Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಲಾಪಗಳು 1:15 - ಕನ್ನಡ ಸತ್ಯವೇದವು C.L. Bible (BSI)

15 “ಸ್ವಾಮಿ ತೃಣೀಕರಿಸಿದನು ನನ್ನ ಶೂರರನ್ನೆಲ್ಲಾ ನನ್ನ ಕಣ್ಮುಂದೆಯೇ. ಸೈನ್ಯಸಮೂಹವನ್ನೆ ಬರಮಾಡಿದನು ನನ್ನ ಯುವಕರನ್ನು ಸದೆಬಡಿಯಲೆಂದೇ. ಯೆಹೂದಿಯೆಂಬ ಯುವತಿಯನ್ನು ತುಳಿಸಿದನು ತೊಟ್ಟಿಯಲ್ಲಿ ದ್ರಾಕ್ಷಿ ತುಳಿವಂತೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಕರ್ತನು ನನ್ನ ಶೂರರನ್ನೆಲ್ಲಾ ನನ್ನ ಕಣ್ಣೆದುರಿಗೆ ಹೊರಳಾಡಿಸಿದ್ದಾನೆ; ನನ್ನ ಯುವಕರನ್ನು ಸದೆಬಡಿದಿದ್ದಾನೆ. ನನ್ನ ಕೇಡಿಗಾಗಿಯೇ ಮಹೋತ್ಸವವನ್ನು ಏರ್ಪಡಿಸಿದ್ದಾನೆ; ಕರ್ತನು ಯೆಹೂದವೆಂಬ ಕನ್ಯೆಯನ್ನು ತೊಟ್ಟಿಯಲ್ಲಿನ ದ್ರಾಕ್ಷಿಯ ಹಾಗೆ ತುಳಿದಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಕರ್ತನು ನನ್ನ ಶೂರರನ್ನೆಲ್ಲಾ ನನ್ನ ಕಣ್ಣೆದುರಿಗೆ ತೃಣೀಕರಿಸಿದ್ದಾನೆ; ನನ್ನ ಯುವಕರನ್ನು ಭಂಗಪಡಿಸಬೇಕೆಂದು ನನ್ನ ಕೇಡಿಗಾಗಿಯೇ ಮಹೋತ್ಸವವನ್ನು ಏರ್ಪಡಿಸಿದ್ದಾನೆ; ಕರ್ತನು ಯೆಹೂದವೆಂಬ ಯುವತಿಯನ್ನು ತೊಟ್ಟಿಯಲ್ಲಿನ ದ್ರಾಕ್ಷೆಯ ಹಾಗೆ ತುಳಿದಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ನನ್ನ ಶೂರ ಸೈನಿಕರನ್ನೆಲ್ಲಾ ಯೆಹೋವನು ತಿರಸ್ಕರಿಸಿದ್ದಾನೆ. ಆ ಸೈನಿಕರು ನಗರದ ಒಳಭಾಗದಲ್ಲಿದ್ದರು. ಆಗ ಯೆಹೋವನು ನನ್ನ ವಿರುದ್ಧ ಒಂದು ಜನರ ಗುಂಪನ್ನು ತಂದನು. ಆತನು ನನ್ನ ತರುಣ ಸೈನಿಕರನ್ನು ಕೊಲ್ಲುವ ಸಲುವಾಗಿ ಆ ಜನರನ್ನು ತಂದನು. ಯೆಹೋವನು ದ್ರಾಕ್ಷಿಯನ್ನು ಆಲೆಯಲ್ಲಿ ತುಳಿದಿದ್ದಾನೆ. ಆ ದ್ರಾಕ್ಷಿಆಲೆಯು ಜೆರುಸಲೇಮ್ ಕನ್ನಿಕೆಗೆ ಸೇರಿದ್ದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಕರ್ತದೇವರು ನನ್ನ ಶೂರರನ್ನೆಲ್ಲಾ ತಿರಸ್ಕರಿಸಿದ್ದಾರೆ. ಅವರು ನನಗೆ ವಿರುದ್ಧ ಸೈನ್ಯವನ್ನು ಬರಮಾಡಿ, ನನ್ನ ಯುವಕರನ್ನು ಜಜ್ಜಿದ್ದಾರೆ. ಕರ್ತದೇವರು ಯೆಹೂದದ ಕನ್ಯೆಯನ್ನು ದ್ರಾಕ್ಷಿಯ ತೊಟ್ಟಿಯಂತೆ ತುಳಿದಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಲಾಪಗಳು 1:15
27 ತಿಳಿವುಗಳ ಹೋಲಿಕೆ  

ನಾನು ಕಾರ್ಯತತ್ಪರನಾಗುವ ದಿನದಂದು ನೀವು ದುಷ್ಟರನ್ನು ತುಳಿದುಬಿಡುವಿರಿ. ಅವರು ನಿಮ್ಮ ಕಾಲಡಿಯ ಧೂಳಿಯಾಗುವರು.” ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ.


“ದ್ರಾಕ್ಷಿಹಣ್ಣನು ತುಳಿವಂತೆ ತುಳಿದಿದ್ದೇನೆ ರಾಷ್ಟ್ರಗಳನು ಒಬ್ಬಂಟಿಗನಾಗೇ ಯಾರು ಇರಲಿಲ್ಲ ನನಗೆ ಸಹಾಯಕ್ಕೆ. ಅವರನ್ನು ತುಳಿದೆ ಕೋಪದಿಂದ ರೋಷಾವೇಶದಿಂದ ಹೊಸಕಿದೆ ಕಾಲಿನಿಂದ. ಅವರ ರಕ್ತ ನನ್ನ ಬಟ್ಟೆಗಳ ಮೇಲೆ ಸಿಡಿದಿದೆ. ನನ್ನ ಉಡುಪಿಗೆಲ್ಲಾ ಆ ಬಿಸಿರಕ್ತ ಮೆತ್ತಿಕೊಂಡಿದೆ.


ಮೃತ್ಯುವಿನೊಂದಿಗೆ ನೀವು ಮಾಡಿಕೊಂಡ ಒಪ್ಪಂದ ಬಿದ್ದುಹೋಗುವುದು. ಆ ಮಹಾವಿಪತ್ತು ನಾಡನ್ನು ಹಾದುಹೋಗುವಾಗ ನಿಮ್ಮನ್ನು ತುಳಿದುಹಾಕುವುದು.


ರಾಷ್ಟ್ರಗಳನ್ನು ಹೊಡೆದುರುಳಿಸುವಂಥ ಹರಿತವಾದ ಖಡ್ಗವೊಂದು ಆತನ ಬಾಯಿಂದ ಹೊರಟಿತು. ಆತನು ಕಬ್ಬಿಣದ ದಂಡದಿಂದ ಅವುಗಳ ಆಳ್ವಿಕೆ ನಡೆಸುವನು. ಸರ್ವಶಕ್ತ ದೇವರ ರೋಷವೆಂಬ ದ್ರಾಕ್ಷಿಯ ಆಲೆಯಲ್ಲಿ ಇರುವವರನ್ನು ತುಳಿದುಹಾಕುವನು.


ಹೀಗಿರುವಲ್ಲಿ, ದೇವರ ಪುತ್ರನನ್ನು ತುಚ್ಛೀಕರಿಸುವವನೂ ತನ್ನನ್ನು ಶುದ್ಧೀಕರಿಸಿದ ಹಾಗು ಒಡಂಬಡಿಕೆಯನ್ನು ಸ್ಥಿರಪಡಿಸುವ ರಕ್ತವನ್ನು ತೃಣೀಕರಿಸುವವನೂ ವರಪ್ರಸಾದವನ್ನು ತರುವ ಪವಿತ್ರಾತ್ಮ ಅವರನ್ನು ತಿರಸ್ಕರಿಸುವವನೂ ಎಂಥಾ ಕ್ರೂರದಂಡನೆಗೆ ಗುರಿ ಆಗುತ್ತಾನೆಂದು ನೀವೇ ಯೋಚಿಸಿನೋಡಿ!


ಕೆಲವರು ಕತ್ತಿಯ ಬಾಯಿಗೆ ತುತ್ತಾಗುವರು. ಮತ್ತೆ ಕೆಲವರು ಬಂಧಿತರಾಗಿ ದೇಶದೇಶಗಳಿಗೆ ಕೊಂಡೊಯ್ಯಲ್ಪಡುವರು; ಅನ್ಯದೇಶೀಯರು ತಮ್ಮ ಕಾಲಾವಧಿಯ ತನಕ ಜೆರುಸಲೇಮನ್ನು ತುಳಿದುಹಾಕುವರು.


ಇದನ್ನು ನನ್ನ ಶತ್ರುಗಳು ನೋಡುವರು. “ನಿನ್ನ ದೇವರಾದ ಸರ್ವೇಶ್ವರನೆಲ್ಲಿ?” ಎಂದು ನನ್ನನ್ನು ಜರೆದವರೇ ನಾಚಿಕೆಪಡುವರು. ಇದನ್ನು ನಾನು ಕಣ್ಣಾರೆ ಕಾಣುವೆನು. ಆ ಶತ್ರುಗಳಾದರೋ ಬೀದಿಯ ಕಸದಂತೆ ದಾರಿಹೋಕರ ತುಳಿತಕ್ಕೆ ಈಡಾಗುವರು.


ನೆಬೂಕದ್ನೆಚ್ಚರನು ಉಗ್ರಕೋಪಗೊಂಡು ಶದ್ರಕ್, ಮೇಶಕ್, ಅಬೇದ್‍ನೆಗೋ ಎಂಬವರನ್ನು ಹಿಡಿದುತರಲು ಆಜ್ಞಾಪಿಸಿದನು.


ಇಳೆಯ ಸೆರೆಯಾಳುಗಳನ್ನು ತುಳಿದುಬಿಡುವುದನ್ನೂ


ಬಾಬಿಲೋನಿಯದ ಅರಸ ನೆಬೂಕದ್ನೆಚ್ಚರನು ನನ್ನನ್ನು ಮುರಿದು ತಿಂದುಬಿಟ್ಟ ನನ್ನನ್ನು ಕುಡಿದು ಬಿಸಾಡಿದ ಪಾತ್ರೆಯನ್ನಾಗಿಸಿಬಿಟ್ಟ. ಘಟಸರ್ಪದ ಹಾಗೆ ನನ್ನನ್ನು ನುಂಗಿದ ನನ್ನ ರುಚಿಪದಾರ್ಥಗಳಿಂದ ಹೊಟ್ಟೆ ತುಂಬಿಸಿಕೊಂಡ ಮಿಕ್ಕಿದುದನ್ನೆಲ್ಲ ತೊಳೆದು ಎಸೆದುಬಿಟ್ಟ.


ಲೋಕದ ಕಟ್ಟಕಡೆಯಿಂದ ಬಾಬಿಲೋನಿಗೆ ಬನ್ನಿ. ಅದರ ಕಣಜಗಳನ್ನು ತೆರೆಯಿರಿ. ಆ ನಗರವನ್ನು ಹಾಳುದಿಬ್ಬವನ್ನಾಗಿ ಮಾಡಿ ಪೂರ್ತಿಯಾಗಿ ನಾಶಪಡಿಸಿರಿ. ಅದರಲ್ಲಿ ಏನೂ ಉಳಿಯದಿರಲಿ.


ದಾಳಿಮಾಡುವ ಆ ಬಾಬಿಲೋನಿಯರನ್ನು ನೀವು ಪೂರ್ತಿಯಾಗಿ ಸೋಲಿಸಿದರೂ, ಅವರಲ್ಲಿ ಗಾಯಗೊಂಡವರು ಮಾತ್ರ ನಿಮ್ಮಲ್ಲಿ ಉಳಿದರೂ, ಆ ಗಾಯಗೊಂಡವರೇ ತಮ್ಮ ತಮ್ಮ ಗುಡಾರಗಳಿಂದ ಎದ್ದುಬಂದು ಈ ನಗರವನ್ನು ಬೆಂಕಿಯಿಂದ ಸುಟ್ಟುಬಿಡುವರು.


ಆದರೆ ಈಗ ಅವರ ಮಕ್ಕಳು ಕ್ಷಾಮಕ್ಕೆ ಗುರಿಯಾಗಲಿ. ಕತ್ತಿಗೆ ತುತ್ತಾಗಲಿ. ಅವರ ಮಡದಿಯರು ವಿಧವೆಯರಾಗಲಿ, ಮಕ್ಕಳನ್ನು ಕಳೆದುಕೊಳ್ಳಲಿ, ಅವರ ಗಂಡಂದಿರು ಸತ್ತುಬೀಳಲಿ. ಯುವಕರು ಕಾಳಗ-ಕತ್ತಿಗೆ ಬಲಿಯಾಗಲಿ.


“ನೀನು ನಿನ್ನ ದುಃಖವನ್ನು ಅವರಿಗೆ ಹೀಗೆಂದು ವ್ಯಕ್ತಪಡಿಸು - ‘ರಾತ್ರಿಹಗಲು ನನ್ನ ಕಣ್ಣೀರು ಸುರಿಯಲಿ ನಿರಂತರವಾಗಿ ಏಕೆಂದರೆ ನನ್ನ ಜನವೆಂಬ ಯುವತಿ ಗಾಯಗೊಂಡಿದ್ದಾಳೆ ತೀವ್ರವಾಗಿ, ಹೌದು, ಅವಳಿಗೆ ಪೆಟ್ಟುಬಿದ್ದಿದೆ ಗಡುಸಾಗಿ.


ಕರೆತಂದವರಾರು ಆ ಪರಾಕ್ರಮಿಯನ್ನು ಪೂರ್ವದಿಂದ? ಅವನು ಗೆದ್ದುಬರುವಂತೆ ಮಾಡಿದವರಾರು ದಿಗ್ವಿಜಯದಿಂದ? ರಾಷ್ಟ್ರಗಳನ್ನು, ರಾಜರುಗಳನ್ನು ಸೋಲಿಸಿದವರಾರು ಅವನ ಕೈಯಿಂದ? ಧೂಳು ಧೂಳಾಗಿಸುತ್ತಾನೆ ಅವರನ್ನು ಅವನ ಖಡ್ಗದಿಂದ ಗಾಳಿಗೆ ತೂರಿಹೋಗುವ ಹುಲ್ಲನ್ನಾಗಿಸುತ್ತಾನೆ ಅವನ ಬಿಲ್ಲಿನಿಂದ.


ಕಿತ್ತೆಸೆಯುವೆನು ಅದರ ಬೇಲಿಯನು; ತುತ್ತಾಗುವುದದು ದನಕರುಗಳಿಗೆ. ಕೆಡವಿಹಾಕುವೆನು ಅದರ ಗೋಡೆಯನು; ಈಡಾಗುವುದದು ಪರರ ತುಳಿದಾಟಕ್ಕೆ.


ನಿಬಂಧನೆ ಮೀರಿದವರನು ತಿರಸ್ಕರಿಸುತಿ I ವ್ಯರ್ಥವಾದುದಾ ಜನರು ಹೂಡುವ ಕುಯುಕ್ತಿ II


ಅವನು ಅವರಿಗೆ, “ಆಕೆಯನ್ನು ಕೆಳಗೆ ದೊಬ್ಬಿರಿ,” ಎಂದು ಆಜ್ಞಾಪಿಸಲು ಅವರು ದೊಬ್ಬಿದರು. ಆಕೆಯ ರಕ್ತ ಗೋಡೆಗೂ ಕುದುರೆಗಳಿಗೂ ಸಿಡಿಯಿತು. ಅವನು ಆಕೆಯ ಶವವನ್ನು ತುಳಿಸಿಬಿಟ್ಟನು.


ಇವರು ಆ ವರ್ಷದಿಂದ ಹದಿನೆಂಟು ವರ್ಷಗಳವರೆಗೆ ಜೋರ್ಡನಿನ ಆಚೆ ಗಿಲ್ಯಾದಿನಲ್ಲಿದ್ದ ಇಸ್ರಯೇಲರನ್ನು ಬಹಳವಾಗಿ ಪೀಡಿಸುತ್ತಾ ಅವರ ಮೇಲೆ ದಬ್ಬಾಳಿಕೆ ನಡೆಸಿದರು. ಈ ನಾಡು ಮೊದಲು ಅಮೋರಿಯರದಾಗಿತ್ತು.


ನಿಮಗೆ ಗುರುತೇ ಇಲ್ಲದ ಜನಾಂಗದವರು ಬಂದು ನಿಮ್ಮ ನಾಡಿನ ಬೆಳೆಯನ್ನೂ ನಿಮ್ಮ ಕಷ್ಟಾರ್ಜಿತವನ್ನೂ ತಿಂದುಬಿಡುವರು. ನೀವಾದರೋ ನಿರಂತರ ಹಿಂಸೆಗೂ ಬಲಾತ್ಕಾರಕ್ಕೂ ಗುರಿಯಾಗುವಿರಿ.


ಆದಕಾರಣವೇ ನಿಮ್ಮ ಕೋಪ ನನ್ನಲ್ಲೂ ತುಂಬಿತುಳುಕುತ್ತಿದೆ. ಅದನ್ನು ತಡೆದು ನನಗೆ ಸಾಕಾಗಿದೆ,” ಎಂದೆನು. ಆಗ ಸರ್ವೇಶ್ವರ ನನಗೆ : “ಹಾಗಾದರೆ ಆ ಕೋಪವನ್ನು ಬೀದಿಯಲ್ಲಿನ ಮಕ್ಕಳ ಮೇಲೂ ಯುವಕರ ಕೂಟ಼ಗಳ ಮೇಲೂ ಕಾರಿಬಿಡು. ಗಂಡಹೆಂಡತಿಯರನ್ನೂ ಮುದುಕರನ್ನೂ ವಯೋವೃದ್ಧರನ್ನೂ ಅಪಹರಿಸಲಾಗುವುದು.


ಆದಕಾರಣ ಬಿರುಗಾಳಿ ಬಡಿದುಕೊಂಡುಹೋಗುವ ಒಣಹುಲ್ಲೋ ಎಂಬಂತೆ ಸರ್ವೇಶ್ವರನಾದ ನಾನು ನಿನ್ನನ್ನು ಚದರಿಸಿಬಿಡುವೆನು.


ಸ್ವಾಮಿಯ ಶೂರರೇ, ಕುಡುಗೋಲನ್ನು ಹಾಕಿರಿ; ಫಲ ಪಕ್ವವಾಗಿದೆ. ಬನ್ನಿ, ದ್ರಾಕ್ಷಿಯನ್ನು ತುಳಿಯಿರಿ; ಆಲೆಯು ಭರ್ತಿಯಾಗಿದೆ, ತೊಟ್ಟಿಗಳು ತುಂಬಿತುಳುಕುತ್ತಿವೆ; ರಾಷ್ಟ್ರಗಳ ದುಷ್ಟತನವು ಮಿತಿಮೀರಿದೆ.


ವಯಸ್ಕರೂ ವೃದ್ಧರೂ ಬಿದ್ದಿದ್ದಾರೆ ಬೀದಿಗಳಲ್ಲೆ ತರುಣತರುಣಿಯರು ತುತ್ತಾಗಿದ್ದಾರೆ ಖಡ್ಗಗಳಿಗೆ. ನಿನ್ನ ಪ್ರಕೋಪದ ದಿನದಂದು ಹತಮಾಡಿದೆಯಲ್ಲಾ ಅವರನ್ನು ಕನಿಕರಿಸದೆ !


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು