Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 18:4 - ಕನ್ನಡ ಸತ್ಯವೇದವು C.L. Bible (BSI)

4 ಸ್ವರ್ಗದಿಂದ ಬಂದ ಮತ್ತೊಂದು ವಾಣಿಯನು ಕೇಳಿದೆ. ಅದು : ನನ್ನ ಜನರೇ, ಅವಳನ್ನು ತೊರೆದು ಹೊರಬನ್ನಿ ಪಾಲುಗಾರರಾಗದಿರಿ ಅವಳ ಪಾಪಗಳಲಿ ತುತ್ತಾಗದಿರಿ ಅವಳಿಗೆ ಬಂದೆರಗುವ ವಿಪತ್ತುಗಳಲಿ !

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಪರಲೋಕದಿಂದ ಹೇಳುವ ಮತ್ತೊಂದು ಧ್ವನಿಯನ್ನು ಕೇಳಿದೆನು, “ನನ್ನ ಜನರೇ, ಅವಳನ್ನು ಬಿಟ್ಟು ಬನ್ನಿರಿ, ಏಕೆಂದರೆ ಅವಳ ಪಾಪಗಳಲ್ಲಿ ನೀವೂ ಪಾಲುಗಾರರಾಗಬಾರದು. ಅವಳಿಗೆ ಆಗುವ ಉಪದ್ರವಗಳು ನಿಮ್ಮನ್ನು ಬಾಧಿಸಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಪರಲೋಕದಿಂದ ಬಂದ ಮತ್ತೊಂದು ಶಬ್ದವನ್ನು ಕೇಳಿದೆನು; ಅದು ಹೇಳಿದ್ದೇನಂದರೆ - ನನ್ನ ಪ್ರಜೆಗಳೇ, ಅವಳನ್ನು ಬಿಟ್ಟುಬನ್ನಿರಿ; ನೀವು ಅವಳ ಪಾಪಗಳಲ್ಲಿ ಪಾಲುಗಾರರಾಗಬಾರದು; ಅವಳಿಗಾಗುವ ಉಪದ್ರವಗಳಿಗೆ ಗುರಿಯಾಗಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ನಂತರ ಪರಲೋಕದಿಂದ ಮತ್ತೊಂದು ಧ್ವನಿಯು ಹೀಗೆ ಹೇಳುವುದು ನನಗೆ ಕೇಳಿತು: “ನನ್ನ ಜನರೇ, ನೀವು ಆ ನಗರದಿಂದ ಹೊರಗೆ ಬಂದುಬಿಡಿ. ಆಗ ನೀವು ಅವಳ ಪಾಪಗಳಲ್ಲಿ ಪಾಲುಗಾರರಾಗುವುದಿಲ್ಲ; ಅವಳಿಗಾಗುವ ಉಪದ್ರವಗಳು ನಿಮಗೆ ಸಂಭವಿಸುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಅನಂತರ ಪರಲೋಕದಿಂದ ಇನ್ನೊಂದು ಧ್ವನಿಯು: “ ‘ನನ್ನ ಜನರೇ, ಆಕೆಯನ್ನು ಬಿಟ್ಟು ಬನ್ನಿರಿ, ನೀವು ಆಕೆಯ ಪಾಪಗಳಲ್ಲಿ ಪಾಲುಗಾರರಾಗಬಾರದು, ಆಕೆಯ ಉಪದ್ರವಗಳಿಗೆ ಗುರಿಯಾಗಬಾರದು.’

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

4 ತನ್ನಾ ಸರ್‍ಗಾ ವೈನಾ ಅನಿಎಕ್ ಅವಾಜ್ ಮಿಯಾ ಆಯಿಕ್ಲೊ, ಮಾಜ್ಯಾ ಲೊಕಾನು ಭಾಯ್ರ್ ಯೆವಾ! ತಿಚೆಕ್ನಾ ಭಾಯ್ರ್ ಯೆವಾ! ತುಮಿ ತಿಚ್ಯಾ ಪಾಪ್ನಾತ್ನಿ ಭಾಗ್ ಘೆತಲೆ ನಕ್ಕೊ; ತಿಚ್ಯಾ ಶಿಕ್ಷೆತ್ ತುಮಿ ಭಾಗ್ ಘೆತಲೆ ನಕ್ಕೊ!

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 18:4
16 ತಿಳಿವುಗಳ ಹೋಲಿಕೆ  

ಇದಲ್ಲದೆ: ಅನ್ಯಜನರನ್ನು ಬಿಟ್ಟು ಹೊರಬನ್ನಿ ಅವರಿಂದ ಬೇರ್ಪಟ್ಟು ಬಾಳಿರಿ ಮಲಿನವಾದುದನ್ನು ಮುಟ್ಟದಿರಿ.


ನೀವು ಬಾಬಿಲೋನಿನಿಂದ ಓಡಿಹೋಗಿ ನಿಮ್ಮ ನಿಮ್ಮ ಪ್ರಾಣಗಳನ್ನು ಉಳಿಸಿಕೊಳ್ಳಿ, ಅದಕ್ಕೆ ಉಂಟಾಗುವ ದಂಡನೆಗೆ ನೀವು ಒಳಗಾಗಬೇಡಿ. ಸರ್ವೇಶ್ವರನಾದ ನಾನು ಮುಯ್ಯಿತೀರಿಸುವ ಕಾಲಬಂದಿದೆ. ಬಾಬಿಲೋನಿಗೆ ತಕ್ಕ ಪ್ರತೀಕಾರ ಮಾಡುವೆನು.


ನನ್ನ ಜನರೇ, ಬಾಬಿಲೋನನ್ನು ಬಿಟ್ಟು ಹೊರಡಿ. ನನ್ನ ಕೋಪಾಗ್ನಿಯಿಂದ ತಪ್ಪಿಸಿಕೊಳ್ಳಿ.


ಹೊರಡಿರಿ, ನೀವು ಹೊರಡಿರಿ ಬಾಬಿಲೋನಿನಿಂದ ಅಶುದ್ಧವಾದುವನ್ನು ಮುಟ್ಟದೆ ತೆರಳಿ ಅಲ್ಲಿಂದ. ಸರ್ವೇಶ್ವರನ ಆರಾಧನಾ ಉಪಕರಣಗಳನು ಹೊರುವವರೇ, ನಿಮ್ಮನು ನೀವೆ ಪರಿಶುದ್ಧವಾಗಿಸಿರಿಕೊಂಡು ತೆರಳಿ ಹೊರಗೆ.


“ಬಾಬಿಲೋನ್ ದೇಶದಿಂದ ಓಡಿಹೋಗಿ, ಬಾಬಿಲೋನಿಯರ ಆ ಸೀಮೆಯಿಂದ ಹೊರಡಿ. ಹಿಂಡುಗಳ ಮುಂದೆ ನಡೆಯುವ ಹೋತಗಳಂತೆ ಮುಂತೆರಳಿರಿ.


ದೇವರ ಸೇವೆಗೆಂದು ಅವಸರದಿಂದ ಯಾರ ಮೇಲೂ ಹಸ್ತನಿಕ್ಷೇಪ ಮಾಡಿ ದೀಕ್ಷೆ ನೀಡಬೇಡ. ಹಾಗೆ ಮಾಡಿದರೆ, ಅವರ ಪಾಪಗಳಲ್ಲಿ ನೀನೂ ಭಾಗಿಯಾಗುವೆ. ನೀನು ಪರಿಶುದ್ಧನಾಗಿರುವ ಹಾಗೆ ನೋಡಿಕೋ.


ಹೊರಡಿರಿ ಬಾಬಿಲೋನ್ ನಗರದಿಂದ, ಓಡಿರಿ ಕಸ್ದೀಯರ ಕಡೆಯಿಂದ ಪ್ರಚುರಪಡಿಸಿರಿ ಹರ್ಷಧ್ವನಿಯಿಂದ, ಪ್ರಕಟಿಸಿರಿ ಭೂಮಿಯ ಕಟ್ಟಕಡೆಯ ತನಕ, ಈ ಪರಿ ತಿಳಿಸಿರಿ : “ಸರ್ವೇಶ್ವರ, ತಮ್ಮ ದಾಸ ಯಕೋಬನ ಉದ್ಧಾರಕ".


ಕಂಡೊಡನೆ ಬೇಕು ನಿಮಗೆ ಚೋರರ ಕೂಟ I ಸಾಕಾಗಿಲ್ಲ ನಿಮಗೆ ಜಾರರ ಒಡನಾಟ II


ಏಕೆಂದರೆ, ಹರಸುವವನು ಅವನ ದುಷ್ಕೃತ್ಯಗಳಲ್ಲಿ ಪಾಲುಗಾರನಾಗುತ್ತಾನೆ.


“ಕತ್ತಿಯಿಂದ ತಪ್ಪಿಸಿಕೊಂಡವರೇ, ಸುಮ್ಮನೆ ನಿಂತುಕೊಳ್ಳದೆ ನಡೆಯಿರಿ. ದೂರವಿರುವಾಗಲು ಸರ್ವೇಶ್ವರನನ್ನು ಸ್ಮರಿಸಿರಿ. ಜೆರುಸಲೇಮನ್ನು ಕುರಿತು ಮನಸ್ಸಾರೆ ಹಂಬಲಿಸಿರಿ.


ಸತ್ಪುರುಷರ ಸ್ಮಾರಕಗಳನ್ನು ಶೃಂಗರಿಸುತ್ತೀರಿ. ‘ನಮ್ಮ ಪೂರ್ವಜರ ಕಾಲದಲ್ಲಿ ನಾವು ಇದ್ದಿದ್ದರೆ ಪ್ರವಾದಿಗಳ ರಕ್ತಪಾತದಲ್ಲಿ ಭಾಗಿಗಳಾಗುತ್ತಿರಲಿಲ್ಲ’ ಎಂದುಕೊಳ್ಳುತ್ತೀರಿ.


ಲೋಟನು ಹೊರಕ್ಕೆ ಹೋಗಿ ತನ್ನ ಹೆಣ್ಣುಮಕ್ಕಳಿಗೆ ಗೊತ್ತುಮಾಡಿದ್ದ ಅಳಿಯಂದಿರಿಗೆ ಸಂಗತಿಯನ್ನು ಹೇಳಿ, “ನೀವೆದ್ದು ಈ ಸ್ಥಳವನ್ನು ಬಿಟ್ಟ ಹೊರಡಿರಿ; ಈ ಊರನ್ನು ಸರ್ವೇಶ್ವರ ಸ್ವಾಮಿ ನಾಶ ಮಾಡಲಿದ್ದಾರೆ” ಎಂದು ಹೇಳಿದನು. ಆ ಅಳಿಯಂದಿರಿಗೆ ಇದೊಂದು ಪರಿಹಾಸ್ಯವಾಗಿ ಕಾಣಿಸಿತು.


ಅಲ್ಲಿರುವ ಹೊರನಾಡಿಗರು, ‘ಬಾಬಿಲೋನನ್ನು ಸ್ವಸ್ಥಮಾಡಲು ನಾವು ಪ್ರಯತ್ನಿಸಿದೆವು. ಆದರೆ ಅದು ಸ್ವಸ್ಥವಾಗಲಿಲ್ಲ. ಬಾಬಿಲೋನನ್ನು ಬಿಟ್ಟು ನಾವೆಲ್ಲರು ನಮ್ಮ ನಮ್ಮ ನಾಡುಗಳಿಗೆ ಹೋಗೋಣ. ಅದು ಪಡೆಯಬೇಕಾದ ದಂಡನೆ ಆಕಾಶ ಮುಟ್ಟುವಷ್ಟು ದೊಡ್ಡದು, ಹೌದು, ಅದು ಗಗನದವರೆಗೂ ಬೆಳೆದಿದೆ,” ಎನ್ನುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು