Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಲಾಪಗಳು 3:51 - ಕನ್ನಡ ಸತ್ಯವೇದವು C.L. Bible (BSI)

51 ನಗರದ ಯುವತಿಯರ ದುರ್ಗತಿಯನ್ನು ನೋಡಿ ಅಳುತ್ತಿರುವ ನನ್ನನ್ನು ಕಾಡುತ್ತಿದೆ ಕಣ್ಣುರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

51 ನನ್ನ ಪಟ್ಟಣದ ಕನ್ಯೆಯರಿಗಾಗಿ ಅಳುತ್ತಿರುವ ನಾನು ಕಣ್ಣುರಿಯಿಂದ ಪೀಡಿತನಾಗಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

51 ನನ್ನ ಪಟ್ಟಣದ ಯುವತಿಯರಿಗಾಗಿ ಅತ್ತತ್ತು ಕಣ್ಣುರಿಯಿಂದ ಪೀಡಿತನಾಗಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

51 ನನ್ನ ಪಟ್ಟಣದ ಯುವತಿಯರಿಗೆ ಸಂಭವಿಸಿದ್ದನ್ನು ನಾನು ನೋಡುವಾಗಲೆಲ್ಲ ನನ್ನ ಕಣ್ಣುಗಳು ನನ್ನನ್ನು ದುಃಖಗೊಳಿಸುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

51 ನನ್ನ ನಗರದ ಪುತ್ರಿಯರೆಲ್ಲರ ನಿಮಿತ್ತವಾಗಿ ನನ್ನ ಕಣ್ಣುಗಳು ನನ್ನ ಹೃದಯವನ್ನು ಪೀಡಿಸಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಲಾಪಗಳು 3:51
14 ತಿಳಿವುಗಳ ಹೋಲಿಕೆ  

ಅತ್ಯಾಚಾರ ನಡೆದಿದೆ ಸಿಯೋನ್ ಸತಿಯರ ಮೇಲೆ ಯೆಹೂದ ಊರುಗಳ ಯುವತಿಯರ ಮೇಲೆ!


ವಯಸ್ಕರೂ ವೃದ್ಧರೂ ಬಿದ್ದಿದ್ದಾರೆ ಬೀದಿಗಳಲ್ಲೆ ತರುಣತರುಣಿಯರು ತುತ್ತಾಗಿದ್ದಾರೆ ಖಡ್ಗಗಳಿಗೆ. ನಿನ್ನ ಪ್ರಕೋಪದ ದಿನದಂದು ಹತಮಾಡಿದೆಯಲ್ಲಾ ಅವರನ್ನು ಕನಿಕರಿಸದೆ !


“ಸರ್ವೇಶ್ವರನು ನ್ಯಾಯಸ್ವರೂಪಿ, ನಾನಾದರೊ ಆತನ ಆಜ್ಞೆ ಮೀರಿದ ದ್ರೋಹಿ. ಜನಾಂಗಗಳೇ, ನೀವೆಲ್ಲರು ಕಿವಿಗೊಡಿ, ನನ್ನ ಸಂಕಟ ನೋಡಿ ! ನನ್ನ ಯುವಕ ಯುವತಿಯರು, ಇಗೋ, ಸೆರೆಹೋಗಿರುವರು ನೋಡಿ.


ಅವರ ಶತ್ರುಗಳು, ಕೊಲೆಗಡುಕರು ಅವರನ್ನು ಮುತ್ತಿ ನಸುಕುವಾಗ ಒಬ್ಬರು ಮತ್ತೊಬ್ಬರನ್ನು ತಿನ್ನುವುದು ಮಾತ್ರವಲ್ಲ, ತಮ್ಮ ಪುತ್ರಪುತ್ರಿಯರ ಮಾಂಸವನ್ನೇ ತಿನ್ನುವರು.’


ಊರುಬಿಟ್ಟು ಹೊರಗೆ ಹೋದರೆ ಅಲ್ಲಿ ಕಾಣಿಸುತ್ತಾರೆ ಖಡ್ಗದಿಂದ ಸತ್ತವರು. ಊರ ಒಳಗೆ ಬಂದರೆ ಅಲ್ಲಿ ಕಾಣಿಸುತ್ತಾರೆ ಕ್ಷಾಮದಿಂದ ನರಳುವವರು. ಅಪರಿಚಿತನಾಡಿಗೆ ಗಡೀಪಾರಾಗಿದ್ದಾರೆ ಪ್ರವಾದಿಗಳು ಮತ್ತು ಯಾಜಕರು’.”


ಅವರ ಪ್ರವಾದನೆಗೆ ಕಿವಿಗೊಡುವ ಜನರು ಕೂಡ ಕ್ಷಾಮಖಡ್ಗಗಳಿಗೆ ತುತ್ತಾಗುವರು. ಜೆರುಸಲೇಮಿನ ಬೀದಿಗಳಲ್ಲಿ ಬಿಸಾಡಲ್ಪಡುವರು. ಅವರನ್ನೂ ಅವರ ಮಡದಿ ಮಕ್ಕಳನ್ನೂ ಹೂಣಲು ಸಹ ಯಾರೂ ಇರುವುದಿಲ್ಲ. ಅವರ ದುಷ್ಟತನವನ್ನು ಅವರ ಮೇಲೆಯೆ ಸುರಿದುಬಿಡುವೆನು.”


ಅವರ ವಿಷಯವಾಗಿ ಸರ್ವೇಶ್ವರ, “ಇಗೋ ಅವರನ್ನು ನಾನು ದಂಡಿಸಿಯೇ ತೀರುವೆನು. ಅವರ ಯುವಕರು ಕತ್ತಿಗೆ ತುತ್ತಾಗುವರು. ಅವರ ಗಂಡುಹೆಣ್ಣು ಮಕ್ಕಳು ಕ್ಷಾಮದಿಂದ ಸಾಯುವರು.


ಈ ಹುಡುಗನನ್ನು ಬಿಟ್ಟು ನಾನು ನನ್ನ ತಂದೆಯ ಬಳಿಗೆ ಹೇಗೆ ತಾನೆ ಹೋಗಲಾದೀತು? ತಂದೆಗೆ ಉಂಟಾಗುವ ಮನೋಯಾತನೆಯನ್ನು ನನ್ನಿಂದ ನೋಡಲಾಗದು.”


ಕಂಬನಿಗರೆದು ಇಂಗಿಹೋಗಿದೆ ಕಣ್ಣು ಕುದಿಯುತ್ತಿದೆ ನನ್ನೊಳಗೆ ಕರುಳು ! ನನ್ನ ಜನತೆಯೆಂಬ ಯುವತಿ ಹಾಳಾಗಿ ಮಕ್ಕಳು ಹಾದಿಬೀದಿಗಳಲ್ಲಿ ಮೂರ್ಛೆಹೋಗಿ ನನ್ನ ಕರುಳು ಕರಗಿಹೋಗಿದೆ ನೀರಾಗಿ.


ಹರಿಯುತ್ತಿರುವುದು ನಿರಂತರವಾಗಿ ನನ್ನ ಕಣ್ಣೀರು.


“ಹಕ್ಕಿಯನ್ನು ಬೇಟೆಯಾಡುವವರೋ ಎಂಬಂತೆ ನಿಷ್ಕಾರಣ ವೈರಿಗಳು ಬೆನ್ನಟ್ಟಿ ಓಡಿಬಂದರು ನನ್ನ ಹಿಂದೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು