Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಸಂಗಿ 7:15 - ಕನ್ನಡ ಸತ್ಯವೇದವು C.L. Bible (BSI)

15 ಸಜ್ಜನನು ಸದ್ಧರ್ಮಿಯಾಗಿ ಜೀವಿಸುತ್ತಾ ಗತಿಸಿಹೋಗುತ್ತಾನೆ; ದುರ್ಜನನಾದರೋ ಅಧರ್ಮದಲ್ಲಿ ಬಹುಕಾಲ ಬದುಕುತ್ತಾನೆ. ಇದನ್ನು ಎಲ್ಲಾ ನನ್ನ ನಿರರ್ಥಕ ಜೀವನದಲ್ಲಿ ಎಷ್ಟೋ ನೋಡಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ನೀತಿವಂತನು ತನ್ನ ನೀತಿಯಲ್ಲಿಯೇ ನಶಿಸುವುದುಂಟು. ದುಷ್ಟನು ತನ್ನ ದುಷ್ಟತನದಲ್ಲಿಯೇ ಬಹಳ ದಿನ ಬದುಕುವುದುಂಟು. ಇದನ್ನೆಲ್ಲಾ ನನ್ನ ವ್ಯರ್ಥವಾದ ಜೀವಮಾನದಲ್ಲಿ ನೋಡಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಧರ್ಮಿಯು ತನ್ನ ಧರ್ಮದಲ್ಲಿಯೇ ನಶಿಸುವದುಂಟು; ಅಧರ್ಮಿಯು ತನ್ನ ಅಧರ್ಮದಲ್ಲಿಯೇ ಬಹು ದಿನ ಬದುಕುವದುಂಟು; ಇದನ್ನೆಲ್ಲಾ ನನ್ನ ವ್ಯರ್ಥವಾದ ಜೀವಮಾನದಲ್ಲಿ ನೋಡಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ನನ್ನ ಅಲ್ಪಕಾಲದ ಜೀವನದಲ್ಲಿ ನಾನು ಪ್ರತಿಯೊಂದನ್ನೂ ನೋಡಿದ್ದೇನೆ. ನೀತಿವಂತರು ಯೌವನ ಪ್ರಾಯದಲ್ಲಿ ಸಾಯುವುದನ್ನೂ ನೋಡಿದ್ದೇನೆ. ದುಷ್ಟರು ಬಹುಕಾಲ ಬದುಕುವುದನ್ನೂ ನೋಡಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ನನ್ನ ವ್ಯರ್ಥದ ದಿನಗಳಲ್ಲಿ ಇವೆರಡು ವಿಷಯಗಳನ್ನು ನೋಡಿದ್ದೇನೆ: ನೀತಿವಂತನು ತನ್ನ ನೀತಿಯಲ್ಲಿ ಗತಿಸಿಹೋಗುತ್ತಾನೆ. ದುಷ್ಟನು ತನ್ನ ದುಷ್ಟತನದಲ್ಲಿ, ಇಡೀ ಜೀವಮಾನವನ್ನು ಕಳೆಯುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಸಂಗಿ 7:15
21 ತಿಳಿವುಗಳ ಹೋಲಿಕೆ  

ನೆರಳಿನಂತೆ ವ್ಯರ್ಥವಾಗಿ ಕಳೆದುಹೋಗುವ ಮಾನವನ ಜೀವಮಾನ ದಿನಗಳಲ್ಲೆಲ್ಲಾ ಅವನಿಗೆ ಯಾವುದು ಹಿತವೆಂದು ಯಾರಿಗೆ ಗೊತ್ತು? ತಾನು ಕಾಲವಾದ ಮೇಲೆ ಇಹಲೋಕದಲ್ಲಿ ಏನಾಗುವುದೆಂದು ಅವನು ಯಾರಿಂದ ತಿಳಿದುಕೊಳ್ಳಲು ಸಾಧ್ಯ?


ನಿಮ್ಮ ಪೂರ್ವಜರು ಹಿಂಸೆಗೆ ಗುರಿಪಡಿಸದ ಪ್ರವಾದಿ ಯಾರಾದರೂ ಇದ್ದಾರೆಯೆ? ಸತ್ಯಸ್ವರೂಪನು ಬರಲಿದ್ದಾನೆಂದು ಮುಂತಿಳಿಸಿದವರನ್ನು ಅವರು ಕೊಂದುಹಾಕಿದರು. ನೀವಾದರೋ, ಆ ಸತ್ಯಸ್ವರೂಪನನ್ನು ಹಿಡಿದುಕೊಟ್ಟು ಕೊಲೆಮಾಡಿಸಿದಿರಿ.


ಕೆಲವೇ ದಿನ ಬದುಕುವ ಮಗುವಾಗಲಿ, ಆಯುಸ್ಸು ಮುಗಿಸದ ಮುದುಕನಾಗಲಿ ಇನ್ನು ಇಲ್ಲಿರನು. ನೂರು ವರ್ಷ ಬಾಳುವವನು ‘ಯುವಕ’ ಎನಿಸಿಕೊಳ್ಳುವನು; ನೂರರೊಳಗೆ ಸಾಯುವ ಪಾಪಿಯು ‘ಶಾಪಗ್ರಸ್ತ’ ಎನಿಸಿಕೊಳ್ಳುವನು.


ಲೋಕದಲ್ಲಿ ದೇವರು ವಿಧಿಸಿರುವ ಈ ನಿರರ್ಥಕ ಜೀವಮಾನದ ನಿರರ್ಥಕ ದಿನದಿನವೂ ನಿನ್ನ ಪ್ರಿಯ ಪತ್ನಿಯೊಡನೆ ಸುಖದಿಂದ ಬದುಕು; ಇಹಲೋಕದ ನಿನ್ನ ಬಾಳಿನಲ್ಲಿ ನೀನು ಪಡುವ ಪಾಡಿಗೆ ಇದೇ ನಿನ್ನ ಪಾಲಿಗೆ ಬಂದ ಪಂಚಾಮೃತ.


ಇದಲ್ಲದೆ, ನಾನು ಲೋಕವನ್ನು ದೃಷ್ಟಿಸಿನೋಡಿ ನ್ಯಾಯಸ್ಥಾನದಲ್ಲೂ ಧರ್ಮಸ್ಥಾನದಲ್ಲೂ ಅಧರ್ಮ ಇರುವುದನ್ನು ಗಮನಿಸಿದೆ.


ಅವನ ಮನಸ್ಸಿಗೆ ನೆಮ್ಮದಿ ಇಲ್ಲ, ಇದು ಸಹ ವ್ಯರ್ಥವೇ ಸರಿ.


ನರಮಾನವನು ಮೆರೆದಾಡುವನು ಮಾಯೆಯಂತೆ I ಅವನ ಸಡಗರವೆಲ್ಲವೂ ನಿರರ್ಥಕದಂತೆ I ಕೂಡಿಪನಾತ ಸಿರಿ ಅದು ಯಾರದಾಗುವುದೆಂದು ಅರಿಯದೆ II


ತರುವಾಯ ಇಬ್ಬರು ದುಷ್ಟರು ಬಂದು ಅವನ ಮುಂದೆ ಕುಳಿತರು. ಇವನು ದೇವರನ್ನೂ ಅರಸನನ್ನೂ ಶಪಿಸಿದ್ದಾನೆಂಬುದಾಗಿ ಜನರ ಎದುರಿನಲ್ಲೆ ಅವನಿಗೆ ವಿರುದ್ಧ ಸಾಕ್ಷಿಹೇಳಿದರು. ಜನರು ಅವನನ್ನು ಊರಿನ ಹೊರಗೆ ಒಯ್ದು ಕಲ್ಲೆಸೆದು ಕೊಂದರು.


ಯಕೋಬನು, “ನನ್ನ ಬಾಳಿನ ಪಯಣದ ದಿನಗಳು ನೂರ ಮೂವತ್ತು ವರ್ಷಗಳಷ್ಟೇ. ಎಣಿಕೆಯಲ್ಲಿ ಅವು ಕಮ್ಮಿ; ಕಷ್ಟದುಃಖದಲ್ಲಿ ಜಾಸ್ತಿ; ನನ್ನ ಪೂರ್ವಜರು ಬಾಳಿದಷ್ಟು ವರ್ಷಗಳು ನನಗಾಗಿಲ್ಲ,” ಎಂದು ಹೇಳಿ


ಜನರು, ನಿಮ್ಮನ್ನು ಪ್ರಾರ್ಥನಾಮಂದಿರದಿಂದ ಬಹಿಷ್ಕರಿಸುವರು, ಅಷ್ಟೇ ಅಲ್ಲ, ನಿಮ್ಮನ್ನು ಕೊಲ್ಲುವವನು ತಾನು ದೇವರಿಗೆ ಬಲಿಕೊಟ್ಟೆನೆಂದು ಭಾವಿಸುವ ಕಾಲವೂ ಬರಲಿದೆ.


ಕೇಡಿಗನು ತನ್ನ ಮನದಾಸೆಗಾಗಿ ಹೆಮ್ಮೆಪಡುತಿಹನು I ಲಾಭಬಡುಕನು ಪ್ರಭುವನು ಶಪಿಸಿ ತಿರಸ್ಕರಿಸುತಿಹನು II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು