Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 3:10 - ಕನ್ನಡ ಸತ್ಯವೇದವು C.L. Bible (BSI)

10 ಸೈರಣೆಯಿಂದಿರಬೇಕೆಂಬ ನನ್ನ ಉಪದೇಶವನ್ನು ನೀನು ಪಾಲಿಸಿದ್ದರಿಂದ ಭೂಲೋಕದ ನಿವಾಸಿಗಳೆಲ್ಲರನ್ನು ಪರಿಶೋಧಿಸಲೆಂದು ಇಡೀ ಜಗತ್ತಿನ ಮೇಲೆ ಬರಲಿರುವ ಕಡುಶೋಧನೆಯ ಕಾಲದಲ್ಲಿ ನಾನು ನಿನ್ನನ್ನು ಸುರಕ್ಷಿತವಾಗಿ ಕಾಪಾಡುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಸೈರಣೆಯಿಂದಿರಬೇಕೆಂಬ ನನ್ನ ಆಜ್ಞೆಯನ್ನು ನೀನು ಪಾಲಿಸಿದ್ದರಿಂದ, ಭೂಲೋಕದ ನಿವಾಸಿಗಳೆಲ್ಲರನ್ನು ಪರೀಕ್ಷಿಸುವುದಕ್ಕಾಗಿ ಇಡೀ ಜಗತ್ತಿನ ಮೇಲೆ ಬರಲಿರುವ ಕಡುಶೋಧನೆಯ ಕಾಲದಲ್ಲಿ ನಾನು ನಿನ್ನನ್ನು ಸುರಕ್ಷಿತವಾಗಿ ಕಾಪಾಡುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ನೀನು ನನ್ನ ಸಹನವಾಕ್ಯವನ್ನು ಕಾಪಾಡಿದ್ದರಿಂದ ಭೂನಿವಾಸಿಗಳನ್ನು ಪರೀಕ್ಷಿಸುವದಕ್ಕಾಗಿ ಲೋಕದ ಮೇಲೆಲ್ಲಾ ಬರುವದಕ್ಕಿರುವ ಶೋಧನೆಯ ಸಮಯದಲ್ಲಿ ನಿನ್ನನ್ನು ತಪ್ಪಿಸಿ ಕಾಪಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ನೀನು ನನ್ನ ಆಜ್ಞೆಯನ್ನು ಸಹನೆಯಿಂದ ಮತ್ತು ತಾಳ್ಮೆಯಿಂದ ಅನುಸರಿಸಿದೆ. ಆದ್ದರಿಂದ ಈ ಲೋಕಕ್ಕೆಲ್ಲಾ ಉಂಟಾಗುವ ಕಡುಶೋಧನೆಯಿಂದ ನಾನು ನಿನ್ನನ್ನು ತಪ್ಪಿಸುತ್ತೇನೆ. ಭೂನಿವಾಸಿಗಳೆಲ್ಲರನ್ನು ಈ ಶೋಧನೆಯು ಪರಿಶೋಧಿಸುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ನೀನು ನನ್ನ ವಾಕ್ಯವನ್ನು ಸಹನೆಯಿಂದ ಕಾಪಾಡಿಕೊಂಡಿದ್ದರಿಂದ, ಭೂನಿವಾಸಿಗಳನ್ನು ಪರೀಕ್ಷಿಸಲು ಇಡೀ ಲೋಕದಲ್ಲೆಲ್ಲಾ ಬರಲಿರುವ ಶೋಧನೆಯ ಸಮಯದಲ್ಲಿ ನಾನು ಸಹ ನಿನ್ನನ್ನು ಸುರಕ್ಷಿತವಾಗಿಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

10 ಕಶ್ಯಾಕ್ ಮಟ್ಲ್ಯಾರ್ ಮಾಜೆ ಹುಕುಮ್ ಸಂಬಾಳುನ್ ಘೆವ್ನ್ ಥವ್ನ್ ಘೆಟ್ಲ್ಯಾಸಿ . ಹ್ಯಾ ಜಗಾತ್ಲ್ಯಾ ಸಗ್ಳ್ಯಾ ಲೊಕಾಂಚಿ ಪರಿಕ್ಷಾ ಕರುಕ್ ಮನುನ್ ಹ್ಯಾ ಜಗಾ ವರ್ತಿ ಯೆತಲ್ಯಾ ತರಾಸಾತ್ನಾಬಿ ಮಿಯಾ ತುಮ್ಕಾ ರಾಕುನ್ ಥವ್ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 3:10
30 ತಿಳಿವುಗಳ ಹೋಲಿಕೆ  

ಹೀಗೆ, ಸಜ್ಜನರನ್ನು ಸಂಕಟಶೋಧನೆಗಳಿಂದ ಸಂರಕ್ಷಿಸಲು, ದುರ್ಜನರನ್ನು ಅಂತಿಮ ನ್ಯಾಯತೀರ್ಪಿನ ದಿನದವರೆಗೂ ಶಿಕ್ಷಾವಸ್ಥೆಯಲ್ಲಿರಿಸಲು ಪ್ರಭುವಿಗೆ ತಿಳಿದಿದೆ.


ಆದ್ದರಿಂದ ದೇವರ ಆಜ್ಞೆಗಳನ್ನು ಕೈಗೊಂಡು ಯೇಸುಸ್ವಾಮಿಯಲ್ಲಿ ವಿಶ್ವಾಸವಿಟ್ಟು ನಡೆಯುವ ದೇವಜನರಲ್ಲಿ ಸಹನೆ, ಸಹಿಷ್ಣುತೆ ಇರಬೇಕು.


ಹಾಕುವೆನಾ ಮೂರನೇ ಭಾಗದವರನ್ನು ಬೆಂಕಿಗೆ, ಶೋಧಿಸುವೆನು ಅವರನ್ನು ಬೆಳ್ಳಿಯ ಹಾಗೆ. ಶುದ್ಧೀಕರಿಸುವೆನು ಬಂಗಾರದ ಹಾಗೆ. ಕಿವಿಗೊಡುವೆ ನನ್ನ ಹೆಸರೆತ್ತಿ ಪ್ರಾರ್ಥಿಸುವವರಿಗೆ. ಹೇಳುವೆನು, ‘ಇವರೇ ನನ್ನ ಪ್ರಜೆಯೆಂದು. ಹೇಳುವರವರು ‘ಸರ್ವೇಶ್ವರನೇ ನಮ್ಮ ದೇವ’ ಎಂದು.


ಅನೇಕರು ತಮ್ಮನ್ನು ಶುದ್ಧೀಕರಿಸಿ, ಶುಭ್ರಮಾಡಿಕೊಂಡು ಶೋಧಿತರಾಗುವರು. ದುಷ್ಟರು ದುಷ್ಟರಾಗಿಯೇ ನಡೆಯುವರು. ಅವರಲ್ಲಿ ಯಾರಿಗೂ ವಿವೇಕವಿರದು. ಬುದ್ಧಿವಂತರಿಗೆ ವಿವೇಕವಿರುವುದು.


ನಿನಗೆ ಬಂದೊದಗಲಿರುವ ಯಾತನೆಯಿಂದಾಗಿ ಎದೆಗುಂದಬೇಡ. ನೋಡು, ಪರಿಶೋಧನೆಗೆ ಗುರಿಯಾಗುವಂತೆ ನಿಮ್ಮಲ್ಲಿ ಕೆಲವರನ್ನು ಸೈತಾನನು ಸೆರೆಮನೆಗೆ ತಳ್ಳುವನು. ಹತ್ತು ದಿನಗಳು ನೀನು ಕಷ್ಟಸಂಕಟಗಳನ್ನು ಅನುಭವಿಸಬೇಕಾಗುವುದು; ಸಾಯಬೇಕಾಗಿ ಬಂದರೂ ಸ್ವಾಮಿನಿಷ್ಠೆಯಿಂದಿರು. ಆಗ ನಾನು ಜೀವವೆಂಬ ಜಯಮಾಲೆಯನ್ನು ನಿನಗೆ ಕೊಡುತ್ತೇನೆ.


ಮಾನವರಿಂದ ಜಯಿಸಲಾಗದ ಶೋಧನೆಗಳೇನೂ ನಿಮಗೆ ಬಂದಿಲ್ಲ. ದೇವರು ಕೊಟ್ಟಮಾತಿಗೆ ತಪ್ಪಲಾರರು. ಗೆಲ್ಲಲಾಗದ ಶೋಧನೆಗಳಿಗೆ ನಿಮ್ಮನ್ನೆಂದೂ ಗುರಿಪಡಿಸಲಾರರು. ಶೋಧನೆಗಳು ಬಂದಾಗ ಅವುಗಳನ್ನು ಸಹಿಸಿಕೊಳ್ಳುವ ಶಕ್ತಿಯನ್ನೂ ತಪ್ಪಿಸಿಕೊಳ್ಳುವ ಮಾರ್ಗವನ್ನೂ ಅವರೇ ಒದಗಿಸುತ್ತಾರೆ.


ಪ್ರಿಯರೇ, ಪರಿಶೋಧನೆಗೆಂದು ನಿಮಗೆ ಬಂದೊದಗಿರುವ ಅಗ್ನಿಪರೀಕ್ಷೆಗಾಗಿ ಆಶ್ಚರ್ಯಪಡಬೇಡಿ. ಅನಿರೀಕ್ಷಿತವಾಗಿ ಏನೋ ಸಂಭವಿಸಿಬಿಟ್ಟಿತೆಂದು ವಿಸ್ಮಯಪಡಬೇಡಿ.


ನಾನು ಯೊವಾನ್ನ, ನಿಮ್ಮ ಸಹೋದರ; ಕ್ರಿಸ್ತೇಸುವಿನಲ್ಲಿ ದೇವರ ಸಾಮ್ರಾಜ್ಯಕ್ಕೆ ಸೇರಿರುವವರಿಗೆ ಬಂದೊದಗುವ ಕಷ್ಟಸಂಕಟಗಳನ್ನು ತಾಳ್ಮೆಯಿಂದ ಸಹಿಸಿಕೊಳ್ಳುವುದರಲ್ಲಿ ನಿಮ್ಮ ಪಾಲುಗಾರ. ದೇವರ ವಾಕ್ಯವನ್ನು ಸಾರಿದುದರಿಂದಲೂ ಕ್ರಿಸ್ತೇಸುವಿಗೆ ಸಾಕ್ಷಿ ನೀಡಿದುದರಿಂದಲೂ ನಾನು ಪತ್ಮೋಸ್ ದ್ವೀಪವಾಸವನ್ನು ಅನುಭವಿಸಬೇಕಾಯಿತು.


ನಮ್ಮನ್ನು ಶೋಧನೆಗೆ ಒಳಪಡಿಸಬೇಡಿ; ಕೇಡಿನಿಂದ ನಮ್ಮನ್ನು ರಕ್ಷಿಸಿರಿ.’


ಸೆರೆಹಿಡಿಯುವವನು ತಾನೇ ಸೆರೆಗೆ ಹೋಗುವನು; ಖಡ್ಗದಿಂದ ಹತಿಸುವವನು ಖಡ್ಗದಿಂದಲೇ ಹತನಾಗಬೇಕು. ಆದ್ದರಿಂದ ದೇವಜನರು ಸಹನೆಯಿಂದಲೂ ವಿಶ್ವಾಸದಿಂದಲೂ ನಡೆದುಕೊಳ್ಳಬೇಕು.


ಎಂದೇ, ದೇವರು ಕೊಡುವ ಸಕಲ ಶಸ್ತ್ರಾಸ್ತ್ರಗಳೊಂದಿಗೆ ಸುಸಜ್ಜಿತರಾಗಿರಿ. ಆ ದುರ್ದಿನದಂದು ವೈರಿಗಳನ್ನು ಎದುರಿಸಲು ಆಗ ನೀವು ಶಕ್ತರಾಗುತ್ತೀರಿ. ಮಾತ್ರವಲ್ಲ, ಕಟ್ಟಕಡೆಯವರೆಗೆ ಹಿಮ್ಮೆಟ್ಟದೆ ನಿಲ್ಲುತ್ತೀರಿ;


ಎಲೈ ಭೂನಿವಾಸಿಗಳೇ, ಕೇಳಿರೆಲ್ಲರು, ಕಾದಿದೆ ನಿಮಗೆ ಭಯಭೀತಿ, ಕುಳಿ ಮತ್ತು ಬಲೆಯು.


ಅನಂತರ ಆಕಾಶಮಧ್ಯದಲ್ಲಿ ಒಂದು ಗರುಡ ಪಕ್ಷಿ ಹಾರಾಡುತ್ತಿರುವುದನ್ನು ನಾನು ಕಂಡೆ. ಅದರ ಕೂಗು ನನಗೆ ಕೇಳಿಸಿತು. ಅದು, “ಇನ್ನು ಉಳಿದ ಮೂವರು ದೇವದೂತರು ತುತೂರಿಯನ್ನು ಊದುವಾಗ ಭೂನಿವಾಸಿಗಳಿಗೆ ಕೇಡು, ಕೇಡು, ಕೇಡು,” ಎಂದು ಗಟ್ಟಿಯಾಗಿ ಕೂಗುತ್ತಿತ್ತು.


ಅವರು ಆರ್ತಧ್ವನಿಯಿಂದ, ‘ಸರ್ವಶಕ್ತ ಪ್ರಭುವೇ, ಸತ್ಯವಂತರೇ, ಪರಿಶುದ್ಧರೇ, ನಮ್ಮನ್ನು ಕೊಲೆಮಾಡಿದ ಭೂನಿವಾಸಿಗಳಿಗೆ ಇನ್ನೆಷ್ಟುಕಾಲ ನ್ಯಾಯವಿಚಾರಣೆ ಮಾಡದೆ, ಸೇಡನ್ನು ತೀರಿಸಿಕೊಳ್ಳದೆ ಇರುತ್ತೀರಿ?” ಎಂದು ಕೇಳಿದರು.


ನೀನು ಕಂಡ ಈ ಮೃಗ ಒಮ್ಮೆ ಇತ್ತು. ಆದರೆ ಈಗ ಇಲ್ಲ. ಅದು ಪಾತಾಳಕೂಪದಿಂದ ಬಂದು ವಿನಾಶದತ್ತ ತೆರಳುತ್ತದೆ. ಭೂನಿವಾಸಿಗಳಲ್ಲಿ ಲೋಕಾದಿಯಿಂದ ಜೀವಬಾಧ್ಯರ ಪಟ್ಟಿಯಲ್ಲಿ ಯಾರ ಯಾರ ಹೆಸರುಗಳನ್ನು ಬರೆದಿಲ್ಲವೋ ಅಂಥವರು ಅದನ್ನು ಕಂಡು ದಿಗ್ಭ್ರಮೆಗೊಳ್ಳುವರು. ಏಕೆಂದರೆ, ಈ ಮೃಗ ಒಮ್ಮೆ ಇತ್ತು, ಆದರೆ ಈಗ ಇಲ್ಲ. ಆದರೆ ಅದು ಮತ್ತೊಮ್ಮೆ ಬರಲಿದೆ.


ಮೊದಲನೆಯ ಮೃಗದ ಎದುರಿನಲ್ಲಿ ಪವಾಡಗಳನ್ನೆಸಗುವ ಅನುಮತಿ ಇದ್ದುದರಿಂದ ಅದು ಭೂನಿವಾಸಿಗಳನ್ನು ಮರುಳುಗೊಳಿಸಿತು. ಖಡ್ಗದಿಂದ ಗಾಯಗೊಂಡಿದ್ದರೂ ಸಾಯದೆ ಬದುಕಿದ್ದ ಮೃಗದ ಗೌರವಾರ್ಥ ಒಂದು ವಿಗ್ರಹವನ್ನು ನಿರ್ಮಿಸಬೇಕೆಂದು ಭೂನಿವಾಸಿಗಳಿಗೆ ಅದು ವಿಧಿಸಿತು.


ಭೂನಿವಾಸಿಗಳೆಲ್ಲರೂ ಅಂದರೆ, ಜಗತ್ತು ಸೃಷ್ಟಿ ಆಗುವ ಮೊದಲೇ ಯಾರಯಾರ ಹೆಸರುಗಳು ವಧೆಯಾದ ಯಜ್ಞದ ಕುರಿಮರಿಯಾದಾತನ ಬಳಿಯಲ್ಲಿರುವ ಜೀವಬಾಧ್ಯರ ಪಟ್ಟಿಯಲ್ಲಿ ಲಿಖಿತವಾಗಿಲ್ಲವೋ, ಅಂಥವರೆಲ್ಲರೂ ಆ ಮೃಗವನ್ನು ಆರಾಧಿಸುವರು.


ಪ್ರಲೋಭನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥನೆಮಾಡಿರಿ. ಆತ್ಮಕ್ಕೇನೊ ಆಸಕ್ತಿ ಇದೆ, ಆದರೆ ದೇಹಕ್ಕೆ ಶಕ್ತಿಸಾಲದು,” ಎಂದರು.


ಶ್ರೀಸಾಮ್ರಾಜ್ಯದ ಶುಭಸಂದೇಶವನ್ನು ಸರ್ವಜನಾಂಗಗಳಿಗೂ ಸಾಕ್ಷಿಯಾಗಿ ಜಗತ್ತಿನಲ್ಲೆಲ್ಲಾ ಪ್ರಬೋಧಿಸಲಾಗುವುದು. ಅಂತ್ಯವು ಬರುವುದು ಅನಂತರವೇ.


ಮೊಟ್ಟಮೊದಲನೆಯದಾಗಿ, ನಿಮ್ಮೆಲ್ಲರ ಪರವಾಗಿ ಯೇಸುಕ್ರಿಸ್ತರ ಮುಖಾಂತರ ನಾನು ನನ್ನ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಏಕೆಂದರೆ, ನಿಮ್ಮ ವಿಶ್ವಾಸ ಹಾಗು ವಿಧೇಯತೆ ಇಡೀ ಜಗತ್ತಿನಲ್ಲಿ ಪ್ರಖ್ಯಾತವಾಗಿದೆ.


ಭೂನಿವಾಸಿಗಳನ್ನು ಪೀಡಿಸಿದ್ದ ಆ ಇಬ್ಬರು ಪ್ರವಾದಿಗಳು ಸತ್ತದ್ದಕ್ಕಾಗಿ ಲೋಕದ ಜನರು ಸಂತೋಷದಿಂದ ಸಂಭ್ರಮಿಸುವರು. ಒಬ್ಬರಿಗೊಬ್ಬರು ಬಹುಮಾನಗಳನ್ನು ಹಂಚಿಕೊಳ್ಳುವರು.


ಜಗತ್ತಿನಾದ್ಯಂತ ಎಲ್ಲೆಲ್ಲಿ ಶುಭಸಂದೇಶವನ್ನು ಪ್ರಕಟಿಸಲಾಗುವುದೋ ಅಲ್ಲೆಲ್ಲಾ ಈ ಸತ್ಕಾರ್ಯವನ್ನು ಈಕೆಯ ಸವಿನೆನಪಿಗಾಗಿ ಸಾರಲಾಗುವುದು, ಇದು ನಿಶ್ಚಯ,” ಎಂದರು.


ಆ ಕಾಲದಲ್ಲಿ ಚಕ್ರವರ್ತಿ ಔಗುಸ್ತನು ತನ್ನ ಸಾಮ್ರಾಜ್ಯದಲ್ಲೆಲ್ಲಾ ಜನಗಣತಿಯಾಗಬೇಕೆಂದು ಆಜ್ಞೆ ಹೊರಡಿಸಿದನು.


ಅಂಜೂರದ ಮರ ಓಲಿವ್ ಹಣ್ಣನ್ನು ಕೊಡುವುದುಂಟೇ? ದ್ರಾಕ್ಷಿಯ ಬಳ್ಳಿಯಲ್ಲಿ ಅಂಜೂರ ಸಿಕ್ಕೀತೇ? ಎಂದಿಗೂ ಇಲ್ಲ. ಅಂತೆಯೇ ಸೌಳು ನೀರಿನ ಒರತೆಯಿಂದ ಸಿಹಿ ನೀರು ಬರುವುದಿಲ್ಲ.


“ನೀವು ಲೋಕದಿಂದ ಆರಿಸಿ ನನಗೆ ಕೊಟ್ಟ ಜನರಿಗೆ ನಿಮ್ಮ ನಾಮವನ್ನು ತಿಳಿಯಪಡಿಸಿದ್ದೇನೆ. ಇವರು ನಿಮ್ಮವರಾಗಿದ್ದರು. ಆದರೂ ಇವರನ್ನು ನನಗೆ ಕೊಟ್ಟಿರಿ. ನಿಮ್ಮ ಮಾತಿಗೆ ವಿಧೇಯರಾಗಿ ಇವರು ನಡೆದಿದ್ದಾರೆ.


ನಾವು ಆತನೊಡನೆ ಸತ್ತಿದ್ದರೆ, ಆತನೊಡನೆ ಜೀವಿಸುತ್ತೇವೆ; ಸೈರಣೆಯುಳ್ಳವರು ನಾವಾದರೆ, ಆತನೊಡನೆ ರಾಜ್ಯವಾಳುತ್ತೇವೆ; ನಾವಾತನನು ನಿರಾಕರಿಸಿದರೆ, ನಮ್ಮನ್ನಾತನು ನಿರಾಕರಿಸುತ್ತಾನೆ.


ನಾನು ನಿನ್ನ ಕೃತ್ಯಗಳನ್ನು ಬಲ್ಲೆ. ನಿನ್ನ ಎದುರಿನಲ್ಲಿ ಬಾಗಿಲೊಂದನ್ನು ತೆರೆದಿಟ್ಟಿದ್ದೇನೆ. ಅದನ್ನು ಮುಚ್ಚಲು ಯಾರಿಂದಲೂ ಸಾಧ್ಯವಾಗದು. ನಿನ್ನ ಶಕ್ತಿ ಅಲ್ಪವೆಂದು ನನಗೆ ಗೊತ್ತು. ಆದರೂ ನೀನು ನನ್ನನ್ನು ನಿರಾಕರಿಸದೆ ನನ್ನ ಉಪದೇಶವನ್ನು ಅನುಸರಿಸಿ ನಡೆದಿರುವೆ.


ಮತ್ತೊಬ್ಬ ದೇವದೂತನು ಆಕಾಶ ಮಧ್ಯದಲ್ಲಿ ಹಾರುತ್ತಿರುವುದನ್ನು ಕಂಡೆ. ಸಕಲ ದೇಶ, ಭಾಷೆ, ಕುಲ, ಗೋತ್ರದ ಜನರಿಗೂ ಸಾರಬೇಕಾದ ಅಮರ ಸಂದೇಶ ಆತನಲ್ಲಿತ್ತು.


ಇವು ಪವಾಡ ಕಾರ್ಯಗಳನ್ನು ಎಸಗುವ ದೆವ್ವಾತ್ಮಗಳು. ಸರ್ವಶಕ್ತ ದೇವರ ಮಹಾದಿನದಲ್ಲಿ ನಡೆಯುವ ಯುದ್ಧಕ್ಕಾಗಿ ಭೂಲೋಕದ ರಾಜರುಗಳನ್ನೆಲ್ಲಾ ಒಟ್ಟುಗೂಡಿಸಲು ಅವು ಹೊರಟವು.


ಭೂರಾಜರು ಅವಳೊಂದಿಗೆ ಹಾದರ ಮಾಡಿದರು. ಭೂನಿವಾಸಿಗಳು ಅವಳ ಹಾದರವೆಂಬ ಮದ್ಯಸೇವಿಸಿ ಮತ್ತರಾದರು,” ಎಂದು ಹೇಳಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು