Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಸಂಗಿ 2:23 - ಕನ್ನಡ ಸತ್ಯವೇದವು C.L. Bible (BSI)

23 ಅವನ ಮನಸ್ಸಿಗೆ ನೆಮ್ಮದಿ ಇಲ್ಲ, ಇದು ಸಹ ವ್ಯರ್ಥವೇ ಸರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ಅವನ ದಿನಗಳೆಲ್ಲಾ ವ್ಯಸನವೇ. ಅವನ ಕೆಲಸವು ತೊಂದರೆಯೇ. ರಾತ್ರಿಯಲ್ಲಿಯೂ ಅವನ ಮನಸ್ಸಿಗೆ ವಿಶ್ರಾಂತಿಯಿಲ್ಲ. ಇದೂ ಸಹ ವ್ಯರ್ಥವೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

23 ಅವನ ದಿನಗಳೆಲ್ಲಾ ವ್ಯಸನಮಯವೇ, ಅವನ ಕೆಲಸವು ತೊಂದರೆಯೇ; ರಾತ್ರಿಯಲ್ಲಿಯೂ ಅವನ ಮನಸ್ಸಿಗೆ ನಿಲುಗಡೆಯಿಲ್ಲ. ಇದೂ ವ್ಯರ್ಥ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

23 ಅವನ ಜೀವಮಾನವೆಲ್ಲಾ ಅವನಿಗೆ ವ್ಯಸನವಿರುವುದು; ಕೆಲಸದಲ್ಲೆಲ್ಲಾ ಕಷ್ಟವಿರುವುದು; ರಾತ್ರಿಯಲ್ಲಿಯೂ ಮನಸ್ಸಿಗೆ ವಿಶ್ರಾಂತಿಯಿರದು. ಇದೂ ವ್ಯರ್ಥವೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

23 ಅವನ ದಿನಗಳೆಲ್ಲಾ ವ್ಯಸನವೇ. ಅವನ ಪ್ರಯಾಸವು ದುಃಖವೇ. ರಾತ್ರಿಯಲ್ಲಿಯೂ ಅವನ ಮನಸ್ಸಿಗೆ ವಿಶ್ರಾಂತಿಯಿಲ್ಲ. ಇದೂ ಕೂಡ ವ್ಯರ್ಥವೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಸಂಗಿ 2:23
20 ತಿಳಿವುಗಳ ಹೋಲಿಕೆ  

“ಹೆಣ್ಣಿನಿಂದ ಹುಟ್ಟಿದ ಮನುಷ್ಯನು ಅಲ್ಪಾಯುಷ್ಯನು, ದುಃಖಭರಿತನು.


ಜ್ವಾಲೆಗಳು ಏರುವುದು ಮೇಲಕೆ ಜನರು ಹುಟ್ಟಿರುವುದು ದುಃಖಕೆ.


ಹೊಟ್ಟೆಪಾಡಿಗಾಗಿ ಕಷ್ಟಪಡಲೋಸುಗ I ಹೊತ್ತಿಗೆ ಮುಂಚೆ ಎದ್ದೇಳುವುದು ವ್ಯರ್ಥ II ಹೊತ್ತು ಮೀರಿ ಮಲಗಲು ಹೋಗುವುದೂ ವ್ಯರ್ಥ I ನಿದ್ರೆಯಲು ಪ್ರಭುವೇ ಭಕ್ತರ ಪೋಷಕ II


ಅಲ್ಲಿ ಭಕ್ತಾದಿಗಳನ್ನು ದೃಢಪಡಿಸಿ ವಿಶ್ವಾಸದಲ್ಲಿ ನಿಷ್ಠರಾಗಿರುವಂತೆ ಪ್ರೋತ್ಸಾಹಿಸಿದರು. ‘ಕಷ್ಟಸಂಕಟಗಳ ಮೂಲಕ ನಾವು ದೇವರ ಸಾಮ್ರಾಜ್ಯವನ್ನು ಪ್ರವೇಶಿಸಬೇಕಾಗಿದೆ’ ಎಂದು ಬೋಧಿಸಿದರು.


ಬಳಿಕ ರಾಜನು ಅರಮನೆಗೆ ಹಿಂದಿರುಗಿದನು. ಆ ರಾತ್ರಿಯೆಲ್ಲಾ ಉಪವಾಸವಿದ್ದನು. ವಾದ್ಯ ವಿನೋದಾವಳಿ ಯಾವುದನ್ನೂ ಹತ್ತಿರಬರಲು ಬಿಡಲಿಲ್ಲ. ನಿದ್ರೆ ಅವನ ಕಣ್ಣುಗಳಿಂದ ಮಾಯವಾಯಿತು.


ದುಡಿಯುವವನು ಸ್ವಲ್ಪ ತಿಂದರೂ ಸರಿ, ಹೆಚ್ಚು ತಿಂದರೂ ಸರಿ, ಹಾಯಾಗಿ ನಿದ್ರಿಸುತ್ತಾನೆ. ಐಶ್ವರ್ಯವಂತನ ಸಂಪತ್ತಾದರೋ ಅವನಿಗೆ ನಿದ್ರೆ ಬರಲು ಬಿಡುವುದಿಲ್ಲ.


ಅಧಿಕ ಜ್ಞಾನವುಳ್ಳವನಿಗೆ ಅಧಿಕ ವ್ಯಥೆ, ಹೆಚ್ಚು ತಿಳುವಳಿಕೆಯುಳ್ಳವನಿಗೆ ಹೆಚ್ಚು ಸಂಕಟ.


ಸುಖಪಡಿಸೆಮ್ಮನು ನೀ ಕಷ್ಟಪಡಿಸಿದಷ್ಟು ಕಾಲ I ಕೆಡುಕನ್ನು ನಾವು ಅನುಭವಿಸಿದಷ್ಟು ವರ್ಷಕಾಲ II


ಪ್ರಭುವಿನ ಶಿಕ್ಷಾಹಸ್ತ ನನ್ನ ಮೇಲೆ ಭಾರವಾಗಿತ್ತು ಹಗಲಿರುಳು I ಬೇಸಿಗೆಯ ನೀರಿನಂತೆ ಬತ್ತಿಹೋಗಿತ್ತು ನನ್ನ ಶರೀರದ ತಿರುಳು II


ಆ ರಾತ್ರಿ ಅರಸನಿಗೆ ನಿದ್ದೆಯೇ ಬರಲಿಲ್ಲ. ಆದ್ದರಿಂದ, ಸ್ಮರಿಸತಕ್ಕ ಪೂರ್ವ ಘಟನೆಗಳನ್ನು ಬರೆದಿಟ್ಟಿದ್ದ ಗ್ರಂಥವನ್ನು ತರಿಸಿ, ಅದನ್ನು ಪಾರಾಯಣ ಮಾಡಿಸುತ್ತಿದ್ದಾಗ,


ಯಕೋಬನು, “ನನ್ನ ಬಾಳಿನ ಪಯಣದ ದಿನಗಳು ನೂರ ಮೂವತ್ತು ವರ್ಷಗಳಷ್ಟೇ. ಎಣಿಕೆಯಲ್ಲಿ ಅವು ಕಮ್ಮಿ; ಕಷ್ಟದುಃಖದಲ್ಲಿ ಜಾಸ್ತಿ; ನನ್ನ ಪೂರ್ವಜರು ಬಾಳಿದಷ್ಟು ವರ್ಷಗಳು ನನಗಾಗಿಲ್ಲ,” ಎಂದು ಹೇಳಿ


ಅನಂತರ ಆದಾಮನಿಗೆ: “ತಿನ್ನಬಾರದೆಂದು ನಾ ವಿಧಿಸಿದ ಮರದ ಹಣ್ಣನ್ನು ತಿಂದೆ ನೀನು, ಕೇಳಿ ನಿನ್ನಾ ಮಡದಿಯ ಮಾತನ್ನು. ಇದಕಾರಣ ಹಾಕಿರುವೆನು ಶಾಪ ಹೊಲನೆಲಕ್ಕೆ ದುಡಿವೆ ನೀನು ಜೀವಮಾನವಿಡೀ ಅದರ ಕೃಷಿಗೆ.


ಆಕಾಶದ ಕೆಳಗೆ ನಡೆಯುವ ಎಲ್ಲಾ ಕಾರ್ಯಗಳನ್ನು ಜ್ಞಾನದಿಂದ ವಿಚಾರಿಸಿದೆ; ವಿಮರ್ಶಿಸಲು ಮನಸ್ಸು ಮಾಡಿದೆ. ನರಮಾನವರ ಕರ್ತವ್ಯ ಎಂದು ದೇವರು ವಿಧಿಸಿರುವ ಕೆಲಸಕಾರ್ಯಗಳೆಲ್ಲ ಕಷ್ಟಕರವಾದುವೇ.


ಆಗ ನಾನೇ ಸ್ವತಃ ಮಾಡಿದ ಎಲ್ಲಾ ಕೆಲಸಕಾರ್ಯಗಳನ್ನೂ ಪಟ್ಟ ಎಲ್ಲ ಪ್ರಯಾಸವನ್ನೂ ಗಮನವಿಟ್ಟು ಪರಿಶೀಲಿಸಿದೆ. ಆದರೆ ಇಗೋ, ಗಾಳಿಯನ್ನು ಹಿಡಿಯಲು ಬೆನ್ನಟ್ಟಿಹೋದಂತೆ ಎಲ್ಲವೂ ವ್ಯರ್ಥ; ಲೋಕದಲ್ಲಿ ಲಾಭಕರವಾದುದು ಏನೂ ಕಾಣಲಿಲ್ಲ.


ಅವನ ಜೀವಮಾನವೆಲ್ಲ ಅಂಧಕಾರಮಯ, ಅದರಲ್ಲಿ ದುಃಖದುಗುಡ, ರೋಗರುಜಿನ, ಕೋಪತಾಪ ಇದ್ದೇ ಇರುತ್ತವೆ.


ನಾನು ಜ್ಞಾನವನ್ನು ಪಡೆಯಲು, ಜಗದಲ್ಲಿ ನಡೆಯುವುದನ್ನು ಅರಿತುಕೊಳ್ಳಲು ಪ್ರಯತ್ನಿಸಿದಾಗ ಇದು ನನಗೆ ಮನದಟ್ಟಾಯಿತು: ಒಬ್ಬನು ರಾತ್ರಿ ಹಗಲು, ಕಣ್ಣುಗಳಿಗೆ ನಿದ್ರೆ ಹಚ್ಚಗೊಡದೆ ಪರಿಶೀಲಿಸಿದರೂ ದೇವರ ಕಾರ್ಯವನ್ನು ಅರ್ಥಮಾಡಿಕೊಳ್ಳಲು ಆಗದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು