Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 3:8 - ಕನ್ನಡ ಸತ್ಯವೇದವು C.L. Bible (BSI)

8 ನಾನು ನಿನ್ನ ಕೃತ್ಯಗಳನ್ನು ಬಲ್ಲೆ. ನಿನ್ನ ಎದುರಿನಲ್ಲಿ ಬಾಗಿಲೊಂದನ್ನು ತೆರೆದಿಟ್ಟಿದ್ದೇನೆ. ಅದನ್ನು ಮುಚ್ಚಲು ಯಾರಿಂದಲೂ ಸಾಧ್ಯವಾಗದು. ನಿನ್ನ ಶಕ್ತಿ ಅಲ್ಪವೆಂದು ನನಗೆ ಗೊತ್ತು. ಆದರೂ ನೀನು ನನ್ನನ್ನು ನಿರಾಕರಿಸದೆ ನನ್ನ ಉಪದೇಶವನ್ನು ಅನುಸರಿಸಿ ನಡೆದಿರುವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ನಿನ್ನ ಕೃತ್ಯಗಳನ್ನು ಬಲ್ಲೆನು. ನಿನಗಿರುವ ಶಕ್ತಿ ಕೊಂಚವಾಗಿದ್ದರೂ ನೀನು ನನ್ನ ಹೆಸರನ್ನು ನಿರಾಕರಿಸದೆ, ನನ್ನ ವಾಕ್ಯವನ್ನು ಕಾಪಾಡಿದ್ದರಿಂದ ಇಗೋ ನಿನ್ನೆದುರಿನಲ್ಲಿ ಒಂದು ಬಾಗಿಲನ್ನು ತೆರೆದಿಟ್ಟಿದ್ದೇನೆ. ಯಾರೂ ಅದನ್ನು ಮುಚ್ಚಲಾರರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ನಿನ್ನ ಕೃತ್ಯಗಳನ್ನು ಬಲ್ಲೆನು; ನಿನಗಿರುವ ಶಕ್ತಿ ಕೊಂಚವಾಗಿದ್ದರೂ ನೀನು ನನಗೆ ಸೇರಿದವನಲ್ಲವೆಂದು ಹೇಳದೆ ನನ್ನ ವಾಕ್ಯವನ್ನು ಕಾಪಾಡಿದ್ದರಿಂದ ಇಗೋ, ನಿನ್ನೆದುರಿನಲ್ಲಿ ಒಂದು ಬಾಗಿಲನ್ನು ತೆರೆದಿಟ್ಟಿದ್ದೇನೆ; ಯಾರೂ ಅದನ್ನು ಮುಚ್ಚಲಾರರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 “ನೀನು ಮಾಡುವ ಕಾರ್ಯಗಳು ನನಗೆ ತಿಳಿದಿವೆ. ನಿನ್ನ ಮುಂದೆ ತೆರೆದ ಬಾಗಿಲನ್ನು ಇಟ್ಟಿದ್ದೇನೆ. ಅದನ್ನು ಯಾರೂ ಮುಚ್ಚಲಾರರು. ನೀನು ದುರ್ಬಲನೆಂಬುದು ನನಗೆ ತಿಳಿದಿದೆ. ಆದರೆ ನೀನು ನನ್ನ ಬೋಧನೆಯನ್ನು ಅನುಸರಿಸಿದೆ. ನನ್ನ ಹೆಸರನ್ನು ಹೇಳಲು ನೀನು ಹಿಂಜರಿಯಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ನಾನು ನಿನ್ನ ಕ್ರಿಯೆಗಳನ್ನು ಬಲ್ಲೆನು. ನಿನ್ನ ಶಕ್ತಿಯು ಸ್ವಲ್ಪವೇ ಆಗಿದ್ದರೂ ನೀನು ನನ್ನ ಹೆಸರನ್ನು ನಿರಾಕರಿಸದೆ, ನನ್ನ ವಾಕ್ಯವನ್ನು ಕಾಪಾಡಿಕೊಂಡಿದ್ದರಿಂದ, ನಿನ್ನೆದುರಿನಲ್ಲಿ ಒಂದು ದ್ವಾರವನ್ನು ತೆರೆದಿಟ್ಟಿದ್ದೇನೆ, ಅದನ್ನು ಯಾರೂ ಮುಚ್ಚಲಾರರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

8 ತಿಯಾ ಕಾಯ್ ಕರ್ತೆ ಮನುನ್ ಮಾಕಾ ಗೊತ್ತ್ ಹಾಯ್. ತುಮ್ಕಾ ಉಲ್ಲೊ ಬಳ್ ಕಮಿ ಹಾಯ್, ತುಮಿ ಮಿಯಾ ಶಿಕ್ವಲ್ಲ್ಯಾ ಗೊಸ್ಟಿಯಾಂಚ್ಯಾ ಸರ್ಕೆ ಚಲುನ್; ಮಾಜಿ ಗೊಸ್ಟಿಯಾ ತಿರಸ್ಕಾರ್ ಕರುಕ್‍ನ್ಯಾಶಿ ಮಾಕಾ ವಿಶ್ವಾಸಾನ್ ರ್‍ಹಾಲ್ಯಾಶಿ ಮನುನ್ ಮಾಕಾ ಗೊತ್ತ್ ಹಾಯ್. ಮಿಯಾ ತುಮ್ಚ್ಯಾಸಾಟ್ನಿ ಎಕ್ ದಾರ್ ಉಗ್ಡುನ್ ಥವ್ಲಾ ತೆ ಕೊನಾಚ್ಯಾನ್‍ಬಿ ಧಾಪುಕ್ ಹೊಯ್ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 3:8
25 ತಿಳಿವುಗಳ ಹೋಲಿಕೆ  

ಇಲ್ಲಿ ಅನೇಕ ವಿರೋಧಿಗಳಿದ್ದರೂ ಶುಭಸಂದೇಶದ ಕಾರ್ಯವನ್ನು ಕೈಗೊಳ್ಳಲು ಮಹಾದ್ವಾರಗಳು ನನಗೆ ತೆರೆದಿವೆ.


ಕ್ರಿಸ್ತಯೇಸುವಿನ ರಹಸ್ಯವನ್ನು ಪ್ರಚುರಪಡಿಸಲು ನಮಗೆ ಅವಕಾಶ ದೊರಕುವಂತೆ ಪ್ರಾರ್ಥಿಸಿರಿ. ಈ ಶುಭಸಂದೇಶದ ನಿಮಿತ್ತವೇ ನಾನು ಸೆರೆಯಲ್ಲಿ ಇದ್ದೇನೆಂಬುದು ನಿಮಗೆ ತಿಳಿದಿದೆ. ನಾನು ಶುಭಸಂದೇಶವನ್ನು ಸ್ಪಷ್ಟವಾಗಿಯೂ ಸರಳವಾಗಿಯೂ ಸಾರುವಂತೆ ಪ್ರಾರ್ಥಿಸಿರಿ.


“ಫಿಲದೆಲ್ಫಿಯದಲ್ಲಿರುವ ಶ್ರೀಸಭೆಯ ದೂತನಿಗೆ ಹೀಗೆ ಬರೆ : ಸತ್ಯವಂತನೂ ಪರಿಶುದ್ಧನೂ ಆಗಿರುವಾತನು ನೀಡುವ ಸಂದೇಶವಿದು: ದಾವೀದನ ಮನೆತನದ ಬೀಗದ ಕೈ ನನ್ನಲ್ಲಿ ಇದೆ. ನಾನು ಬಾಗಿಲನ್ನು ತೆರೆದರೆ ಬೇರೆ ಯಾರೂ ಅದನ್ನು ಮುಚ್ಚಲಾಗದು. ನಾನು ಬಾಗಿಲನ್ನು ಮುಚ್ಚಿದರೆ ಬೇರೆ ಯಾರೂ ಅದನ್ನು ತೆರೆಯಲಾಗದು. ಈಗ ನಾನು ನಿನಗೆ ಹೇಳುವುದೇನೆಂದರೆ :


ಯೇಸುಕ್ರಿಸ್ತರ ಶುಭಸಂದೇಶವನ್ನು ಸಾರುವುದಕ್ಕೆ ನಾನು ತ್ರೋವಕ್ಕೆ ಬಂದಾಗ, ಪ್ರಭುವಿನ ಕೃಪೆಯಿಂದ ನನಗೆ ಸದವಕಾಶದ ಬಾಗಿಲು ತೆರೆದಿತ್ತು.


ಇಲ್ಲಿಗೆ ತಲುಪಿದ ಕೂಡಲೇ ಅವರು ಕ್ರೈಸ್ತಸಭೆಯನ್ನು ಒಟ್ಟುಗೂಡಿಸಿದರು. ದೇವರು ತಮ್ಮೊಡನೆ ಇದ್ದು ಸಾಧಿಸಿದ್ದೆಲ್ಲವನ್ನೂ ವರದಿಮಾಡಿದರು; ಅದೂ ಅಲ್ಲದೆ, ದೇವರು ಅನ್ಯಧರ್ಮೀಯರಿಗೆ ವಿಶ್ವಾಸದ ದ್ವಾರವನ್ನು ಹೇಗೆ ತೆರೆದರೆಂದು ವಿವರಿಸಿದರು.


ಸರ್ವೇಶನ ಶಕ್ತಿಯಿಂದ ಸರ್ವವನ್ನೂ ಸಾಧಿಸುವ ಸಾಮರ್ಥ್ಯ ನನಗಿದೆ.


ಆದರೆ ಯಾವನು ತಾನು ನನ್ನವನಲ್ಲ ಎಂದು ಜನರ ಮುಂದೆ ಬಹಿರಂಗವಾಗಿ ನಿರಾಕರಿಸುತ್ತಾನೋ, ಅವನನ್ನು ದೇವದೂತರ ಮುಂದೆ ನಿರಾಕರಿಸಲಾಗುವುದೆಂಬುದು ನಿಶ್ಚಯ.


ನಿನ್ನ ನಿವಾಸಸ್ಥಳವನ್ನು ನಾನು ಬಲ್ಲೆ. ಅದು ಸೈತಾನನ ಅಧಿಕಾರಸ್ಥಾನ. ಆದರೂ ನೀನು ನನ್ನ ನಾಮವನ್ನೇ ದೃಢವಾಗಿ ಆಶ್ರಯಿಸಿರುವೆ. ಸೈತಾನನ ಬಿಡಾರವಾದ ನಿನ್ನ ಆ ನಗರದಲ್ಲಿಯೇ ನನ್ನ ನಂಬಿಕಸ್ಥನೂ ಸಾಕ್ಷಿಯೂ ಆದ ಅಂತಿಪನನ್ನು ಕೊಂದುಹಾಕಿದರು. ಆ ದಿವಸಗಳಲ್ಲೂ ನೀನು ನನ್ನಲ್ಲಿಟ್ಟಿರುವ ವಿಶ್ವಾಸವನ್ನು ನಿರಾಕರಿಸಲಿಲ್ಲ.


“ನೀವು ಲೋಕದಿಂದ ಆರಿಸಿ ನನಗೆ ಕೊಟ್ಟ ಜನರಿಗೆ ನಿಮ್ಮ ನಾಮವನ್ನು ತಿಳಿಯಪಡಿಸಿದ್ದೇನೆ. ಇವರು ನಿಮ್ಮವರಾಗಿದ್ದರು. ಆದರೂ ಇವರನ್ನು ನನಗೆ ಕೊಟ್ಟಿರಿ. ನಿಮ್ಮ ಮಾತಿಗೆ ವಿಧೇಯರಾಗಿ ಇವರು ನಡೆದಿದ್ದಾರೆ.


ನಿನ್ನ ಕೃತ್ಯಗಳನ್ನು ನಾನು ಬಲ್ಲೆ. ನೀನು ತಣ್ಣಗೂ ಇಲ್ಲ, ಬಿಸಿಯಾಗೂ ಇಲ್ಲ. ನೀನು ತಣ್ಣಗಾಗಲಿ, ಬಿಸಿಯಾಗಲಿ ಇದ್ದಿದ್ದರೆ ಚೆನ್ನಾಗಿತ್ತು.


“ಯೇಸುಸ್ವಾಮಿ ನುಡಿಯುವುದನ್ನು ಕೇಳು : ‘ಇಗೋ ನಾನು ಬೇಗನೆ ಬರುತ್ತೇನೆ. ಈ ಪುಸ್ತಕದಲ್ಲಿ ಬರೆದಿರುವ ಪ್ರವಾದನಾವಾಕ್ಯಗಳನ್ನು ಕೈಗೊಂಡು ನಡೆಯುವವನು ಧನ್ಯನು!” ಎಂದು ಹೇಳಿದನು.


ಸೈರಣೆಯಿಂದಿರಬೇಕೆಂಬ ನನ್ನ ಉಪದೇಶವನ್ನು ನೀನು ಪಾಲಿಸಿದ್ದರಿಂದ ಭೂಲೋಕದ ನಿವಾಸಿಗಳೆಲ್ಲರನ್ನು ಪರಿಶೋಧಿಸಲೆಂದು ಇಡೀ ಜಗತ್ತಿನ ಮೇಲೆ ಬರಲಿರುವ ಕಡುಶೋಧನೆಯ ಕಾಲದಲ್ಲಿ ನಾನು ನಿನ್ನನ್ನು ಸುರಕ್ಷಿತವಾಗಿ ಕಾಪಾಡುತ್ತೇನೆ.


ಯಾರಾದರೂ ತನ್ನ ಸಂಬಂಧಿಕರನ್ನು, ವಿಶೇಷವಾಗಿ ಸ್ವಂತ ಕುಟುಂಬದವರನ್ನು ಸಂರಕ್ಷಿಸದೆಹೋದರೆ, ಅಂಥವನು ವಿಶ್ವಾಸಭ್ರಷ್ಟನೂ ಅವಿಶ್ವಾಸಿಗಳಿಗಿಂತ ತುಚ್ಛನಾದವನೂ ಆಗಿದ್ದಾನೆ.


ಬಾಳಿನ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ. ನನ್ನ ಓಟವನ್ನು ಮುಗಿಸಿದ್ದೇನೆ. ವಿಶ್ವಾಸವನ್ನು ಕಾಪಾಡಿಕೊಂಡಿದ್ದೇನೆ.


“ಸಾರ್ದಿಸ್‍ನಲ್ಲಿರುವ ಶ್ರೀಸಭೆಯ ದೂತನಿಗೆ ಹೀಗೆ ಬರೆ: ದೇವರ ಸಪ್ತ ಆತ್ಮಗಳನ್ನೂ ಸಪ್ತ ನಕ್ಷತ್ರಗಳನ್ನೂ ಹೊಂದಿರುವಾತನು ನೀಡುವ ಸಂದೇಶವಿದು: ನಿನ್ನ ಕೃತ್ಯಗಳನ್ನು ನೀನು ಬಲ್ಲೆ. ಹೆಸರಿಗೆ ಮಾತ್ರ ನೀನು ಜೀವಂತನಾಗಿರುವೆ. ಆದರೆ ವಾಸ್ತವವಾಗಿ ನೀನು ಸತ್ತಂತೆಯೇ ಸರಿ.


ನಾನು ನಿನ್ನ ಸುಕೃತ್ಯಗಳನ್ನು ಬಲ್ಲೆ. ನಿನ್ನ ಶ್ರಮಜೀವನವನ್ನು ಅರಿತು ಇದ್ದೇನೆ. ನಿನ್ನ ಸಹನಾಶಕ್ತಿಯನ್ನು ಮನಗಂಡಿದ್ದೇನೆ. ದುರ್ಜನರನ್ನು ನೀನು ಸಹಿಸಲಾರೆ ಎಂಬುದು ನನಗೆ ಗೊತ್ತು. ಪ್ರೇಷಿತರಲ್ಲದಿದ್ದರೂ ಪ್ರೇಷಿತರೆಂದು ಹೇಳಿಕೊಳ್ಳುವವರನ್ನು ನೀನು ಪರಿಶೋಧಿಸಿರುವೆ. ಅವರು ಸುಳ್ಳುಗಾರರೆಂಬುದನ್ನು ಕಂಡುಹಿಡಿದಿರುವೆ.


ಏಕೆಂದರೆ, ಕೆಲವರು ಕಳ್ಳತನದಿಂದ ನಿಮ್ಮ ಸಭೆಯೊಳಗೆ ಸೇರಿಕೊಂಡಿದ್ದಾರೆ. ಇವರು ಭಕ್ತಿಹೀನರು; ನಮ್ಮ ದೇವರ ಅನುಗ್ರಹದ ನೆವದಲ್ಲಿ ತಮ್ಮ ಕಾಮಾಭಿಲಾಷೆಗಳನ್ನು ಸಮರ್ಥಿಸಿಕೊಳ್ಳುತ್ತಿರುವವರು; ನಮ್ಮ ಏಕೈಕ ಒಡೆಯರೂ ಪ್ರಭುವೂ ಆದ ಯೇಸುಕ್ರಿಸ್ತರನ್ನು ನಿರಾಕರಿಸುವವರು. ಇಂಥವರಿಗೆ ದಂಡನೆಯಾಗಬೇಕೆಂದು ಬಹಳ ಹಿಂದೆಯೇ ಪವಿತ್ರಗ್ರಂಥದಲ್ಲಿ ಲಿಖಿತವಾಗಿದೆ.


ಧಣಿಗಿಂತಲೂ ದಾಸನು ದೊಡ್ಡವನಲ್ಲವೆಂದು ನಾನು ನಿಮಗೆ ಹೇಳಿದ್ದನ್ನು ನೆನಪಿಗೆ ತಂದುಕೊಳ್ಳಿ. ಅವರು ನನ್ನನ್ನು ಹಿಂಸೆಗೆ ಗುರಿಮಾಡಿದಂತೆ ನಿಮ್ಮನ್ನೂ ಹಿಂಸೆಗೆ ಗುರಿಮಾಡುವರು. ನನ್ನ ಬೋಧನೆಯ ಮಾತನ್ನು ಅವರು ಅನುಸರಿಸಿ ನಡೆದರೆ ನಿಮ್ಮ ಬೋಧನೆಯ ಮಾತನ್ನು ಅನುಸರಿಸಿ ನಡೆಯುವರು.


ಎಲ್ಲವೂ ಇದ್ದರೆ “ಸರ್ವೇಶ್ವರನು ಯಾರು?” ಎಂದು ನಿನ್ನನ್ನೆ ನಾನು ತಿರಸ್ಕರಿಸೇನು. ಬಡವನಾದರೆ ಕಳ್ಳತನಮಾಡಿ ನನ್ನ ದೇವರಾದ ನಿನ್ನ ಹೆಸರಿಗೆ ಅಪಕೀರ್ತಿ ತಂದೇನು.


ಹೀಗಾಗುವಾಗ ಅವರಿಗೆ ಅಲ್ಪಸ್ವಲ್ಪ ಸಹಾಯ ದೊರೆಯುವುದು. ಆ ಬಳಿಕ ಬಹುಮಂದಿ ನಯನವಿರಾದ ಮಾತುಗಳನ್ನಾಡುತ್ತಾ ಅವರನ್ನು ಸೇರಿಕೊಳ್ಳುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು