Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಲಾಪಗಳು 3:59 - ಕನ್ನಡ ಸತ್ಯವೇದವು C.L. Bible (BSI)

59 ಸರ್ವೇಶ್ವರಾ, ನಿನಗೆ ತಿಳಿದಿದೆ ನನಗಾದ ಅನ್ಯಾಯ ದೊರಕುವಂತೆ ಮಾಡು ನನಗೆ ನ್ಯಾಯ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

59 ಯೆಹೋವನೇ, ನನಗಾದ ಅನ್ಯಾಯವನ್ನು ನೋಡಿದ್ದೀ, ನನಗೆ ನ್ಯಾಯತೀರಿಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

59 ಯೆಹೋವನೇ, ನನಗಾದ ಅನ್ಯಾಯವನ್ನು ನೋಡಿದ್ದೀ, ನನಗೆ ನ್ಯಾಯತೀರಿಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

59 ಯೆಹೋವನೇ, ನನಗಾಗಿರುವ ಅನ್ಯಾಯವನ್ನು ನೀನು ನೋಡಿರುವೆ. ವ್ಯಾಜ್ಯದಲ್ಲಿ ನನ್ನ ಪರವಾಗಿ ತೀರ್ಪು ನೀಡು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

59 ಯೆಹೋವ ದೇವರೇ, ನೀವು ನನ್ನ ಅನ್ಯಾಯವನ್ನು ನೋಡಿದ್ದೀರಿ, ನೀವು ನನ್ನ ನ್ಯಾಯವನ್ನು ತೀರಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಲಾಪಗಳು 3:59
16 ತಿಳಿವುಗಳ ಹೋಲಿಕೆ  

ನಿರ್ಣಯಿಸು ನನ್ನ ನ್ಯಾಯವನು ಓ ದೇವಾ I ವಾದಿಸು ಆ ಭಕ್ತಿಹೀನ ಜನತೆಯ ವಿರುದ್ಧ I ಬಿಡಿಸೆನ್ನನು ವಂಚಕರಿಂದ, ಅಧರ್ಮಿಗಳಿಂದ II


ಅವರು, ಅವಮಾನಪಡಿಸಿದವರನ್ನು ಪ್ರತಿಯಾಗಿ ಅವಮಾನಪಡಿಸಲಿಲ್ಲ. ಅವರು ಯಾತನೆಯನ್ನು ಅನುಭವಿಸುವಾಗಲೂ ಯಾರಿಗೂ ಬೆದರಿಕೆ ಹಾಕಲಿಲ್ಲ. ಬದಲಿಗೆ, ಸತ್ಯಸ್ವರೂಪರೂ ನ್ಯಾಯಾಧಿಪತಿಯೂ ಆದ ದೇವರಿಗೆ ತಮ್ಮನ್ನೇ ಒಪ್ಪಿಸಿಕೊಂಡರು.


ನನ್ನೊಡನೆ ವ್ಯಾಜ್ಯ ಮಾಡುವವರೊಡನೆ ವ್ಯಾಜ್ಯ ಮಾಡು I ನನ್ನೊಡನೆ ಕದನ ಮಾಡುವವರೊಡನೆ ಪ್ರಭು, ಕದನ ಮಾಡು


ಸಾಚವಾದುದೆನ್ನ ನಡತೆ, ಅಚಲವಾದುದೆನ್ನ ನಂಬುಗೆ I ನೀಚ ನಾನಲ್ಲವೆಂದು ಪ್ರಭು, ನ್ಯಾಯ ತೀರಿಸೆನಗೆ II


ನ್ಯಾಯಪೀಠದಲಿ ಕುಳಿತೆನ್ನ ವ್ಯಾಜ್ಯ ತೀರಿಸಿದೆ I ನೀತಿಗನುಸಾರವಾಗಿ ನ್ಯಾಯ ಸ್ಥಾಪಿಸಿದೆ II


ನನ್ನ ತಂದೆಯ ದೇವರು, ಅಬ್ರಹಾಮನ ದೇವರು, ಇಸಾಕನು ಭಯಭಕ್ತಿಯಿಂದ ಸೇವಿಸಿದ ದೇವರು ಆಗಿರುವಂಥವರು ನನ್ನ ಕಡೆ ಇಲ್ಲದೆ ಹೋಗಿದ್ದರೆ, ನಿಶ್ಚಯವಾಗಿ ನೀವು ನನ್ನನ್ನು ಬರಿಗೈಯಾಗಿ ಕಳುಹಿಸುತ್ತಿದ್ದಿರಿ. ದೇವರು ನನ್ನ ಕಷ್ಟದುಃಖವನ್ನೂ ನಾನು ಪಟ್ಟ ಪ್ರಯಾಸವನ್ನೂ ಗಮನಿಸಿದ್ದಾರೆ. ಆದ್ದರಿಂದಲೇ ನಿನ್ನೆಯ ರಾತ್ರಿ ನಿಮಗೆ ಎಚ್ಚರಿಕೆ ನೀಡಿದ್ದಾರೆ,” ಎಂದನು.


ನನ್ನ ನ್ಯಾಯವನು ನಿರ್ಣಯಿಸು ದೇವಾ ಎಚ್ಚೆತ್ತು I ನನ್ನ ವಿವಾದವನು ವಿಚಾರಿಸು ಪ್ರಭು ನೀನೆದ್ದು ನಿಂತು II


“ನನ್ನ ಹೆತ್ತತಾಯೇ, ನನ್ನ ಗತಿಯನ್ನು ಏನು ಹೇಳಲಿ! ಜಗದ ಜನರಿಗೆಲ್ಲ ನಾನೊಬ್ಬ ಜಗಳಗಂಟಿಗ, ವ್ಯಾಜ್ಯಗಾರ. ನಾನು ಹಣವನ್ನು ಸಾಲವಾಗಿ ಕೊಟ್ಟವನಲ್ಲ, ಕೊಂಡವನೂ ಅಲ್ಲ. ಆದರೂ ನನ್ನನ್ನು ಎಲ್ಲರು ಶಪಿಸುವವರೇ.


ಆಗ ರಾಖೇಲಳು, “ದೇವರು ನನಗೆ ನ್ಯಾಯ ದೊರಕಿಸಿದ್ದಾರೆ, ನನ್ನ ಮೊರೆಯನ್ನು ಕೇಳಿ ನನಗೆ ಮಗನನ್ನು ಅನುಗ್ರಹಿಸಿದ್ದಾರೆ,” ಎಂದು ಹೇಳಿ ಆ ಮಗುವಿಗೆ ‘ದಾನ್’ ಎಂದು ಹೆಸರಿಟ್ಟಳು.


ಹೌದು ದೇವಾ, ನೀ ವಿಚಾರಿಪವನು; ದುಃಖದುಗುಡ ಲೆಕ್ಕಿಸುವವನು I ತಬ್ಬಲಿಗಳಿಗೆ ತಂದೆ ನೀನು, ನಿರ್ಗತಿಕ ನಿನಗೆ ಶರಣಾಗತನು II


ಅನ್ಯಾಯವಾಗಿ ವ್ಯಾಜ್ಯತೀರಿಸುವುದನ್ನೂ ಸ್ವಾಮಿ ಲಕ್ಷ್ಯಕ್ಕೆ ತಂದುಕೊಳ್ಳದೆ ಇರುತ್ತಾನೆಯೇ?


ನೀನೇ ನೋಡಿರುವೆ ವೈರಿಗಳು ನನ್ನ ವಿರುದ್ಧ ಸಾಧಿಸಿದ ಹಗೆಯನ್ನು ಅವರು ಕಲ್ಪಿಸಿಕೊಂಡ ಕುಯುಕ್ತಿಯನ್ನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು