Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 6:2 - ಕನ್ನಡ ಸತ್ಯವೇದವು C.L. Bible (BSI)

2 ಆಗ ಬಿಳಿಯ ಕುದುರೆಯೊಂದು ಕಾಣಿಸಿತು. ಅದರ ಮೇಲೆ ಕುಳಿತಿದ್ದವನ ಕೈಯಲ್ಲಿ ಬಿಲ್ಲೊಂದು ಇತ್ತು. ಅವನಿಗೆ ಜಯಮಾಲೆಯನ್ನು ಹಾಕಲಾಗಿತ್ತು. ಅವನು ಜಯಪ್ರದನಾಗಿ, ಜಯದ ಮೇಲೆ ಜಯಗಳಿಸುವ ಸಲುವಾಗಿ ಹೊರಟುಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ನಾನು ನೋಡಲು ಇಗೋ ಒಂದು ಬಿಳಿ ಕುದುರೆ ಕಾಣಿಸಿತು. ಅದರ ಮೇಲೆ ಕುಳಿತಿದ್ದವನು ಕೈಯಲ್ಲಿ ಒಂದು ಬಿಲ್ಲನ್ನು ಹಿಡಿದಿದ್ದನು. ಅವನಿಗೆ ಒಂದು ಕಿರೀಟವು ಕೊಡಲ್ಪಟ್ಟಿತು. ಅವನು ಜಯಿಸುವವನಾಗಿ ಜಯಿಸುವುದಕ್ಕೋಸ್ಕರ ಹೊರಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಆಗ ಇಗೋ, ಒಂದು ಬಿಳಿ ಕುದುರೆ ಕಾಣಿಸಿತು; ಅದರ ಮೇಲೆ ಕೂತಿದ್ದವನ ಕೈಯಲ್ಲಿ ಬಿಲ್ಲು ಇತ್ತು; ಅವನಿಗೆ ಜಯಮಾಲೆ ಕೊಡಲ್ಪಟ್ಟಿತು; ಅವನು ಜಯಿಸುತ್ತಿರುವವನಾಗಿ ಜಯಿಸುವದಕ್ಕೋಸ್ಕರ ಹೊರಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ನಾನು ನೋಡಿದಾಗ ನನ್ನ ಮುಂದೆ ಒಂದು ಬಿಳಿ ಕುದುರೆಯಿರುವುದು ನನಗೆ ಕಾಣಿಸಿತು. ಕುದುರೆಯ ಮೇಲಿದ್ದ ಸವಾರನ ಕೈಯಲ್ಲಿ ಒಂದು ಬಿಲ್ಲು ಇತ್ತು. ಆ ಸವಾರನಿಗೆ ಒಂದು ಕಿರೀಟವನ್ನು ಕೊಡಲಾಯಿತು. ಅವನು ಶತ್ರುವನ್ನು ಸೋಲಿಸುತ್ತಾ ಜಯಗಳಿಸುವುದಕ್ಕಾಗಿ ಹೊರಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ನಾನು ನೋಡಲು, ಇಗೋ ಒಂದು ಬಿಳಿ ಕುದುರೆ ಕಾಣಿಸಿತು. ಅದರ ಸವಾರಿ ಮಾಡುವವನು ಒಂದು ಬಿಲ್ಲನ್ನು ಹಿಡಿದಿದ್ದನು. ಅವನಿಗೆ ಒಂದು ಕಿರೀಟವು ಕೊಡಲಾಗಿತ್ತು. ಅವನು ಜಯಿಸುವವನಾಗಿ ಜಯಿಸುವುದಕ್ಕೊಸ್ಕರ ಹೊರಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

2 ಥೈ ಎಕ್ ಫಾಂಡ್ರೆ ಘೊಡ್ಕೆ ಹೊತ್ತೆ ಮಿಯಾ ಬಗಟ್ಲೊ. ತ್ಯೆಚ್ಯಾ ವರ್ತಿ ಸವಾರಿ ಕರ್‍ತಲ್ಯಾಕ್ಡೆ ಬಿಲ್‍ಬಾನ್ ಹೊತ್ತೆ, ಅನಿ ತೆಕಾ ಎಕ್ ಮುಕುಟ್ ದಿಲ್ಲೆ ಹೊತ್ತೆ. ಎಕ್ ಜಿಕುನ್ ಯೆತಲ್ಯಾ ಸೈನಿಕಾಚ್ಯಾ ಬಾಸೆನ್ ತೊ ಸವಾರಿ ಕರುಕ್ ಲಾಗಲ್ಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 6:2
22 ತಿಳಿವುಗಳ ಹೋಲಿಕೆ  

ರಾತ್ರಿಯಲ್ಲಿ ನನಗೆ ಈ ದರ್ಶನವಾಯಿತು. ಇಗೋ, ಕೆಂಪು ಕುದುರೆಯನ್ನೇರಿದ್ದ ಒಬ್ಬ ವ್ಯಕ್ತಿ ತಗ್ಗಿನಲ್ಲಿರುವ ಸುಗಂಧ ವೃಕ್ಷಗಳ ನಡುವೆ ನಿಂತಿದ್ದಾನೆ. ಅವನ ಹಿಂದೆ ಕೆಂಪು, ನಸುಗೆಂಪು ಮತ್ತು ಬಿಳಿಯ ಕುದುರೆಗಳಿವೆ.


ನಾನು ಜಯಗಳಿಸಿ ನನ್ನ ತಂದೆಯೊಡನೆ ಅವರ ಸಿಂಹಾಸನದಲ್ಲಿ ಕುಳಿತುಕೊಂಡಿದ್ದೇನೆ. ಅದೇ ಪ್ರಕಾರ ಜಯಹೊಂದಿದವನಿಗೆ ನನ್ನೊಡನೆ ಸಿಂಹಾಸನದಲ್ಲಿ ಕುಳಿತುಕೊಳ್ಳುವ ಹಕ್ಕನ್ನು ನಾನು ಕೊಡುತ್ತೇನೆ.


ಅನಂತರ ನನ್ನ ಕಣ್ಣಿಗೆ ಒಂದು ಬಿಳಿಯ ಮೋಡ ಕಾಣಿಸಿತು. ಆ ಮೋಡದ ಮೇಲೆ ನರಪುತ್ರನಂಥ ವ್ಯಕ್ತಿಯೊಬ್ಬನು ಕುಳಿತಿದ್ದನು. ಆತನ ತಲೆಯ ಮೇಲೆ ಚಿನ್ನದ ಕಿರೀಟವಿತ್ತು; ಕೈಯಲ್ಲಿ ಹರಿತವಾದ ಕುಡುಗೋಲಿತ್ತು.


ಏಳನೆಯ ದೂತನು ತನ್ನ ತುತೂರಿಯನ್ನು ಊದಿದನು. ಆಗ ಸ್ವರ್ಗದಲ್ಲಿ ಮಹಾಶಬ್ದಗಳು ಉಂಟಾಗಿ ಹೀಗೆ ಮೊಳಗಿದವು : “ವಿಶ್ವವನ್ನಾಳುವ ಅಧಿಕಾರವು ನಮ್ಮ ಸರ್ವೇಶನದು ಹಾಗು ಅವರಿಂದ ಅಭಿಷಿಕ್ತನಾದ ಲೋಕೋದ್ಧಾರಕನದು. ಇನ್ನಾತನು ಆಳುವನು ಎಂದೆಂದಿಗೂ".


ಮರಣವನ್ನು ಶಾಶ್ವತವಾಗಿ ನಿರ್ನಾಮಮಾಡುವರು. ಸರ್ವೇಶ್ವರ ಸ್ವಾಮಿ ಎಲ್ಲರ ಕಣ್ಣೀರನ್ನು ಒರೆಸಿಬಿಡುವರು. ತಮ್ಮ ಪ್ರಜೆಗಾದ ಅವಮಾನವನ್ನು ಜಗದಿಂದಲೇ ತೊಲಗಿಸಿಬಿಡುವರು. ಸರ್ವೇಶ್ವರ ಸ್ವಾಮಿಯೇ ಇಂತೆಂದು ನುಡಿದಿದ್ದಾರೆ.


ಸಿಯೋನಿನ ಹೊರಗು ವಿಸ್ತರಿಸುವನು ಪ್ರಭು ನಿನ್ನ ರಾಜ್ಯದಾಳಿಕೆಯನು I ನಿನ್ನ ವೈರಿ ವಿರೋಧಿಗಳ ನಟ್ಟನಡುವೆಯೆ ದೊರೆತನ ಮಾಡುವೆ ನೀನು II


ಅವರು ಯಜ್ಞದ ಕುರಿಮರಿಯ ಮೇಲೆ ಯುದ್ಧಮಾಡುವರು. ಆದರೆ ಯಜ್ಞದ ಕುರಿಮರಿಗೆ ಜಯವಾಗುವುದು. ಆ ಕುರಿಮರಿಯು ಒಡೆಯರಿಗೆಲ್ಲಾ ಒಡೆಯನೂ ರಾಜಾಧಿರಾಜನೂ ಆಗಿರುವುದೇ ಇದಕ್ಕೆ ಕಾರಣ. ದೇವರ ಕರೆ ಹೊಂದಿದವರೂ ದೇವರು ಆಯ್ದುಕೊಂಡವರೂ ಆದ ಪ್ರಾಮಾಣಿಕ ಅನುಯಾಯಿಗಳು ಆ ಜಯದಲ್ಲಿ ಪಾಲುಗಾರರಾಗುವರು,” ಎಂದನು.


ಇದಲ್ಲದೆ, ಗಾಜಿನ ಸಮುದ್ರದಂತಿದ್ದ ಒಂದು ವಸ್ತು ಕಾಣಿಸಿತು; ಅದು ಬೆಂಕಿಯಿಂದ ಕೂಡಿತ್ತು. ಮೃಗದ ವಿರುದ್ಧ, ಅದರ ವಿಗ್ರಹದ ವಿರುದ್ಧ ಹಾಗೂ ಅದರ ಹೆಸರನ್ನು ಸೂಚಿಸುವ ಸಂಖ್ಯೆಯ ವಿರುದ್ಧ ಜಯಗಳಿಸಿದವರನ್ನು ಸಹ ಕಂಡೆ. ಅವರು ಗಾಜಿನ ಸಮುದ್ರದ ಬಳಿ ನಿಂತಿದ್ದರು; ಕೈಗಳಲ್ಲಿ ದೇವರಿತ್ತ ಕಿನ್ನರಿಗಳಿದ್ದವು.


ಕೆರಳಿದವು ವಿಶ್ವ ರಾಷ್ಟ್ರಗಳು ಎರಗಿತು ನಿನ್ನ ಪ್ರಕೋಪವು ಸಮೀಪಿಸಿತು ಮೃತರ ನ್ಯಾಯತೀರ್ಪಿನ ದಿನವು ಬಂದಿದೆ ಸಮಯ ಸನ್ಮಾನಿಸಲು ನಿನ್ನ ದಾಸರನು, ಪ್ರವಾದಿಗಳನು, ದೇವಪ್ರಜೆಗಳನು ನಿನ್ನಲ್ಲಿ ಭಯಭಕುತಿಯುಳ್ಳ ಹಿರಿಯ ಕಿರಿಯರನು. ಇದಿಗೋ ಬಂದಿದೆ ಗಳಿಗೆಯು ಲೋಕನಾಶಕರನ್ನು ವಿನಾಶಗೊಳಿಸಲು", ಎಂದು ಹಾಡಿದರು.


ಶತ್ರುಗಳೆಲ್ಲರನ್ನು ತಮ್ಮ ಪಾದಪೀಠವಾಗಿಸಿಕೊಳ್ಳುವ ತನಕ ಅವರು ರಾಜ್ಯವಾಳಬೇಕಾಗಿದೆ.


ಹಾಡಿರಿ ಪ್ರಭುವಿಗೆ ಹೊಸಗೀತೆಯೊಂದನು I ಎಸಗಿಹನಾತನು ಪವಾಡಕಾರ್ಯಗಳನು I ಗಳಿಸಿತಾತನ ಕೈ ಪೂತಭುಜ ಗೆಲುವನು II


ಸ್ವರ್ಗದ ಸೈನಿಕರು ಬಿಳಿಯ ಕುದುರೆಗಳನ್ನೇರಿ ಆತನನ್ನು ಹಿಂಬಾಲಿಸಿದರು. ಅವರು ಶುಭ್ರವಾದ ಬಿಳಿಯ ಸಮವಸ್ತ್ರಗಳನ್ನು ಧರಿಸಿದ್ದರು.


ಆಗ ಯೇಸು ಹತ್ತಿರಕ್ಕೆ ಬಂದು ಮಾತಾಡಿದರು: “ಭೂಮಿಯಲ್ಲೂ ಸ್ವರ್ಗದಲ್ಲೂ ಸರ್ವಾಧಿಕಾರವನ್ನು ನನಗೆ ಕೊಡಲಾಗಿದೆ.


ನೀನಾದರೋ ದೇವಾ, ಮಹಾಭಯಂಕರನು I ಸಿಟ್ಟೇರಿದ ನಿನ್ನ ಮುಂದೆ ಯಾವನು ನಿಂತಾನು? II


ಆ ಮಿಡತೆಗಳು ನೋಡುವುದಕ್ಕೆ ಸಮರಕ್ಕೆ ಸನ್ನದ್ಧರಾಗಿರುವ ಕುದುರೆಗಳಂತಿದ್ದವು. ಅವುಗಳ ತಲೆಯ ಮೇಲೆ ಚಿನ್ನದ ಕಿರೀಟವಿದ್ದಂತೆ ಕಾಣಿಸುತ್ತಿತ್ತು. ಮುಖಗಳು ಮನುಷ್ಯರ ಮುಖಗಳಂತೆ ಇದ್ದವು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು