Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 20:9 - ಕನ್ನಡ ಸತ್ಯವೇದವು C.L. Bible (BSI)

9 ಅವರು ದೇಶದಲ್ಲೆಲ್ಲಾ ಹರಡಿಕೊಂಡು ದೇವಜನರ ಪಾಳೆಯಕ್ಕೂ ದೇವರ ಪ್ರಿಯ ಪಟ್ಟಣಕ್ಕೂ ಮುತ್ತಿಗೆ ಹಾಕಿದರು. ಆಗ ಸ್ವರ್ಗದಿಂದ ಬೆಂಕಿ ಇಳಿದುಬಂದು ಅವರನ್ನು ದಹಿಸಿಬಿಟ್ಟಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಅವರು ಭೂಮಿಯಲ್ಲೆಲ್ಲಾ ಹರಡಿಕೊಂಡು ದೇವಜನರ ಪಾಳೆಯಕ್ಕೂ ಆ ಪ್ರಿಯ ಪಟ್ಟಣಕ್ಕೂ ಮುತ್ತಿಗೆ ಹಾಕುವರು. ಆದರೆ ಪರಲೋಕದಿಂದ ಬೆಂಕಿ ಇಳಿದು ಬಂದು ಅವರನ್ನು ದಹಿಸಿಬಿಡುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಅವರು ದೇಶದಲ್ಲೆಲ್ಲಾ ಹರಡಿಕೊಂಡು ದೇವಜನರ ದಂಡಿಗೂ ನಮ್ಮ ಪ್ರಿಯ ಪಟ್ಟಣಕ್ಕೂ ಮುತ್ತಿಗೆಹಾಕಿದರು. ಆಗ ಪರಲೋಕದಿಂದ ಬೆಂಕಿ ಇಳಿದು ಬಂದು ಅವರನ್ನು ದಹಿಸಿಬಿಟ್ಟಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಸೈತಾನನ ಸೈನ್ಯವು ಭೂಮಿಯಲ್ಲೆಲ್ಲಾ ಶಿಸ್ತಿನಿಂದ ನಡೆದಾಡಿ ದೇವಜನರ ಶಿಬಿರದ ಸುತ್ತಲೂ ದೇವರ ಪ್ರಿಯ ನಗರದ ಸುತ್ತಲೂ ಒಟ್ಟುಗೂಡಿದರು. ಆದರೆ ಪರಲೋಕದಿಂದ ಇಳಿದು ಬಂದ ಬೆಂಕಿಯು ಸೈತಾನನ ಸೈನ್ಯವನ್ನು ನಾಶಗೊಳಿಸಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಅವರು ದೇಶದಲ್ಲೆಲ್ಲಾ ಹರಡಿಕೊಂಡು ಪರಿಶುದ್ಧರ ದಂಡಿಗೂ ಆ ಪ್ರಿಯಪಟ್ಟಣಕ್ಕೂ ಮುತ್ತಿಗೆ ಹಾಕಿದರು. ಆಗ ಪರಲೋಕದಿಂದ ಬೆಂಕಿ ಬಿದ್ದು ಅವರನ್ನು ದಹಿಸಿಬಿಟ್ಟಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

9 ತೆನಿ ಸಗ್ಳ್ಯಾ ಜಗಾತ್ ಪಗಳ್ತ್ಯಾತ್, ಅನಿ ದೆವಾಚಿ ಸೈನಿಕಾ ರ್‍ಹಾತಲ್ಯಾ ಜಾಗ್ಯಾಕ್ನಿ, ಅನಿ ತ್ಯೆಚ್ಯಾ ಪ್ರೆಮಾಚ್ಯಾ ಶಾರಾಚ್ಯಾ ಭೊತ್ಯಾನಿ ಘೆರ್ ಘಾಲುನ್ ಇಬೆ ರ್‍ಹಾತ್ಯಾತ್. ಖರೆ ಸರ್‍ಗಾ ವೈನಾ ಆಗ್ ಯೆತಾ ಅನಿ ತೆಂಕಾ ನಾಸ್ ಕರುನ್ ಟಾಕ್ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 20:9
33 ತಿಳಿವುಗಳ ಹೋಲಿಕೆ  

ನನ್ನ ಜನರಾದ ಇಸ್ರಯೇಲರ ಮೇಲೆ ಬಿದ್ದು ಕಾರ್ಮುಗಿಲಿನಂತೆ ದೇಶವನ್ನು ಮುಚ್ಚಿಬಿಡುವೆ. ಗೋಗನೇ, ಜನಾಂಗಗಳ ಕಣ್ಣೆದುರಿಗೆ ನಿನ್ನ ನಾಶದಿಂದ ನನ್ನ ಗೌರವವನ್ನು ಕಾಪಾಡಿಕೊಂಡು, ನಾನೇ ಸರ್ವೇಶ್ವರ ಎಂದು ಜನಾಂಗಗಳಿಗೆ ಗೋಚರನಾಗುವಂತೆ ನಾನು ನಿನ್ನನ್ನು ಕಾಲಾನುಕಾಲಕ್ಕೆ ನನ್ನ ನಾಡಿನ ಮೇಲೆ ಬೀಳಮಾಡುವೆನು.


ನಾನು ಮಾಗೋಗ್ ದೇಶದ ಮೇಲೂ ಕರಾವಳಿಯ ಸೀಮೆಗಳಲ್ಲಿ ನಿರ್ಭಯವಾಗಿ ವಾಸಿಸುವವರ ಮೇಲೂ ಬೆಂಕಿಯನ್ನು ಕಳುಹಿಸುವೆನು; ಆಗ ನಾನೇ ಸರ್ವೇಶ್ವರ ಎಂದು ಅವರಿಗೆ ನಿಶ್ಚಿತವಾಗುವುದು.


ನಾನು ಗೋಗನ ಸಂಗಡ ವ್ಯಾಜ್ಯವಾಡುತ್ತಾ ಅವನನ್ನು ವ್ಯಾಧಿಗೂ ವಧೆಗೂ ಗುರಿಮಾಡುವೆನು. ಅವನ ಮೇಲೂ ಅವನ ಪಡೆಗಳ ಮೇಲೂ ಅವನೊಂದಿಗಿರುವ ಬಹು ಜನಾಂಗಗಳ ಮೇಲೂ ವಿಪರೀತ ಮಳೆ, ದೊಡ್ಡ ದೊಡ್ಡ ಆನೆಕಲ್ಲು, ಬೆಂಕಿ, ಗಂಧಕ, ಇವುಗಳನ್ನು ಸುರಿಸುವೆನು.


ನೀನೂ ನಿನ್ನ ಎಲ್ಲ ಪಡೆಗಳೂ ನಿನ್ನೊಂದಿಗಿರುವ ಬಹು ಜನಾಂಗಗಳೂ ಬಿರುಗಾಳಿಯಂತೆ ಹೊರಟುಬರುವಿರಿ; ಕಾರ್ಮುಗಿಲಿನಂತೆ ದೇಶವನ್ನು ಮುಚ್ಚಿಬಿಡುವಿರಿ.’


ಆ ಜನರ ಮಧ್ಯದಲಿ ಬೆಂಕಿ ಹಬ್ಬಿತು I ಅಗ್ನಿಜ್ವಾಲೆ ದಹಿಸಿಬಿಟ್ಟಿತು ಆ ದುಷ್ಟರನು II


ಚಲಿಸುತ್ತಿದೆ ಬೆಂಕಿ ಆತನ ಮುಂದುಗಡೆ I ಸುಡುತ್ತದೆ ಆತನ ವೈರಿಗಳನು ಎಲ್ಲೆಡೆ II


ಎರಡನೆಯ ಮೃಗವು ದೊಡ್ಡ ದೊಡ್ಡ ಪವಾಡಗಳನ್ನೆಸಗಿತು. ಜನರ ಮುಂದೆಯೇ ಬೆಂಕಿ ಆಕಾಶದಿಂದ ಹೊರಟು ಭೂಮಿಗೆ ಬೀಳುವಂತೆ ಮಾಡಿತು.


ಯಾವನಾದರು ಇವರಿಗೆ ಕೇಡು ಬಗೆದರೆ ಇವರ ಬಾಯಿಯಿಂದ ಬೆಂಕಿ ಹೊರಟು ಇವರ ಶತ್ರುಗಳನ್ನು ದಹಿಸಿಬಿಡುತ್ತದೆ. ಇವರಿಗೆ ಕೇಡು ಬಗೆಯಬೇಕೆಂದಿರುವವನು ಹೀಗೆಯೇ ಹತನಾಗುತ್ತಾನೆ.


ಲೋತನು ಸೊದೋಮ್ ಊರನ್ನು ಬಿಟ್ಟು ತೆರಳಿದ ದಿನದಂದೇ ಆಕಾಶದಿಂದ ಅಗ್ನಿ ಮತ್ತು ಗಂಧಕದ ಮಳೆ ಸುರಿದು ಎಲ್ಲರನ್ನು ನಾಶಮಾಡಿತು.


ಇದನ್ನು ಕಂಡು ಶಿಷ್ಯರಾದ ಯಕೋಬ ಮತ್ತು ಯೊವಾನ್ನ, “ಪ್ರಭೂ, ಆಕಾಶದಿಂದ ಅಗ್ನಿಮಳೆ ಸುರಿದು ಇವರನ್ನು ನಾಶಮಾಡಲಿ ಎಂದು ಆಜ್ಞೆಮಾಡಬಹುದಲ್ಲವೇ?” ಎಂದರು.


ಆಗ ಸರ್ವೇಶ್ವರ ಸ್ವಾಮಿಯ ದೂತನು ಹೊರಟುಬಂದು ಅಸ್ಸೀರಿಯರ ಪಾಳೆಯದಲ್ಲಿ 185,000 ಮಂದಿ ಸೈನಿಕರನ್ನು ಮರಣಕ್ಕೆ ಈಡುಮಾಡಿದನು; ಬೆಳಿಗ್ಗೆ ಎದ್ದುನೋಡುವಾಗ ಅವರೆಲ್ಲರೂ ಹೆಣಗಳಾಗಿದ್ದರು.


ಸರ್ವೇಶ್ವರನ ಬಳಿಯಿಂದ ಬೆಂಕಿ ಹೊರಟು ಧೂಪಾರತಿಯನ್ನು ಅರ್ಪಿಸುತ್ತಿದ್ದ ಆ 250 ಮಂದಿಯನ್ನು ಭಸ್ಮಮಾಡಿತು.


ಇಸ್ರಯೇಲರು ತಮಗೆ ದುರವಸ್ಥೆ ಪ್ರಾಪ್ತವಾಯಿತೆಂದು ಸರ್ವೇಶ್ವರ ಸ್ವಾಮಿಗೆ ವಿರುದ್ಧ ಗುಣಗುಟ್ಟಿದರು. ಅದಕ್ಕೆ ಕೋಪಗೊಂಡ ಸರ್ವೇಶ್ವರ ಅವರ ಮಧ್ಯೆ ಬೆಂಕಿ ಬೀಳುವಂತೆ ಮಾಡಿದರು. ಇದರ ಪರಿಣಾಮವಾಗಿ ಪಾಳೆಯದ ಕಡೇಭಾಗದಲ್ಲಿದ್ದವರು ಸುಟ್ಟುಹೋದರು.


ಅಂತೆಯೇ ನಾವು ಅವರ ನಿಮಿತ್ತ ನಮಗೆ ಬರುವ ನಿಂದೆ ಅವಮಾನಗಳನ್ನು ಹೊತ್ತು ನಮ್ಮ ಪಾಳೆಯದಿಂದಾಚೆ ಅವರ ಬಳಿಗೆ ಹೋಗೋಣ.


ಇಗೋ, ಬಾಬಿಲೋನಿನವರನ್ನು ಹುರಿದುಂಬಿಸಲಿದ್ದೇನೆ. ಅವರು ಭಯೋತ್ಪಾದಕರು ಹಾಗೂ ಉಗ್ರಗಾಮಿಗಳು. ಅವರು ಜಗದ ಉದ್ದಗಲಕ್ಕೂ ಹರಡಿ ತಮ್ಮದಲ್ಲದ ನಾಡುಗಳನ್ನು ಆಕ್ರಮಿಸಿಕೊಳ್ಳಲು ಸಂಚರಿಸುವರು.


ಬಾಗಿಲನ್ನು ಒಡೆದು ತೆರೆಯುವಂಥವನು ಜನರ ಮುಂದಾಳಾಗಿ ಹೊರಡುವನು; ಅವರೂ ಬಾಗಿಲನ್ನು ಒಡೆದು ನುಗ್ಗುವರು; ಅವರ ಅರಸನು ಮುಂದಾಳಾಗಿ ಹೋಗುವನು. ಸರ್ವೇಶ್ವರಸ್ವಾಮಿಯೇ ಅವರ ಮುಂದಾಳತ್ವವನ್ನು ವಹಿಸುವರು.


ಪುರಾತನ ಕಾಲದಿಂದಲೇ ಅಸ್ಸೀರಿಯದ ಅರಸನಿಗೆ ಅಗ್ನಿಕುಂಡವು ಅಣಿಯಾಗಿದೆ. ಅದನ್ನು ಆಳವಾಗಿಯೂ ಅಗಲವಾಗಿಯೂ ಮಾಡಲಾಗಿದೆ. ಅದರಲ್ಲಿನ ಚಿತೆಯೊಳಗೆ ಬೆಂಕಿಯೂ ಸೌದೆಯೂ ತುಂಬಿದೆ. ಗಂಧಕದ ಪ್ರವಾಹದೋಪಾದಿಯಲ್ಲಿ ಸರ್ವೇಶ್ವರ ಸ್ವಾಮಿ ತಮ್ಮ ಶ್ವಾಸವನ್ನೂದಿ ಅದನ್ನು ಭುಗಿಲೆಬ್ಬಿಸುವರು.


ದೈವಪುರುಷನ ಸೇವಕನು ಬೆಳಿಗ್ಗೆ ಎದ್ದು ಹೊರಗೆ ಹೋದಾಗ ರಥರಥಾಶ್ವಸಹಿತವಾದ ಮಹಾಸೈನ್ಯವು ಬಂದು, ಪಟ್ಟಣದ ಸುತ್ತಲೂ ನಿಂತಿರುವುದನ್ನು ಕಂಡು, ತನ್ನ ಯಜಮಾನನಿಗೆ, “ಅಯ್ಯೋ! ಗುರುವೇ, ಏನು ಮಾಡೋಣ?” ಎಂದನು.


ಆಗ ಸರ್ವೇಶ್ವರ ಸ್ವಾಮಿ ಸೊದೋಮ್ - ಗೊಮೋರಗಳ ಮೇಲೆ ಅಗ್ನಿ ಉರಿಯುತ್ತಿರುವ ಗಂಧಕಮಳೆ ಸುರಿಸಿದರು.


“ಜೆರುಸಲೇಮ್ ಪಟ್ಟಣವನ್ನು ಸೈನ್ಯಗಳು ಸುತ್ತುಗಟ್ಟುತ್ತಿರುವುದನ್ನು ನೀವು ಕಾಣುವಾಗ ಅದರ ವಿನಾಶ ಸಮೀಪಿಸಿತೆಂದು ತಿಳಿದುಕೊಳ್ಳಿ.


ಕಾಲವು ಬರುವುದು. ಆಗ ಶತ್ರುಗಳು ನಿನ್ನ ಸುತ್ತಲೂ ಆಳ್ವೇಲಿಯೆಬ್ಬಿಸಿ, ಮುತ್ತಿಗೆ ಹಾಕಿ, ಎಲ್ಲೆಡೆಯೂ ನುಗ್ಗಿ,


ನಿಮ್ಮ ದೇವರಾದ ಸರ್ವೇಶ್ವರಾ ನಿಮ್ಮನ್ನು ಕಾಪಾಡಲು, ಶತ್ರುಗಳನ್ನು ನಿಮ್ಮ ಕೈವಶಮಾಡಲು ನಿಮ್ಮ ಪಾಳೆಯದೊಳಗೆ ಸಂಚಾರಮಾಡುತ್ತಾರೆ; ನಿಮ್ಮಲ್ಲಿ ಅಶುಚಿಯೇನಾದರೂ ಕಂಡುಬಂದರೆ ಅವರು ನಿಮ್ಮನ್ನು ಬಿಟ್ಟುಹೋಗದಂತೆ ಪಾಳೆಯವು ನಿರ್ಮಲವಾಗಿರಬೇಕು.


ಯಕೋಬ ವಂಶದ ಸಕಲ ನಿವಾಸಿಗಳಿಗಿಂತ I ಸಿಯೋನ್ ದ್ವಾರಗಳು ಆತನಿಗೆ ಸುಪ್ರೀತ II


ಭೂವಿಸ್ತಾರವನ್ನು ಗ್ರಹಿಸಿರುವೆಯೋ? ಇದೆಲ್ಲವು ನಿನಗೆ ತಿಳಿದಿದ್ದರೆ ಹೇಳು, ನೋಡೋಣ!


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು