Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಲಾಪಗಳು 2:4 - ಕನ್ನಡ ಸತ್ಯವೇದವು C.L. Bible (BSI)

4 ಬಿಲ್ಲುಹಿಡಿದು ಬಂದ ಆತ ವೈರಿಯಂತೆ ಬಲಗೈಯೆತ್ತಿ ನಿಂತ ವಿರೋಧಿಯಂತೆ, ಸಂಹರಿಸಿಬಿಟ್ಟ ಸುಂದರ ಪ್ರಜೆಯೆಲ್ಲರನ್ನು ರೋಷಾಗ್ನಿ ಸುರಿಸಿ ಭಸ್ಮಮಾಡಿದ ಸಿಯೋನ್ ಗುಡಾರವನ್ನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ವೈರಿಯ ಹಾಗೆ ಬಿಲ್ಲನ್ನು ಬೊಗ್ಗಿಸಿ, ವಿರೋಧಿಯಂತೆ ಬಲಗೈಯೆತ್ತಿ ನಿಂತು, ಸುಂದರ ಪ್ರಜೆಯನ್ನೆಲ್ಲಾ ಸಂಹರಿಸಿದ್ದಾನೆ; ಚೀಯೋನ್ ಗುಡಾರದ ಮೇಲೆ ತನ್ನ ರೋಷಾಗ್ನಿಯನ್ನು ಸುರಿಸಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ವೈರಿಯ ಹಾಗೆ ಬಿಲ್ಲನ್ನು ಬೊಗ್ಗಿಸಿ ವಿರೋಧಿಯಂತೆ ಬಲಗೈಯೆತ್ತಿ ನಿಂತು ಸುಂದರ ಪ್ರಜೆಯನ್ನೆಲ್ಲಾ ಸಂಹರಿಸಿದ್ದಾನೆ; ಚೀಯೋನ್ ಗುಡಾರದ ಮೇಲೆ ತನ್ನ ರೋಷಾಗ್ನಿಯನ್ನು ಸುರಿಸಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಯೆಹೋವನು ವೈರಿಯಂತೆ ತನ್ನ ಬಿಲ್ಲನ್ನು ಬಾಗಿಸಿದನು. ತನ್ನ ಬಲಗೈಯಲ್ಲಿ ಖಡ್ಗವನ್ನು ಧರಿಸಿದನು: ಆತನು ಯೆಹೂದದ ಎಲ್ಲ ಆಕರ್ಷಕ ಜನರನ್ನು ಕೊಂದುಹಾಕಿದನು. ಆತನು ಶತ್ರುವಿನಂತೆ ಅವರನ್ನು ಕೊಂದನು. ಆತನು ತನ್ನ ರೋಷಾಗ್ನಿಯನ್ನು ಹೊರಸೂಸಿದನು. ಆತನು ಅದನ್ನು ಚೀಯೋನಿನ ಗುಡಾರಗಳ ಮೇಲೆ ಸುರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಅವರು ಶತ್ರುವಿನ ಹಾಗೆಯೇ ತನ್ನ ಬಿಲ್ಲನ್ನು ಬಗ್ಗಿಸಿದ್ದಾರೆ. ವೈರಿಯ ಹಾಗೆ ತನ್ನ ಬಲಗೈ ಎತ್ತಿ ನಿಂತುಕೊಂಡು, ಕಣ್ಣಿಗೆ ರಮ್ಯವಾಗಿ ಕಾಣುವ ಎಲ್ಲವುಗಳನ್ನು ಕೊಂದುಹಾಕಿದ್ದಾರೆ. ಅವರು ತನ್ನ ರೋಷವೆಂಬ ಅಗ್ನಿಯನ್ನು ಚೀಯೋನ್ ಪುತ್ರಿಯ ಡೇರೆಯಲ್ಲಿ ಸುರಿದಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಲಾಪಗಳು 2:4
38 ತಿಳಿವುಗಳ ಹೋಲಿಕೆ  

“ಸರ್ವೇಶ್ವರನಾದ ನಾನು ಹೇಳುವುದನ್ನು ಗಮನಿಸಿರಿ; ಇಗೋ, ನನ್ನ ಕೋಪವೆಂಬ ರೋಷಾಗ್ನಿಯನ್ನು ಈ ಸ್ಥಳದ ಮೇಲೆ ಸುರಿಸುವೆನು. ನರಮಾನವರ ಮೇಲೂ ಪಶುಪ್ರಾಣಿಗಳ ಮೇಲೂ ಕಾಡುಮರಗಳ ಮೇಲೂ ಭೂಮಿಯ ಬೆಳೆಯ ಮೇಲೂ ಅದನ್ನು ಕಾರುವೆನು. ಅದು ಆರದೆ ದಹಿಸುವುದು!”


“ನರಪುತ್ರನೇ, ಅವರಿಗೆ ಬಲಾಧಾರವೂ ನೇತ್ರಾನಂದವೂ ಆದ ಅವರ ಇಷ್ಟು ಸುಂದರ ಆಲಯವನ್ನೂ ಹೃದಯೋಲ್ಲಾಸವಾದ ಅವನ ಗಂಡು ಹೆಣ್ಣುಮಕ್ಕಳನ್ನೂ ನಾನು ನಿರ್ಮೂಲಮಾಡುವ ದಿನದಲ್ಲಿ


ನಾನೇ ನಿಮಗೆ ವಿರುದ್ಧವಾಗಿ ಕಡುಕೋಪದಿಂದ, ರೋಷಾವೇಶದಿಂದ, ಕ್ರೋಧಭರಿತನಾಗಿ, ಚಾಚಿದ ಕೈಯಿಂದಲೂ ಭುಜಪರಾಕ್ರಮದಿಂದಲೂ ಯುದ್ಧಮಾಡುವೆನು.


ಎಂದೇ ಸುರಿಸಿದನಾತ ರೋಷಾಗ್ನಿಯನು, ಯುದ್ಧದ ರೌದ್ರವನು ಅವರ ಮೇಲೆಲ್ಲ; ಸುತ್ತಲು ಉರಿ ಹತ್ತಿದರೂ ಅವರು ಅರಿಯಲಿಲ್ಲ, ದಹಿಸಿದರೂ ಅವರು ಕಲಿಯಲಿಲ್ಲ.


ನಿನ್ನ ನಲ್ಲರೆಲ್ಲರು ಮರೆತುಬಿಟ್ಟರು, ನಿನ್ನನ್ನು ಹುಡುಕದಿರುವರು ಶತ್ರುವಿನಂತೆ ನಿನ್ನನ್ನು ಥಳಿಸಿದೆನು, ಕ್ರೂರವಾಗಿ ದಂಡಿಸಿದೆನು. ಏಕೆಂದರೆ, ನಿನ್ನ ಅಪರಾಧ ಹೆಚ್ಚಿದೆ ನಿನ್ನ ಪಾಪಗಳು ಲೆಕ್ಕವಿಲ್ಲದಿವೆ.


ನನ್ನ ಮನದೊಳು ಸರ್ವಶಕ್ತನ ಬಾಣಗಳು ನಾಟಿವೆ ನನ್ನ ಅಂತರಂಗದೊಳು ಅವುಗಳ ವಿಷ ಹೀರಲಾಗುತ್ತಿದೆ ದೇವರಿಂದ ಬಂದ ಆತಂಕಗಳು ನನ್ನನು ಸುತ್ತುವರೆದಿವೆ.


ಯಾರು ತಡೆದಾರು ಆತನ ಸಿಟ್ಟಿಗೆ? ಯಾರು ನಿಂತಾರು ಆತನ ರೋಷಾಗ್ನಿಗೆ? ಆತನ ರೌದ್ರ ಜ್ವಾಲಾಪ್ರವಾಹದಂತೆ ಬಂಡೆಗಳು ಪುಡಿಪುಡಿ ಆತನ ಮುಂದೆ.


ಸರ್ವೇಶ್ವರ ಸ್ವಗೌರವವನು ಕಾಪಾಡಿಕೊಳ್ಳುವ ದೇವರು ಮುಯ್ಯಿತೀರಿಸುವ, ಹೌದು, ಕಡುಕೋಪದಿಂದ ಮುಯ್ಯಿತೀರಿಸುವ ದೇವರು. ಸರ್ವೇಶ್ವರ ಮುಯ್ಯಿತೀರಿಸುತ್ತಾರೆ ತನ್ನ ವಿರೋಧಿಗಳಿಗೆ ದೀರ್ಘರೋಷವಿಡುತ್ತಾರೆ, ತಮ್ಮ ಶತ್ರುಗಳ ಮೇಲೆ.


ಅವರು ನಾಡಿನ ಮೇಲೆ ರಕ್ತವನ್ನು ಸುರಿಸಿ, ತಮ್ಮ ವಿಗ್ರಹಗಳಿಂದ ಅದನ್ನು ಹೊಲೆಗೈದಕಾರಣ ನಾನು ಅವರ ಮೇಲೆ ನನ್ನ ರೋಷಾಗ್ನಿಯನ್ನು ಸುರಿಸುವೆನು;


ಬೆಳ್ಳಿ ಕುಲುಮೆಯೊಳಗೆ ಕರಗುವಂತೆ ನೀವು ನನ್ನ ರೋಷಾಗ್ನಿಯಲ್ಲಿ ಕರಗಿಬಿಡುವಿರಿ; ನಿಮ್ಮ ಮೇಲೆ ರೋಷಾಗ್ನಿಯನ್ನು ಸುರಿಸಿದ ನಾನು ಸರ್ವೇಶ್ವರ ಎಂದು ನಿಮಗೆ ಗೊತ್ತಾಗುವುದು.”


ದೂರದಲ್ಲಿರುವವನು ವ್ಯಾಧಿಯಿಂದ ಸಾಯುವನು, ಹತ್ತಿರದಲ್ಲಿರುವವನು ಖಡ್ಗದಿಂದ ಸಾಯುವನು; ಅಂತು ನಾನು ಅವರ ಮೇಲೆ ಇಟ್ಟಿರುವ ರೋಷವನ್ನು ತೀರಿಸಿಬಿಡುವೆನು.


“ಹೀಗೆ ನನ್ನ ಸಿಟ್ಟನ್ನು ತೀರಿಸಿಕೊಳ್ಳುವೆನು, ನನ್ನ ರೋಷವನ್ನು ಅವರ ಮೇಲೆ ಕಾರಿ ಶಾಂತನಾಗುವೆನು; ಆಗ್ರಹದಿಂದ ಮಾತಾಡಿದವನು ಸರ್ವೇಶ್ವರನಾದ ನಾನೇ ಎಂಬುದು ನನ್ನ ಕೋಪವನ್ನು ಅವರ ಮೇಲೆ ಹೊಯ್ದುಬಿಟ್ಟ ಬಳಿಕ ಅವರಿಗೆ ಗೊತ್ತಾಗುವುದು.


ಅಕಟಕಟಾ! ಎಷ್ಟು ಮಸುಕಾಗಿದೆ ಬಂಗಾರ ಎಷ್ಟು ಕಾಂತಿಹೀನವಾಗಿಬಿಟ್ಟಿವೆ ಅಪ್ಪಟ ಚಿನ್ನ! ಪವಿತ್ರಾಲಯದ ಕಲ್ಲುಗಳೂ ಬಿದ್ದಿವೆ ಚೆಲ್ಲಾಪಿಲ್ಲಿಯಾಗಿ ಬೀದಿಬೀದಿಗಳ ಬದಿಯಲ್ಲಿ ರಾಶಿರಾಶಿಯಾಗಿ!


ಹೌದು ದಿನವಿಡೀ, ಪದೇ ಪದೇ ಕೈಮಾಡುತ್ತಾ ಬಂದಿಹನು ನನ್ನ ಮೇಲೆ.


ಸ್ವಾಮಿಯೇ ಶತ್ರುವಾಗಿ ಕಬಳಿಸಿದ ಇಸ್ರಯೇಲನ್ನು ನಾಶಮಾಡಿದ ಅದರ ಅರಮನೆಗಳೆಲ್ಲವನ್ನು ನೆಲಸಮಗೊಳಿಸಿದ ಅದರ ಕೋಟೆಕೊತ್ತಲಗಳನ್ನು ಯಥೇಚ್ಛವಾಗಿಸಿದ ಯೆಹೂದ ನಾಡಿನ ಗೋಳಾಟವನ್ನು.


ಅವರು ಒಂದು ವೇಳೆ ಸರ್ವೇಶ್ವರನಿಗೆ ಶರಣಾಗತರಾಗಿ ತಮ್ಮ ದುರ್ಮಾರ್ಗಗಳಿಂದ ಹಿಂದಿರುಗಬಹುದು. ಏಕೆಂದರೆ, ಸರ್ವೇಶ್ವರ ಆ ಜನರ ವಿರುದ್ಧ ತೋರಿಸಬೇಕೆಂದಿರುವ ಕೋಪಾಕ್ರೋಶ ಭಯಾನಕವಾಗಿದೆ,” ಎಂದು ಆಜ್ಞಾಪಿಸಿದನು.


‘ದಾವೀದ ಮನೆತನದವರೇ, ಸರ್ವೇಶ್ವರನ ಮಾತಿದು: ಮುಂಜಾನೆಯೆ ನ್ಯಾಯನೀತಿಯನ್ನು ಪರಿಪಾಲಿಸಿರಿ; ವಂಚಿತರನ್ನು ದೋಚಿಕೊಂಡವನ ಕೈಯಿಂದ ಬಿಡಿಸಿರಿ. ಇಲ್ಲವಾದರೆ ನಿಮ್ಮ ದುಷ್ಕೃತ್ಯಗಳ ನಿಮಿತ್ತ ನನ್ನ ಕೋಪಾಗ್ನಿಯು ಜ್ವಾಲೆಯಂತೆ ಭುಗಿಲೇಳುವುದು, ಅದರ ಕಿಚ್ಚನ್ನು ಮುಚ್ಚಿಡಲು ಯಾರಿಂದಲೂ ಆಗದು.


ಜುದೇಯದವರೇ, ಜೆರುಸಲೇಮಿನ ನಿವಾಸಿಗಳೇ, ಸರ್ವೇಶ್ವರನಾದ ನನಗಾಗಿ ಸುನ್ನತಿಯಾಗಿರಿ. ನಿಮ್ಮ ಹೃದಯದ ಮುಂದೊಗಲನ್ನು ತೆಗೆದುಹಾಕಿರಿ. ಇಲ್ಲವಾದರೆ ನಿಮ್ಮ ಪಾಪಾಕ್ರಮಗಳ ನಿಮಿತ್ತ ನನ್ನ ಕೋಪಾಗ್ನಿಯು ಭುಗಿಲೆದ್ದು ಆರಿಸಲಾಗದಷ್ಟು ಧಗಧಗಿಸುವುದು.”


ಅವರಾದರೋ ಬಂಡಾಯವೆದ್ದರು; ಸ್ವಾಮಿಯ ಪವಿತ್ರಾತ್ಮನನ್ನು ದುಃಖಪಡಿಸಿದರು. ಎಂತಲೇ ಸರ್ವೇಶ್ವರ ಅವರಿಗೆ ಶತ್ರುವಾಗಿ ಮಾರ್ಪಟ್ಟರು, ತಾವೇ ಅವರಿಗೆ ವಿರುದ್ಧವಾಗಿ ಹೋರಾಡಿದರು.


ರಾಷ್ಟ್ರಗಳನು ತುಳಿದೆ ಕುಪಿತನಾಗಿ ಅವುಗಳನು ನುಚ್ಚುನೂರುಮಾಡಿದೆ ರೋಷಾವಿಷ್ಟನಾಗಿ ಅವುಗಳ ರಕ್ತವನು ನೆಲದಲಿ ಹರಿಸಿದೆ ಪ್ರವಾಹವಾಗಿ.


ಅವರು ನನ್ನನ್ನು ಬಿಟ್ಟು ಅನ್ಯದೇವತೆಗಳಿಗೆ ಧೂಪಾರತಿ ಎತ್ತಿ ತಮ್ಮ ದುಷ್ಕೃತ್ಯಗಳಿಂದ ನನ್ನನ್ನು ರೇಗಿಸಿದ್ದಾರೆ; ನನ್ನ ಕೋಪಾಗ್ನಿ ಈ ನಾಡಿನ ಮೇಲೆ ಉರಿಯುತ್ತಿರುವುದು ಆರಿಹೋಗುವುದಿಲ್ಲ,” ಎನ್ನುತ್ತಾರೆ.


“ನಮ್ಮ ಪೂರ್ವಜರು ಈ ಗ್ರಂಥದಲ್ಲಿ ಬರೆದಿರುವ ಸರ್ವೇಶ್ವರನ ಆಜ್ಞೆಗಳನ್ನೆಲ್ಲಾ ಕೈಗೊಳ್ಳದೆ ಹೋದುದರಿಂದಲೇ ಸರ್ವೇಶ್ವರ ತಮ್ಮ ಮಹಾರೌದ್ರವನ್ನು ನಮ್ಮ ಮೇಲೆ ಸುರಿದಿದ್ದಾರೆ. ಆದುದರಿಂದ ನೀವು ನನ್ನ ಪರವಾಗಿ, ಹಾಗು ಇಸ್ರಯೇಲರಲ್ಲಿ ಮತ್ತು ಯೆಹೂದ್ಯರಲ್ಲಿ ಉಳಿದಿರುವವರ ಪರವಾಗಿ ಸರ್ವೇಶ್ವರನ ಬಳಿಗೆ ಹೋಗಿ ನಮಗೆ ಸಿಕ್ಕಿರುವ ಈ ಗ್ರಂಥದ ವಾಕ್ಯಗಳ ಬಗ್ಗೆ ವಿಚಾರಿಸಿರಿ,” ಎಂದು ಆಜ್ಞಾಪಿಸಿದನು.


ಹಿಡಿದಿಹರು ದುರುಳರು ಕತ್ತಿಯನು, ಎತ್ತಿಹರು ಬಿಲ್ಲನು I ಕೆಡಹಲು ದೀನದಲಿತರನು, ಕೊಲ್ಲಲು ಸಜ್ಜನರನು II


ನನ್ನ ಗುಡಾರ ಹಾಳಾಗಿದೆ, ಹಗ್ಗಗಳು ಕಿತ್ತುಹೋಗಿವೆ. ಮಕ್ಕಳು ನನ್ನನ್ನು ಬಿಟ್ಟು ಕಾಣದೆಹೋಗಿದ್ದಾರೆ ಗುಡಾರ ಹಾಕಲು, ಪರದೆ ಬಿಗಿಯಲು, ಯಾರೂ ಇಲ್ಲವಾಗಿದ್ದಾರೆ.”


ಹೌದು, ನಾನು ಶಿಕ್ಷಾಹಸ್ತವನ್ನೆತ್ತಿ, ಭುಜಪರಾಕ್ರಮವನ್ನು ತೋರಿಸಿ, ರೋಷಾಗ್ನಿಯನ್ನು ಹರಿಸುತ್ತಾ, ನಿಮ್ಮನ್ನು ಜನಾಂಗಗಳಿಂದ ಬಿಡುಗಡೆಮಾಡಿ, ನೀವು ಚದರಿಹೋಗಿರುವ ದೇಶಗಳಿಂದ ನಿಮ್ಮನ್ನು ಒಂದುಗೂಡಿಸಿ,


ನಾನು ನಿಮ್ಮ ಮೇಲೆ ಕಡುಕೋಪಗೊಳ್ಳುವೆನು; ನೀವು ನಿಮ್ಮ ಶತ್ರುಗಳ ಮುಂದೆಯೇ ಸೋತುಬೀಳುವಿರಿ; ನಿಮ್ಮ ವೈರಿಗಳು ನಿಮ್ಮನ್ನು ಆಳುವರು. ಯಾರೂ ಬೆನ್ನಟ್ಟಿ ಬರದಿದ್ದರೂ ನೀವು ಹೆದರಿ ಓಡುವಿರಿ.


‘ಉರಿದೇಳುತ್ತಿದೆ ಕೆಳಲೋಕದ ತನಕ ಎನ್ನ ಕೋಪಾಗ್ನಿ ದಹಿಸಿಬಿಡುವುದದು ಭೂಮಿಯನು ಬೆಳೆಸಹಿತವಾಗಿ ಭಸ್ಮಮಾಡುವುದದು ಬೆಟ್ಟಗಳನು ಬುಡಸಮೇತವಾಗಿ.


ಆಗ ಸಮುವೇಲನು, “ಸರ್ವೇಶ್ವರ ನಿನ್ನನ್ನು ಕೈಬಿಟ್ಟು ನಿನಗೆ ವಿರೋಧಿಯಾದ ಮೇಲೆ ನೀನು ನನ್ನನ್ನು ವಿಚಾರಿಸುವುದೇಕೆ?


ತನ್ನ ಕೋಪಾಗ್ನಿಯನು ನನ್ನ ಮೇಲೆ ಧಗಧಗಿಸಿದ್ದಾನೆ ನನ್ನನ್ನು ತನ್ನ ವೈರಿಯೆಂದೇ ಪರಿಗಣಿಸಿದ್ದಾನೆ.


ಸೇರಿಸಿಟ್ಟಿರುವನಾತ ಮಾರಕಾಸ್ತ್ರಗಳನು I ಗುರಿಯಿಟ್ಟು ನಿಂತಿರುವನು ಅಗ್ನಿಬಾಣಗಳನು II


“ಇಸ್ರಯೇಲಿನ ದೇವರೂ ಸೇನಾಧೀಶ್ವರರೂ ಆದ ಸರ್ವೇಶ್ವರ ಇಂತೆನ್ನುತ್ತಾರೆ: ‘ನನ್ನ ರೌದ್ರ ಕೋಪಾಗ್ನಿಯು ಜೆರುಸಲೇಮಿನ ಮೇಲೆ ಹೇಗೆ ಸುರಿಯಿತೋ ಹಾಗೆಯೆ ನೀವು ಈಜಿಪ್ಟಿನಲ್ಲಿ ಕಾಲಿಟ್ಟ ಕೂಡಲೆ ನನ್ನ ಕೋಪಾಗ್ನಿ ನಿಮ್ಮ ಮೇಲೆಯೂ ಸುರಿಯುವುದು. ನೀವು ಅಪವಾದ, ಅಪಹಾಸ್ಯಕ್ಕೂ, ಶಾಪ, ನಿಂದೆ, ದೂಷಣೆಗಳಿಗೂ ಗುರಿಯಾಗುವಿರಿ. ಈ ನಾಡನ್ನು ನೀವು ಮತ್ತೆ ನೋಡಲಾರಿರಿ.’


“ಆಕಾಶದಿಂದ ಆತ ಸುರಿಸಿದ್ದಾನೆ ಅಗ್ನಿಯನ್ನೆ ಅದು ದಹಿಸುತ್ತಿದೆ ನನ್ನೊಳಗಿನ ಎಲುಬುಗಳನ್ನೆ ನನ್ನ ಕಾಲುಗಳಿಗೆ ಬಲೆಯೊಡ್ಡಿದ್ದಾನೆ ಅದು ನನ್ನನ್ನೆಳೆಯುತ್ತಿದೆ ನೆಲಕ್ಕೆ ಹಾಳುಬಿದ್ದ ನಾನು ಸದಾ ಬಳಲುತ್ತಿದ್ದೇನೆ.”


ಸುರಿಸಿದ್ದಾನೆ ಸರ್ವೇಶ್ವರ ತನ್ನ ರೋಷಾಗ್ನಿಯನ್ನು ತೀರಿಸಿಕೊಂಡಿದ್ದಾನೆ ತನ್ನ ಉಗ್ರಕೋಪವನ್ನು. ಆತ ಹೊತ್ತಿಸಿದ ಬೆಂಕಿಗೆ ಸಿಯೋನಿನ ಅಸ್ತಿವಾರ ಆಹುತಿಯಾಗಿದೆ.


ಅವರು ಕೊಂಬನ್ನೂದಿ ಸರ್ವಸನ್ನಾಹ ಮಾಡಿದರೂ ಯಾರು ಯುದ್ಧಕ್ಕೆ ಹೊರಡರು; ನನ್ನ ರೋಷಾಗ್ನಿ ಆ ಸಮಾಜದವರೆಲ್ಲರ ಮೇಲೆ ಹತ್ತಿದೆ.


“ಹೀಗಿರಲು ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: ‘ನಾನು ಸಿಟ್ಟುಗೊಂಡು ಗೋಡೆಯನ್ನು ಬಿರುಗಾಳಿಯಿಂದ ಕೆಡವಿಹಾಕುವೆನು; ಅದನ್ನು ನಾಶಮಾಡಲು ನನ್ನ ಕೋಪದಿಂದ ವಿಪರೀತ ಮಳೆಯುಂಟಾಗುವುದು; ರೋಷದಿಂದ ಆನೆಕಲ್ಲುಗಳು ಸುರಿಯುವುವು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು