್ನೂ ಮೂಲತತ್ವವನ್ನೂ ಹುಡುಕಿ, ವಿಚಾರಿಸಿ, ಗ್ರಹಿಸಿಕೊಳ್ಳಲು ಆಶಿಸಿದೆ; ಅಧರ್ಮವು ಮೂಢತನ, ಅಜ್ಞಾನವು ಹುಚ್ಚುತನ ಎಂದು ತಿಳಿದುಕೊಳ್ಳಲು ಮನಸ್ಸುಮಾಡಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ನಾನು ತಿರುಗಿಕೊಂಡು, ಜ್ಞಾನವನ್ನು ಮತ್ತು ಮೂಲತತ್ವವನ್ನು ಹುಡುಕಿ, ವಿಚಾರಿಸಿ ಗ್ರಹಿಸುವುದಕ್ಕೂ ಅಧರ್ಮವು ಮೂರ್ಖತನ, ಅಜ್ಞಾನವು ಹುಚ್ಚುತನ ಎಂದು ತಿಳಿದುಕೊಳ್ಳುವುದಕ್ಕೂ ಮನಸ್ಸಿಟ್ಟೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ನಾನು ತಿರುಗಿಕೊಂಡು ಜ್ಞಾನವನ್ನೂ ಮೂಲತತ್ವವನ್ನೂ ಹುಡುಕಿ ವಿಚಾರಿಸಿ ಗ್ರಹಿಸುವದಕ್ಕೂ ಅಧರ್ಮವು ಮೂಢತನ, ಅಜ್ಞಾನವು ಹುಚ್ಚುತನ ಎಂದು ತಿಳಿದುಕೊಳ್ಳುವದಕ್ಕೂ ಮನಸ್ಸಿಟ್ಟೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 ನಿಜವಾದ ಜ್ಞಾನವನ್ನು ಕಂಡುಕೊಳ್ಳಲು ನಾನು ವ್ಯಾಸಂಗ ಮಾಡಿದೆ ಮತ್ತು ತುಂಬ ಕಷ್ಟಪಟ್ಟು ಪ್ರಯತ್ನಿಸಿದೆ. ಪ್ರತಿಯೊಂದಕ್ಕೂ ಕಾರಣವನ್ನು ಕಂಡುಕೊಳ್ಳಲು ನಾನು ಪ್ರಯತ್ನಿಸಿದೆ. ನಾನು ಕಲಿತಿದ್ದೇನು? ಕೆಡುಕನಾಗಿರುವುದು ಮೂಢತನ ಮತ್ತು ಮೂಢನಂತೆ ವರ್ತಿಸುವುದು ಹುಚ್ಚುತನ ಎಂಬುದನ್ನು ನಾನು ಕಲಿತುಕೊಂಡೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 ಜ್ಞಾನದ ಮೂಲ ತತ್ವವನ್ನೂ, ದುಷ್ಟತನದ ಮೂಢತನವನ್ನೂ, ಮೂಢತ್ವದ ಹುಚ್ಚುತನವನ್ನೂ ಪರೀಕ್ಷಿಸಿ ತಿಳಿದುಕೊಳ್ಳುವಂತೆ ಮನಸ್ಸುಮಾಡಿದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಸಂಗಿ 7:25
17 ತಿಳಿವುಗಳ ಹೋಲಿಕೆ  

“ಹೌದು, ಒಂದಾದ ಮೇಲೊಂದನ್ನು ಆಲೋಚಿಸಿ ನಾನು ಇದನ್ನು ಕಂಡುಹಿಡಿದೆ” ಎನ್ನುತ್ತಾನೆ ಉಪದೇಶಕ. ಮತ್ತೊಂದು ಸಂಶೋಧನೆಯನ್ನು ಎಷ್ಟು ನಡೆಸಿದರೂ ನನಗೆ ಉತ್ತರ ಸಿಕ್ಕಲಿಲ್ಲ.


ಹೀಗಿರಲು, ನಾನು ಲೋಕದಲ್ಲಿ ಕಷ್ಟಪಟ್ಟು ಗಳಿಸಿದ ದುಡಿಮೆಯ ಬಗ್ಗೆ ನಿರಾಶೆಗೊಂಡೆ.


“ಮೂಢನಿಗೆ ಸಂಭವಿಸುವ ಗತಿ ನನಗೂ ಸಂಭವಿಸುವುದಾದರೆ ನನ್ನ ಹೆಚ್ಚಿನ ಜ್ಞಾನದಿಂದ ಪ್ರಯೋಜನವೇನು? ಇದೂ ವ್ಯರ್ಥವೇ!” ಎಂದುಕೊಂಡೆ.


ರಾಜನ ಪ್ರಯತ್ನವೇ ಹೀಗಾದ ಮೇಲೆ ಮತ್ತೊಬ್ಬನಿಂದ ಏನಾದೀತು? ಆದದ್ದೇ ಆಗುತ್ತದೆ ಎಂದುಕೊಂಡೆ. ಜ್ಞಾನವೆಂದರೇನು? ಮೂಢತನವೆಂದರೇನು? ಬುದ್ಧಿಹೀನತೆ ಎಂದರೇನು? ಇವುಗಳ ಬಗ್ಗೆ ಮತ್ತೆ ಚಿಂತಿಸಿದೆ.


ನಾಯಿ ತಾನು ಕಕ್ಕಿದ್ದನ್ನು ನೆಕ್ಕಲು ತಿರುಗಿ ಬರುವುದು; ಮೂಢನು ತಾನು ಮಾಡಿದ ಮೂರ್ಖತನಕ್ಕೆ ಹಿಂದಿರುಗುವನು.


ಮೂರ್ಖತನದಲ್ಲಿ ಮುಳುಗಿರುವ ಮೂಢನಿಗೆ ಎದುರಾಗುವುದಕ್ಕಿಂತಲು ಮರಿಗಳನ್ನು ಕಳೆದುಕೊಂಡ ಕರಡಿಗೆ ಎದುರಾಗುವುದು ಲೇಸು.


ಆಕೆ, “ಅಣ್ಣಾ, ಬೇಡ; ನನ್ನನ್ನು ಕೆಡಿಸಬೇಡ; ಇಸ್ರಯೇಲರಲ್ಲಿ ಇಂಥದು ನಡೆಯಬಾರದು.


ನೀನೆದ್ದು ಜನರನ್ನು ಶುದ್ಧೀಕರಿಸು. ನೀನು ಅವರಿಗೆ, ‘ಇಸ್ರಯೇಲರೇ, ನಾಳೆ ನಿಮ್ಮನ್ನೇ ಶುದ್ಧೀಕರಿಸಿಕೊಳ್ಳಿ. ನಿಮ್ಮ ಮಧ್ಯೆ ಶಾಪಕ್ಕೆ ಕಾರಣವಾದದ್ದು ಉಂಟು. ಅದನ್ನು ನೀವು ತೆಗೆದು ಹಾಕುವ ತನಕ ಶತ್ರುಗಳ ಮುಂದೆ ನಿಲ್ಲಲಾರಿರಿ ಎಂದು ನಿಮ್ಮ ದೇವರಾದ ಸರ್ವೇಶ್ವರಸ್ವಾಮಿಯೇ ಹೇಳಿದ್ದಾರೆ.


ಇತ್ತ ಯಕೋಬನ ಗಂಡು ಮಕ್ಕಳು ತಂಗಿಯ ಸಂಗತಿಯನ್ನು ಕೇಳಿ ಅಡವಿಯಿಂದ ಬಂದರು. ಶೆಕೆಮನು ತಮ್ಮ ತಂಗಿಯನ್ನು ಬಲಾತ್ಕಾರದಿಂದ ಕೂಡಿ, ಮಾಡಬಾರದನ್ನು ಮಾಡಿ, ಇಸ್ರಯೇಲರಿಗೆ ಘನ ಅವಮಾನವನ್ನು ಮಾಡಿದ್ದರಿಂದ ಅವರು ತಳಮಳಗೊಂಡು ಕಡುಕೋಪದಿಂದ ಇದ್ದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು