Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಸಂಗಿ 3:22 - ಕನ್ನಡ ಸತ್ಯವೇದವು C.L. Bible (BSI)

22 ಈ ಪ್ರಕಾರ ನಾನು ಆಲೋಚಿಸಿ ಮನುಷ್ಯನು ತನ್ನ ಕೆಲಸಕಾರ್ಯಗಳಲ್ಲಿ ಉಲ್ಲಾಸಗೊಳ್ಳುವುದಕ್ಕಿಂತ ಅವನಿಗೆ ಮೇಲಾದುದು ಯಾವುದೂ ಇಲ್ಲ. ಇದೇ ಅವನ ಪಾಲಿಗೆ ಬಂದುದು ಎಂದು ಗ್ರಹಿಸಿಕೊಂಡೆ. ಜೀವಮಾನದ ನಂತರ ಸಂಭವಿಸುವುದನ್ನು ನೋಡುವುದಕ್ಕೆ ಮನುಷ್ಯನನ್ನು ಯಾರು ಪುನಃ ಬರಮಾಡುವರು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಈ ಪ್ರಕಾರ ನಾನು ಯೋಚಿಸಿ ಮನುಷ್ಯನು ತನ್ನ ಕಾರ್ಯಗಳಲ್ಲಿ ಉಲ್ಲಾಸಗೊಳ್ಳುವುದಕ್ಕಿಂತ ಅವನಿಗೆ ಯಾವ ಮೇಲೂ ಇಲ್ಲ. ಇದೇ ಅವನ ಪಾಲು ಎಂದು ಗ್ರಹಿಸಿಕೊಂಡೆನು. ಜೀವಮಾನದ ನಂತರ ಸಂಭವಿಸುವವುಗಳನ್ನು ನೋಡುವುದಕ್ಕೆ ಮನುಷ್ಯನನ್ನು ಯಾರು ಪುನಃ ಬರಮಾಡುವರು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಈ ಪ್ರಕಾರ ನಾನು ಯೋಚಿಸಿ, ಮನುಷ್ಯನು ತನ್ನ ಕಾರ್ಯಗಳಲ್ಲಿ ಉಲ್ಲಾಸಗೊಳ್ಳುವದಕ್ಕಿಂತ ಅವನಿಗೆ ಯಾವ ಮೇಲೂ ಇಲ್ಲ; ಇದೇ ಅವನ ಪಾಲು ಎಂದು ಗ್ರಹಿಸಿಕೊಂಡೆನು. ಜೀವಮಾನದನಂತರ ಸಂಭವಿಸುವವುಗಳನ್ನು ನೋಡುವದಕ್ಕೆ ಮನುಷ್ಯನನ್ನು ಯಾರು ಪುನಃ ಬರಮಾಡುವರು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ಆದ್ದರಿಂದ ಮನುಷ್ಯನಿಗೆ ತನ್ನ ಕಾರ್ಯದಲ್ಲಿ ಸಂತೋಷಪಡುವುದಕ್ಕಿಂತ ಬೇರೆ ಯಾವ ಮೇಲೂ ಇಲ್ಲ. ಇದೇ ಅವನ ಪಾಲು ಎಂದು ಗ್ರಹಿಸಿಕೊಂಡೆನು. ಅಲ್ಲದೆ ಮುಂದಿನ ಕಾಲವನ್ನು ಕುರಿತು ಮನುಷ್ಯನು ಚಿಂತಿಸಬಾರದು. ಯಾಕೆಂದರೆ ಅವನ ಜೀವಮಾನದ ನಂತರ ಸಂಭವಿಸುವಂಥವುಗಳನ್ನು ನೋಡಲು ಈ ಲೋಕಕ್ಕೆ ಅವನನ್ನು ಯಾರು ಬರಮಾಡುವರು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ಆದಕಾರಣ ಮನುಷ್ಯನು ತನ್ನ ಕೆಲಸ ಕಾರ್ಯಗಳಲ್ಲಿ ಆನಂದಿಸುವುದಕ್ಕಿಂತ ಉತ್ತಮವಾದದ್ದು ಯಾವುದೂ ಇಲ್ಲವೆಂದು ನಾನು ನೋಡಿದೆನು. ಏಕೆಂದರೆ ಇದೇ ಅವನ ಪಾಲು. ಆದ್ದರಿಂದ ತನ್ನ ಜೀವಮಾನದ ನಂತರ ಸಂಭವಿಸುವುದನ್ನು ನೋಡುವುದಕ್ಕೆ ಮನುಷ್ಯನನ್ನು ಯಾರು ಪುನಃ ಬರಮಾಡುವರು?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಸಂಗಿ 3:22
24 ತಿಳಿವುಗಳ ಹೋಲಿಕೆ  

ತಿಂದು, ಕುಡಿದು, ತನ್ನ ದುಡಿಮೆಯಲ್ಲೇ ಸುಖವನ್ನು ಅನುಭವಿಸುವುದಕ್ಕಿಂತ ಮೇಲಾದುದು ಮನುಷ್ಯನಿಗೆ ಯಾವುದು ಇಲ್ಲ. ಇದು ದೇವರಿಂದ ಆದುದು ಎಂದು ಮನಗಂಡೆ.


ಅಜ್ಞಾನಿ ಮಾತಿನ ಮಲ್ಲ. ಭವಿಷ್ಯತ್ತನ್ನು ಮಾನವ ತಿಳಿಯನು; ತಾನು ಕಾಲವಾದ ಮೇಲೆ ಏನಾಗುವುದೆಂದು ಅವನು ಯಾರಿಂದ ತಿಳಿಯಬಲ್ಲನು?


ಮುಂದೆ ಆಗುವುದೇನು ಎಂಬುದು ಅವನಿಗೆ ಗೊತ್ತಿಲ್ಲ; ಅದು ಹೇಗೆ ಸಂಭವಿಸುವುದು ಎಂದು ಅವನಿಗೆ ತಿಳಿಸಬಲ್ಲವರು ಯಾರೂ ಇಲ್ಲ.


ನೆರಳಿನಂತೆ ವ್ಯರ್ಥವಾಗಿ ಕಳೆದುಹೋಗುವ ಮಾನವನ ಜೀವಮಾನ ದಿನಗಳಲ್ಲೆಲ್ಲಾ ಅವನಿಗೆ ಯಾವುದು ಹಿತವೆಂದು ಯಾರಿಗೆ ಗೊತ್ತು? ತಾನು ಕಾಲವಾದ ಮೇಲೆ ಇಹಲೋಕದಲ್ಲಿ ಏನಾಗುವುದೆಂದು ಅವನು ಯಾರಿಂದ ತಿಳಿದುಕೊಳ್ಳಲು ಸಾಧ್ಯ?


ಆದುದರಿಂದ ನಾಳೆಯ ಚಿಂತೆ ನಿಮಗೆ ಬೇಡ. ನಾಳೆಯ ಚಿಂತೆ ನಾಳೆಗೇ ಇರಲಿ. ಇಂದಿನ ಪಾಡೇ ಇಂದಿಗೆ ಸಾಕು.”


ನೀನು ಹೋಗಿ ಅಂತ್ಯದವರೆಗೆ ವಿಶ್ವಾಸದಿಂದಿರು. ನೀನು ‘ದೀರ್ಘನಿದ್ರೆ’ಯನ್ನು ಹೊಂದಿ, ನಿನಗೆ ನಿರ್ಧರಿಸಲಾದ ಸ್ಥಾನವನ್ನು ಪಡೆಯಲು ಯುಗಸಮಾಪ್ತಿಯಲ್ಲಿ ಎದ್ದುಬರುವೆ,” ಎಂದು ಹೇಳಿದನು.


ತನ್ನ ನಿಶ್ಚಿತಕಾಲ ಯಾವಾಗ ಬರುವುದೆಂದು ಮಾನವನಿಗೆ ತಿಳಿಯದು. ಮೀನುಗಳು ಮೋಸಬಲೆಗೂ, ಹಕ್ಕಿಗಳು ಉರುಲುಬಲೆಗೂ, ಸಿಕ್ಕಿ ಬೀಳುವಂತೆ ನರಮಾನವರು ತಮ್ಮ ಮೇಲೆ ತಟ್ಟನೆ ಬೀಳುವ ಕಾಲಪಾಶಕ್ಕೆ ಸಿಕ್ಕಿಕೊಳ್ಳುತ್ತಾರೆ.


ಆದುದರಿಂದಲೇ ಸಂತೋಷವನ್ನು ಶ್ಲಾಘಿಸುತ್ತೇನೆ. ಮನುಷ್ಯನು ಅನ್ನಪಾನಗಳನ್ನು ಸೇವಿಸಿ ಸಂತೋಷಪಡುವುದಕ್ಕಿಂತ ಮೇಲಾದುದು ಅವನಿಗೆ ಈ ಲೋಕದಲ್ಲಿ ಇನ್ನಾವುದೂ ಇಲ್ಲ. ದೇವರು ಅವನಿಗೆ ಇಹದಲ್ಲಿ ಅನುಗ್ರಹಿಸುವ ಜೀವಾವಧಿಯಲ್ಲಿ ಅವನು ಪಡುವ ಪ್ರಯಾಸಕ್ಕೆ ಸುಖಾನುಭವ ಸೇರಿರುತ್ತದೆ.


ಅವನ ಮಕ್ಕಳು ಪ್ರಗತಿಹೊಂದಿದರೂ ಅವನಿಗೆ ತಿಳಿಯದು ಅವರು ಅಧೋಗತಿಗೆ ಇಳಿದರೂ ಅವನಿಗೆ ಗೋಚರವಾಗದು.


“ನಿಮಗೆ ಸರ್ವಸಮೃದ್ಧಿಯುಂಟಾದ ಕಾಲದಲ್ಲಿ ನೀವು ನಿಮ್ಮ ದೇವರಾದ ಸರ್ವೇಶ್ವರನಿಗೆ ಹರ್ಷಾನಂದದಿಂದ ಸೇವೆಮಾಡದೆಹೋದಿರಿ.


ನಿಮ್ಮ ದೇವರಾದ ಸರ್ವೇಶ್ವರ ಆರಿಸಿಕೊಳ್ಳುವ ಸ್ಥಳದಲ್ಲಿ, ಅವರ ಸನ್ನಿಧಿಯಲ್ಲೇ ಅವುಗಳನ್ನು ಊಟಮಾಡಬೇಕು. ನಿಮ್ಮ ಎಲ್ಲ ಪ್ರಯತ್ನಗಳು ಕೈಗೂಡಿದ್ದಕ್ಕಾಗಿ ನೀವು ನಿಮ್ಮ ದೇವರಾದ ಸರ್ವೇಶ್ವರನ ಸನ್ನಿಧಿಯಲ್ಲಿ ಸಂತೋಷದಿಂದಿರಬೇಕು; ನೀವು, ನಿಮ್ಮ ಗಂಡುಹೆಣ್ಣು ಮಕ್ಕಳು, ಆಳುಗಳು ಹಾಗು ನಿಮ್ಮ ಊರಲ್ಲಿರುವ ಲೇವಿಯರು ಇಂಥವುಗಳನ್ನು ಊಟಮಾಡಬೇಕು.


ಅಲ್ಲಿಯೇ ಅವರ ಸನ್ನಿಧಿಯಲ್ಲಿ ಊಟಮಾಡಿ, ನಿಮ್ಮ ದೇವರಾದ ಸರ್ವೇಶ್ವರ ನಿಮ್ಮ ಪ್ರಯತ್ನಗಳನ್ನು ಕೈಗೂಡುವಂತೆ ಮಾಡಿದ್ದಕ್ಕಾಗಿ ನೀವೂ ನಿಮ್ಮ ಮನೆಗಳವರೂ ಸಂತೋಷದಿಂದಿರಬೇಕು.


ನನ್ನ ದುಡಿಮೆಯ ಫಲವನ್ನು ಮುಂದಿನವನಿಗೆ ಬಿಟ್ಟುಬಿಡಬೇಕಲ್ಲಾ ಎಂದು ಲೋಕದಲ್ಲಿ ನಾನು ಪಟ್ಟ ಪ್ರಯಾಸದ ಬಗ್ಗೆ ಬೇಸರಗೊಂಡೆ.


ಸುಖದಿನದಲ್ಲಿ ಸಂತೋಷದಿಂದಿರು, ದುಃಖದಿನದಲ್ಲಿ ಆಲೋಚಿಸಿನೋಡು; ಮನುಷ್ಯನು ತನ್ನ ಆಯುಸ್ಸು ಕಳೆದ ಮೇಲೆ ಸಂಭವಿಸುವುದೇನೆಂದು ಗ್ರಹಿಸಲಾಗದಂತೆ ದೇವರು ಇವುಗಳನ್ನು ಒಂದರ ಮೇಲೊಂದನ್ನು ಬರಮಾಡುತ್ತಾರೆ.


ಅವರ ಪ್ರೀತಿ, ದ್ವೇಷ, ಮತ್ಸರ, ಅವರು ಸತ್ತಾಗಲೇ ಅಳಿದುಹೋಗುತ್ತವೆ. ಇಹಲೋಕದಲ್ಲಿ ನಡೆಯುವ ಯಾವುದರಲ್ಲೂ ಅವರಿಗೆ ಇನ್ನೆಂದಿಗೂ ಪಾಲಿರುವುದಿಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು