Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 21:21 - ಕನ್ನಡ ಸತ್ಯವೇದವು C.L. Bible (BSI)

21 ಹನ್ನೆರಡು ಹೆಬ್ಬಾಗಿಲುಗಳು ಹನ್ನೆರಡು ಮುತ್ತುಗಳಾಗಿದ್ದವು. ಪ್ರತಿಯೊಂದು ಹೆಬ್ಬಾಗಿಲನ್ನು ಒಂದೊಂದು ಮುತ್ತಿನಿಂದ ಮಾಡಲಾಗಿತ್ತು. ನಗರದ ಬೀದಿ ಸ್ವಚ್ಛವಾದ ಗಾಜಿನಂತಿರುವ ಅಪ್ಪಟ ಬಂಗಾರವಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಹನ್ನೆರಡು ಹೆಬ್ಬಾಗಿಲುಗಳು ಹನ್ನೆರಡು ಮುತ್ತುಗಳಾಗಿದ್ದವು. ಪ್ರತಿ ಹೆಬ್ಬಾಗಿಲೂ ಒಂದೊಂದು ಮುತ್ತಿನಿಂದ ಮಾಡಲ್ಪಟ್ಟಿತ್ತು. ಪಟ್ಟಣದ ಬೀದಿಯು ಶುದ್ಧವಾದ ಗಾಜಿನಂತಿರುವ ಅಪ್ಪಟ ಬಂಗಾರವಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಹನ್ನೆರಡು ಹೆಬ್ಬಾಗಿಲುಗಳು ಹನ್ನೆರಡು ಮುತ್ತುಗಳಾಗಿದ್ದವು; ಒಂದೊಂದು ಬಾಗಿಲು ಒಂದೊಂದು ಮುತ್ತಿನಿಂದ ಮಾಡಲ್ಪಟ್ಟಿತ್ತು. ಪಟ್ಟಣದ ಬೀದಿಯು ಸ್ವಚ್ಫವಾದ ಗಾಜಿನಂತಿರುವ ಸೋಸಿದ ಬಂಗಾರವಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ಹನ್ನೆರಡು ಬಾಗಿಲುಗಳು ಹನ್ನೆರಡು ಮುತ್ತುಗಳಾಗಿದ್ದವು. ಪ್ರತಿಯೊಂದು ಬಾಗಿಲು ಒಂದೊಂದು ಮುತ್ತಿನಿಂದ ಮಾಡಲ್ಪಟ್ಟಿತ್ತು. ನಗರದ ಬೀದಿಯು ಗಾಜಿನಂತೆ ಶುಭ್ರವಾಗಿದ್ದ ಅಪ್ಪಟ ಚಿನ್ನದಿಂದ ಮಾಡಲ್ಪಟ್ಟಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 ಹನ್ನೆರಡು ಹೆಬ್ಬಾಗಿಲುಗಳು ಹನ್ನೆರಡು ಮುತ್ತುಗಳಾಗಿದ್ದವು. ಪ್ರತಿ ಹೆಬ್ಬಾಗಿಲೂ ಒಂದೊಂದು ಮುತ್ತಿನಿಂದಾಗಿತ್ತು. ಪಟ್ಟಣದ ಮಹಾ ಬೀದಿಯು ಸ್ವಚ್ಛವಾದ ಗಾಜಿನಂತಿರುವ ಅಪ್ಪಟ ಬಂಗಾರವಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

21 ಬಾರಾ ದಾರಾ ಬಾರಾ ಮೊತಿಯಾ ಹೊವ್ನ್ ಹೊತ್ತಿ; ಹರಿಎಕ್ ದಾರ್ ಎಕೆಕ್ ಅಖಂಡ್ ಮೊತಿನಿ ಕರಲ್ಲೆ ಹೊತ್ತೆ. ಶಾರಾಚ್ಯಾ ವನಿಯಾ ಎಗ್ದಮ್ ಪವಿತ್ರ್ ಹೊತ್ತ್ಯಾ ಸೊನ್ಯಾನಿ ಕರಲ್ಲ್ಯಾ ಹೊತ್ತ್ಯಾ ಕಾಜೆಚ್ಯಾ ಬಾಸೆನ್ ಹಿಕು-ತಿಕುಲ್ಯಾ ಬಾಜುಚೆ ದಿಸುಚೆ ತಸೆ ಹೊತ್ತೆ .

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 21:21
10 ತಿಳಿವುಗಳ ಹೋಲಿಕೆ  

ಆ ಕೋಟೆಯನ್ನು ಸೂರ್ಯಕಾಂತ ಶಿಲೆಯಿಂದ ನಿರ್ಮಿಸಲಾಗಿತ್ತು. ನಗರವು ಅಪ್ಪಟ ಬಂಗಾರದಂತೆ ಥಳಥಳಿಸುತ್ತಿತ್ತು.


ಆ ಸ್ತ್ರೀ ಕೆನ್ನೀಲಿಯ ಹಾಗೂ ಕಡುಗೆಂಪಾದ ಬಟ್ಟೆಯನ್ನು ಧರಿಸಿದ್ದಳು; ಚಿನ್ನ, ಮುತ್ತು, ರತ್ನಾಭರಣಗಳಿಂದ ಅಲಂಕೃತಳಾಗಿದ್ದಳು. ಕೈಯಲ್ಲಿ ಚಿನ್ನದ ಪಾತ್ರೆಯನ್ನೂ ಹಿಡಿದಿದ್ದಳು. ಅವಳ ಹಾದರದ ಅಸಹ್ಯಗಳಿಂದಲೂ ಕಳಂಕಗಳಿಂದಲೂ ಅದು ತುಂಬಿತ್ತು.


ನಗರದ ಹೆದ್ದಾರಿಯ ಮಧ್ಯದಲ್ಲಿ ಹರಿಯುತ್ತಿತ್ತು. ಆ ನದಿಯ ಎರಡು ದಡಗಳಲ್ಲೂ ಜೀವವೃಕ್ಷವಿತ್ತು. ಅದು ವರ್ಷದಲ್ಲಿ ಹನ್ನೆರಡು ಸಾರಿ ಫಲಕೊಡುವಂಥದ್ದು; ಪ್ರತೀ ತಿಂಗಳೂ ಫಸಲನ್ನೀಯುವಂಥದ್ದು. ಆ ವೃಕ್ಷದ ಎಲೆಗಳನ್ನು ರಾಷ್ಟ್ರಗಳಿಗೆ ಸಿದ್ದೌಷಧಿಯನ್ನಾಗಿ ಉಪಯೋಗಿಸಲಾಗುವುದು.


“ಅಯ್ಯೋ ! ಅಯ್ಯೋ ! ಮಹಾನಗರಿ ನಿನಗೆಂಥಾ ದುರ್ಗತಿ ! ಕೆನ್ನೀಲಿಯ ಕಡುಗೆಂಪಿನ ನಯವಸ್ತ್ರಗಳನುಟ್ಟವಳೇ, ಹೊನ್ನ ತೊಟ್ಟವಳೇ, ಮತ್ತು ರತ್ನಾಭರಣಗಳನು ಧರಿಸಿದವಳೇ, ತಾಸೊಂದರಲೇ ನಿನ್ನ ಐಸಿರಿಯೆಲ್ಲಾ ವ್ಯರ್ಥವಾಯಿತೇ!” ಎಂದು ದುಃಖಿಸಿ ಅತ್ತು ಗೋಳಾಡುವರು.


ಆ ಗರ್ಭಗುಡಿ 9 ಮೀಟರ್ ಉದ್ದ, 9 ಮೀಟರ್ ಅಗಲ, 9 ಮೀಟರ್ ಎತ್ತರ ಇತ್ತು. ಅದನ್ನು ಚೊಕ್ಕ ಬಂಗಾರದ ತಗಡಿನಿಂದಲೂ ವೇದಿಯನ್ನು ದೇವದಾರುಮರದಿಂದಲೂ ಹೊದಿಸಿದನು.


ಇದಲ್ಲದೆ, ಸಿಂಹಾಸನದ ಮುಂದೆ ಸ್ಫಟಿಕದಂಥ ಗಾಜಿನ ಸಮುದ್ರವೊಂದು ಇದ್ದಂತೆ ಕಂಡುಬಂದಿತು. ಸಿಂಹಾಸನದ ಸುತ್ತಲೂ ಅದರ ನಾಲ್ಕು ಪಾರ್ಶ್ವಗಳಲ್ಲಿ ನಾಲ್ಕು ಜೀವಿಗಳು ಇದ್ದವು. ಅವುಗಳಿಗೆ ಮುಂದೆಯೂ ಹಿಂದೆಯೂ ಅನೇಕ ಕಣ್ಣುಗಳಿದ್ದವು.


ನನ್ನೊಡನೆ ಮಾತನಾಡುತ್ತಿದ್ದ ದೇವದೂತನು ಆ ನಗರವನ್ನೂ ಅದರ ಹೆಬ್ಬಾಗಿಲುಗಳನ್ನೂ ಕೋಟೆಗಳನ್ನೂ ಅಳತೆಮಾಡುವುದಕ್ಕಾಗಿ ಒಂದು ಚಿನ್ನದ ಅಳತೆಗೋಲನ್ನು ಹಿಡಿದಿದ್ದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು