ಪ್ರಲಾಪಗಳು 1:6 - ಕನ್ನಡ ಸತ್ಯವೇದವು C.L. Bible (BSI)6 ಕಳೆದುಹೋಗಿದೆಯಲ್ಲಾ ಸಿಯೋನ್ ನಗರಿಯ ವೈಭವವೆಲ್ಲಾ ! ಮೇವಿಲ್ಲದೆ ಬಡಕಲಾದ ಜಿಂಕೆಗಳಂತೆ ಅದರ ನಾಯಕರೆಲ್ಲಾ ಓಡಿಹೋದರು ಬೆಂಗೊಟ್ಟು ಅಟ್ಟಿಬಂದವರಿಗೆಲ್ಲಾ ! ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20196 ಚೀಯೋನ್ ನಗರಿಯ ವೈಭವವೆಲ್ಲಾ ಕಳೆದುಹೋಗಿದೆ; ಅಲ್ಲಿನ ಪ್ರಧಾನರು ಮೇವಿಲ್ಲದ ಜಿಂಕೆಗಳಂತೆ ಬಲಗುಂದಿ ಹಿಡಿಯಲು ಬೆನ್ನತ್ತಿದವರಿಗೆ ಬೆನ್ನುಕೊಟ್ಟು ಓಡಿಹೋಗಿದ್ದಾರೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)6 ಚೀಯೋನ್ ನಗರಿಯ ವ್ಯೆಭವವೆಲ್ಲಾ ಕಳೆದುಹೋಗಿದೆ; ಅಲ್ಲಿನ ಪ್ರಧಾನರು ಮೇವಿಲ್ಲದ ಜಿಂಕೆಗಳಂತೆ ಬಲಗುಂದಿ ಅಟ್ಟುವವರಿಗೆ ಬೆಂಗೊಟ್ಟು ಓಡಿಹೋಗಿದ್ದಾರೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್6 ಚೀಯೋನಿನ ಮಗಳ ಸೌಂದರ್ಯವು ಹೊರಟುಹೋಗಿದೆ. ಅವಳ ರಾಜಕುಮಾರರು ಹುಲ್ಲುಗಾವಲನ್ನು ಕಂಡುಕೊಂಡಿಲ್ಲದ ಜಿಂಕೆಯಂತಾಗಿದ್ದಾರೆ. ಅವರು ಬಲಹೀನರಾಗಿ ಓಡಿಹೋದರು. ಬೆನ್ನಟ್ಟಿ ಬಂದ ಜನರಿಗೆ ಬೆಂಗೊಟ್ಟು ಓಡಿಹೋಗಿದ್ದಾರೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ6 ಚೀಯೋನ್ ಪುತ್ರಿಯ ಎಲ್ಲಾ ವೈಭವವು ಅವಳನ್ನು ಬಿಟ್ಟುಹೋಯಿತು. ಅವಳ ಪ್ರಧಾನರು ಹುಲ್ಲುಗಾವಲು ಕಾಣದ ಜಿಂಕೆಗಳ ಹಾಗಾದರು, ಅವರು ಹಿಂದಟ್ಟುವವನ ಮುಂದೆ ತ್ರಾಣವಿಲ್ಲದವರ ಹಾಗೆ ಓಡಿಹೋದರು. ಅಧ್ಯಾಯವನ್ನು ನೋಡಿ |