Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಲಾಪಗಳು 2:10 - ಕನ್ನಡ ಸತ್ಯವೇದವು C.L. Bible (BSI)

10 ತಲೆಯ ಮೇಲೆ ಧೂಳನ್ನು ತೂರಿಕೊಂಡು ಗೋಣಿತಟ್ಟನ್ನು ಸೊಂಟಕ್ಕೆ ಸುತ್ತಿಕೊಂಡು ಕುಕ್ಕರಿಸಿಹರು ಸಿಯೋನ್ ನಗರಿಯ ಪ್ರಮುಖರು ತಲೆ ತಗ್ಗಿಸಿಹರು ಜೆರುಸಲೇಮಿನ ಯುವತಿಯರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಚೀಯೋನ್ ನಗರಿಯ ಹಿರಿಯರು ನೆಲದಲ್ಲಿ ಮೌನವಾಗಿ ಕುಕ್ಕರಿಸಿದ್ದಾರೆ; ತಲೆಯ ಮೇಲೆ ಧೂಳನ್ನು ತೂರಿಕೊಂಡು, ಗೋಣಿ ತಟ್ಟನ್ನು ಸುತ್ತಿಕೊಂಡಿದ್ದಾರೆ; ಯೆರೂಸಲೇಮಿನ ಕನ್ಯೆಯರು ತಲೆಗಳನ್ನು ನೆಲಕ್ಕೆ ಬೊಗ್ಗಿಸಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಚೀಯೋನ್ ನಗರಿಯ ಹಿರಿಯರು ನೆಲದಲ್ಲಿ ಮೌನವಾಗಿ ಕುಕ್ಕರಿಸಿದ್ದಾರೆ; ತಲೆಯ ಮೇಲೆ ಧೂಳನ್ನು ತೂರಿಕೊಂಡು ಗೋಣಿತಟ್ಟನ್ನು ಸುತ್ತಿಕೊಂಡಿದ್ದಾರೆ; ಯೆರೂಸಲೇವಿುನ ಯುವತಿಯರು ತಲೆಗಳನ್ನು ನೆಲಕ್ಕೆ ಬೊಗ್ಗಿಸಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಚೀಯೋನಿನ ಹಿರಿಯರು ನೆಲದ ಮೇಲೆ ಮೌನವಾಗಿ ಕುಳಿತುಕೊಂಡಿದ್ದಾರೆ. ಅವರು ತಮ್ಮ ತಲೆಗಳ ಮೇಲೆ ಧೂಳನ್ನು ತೂರಿಕೊಂಡು ಗೋಣಿತಟ್ಟನ್ನು ಸುತ್ತಿಕೊಂಡಿದ್ದಾರೆ. ಜೆರುಸಲೇಮಿನ ತರುಣಿಯರು ದುಃಖದಿಂದ ತಲೆ ತಗ್ಗಿಸಿಕೊಂಡಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಚೀಯೋನಿನ ಹಿರಿಯರು ನೆಲದ ಮೇಲೆ ಕುಳಿತುಕೊಂಡು ನಿಶ್ಶಬ್ದವಾಗಿದ್ದಾರೆ. ಅವರು ತಮ್ಮ ತಲೆಗಳ ಮೇಲೆ ಧೂಳು ಹಾಕಿಕೊಂಡಿದ್ದಾರೆ. ಅವರು ಗೋಣಿತಟ್ಟನ್ನು ಸುತ್ತಿಕೊಂಡಿದ್ದಾರೆ. ಯೆರೂಸಲೇಮಿನ ಕನ್ಯೆಯರು ತಮ್ಮ ತಲೆಯನ್ನು ನೆಲದ ಕಡೆಗೆ ಬಗ್ಗಿಸಿಕೊಂಡಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಲಾಪಗಳು 2:10
26 ತಿಳಿವುಗಳ ಹೋಲಿಕೆ  

ನಿನ್ನ ಪುರದ್ವಾರಗಳಲ್ಲಿ ದುಃಖ ಪ್ರಲಾಪ ತುಂಬಿರುವುದು. ನೀನು ನಗ್ನಳಂತೆ ನೆಲದ ಮೇಲೆ ಕುಳಿತುಬಿಡುವೆ.


ಗೋಣಿತಟ್ಟನುಟ್ಟು ತಿರುಗುತಿಹರು ಹಾದಿಬೀದಿಗಳಲಿ, ಕಣ್ಣೀರಿಡುತ ಸೊರಗಿಹರು ಮಳಿಗೆಗಳಲಿ, ಬೀದಿ ಚೌಕಗಳಲಿ.


ಆ ದಿನದಲ್ಲಿ ಆಸ್ಥಾನದ ಗೀತೆಗಳು ಶೋಕಗೀತೆಗಳಾಗಿ ಮಾರ್ಪಡುವುವು. ಹೆಣಗಳು ಎಲ್ಲೆಲ್ಲೂ ಬಿದ್ದಿರುವುವು. ಅವುಗಳನ್ನು ಸದ್ದುಗದ್ದಲವಿಲ್ಲದೆ ಬಿಸಾಡಲಾಗುವುದು.” ಇದು ಸರ್ವೇಶ್ವರಸ್ವಾಮಿಯ ನುಡಿ.


ಅವರು ಗೋಣಿತಟ್ಟನ್ನು ಸುತ್ತಿಕೊಳ್ಳುವರು, ದಿಗಿಲು ಅವರನ್ನು ಆವರಿಸಿಬಿಡುವುದು; ಎಲ್ಲರ ಮುಖದಲ್ಲೂ ನಾಚಿಕೆ ತುಂಬಿರುವುದು, ಎಲ್ಲರು ತಲೆಬೋಳಿಸಿಕೊಂಡು ಇರುವರು.


‘ನನ್ನ ಮೇಲೆ ಇದನ್ನು ಹೇರಿಸಿದನು ಸರ್ವೇಶ್ವರನು ಎಂದು ಏಕಾಕಿಯಾಗಿ ಕುಳಿತು ಮೌನದಿಂದಿರು.


ಬಿಕೋ ಎನ್ನುತ್ತಿವೆ ಸಿಯೋನಿಗೆ ತೆರಳುವ ಮಾರ್ಗಗಳು ಮಹೋತ್ಸವಕ್ಕೆ ಇನ್ನು ಬರುತ್ತಿಲ್ಲ ಯಾತ್ರಿಕರಾರು ಪಾಳುಬಿದ್ದಿವೆ ಅದರ ಬಾಗಿಲುಗಳು ನಿಟ್ಟುಸಿರಿಡುತ್ತಿರುವರು ಅದರ ಯಾಜಕರು ವ್ಯಥೆಪಡುತ್ತಿರುವರು ಅದರ ಯುವತಿಯರು ನಗರಕ್ಕೆ ನಗರವೇ ದುಃಖದಲ್ಲಿ ಮುಳುಗಿರುವುದು.


ಅಯ್ಯೋ, ಅಂದು ಜನಭರಿತವಾಗಿದ್ದ ನಗರಿ ಇಂದು ಒಂಟಿಯಾಗಿ ಕುಳಿತುಬಿಟ್ಟಳಲ್ಲಾ ! ರಾಷ್ಟ್ರಗಳಲ್ಲೆಲ್ಲಾ ಅತಿ ಶ್ರೇಷ್ಠಳಾಗಿದ್ದವಳು ವಿಧವೆ ಆಗಿಬಿಟ್ಟಳಲ್ಲಾ ! ಪ್ರಾಂತ್ಯಗಳಲ್ಲೆಲ್ಲಾ ಬಹಳ ಪ್ರವೀಣಳಾಗಿದ್ದವಳು ದಾಸಿಯಂತೆ ಆಗಿಬಿಟ್ಟಿರುವಳಲ್ಲಾ !


“ಕೆಳಕ್ಕಿಳಿದು ಬಾ, ಯುವತಿಯೇ ಧೂಳಲ್ಲಿ ಕುಳಿತುಕೋ, ಬಾಬೆಲೆ ! ಕುವರಿಯೇ, ಕುಕ್ಕರಿಸು ನೆಲದಲಿ ಸಿಂಹಾಸನವಿಲ್ಲ ಇಲ್ಲಿ. ಎಲೈ, ಕಸ್ದೀಯರ ನಗರಿಯೇ, ನೀನಲ್ಲ ಇನ್ನು ಕೋಮಲೆ,, ಸುಕುಮಾರಿ ಎಂದು ಎನಿಸಿಕೊಳ್ಳೆ.


ಆಗ ಯೆಹೋಶುವನು ಮತ್ತು ಇಸ್ರಯೇಲರ ಹಿರಿಯರು ದುಃಖ ತಾಳಲಾರದೆ ತಮ್ಮ ಬಟ್ಟೆಗಳನ್ನು ಹರಿದುಕೊಂಡು, ತಲೆಯ ಮೇಲೆ ಬೂದಿಯನ್ನು ಸುರಿದುಕೊಂಡು ಸಾಯಂಕಾಲದವರೆಗೆ ಸರ್ವೇಶ್ವರನ ಮಂಜೂಷದ ಮುಂದೆ ಅಧೋಮುಖರಾಗಿ ಬಿದ್ದಿದ್ದರು.


ಅವರು ತಮ್ಮ ತಲೆಗಳ ಮೇಲೆ ಮಣ್ಣನ್ನು ಸುರಿದುಕೊಂಡು ಆರ್ತಧ್ವನಿಯಿಂದ : “ನಿನಗೆಂಥಾ ದುರ್ಗತಿ, ಓ ಮಹಾನಗರಿ ! ಕಡಲಲಿ ಸಾಗುವ ಹಡಗಿನವರನ್ನೆಲ್ಲಾ ಧನಿಕರನ್ನಾಗಿಸಿದೆ ನಿನ್ನ ಐಸಿರಿಯಿಂದ ತಾಸೊಂದರಲೇ, ಅಯ್ಯೋ ನೀ ನಾಶ ಆದೆಯಲ್ಲಾ !” ಎಂದು ಪರಿತಪಿಸಿದರು.


ಆ ದಿನದಂದು ಗಟ್ಟಿಮುಟ್ಟಾದ ಯುವಕ ಯುವತಿಯರೂ ಬಾಯಾರಿಕೆಯಿಂದ ಮೂರ್ಛೆಹೋಗುವರು.


ಕಾಲವು ಕೆಟ್ಟದ್ದಾಗಿ ಇರುವುದರಿಂದ ವಿವೇಕಿಯಾದವನು ಸುಮ್ಮನಿರುವುದು ಲೇಸು.


ಮದುವೆಯಾಗಲಿದ್ದ ಯುವಕನನ್ನು ಕಳೆದುಕೊಂಡದ್ದಕ್ಕಾಗಿ ಗೋಣಿತಟ್ಟನ್ನು ಉಟ್ಟು ಗೋಳಾಡುವ ಯುವತಿಯಂತೆ ರೋದಿಸಿರಿ.


ತಲೆ ಬೋಳಿಸಿಕೊಂಡು, ಗೋಣಿತಟ್ಟನು ಸುತ್ತಿಕೊಂಡು, ದುಃಖಿಸಿ ಗೋಳಾಡುವರು, ಅಳುವರು ನಿನಗಾಗಿ ನಿಟ್ಟುಸಿರಿಟ್ಟು;


ಮುದುಕರು ಇನ್ನು ಕೂರುತ್ತಿಲ್ಲ ಚಾವಡಿಗಳಲಿ ಯುವಕರು ಇನ್ನು ಹಿಡಿಯುತ್ತಿಲ್ಲ ವಾದ್ಯಗಳನ್ನು ಕೈಯಲ್ಲಿ.


ನಮ್ಮ ನಾಯಕರ ಕೈಗಳನ್ನು ನೇತುಹಾಕಿದ್ದಾರೆ ಗಲ್ಲಿಗೆ ನಮ್ಮ ಹಿರಿಯರನ್ನು ಗುರಿಪಡಿಸಿದ್ದಾರೆ ಮಾನಭಂಗಕ್ಕೆ.


ಸರ್ವೇಶ್ವರನ ದೃಷ್ಟಿ ಅವರನ್ನು ಚದರಿಸಿದೆ ಇನ್ನು ಆತ ತೋರನು ಅವರಿಗೆ ಕರುಣೆ. ಯಾಜಕರಾದರೂ ಅವರಿಗೆ ಮರ್ಯಾದೆ ತಪ್ಪಿಹೋಗಿದೆ ಹಿರಿಯರಾದರೂ ಅವರಿಗೆ ಆದರಣೆ ಇಲ್ಲದಿದೆ.


ಮೃಷ್ಟಾನ್ನ ಉಣ್ಣುತ್ತಿದ್ದವರು ದಿಕ್ಕೆಟ್ಟು ಅಲೆಯುತ್ತಿರುವರು ಚಿಕ್ಕಂದಿನಿಂದಲೆ ನಾರುಮಡಿಯನ್ನು ತೊಡುತ್ತಿದ್ದವರು ತಿಪ್ಪೆಗಳನ್ನು ಅಪ್ಪಿಕೊಳ್ಳುವ ಗತಿಗೆ ಇಳಿದಿರುವರು.


ಜನರು : “ನಾವು ಸುಮ್ಮನೆ ಕುಳಿತಿರುವುದೇಕೆ? ಕೂಡಿಬನ್ನಿ, ಕೋಟೆಕೊತ್ತಲುಗಳುಳ್ಳ ಊರುಗಳನ್ನು ಸೇರಿಕೊಳ್ಳೋಣ. ಅಲ್ಲೆ ನಾಶವಾಗೋಣ. ನಮ್ಮ ದೇವರಾದ ಸರ್ವೇಶ್ವರನಿಗೆ ನಾವು ಪಾಪಮಾಡಿದ್ದರಿಂದ ಅವರು ನಮ್ಮನ್ನು ನಾಶಕ್ಕೆ ಗುರಿಮಾಡಿದ್ದಾರೆ. ವಿಷಬೆರೆತ ನೀರನ್ನು ಕುಡಿಯಲು ಕೊಟ್ಟಿದ್ದಾರೆ.


“ಕಸ್ದೀಯ ನಗರಿಯೇ, ಕುಳಿತುಕೊ ಮೌನವಾಗಿ ಕತ್ತಲೆಯೊಳಗೆ ಇನ್ನು ಎನಿಸಿಕೊಳ್ಳೆ ರಾಣಿಯೆಂದು ರಾಜ್ಯಗಳಿಗೆ.”


ಬಳಿಕ, ಹಿಲ್ಕೀಯನ ಮಗನೂ ರಾಜ ಗೃಹಾಧಿಪತಿಯೂ ಆಗಿದ್ದ ಎಲ್ಯಾಕೀಮ್, ಕಾರ್ಯದರ್ಶಿ ಶೆಬ್ನ, ಆಸಾಫನ ಮಗನೂ ಮಂತ್ರಿಯೂ ಆಗಿದ್ದ ಯೋವ ಎಂಬವರು ಸಿಟ್ಟಿನಿಂದ ಬಟ್ಟೆಗಳನ್ನು ಹರಿದುಕೊಂಡು, ಅರಸ ಹಿಜ್ಕೀಯನ ಬಳಿಗೆ ಬಂದು, ಅವನಿಗೆ ಆ ಸೇನಾಪತಿಯ ಮಾತುಗಳನ್ನು ತಿಳಿಸಿದರು.


ತಾಮಾರಳು ತಲೆಯ ಮೇಲೆ ಬೂದಿ ಹಾಕಿಕೊಂಡು, ನಿಲುವಂಗಿಯನ್ನು ಹರಿದುಕೊಂಡು, ಕೈಗಳನ್ನು ತಲೆಯ ಮೇಲಿಟ್ಟು ಗೋಳಾಡುತ್ತಾ ಹೋದಳು.


ಇದಲ್ಲದೆ ಸುಗಂಧಕ್ಕೆ ಬದಲಾಗಿ ದುರ್ಗಂಧ, ನಡುಪಟ್ಟಿಗೆ ಬದಲಾಗಿ ಹುರಿಹಗ್ಗ, ಜಡೆದಲೆಗೆ ಬದಲಾಗಿ ಬೋಳುದಲೆ, ರೇಷ್ಮೆಬಟ್ಟೆಗೆ ಬದಲಾಗಿ ಗೋಣಿತಟ್ಟು, ಬೆಡಗಿಗೆ ಬದಲಾಗಿ ಬೆತ್ತಲೆ, ಇಂಥ ಗತಿ ಅವರಿಗೆ ಬಂದೊದಗುವುದು.


ತಮ್ಮ ತಮ್ಮ ಹಡಗುಗಳಿಂದಿಳಿದು, ನೆಲದ ಮೇಲೆ ನಿಂತು. ತಲೆಗೆ ದೂಳೆರಚಿಕೊಂಡು, ಬೂದಿಯಲ್ಲಿ ಹೊರಳಾಡಿಕೊಂಡು,


ಈ ಸಂಗತಿ ನಿನೆವೆಯ ಅರಸನ ಕಿವಿಗೆ ಬಿದ್ದಿತು. ಅವನು ಸಿಂಹಾಸನದಿಂದ ಇಳಿದು, ತನ್ನ ರಾಜವಸ್ತ್ರಗಳನ್ನು ತೆಗೆದುಬಿಟ್ಟು, ಗೋಣಿತಟ್ಟನ್ನು ಉಟ್ಟುಕೊಂಡು ಬೂದಿಯಲ್ಲಿ ಕುಳಿತುಕೊಂಡನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು