Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಸಂಗಿ 7:13 - ಕನ್ನಡ ಸತ್ಯವೇದವು C.L. Bible (BSI)

13 ದೇವರ ಸೃಷ್ಟಿಕಾರ್ಯವನ್ನು ಗಮನಿಸು; ಅವರು ಸೊಟ್ಟಗೆ ಮಾಡಿದ್ದನ್ನು ನೆಟ್ಟಗೆ ಮಾಡುವವರು ಯಾರು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ದೇವರ ಕಾರ್ಯವನ್ನು ನೋಡು; ಆತನು ಸೊಟ್ಟಗೆ ಮಾಡಿದ್ದನ್ನು ನೆಟ್ಟಗೆ ಮಾಡುವುದಕ್ಕೆ ಯಾರಿಂದಾದೀತು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ದೇವರ ಕಾರ್ಯವನ್ನು ನೋಡು; ಆತನು ಸೊಟ್ಟಗೆ ಮಾಡಿದ್ದನ್ನು ನೆಟ್ಟಗೆ ಮಾಡುವದಕ್ಕೆ ಯಾರಿಂದಾದೀತು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ದೇವರ ಕಾರ್ಯಗಳನ್ನು ನೋಡು. ಆತನು ಸೊಟ್ಟಗೆ ಮಾಡಿದ್ದನ್ನು ನೆಟ್ಟಗೆ ಮಾಡಲು ಯಾರಿಗೆ ಸಾಧ್ಯ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ದೇವರ ಸೃಷ್ಟಿಕಾರ್ಯವನ್ನು ಯೋಚಿಸು: ದೇವರು ಮಾಡಿದ್ದನ್ನು, ಪುನಃ ಸರಿಪಡಿಸಲು ಯಾರಿಗೆ ಸಾಧ್ಯ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಸಂಗಿ 7:13
19 ತಿಳಿವುಗಳ ಹೋಲಿಕೆ  

ಸೊಟ್ಟವಾದುದನ್ನು ನೆಟ್ಟಗೆ ಮಾಡುವುದು ಅಸಾಧ್ಯ, ಇಲ್ಲವಾದುದನ್ನು ಲೆಕ್ಕ ಹಾಕುವುದು ಅಶಕ್ಯ.


ಆತ ಕೆಡವಿದ್ದನ್ನು ಯಾರಿಂದಲೂ ಕಟ್ಟಲಾಗದು ಆತ ಸೆರೆಹಿಡಿದವರನ್ನು ಯಾರಿಂದಲೂ ಬಿಡಿಸಲಾಗದು.


ಕಿನ್ನರಿ, ವೀಣೆ, ತಬಲ, ಕೊಳಲು, ಮದ್ಯಪಾನ ಇವೇ ಅವರ ದುಂದೌತಣದ ಸೊಬಗು. ಸ್ವಾಮಿಯ ಕಾರ್ಯಗಳನ್ನು ಅವರು ಲಕ್ಷಿಸರು. ಸ್ವಾಮಿಯ ಕೃತಿಗಳನ್ನವರು ಧ್ಯಾನಿಸರು.


ಒಂದೊಂದು ವಸ್ತುವನ್ನೂ ಸಮಯಕ್ಕೆ ತಕ್ಕಂತೆ ಸುಂದರವಾಗಿ ನಿರ್ಮಿಸಿದ್ದಾರೆ ದೇವರು. ಇದಲ್ಲದೆ, ಮನುಷ್ಯನ ಹೃದಯದಲ್ಲಿ ಅಮರತ್ವದ ಪ್ರತಿಯನ್ನು ಮೂಡಿಸಿದ್ದಾರೆ.


ದೈವಯೋಜನೆಯಂತೆಯೇ ಸಕಲವೂ ಸಂಭವಿಸುತ್ತದೆ. ದೇವರು ಆದಿಯಲ್ಲೇ ಸಂಕಲ್ಪಿಸಿದ್ದಂತೆ ತಮ್ಮ ಚಿತ್ತಕ್ಕನುಗುಣವಾಗಿ ಕ್ರಿಸ್ತಯೇಸುವಿನ ಅನ್ಯೋನ್ಯತೆಯಲ್ಲಿ ನಮ್ಮನ್ನು ತಮ್ಮವರನ್ನಾಗಿ ಆರಿಸಿಕೊಂಡರು.


ವ್ಯರ್ಥಗೊಳಿಸುವವರಾರು ಸೇನಾಧಿಶ್ವರ ಸರ್ವೇಶ್ವರ ಸ್ವಾಮಿಯ ಯೋಜನೆಯನು? ಹಿಂತೆಗೆವವರಾರು ಅವರೆತ್ತಿದ ಕೈಯನು?.


ಪರ್ಯಾಲೋಚಿಸಲಿವುಗಳನು ಬುದ್ಧಿವಂತರು I ಗ್ರಹಿಸಲಿ ಪ್ರಭುವಿನಚಲ ಪ್ರೀತಿಯನಾ ಜನರು II


“ಹಾಗಾದರೆ ದೇವರು ಹೇಗೆ ತಾನೆ ಮಾನವನನ್ನು ಅಪರಾಧಿ ಎಂದು ನಿರ್ಣಯಿಸಬಲ್ಲರು? ಅವರ ಚಿತ್ತವನ್ನು ವಿರೋಧಿಸಲು ಯಾರಿಗೆ ಸಾಧ್ಯ” ಎಂದು ನಿಮ್ಮಲ್ಲಿ ಒಬ್ಬನು ಕೇಳಬಹುದು.


ಏಕೆಂದರೆ ದೇವರೇ ಮೋಶೆಗೆ ಈ ರೀತಿ ಹೇಳಿದ್ದಾರೆ: “ಯಾರ ಮೇಲೆ ದಯೆತೋರಲು ನನಗೆ ಇಷ್ಟವಿದೆಯೋ ಅವರ ಮೇಲೆ ದಯೆತೋರುವೆನು ಯಾರ ಮೇಲೆ ಕನಿಕರತೋರಲು ನನಗೆ ಮನಸ್ಸಿದೆಯೋ ಅವರ ಮೇಲೆ ಕನಿಕರ ತೋರುವೆನು.”


ಹೌದು, ನಾನೇ ಪರಮಾತ್ಮ ಆದಿಯಿಂದ ಬಿಡಿಸುವವರಾರು ಇಲ್ಲ ನನ್ನ ಕೈಯಿಂದ ನಾಗೈದುದನು ತಡೆಯಲಾಗದು ಯಾರಿಂದ.” ಈ ಪರಿ ನುಡಿದಿಹನು ಸರ್ವೇಶ್ವರನು, ನಿಮ್ಮ ಉದ್ಧಾರಕನು, ಇಸ್ರಯೇಲಿನ ಪರಮಪಾವನನು;


ಯೋಬನೇ, ಈ ಮಾತುಗಳನು ಕೇಳು ದೇವರ ಅದ್ಭುತಗಳನು ಮೌನದಿಂದ ಧ್ಯಾನಿಸು:


ಆತನ ದೃಷ್ಟಿಯಲ್ಲಿ ಭೂನಿವಾಸಿಗಳೆಲ್ಲರು ಶೂನ್ಯರು ಇಹದ ಜನರೂ ಪರದ ದೂತರೂ ಆತನಿಗೆ ಅಧೀನರು. ಆತನ ಶಕ್ತಿಯುತ ಹಸ್ತವನ್ನು ಯಾರಿಂದಲೂ ತಡೆಯಲಾಗದು. ‘ನೀನು ಮಾಡುತ್ತಿರುವುದೇನು?’ ಎಂದು ಯಾರೂ ಆತನನ್ನು ಪ್ರಶ್ನಿಸಲಾರರು.


ಆಕಾಶಮಂಡಲ ನಿನ್ನ ಕೈಕೆಲಸವಯ್ಯಾ I ಚಂದ್ರ ನಕ್ಷತ್ರಗಳು ನಿನ್ನ ರಚನೆಗಳಯ್ಯಾ II


ವ್ಯಕ್ತಿಯಾಗಿರಲಿ, ರಾಷ್ಟ್ರವಾಗಿರಲಿ, ಯಾರಾಗಿದ್ದರೇನು? ದೇವರು ಸುಮ್ಮನಿದ್ದರೆ ತಪ್ಪುಹೊರಿಸುವವರಾರು? ವಿಮುಖನಾದರೆ ಆತನ ದರ್ಶನ ಪಡೆಯಬಲ್ಲವರಾರು?


ಆತ ಹಾದುಹೋದರೂ ಸೆರೆಹಿಡಿದರೂ ನ್ಯಾಯಾಲಯಕ್ಕೆ ಎಳೆದರೂ ತಡೆವರಾರು?


ಕಿತ್ತುಕೊಂಡು ಹೋಗುವ ಆತನಿಗೆ ಅಡ್ಡಿಮಾಡುವವರಾರು? ‘ಏನು ಮಾಡುತ್ತಿರುವೆ?’ ಎಂದು ಆತನನ್ನು ಕೇಳುವವರಾರು?


ಎಷ್ಟು ಪ್ರಯಾಸಪಟ್ಟು ವಿಚಾರಿಸಿದರೂ ಅವನಿಂದ ಸಾಧ್ಯವಾಗದು. ಹೌದು, ಜ್ಞಾನಿ ತನ್ನಿಂದಾಗುತ್ತದೆ ಎಂದು ಹೇಳಿಕೊಳ್ಳಬಹುದು; ಆದರೆ ಅವನಿಂದಲೂ ಅದು ಸಾಧ್ಯವಾಗದು.


ಇಂಥ ಅಲ್ಪಕಾರ್ಯಗಳನ್ನು ಮಾಡಲು ನೀವು ಅಶಕ್ತರಾಗಿ ಇರುವಾಗ, ಮಿಕ್ಕವುಗಳನ್ನು ಕುರಿತು ಚಿಂತಿಸುವುದೇಕೆ?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು