Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 18:11 - ಕನ್ನಡ ಸತ್ಯವೇದವು C.L. Bible (BSI)

11 ಈ ಲೋಕದ ವರ್ತಕರೂ ಅವಳ ನಿಮಿತ್ತ ಅತ್ತು ಗೋಳಾಡುತ್ತಾ ತಮ್ಮ ಸರಕು ಸಾಮಗ್ರಿಗಳನ್ನು ಕೊಂಡುಕೊಳ್ಳುವವರು ಯಾರೂ ಇಲ್ಲವಲ್ಲಾ ಎಂದು ದುಃಖಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 “ಇದಲ್ಲದೆ ಭೂಮಿಯ ವರ್ತಕರು ಅವಳಿಗಾಗಿ ದುಃಖಿಸಿ ಗೋಳಾಡುತ್ತಾ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಇದಲ್ಲದೆ ಭೂಲೋಕದ ವರ್ತಕರು ಅವಳ ನಿವಿುತ್ತವಾಗಿ ಅತ್ತು ಗೋಳಾಡುತ್ತಾ - ನಮ್ಮ ಹಡಗುಗಳ ಸರಕುಗಳನ್ನು ಕೊಂಡುಕೊಳ್ಳುವವರು ಇನ್ನು ಇಲ್ಲವಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 “ಭೂಲೋಕದ ವರ್ತಕರು ಬಾಬಿಲೋನಿನ ವಿಷಯದಲ್ಲಿ ಗೋಳಾಡುವರು ಮತ್ತು ದುಃಖಿಸುವರು. ಅವರು ಮಾರುವ ವಸ್ತುಗಳನ್ನು ಕೊಂಡುಕೊಳ್ಳಲು ಯಾರೂ ಇಲ್ಲದಿರುವುದರಿಂದ ಅವರು ದುಃಖಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 “ಭೂಮಿಯ ವರ್ತಕರು ಆಕೆಗಾಗಿ ದುಃಖಿಸಿ ಗೋಳಾಡುತ್ತಾ ತಮ್ಮ ಸರಕು ಸಾಮಗ್ರಿಗಳನ್ನು ಕೊಂಡುಕೊಳ್ಳುವವರು ಯಾರೂ ಇಲ್ಲವಲ್ಲಾ ಎಂದು ದುಃಖಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

11 ಜಗಾತ್ಲಿ ಯಾಪಾರ್ ಕರ್ತಲಿ ಲೊಕಾ ಸೈತ್ ತಿಚೆಸಾಟ್ನಿ ರಡ್ತ್ಯಾತ್ ಅನಿ ತರಾಸ್ ಕರುನ್ ಘೆತ್ಯಾತ್, ಕಶ್ಯಾಕ್ ಮಟ್ಲ್ಯಾರ್ ಅನಿಫಿಡೆ ತೆಂಚಿ ಸಾಮಾನಾ ಕೊನ್‍ಬಿ ಇಕಾತ್ ಘೆಯ್‍ನ್ಯಾತ್;

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 18:11
18 ತಿಳಿವುಗಳ ಹೋಲಿಕೆ  

ಕುಡಿಸಿದಳು ನಾಡುನಾಡುಗಳಿಗೆ ತನ್ನ ಹಾದರವೆಂಬ ಮದ್ಯವನು. ವ್ಯಭಿಚಾರಗೈದರು ಅವಳೊಡನೆ ಭೂರಾಜರು ಅವಳ ಭೋಗವಿಲಾಸದಿಂದ ಧನಿಕರಾದರು ಇಳೆಯ ವರ್ತಕರು.”


“ಉರಿಯುವ ದೀಪದ ಬೆಳಕು ಹೊಳೆಯದು ನಿನ್ನಲ್ಲಿ, ವಧುವರರ ಇನಿದನಿ ಕೇಳದು ನಿನ್ನಲ್ಲಿ. ಇದ್ದರು ನಿನ್ನ ವರ್ತಕರು ಇಳೆಗೆ ಧನವಂತರಾಗಿ ಬಿದ್ದವು ರಾಷ್ಟ್ರಗಳು ನಿನ್ನ ಜಾಲಕೆ ವಂಚಿತರಾಗಿ.


“ಸ್ವರ್ಗನಿವಾಸಿಗಳೇ, ಸಂಭ್ರಮಿಸಿ, ದೇವಜನರೇ, ಪ್ರೇಷಿತರೇ, ಪ್ರವಾದಿಗಳೇ, ಹರ್ಷಿಸಿ ! ದಂಡಿಸಿರುವರು ಅವಳನು ದೇವರೇ ಸರಿಯಾಗಿ ನಿಮಗಾಕೆ ಎಸಗಿದಕ್ಕೆ ಪ್ರತಿಯಾಗಿ.”


ವ್ಯಾಪಾರ ಮಾಡಿ ಅವಳಿಂದ ಧನಿಕರಾದ ವರ್ತಕರು ಅವಳಿಗುಂಟಾದ ಚಿತ್ರಹಿಂಸೆಯನ್ನು ದೂರದಲ್ಲಿ ನಿಂತು ನೋಡಿ, ಭಯಭ್ರಾಂತರಾಗಿ ಅವಳನ್ನುದ್ದೇಶಿಸಿ :


ಆಗ ಪಟ್ಟಣದ ಸಂತೆಬೀದಿಗಳಲ್ಲಿ ವಾಸಮಾಡುವವರು ಅತ್ತು ಪ್ರಲಾಪಿಸಲಿ; ವ್ಯಾಪಾರಸ್ಥರೆಲ್ಲರೂ ಸತ್ತುಹೋಗಿರುವರು; ಅಕ್ಕಸಾಲಿಗರೆಲ್ಲರೂ ಕಣ್ಮರೆಯಾಗಿರುವರು.


ಅವಳೊಡನೆ ವ್ಯಭಿಚಾರಮಾಡಿದ ಹಾಗೂ ಭೋಗವಿಲಾಸದಿಂದ ಬಾಳಿದ ಭೂರಾಜರು ಅವಳನ್ನು ದಹಿಸುವ ಚಿತೆಯಿಂದ ಮೇಲೇರುವ ದಟ್ಟ ಹೊಗೆಯನ್ನು ದಿಟ್ಟಿಸಿ ನೋಡಿ ಶೋಕಿಸುವರು.


ಅವರು ದ್ರವ್ಯಾಶೆಪೀಡಿತರಾಗಿ ಕಟ್ಟುಕತೆಗಳನ್ನು ಹೇಳುತ್ತಾ ನಿಮ್ಮಿಂದ ಲಾಭಗಳಿಸುವರು. ದೀರ್ಘಕಾಲದಿಂದ ಅವರಿಗಾಗಿ ಸಿದ್ಧವಾಗಿರುವ ದಂಡನೆಯ ತೀರ್ಪು ಸಮೀಪಿಸುತ್ತಿದೆ. ಅವರನ್ನು ನಾಶಗೊಳಿಸುವವರೇನೂ ನಿದ್ರಿಸುತ್ತಿಲ್ಲ.


ಸ್ವಾಮಿಯ ಆ ರೌದ್ರದಿನದಂದು, ಅವರ ಬೆಳ್ಳಿಯಾಗಲೀ ಬಂಗಾರವಾಗಲೀ ಅವರನ್ನು ರಕ್ಷಿಸಲಾರದು. ಸ್ವಾಮಿಯ ರೋಷಾಗ್ನಿ ಧರೆಯನ್ನೆಲ್ಲಾ ದಹಿಸಿಬಿಡುವುದು; ಹೌದು, ಭೂನಿವಾಸಿಗಳೆಲ್ಲರನ್ನೂ ತಟ್ಟನೆ ಕೊನೆಗಾಣಿಸುವುದು.


ಇಂತಾಗುವುದು ನೀ ಗೈದ ಪ್ರಯತ್ನಗಳೆಲ್ಲ. ಬಾಲ್ಯದಿಂದ ನಿನ್ನೊಡನೆ ವ್ಯವಹರಿಸಿದವರು ಸರಿವರು ದೂರಕೆ ಹಿಂದಿರುಗುವರೆಲ್ಲರು ತಂತಮ್ಮ ನಾಡಿಗೆ ಅಂತ್ಯದಲಿ ಯಾರೂ ಆಗರು ರಕ್ಷಣೆ ನಿನಗೆ.”


ಆದರೂ ಆಹ್ವಾನಿತರು ಅಲಕ್ಷ್ಯಮಾಡಿದರು. ಒಬ್ಬ ತೋಟಕ್ಕೆ ಹೊರಟುಬಿಟ್ಟ, ಇನ್ನೊಬ್ಬ ವ್ಯಾಪಾರಕ್ಕೆ ಹೊರಟುಹೋದ.


ಪಾರಿವಾಳಗಳನ್ನು ಮಾರುತ್ತಿದ್ದವರಿಗೆ, “ಇವನ್ನು ಇಲ್ಲಿಂದ ತೆಗೆದುಕೊಂಡು ಹೊರಡಿ. ನನ್ನ ಪಿತನ ಆಲಯವನ್ನು ಸಂತೆಯನ್ನಾಗಿ ಮಾಡಬೇಡಿ,” ಎಂದು ಹೇಳಿದರು.


ಬೆಳ್ಳಿಗಿಂತ ಜ್ಞಾನ ಗಳಿಕೆ ಶ್ರೇಷ್ಠ, ಬಂಗಾರಕ್ಕಿಂತ ಜ್ಞಾನ ಸಂಪಾದನೆ ಉತ್ಕೃಷ್ಟ.


ಬಾಬಿಲೋನ್ ರಾಜ್ಯಗಳಿಗೆ ಶಿರೋಮಣಿ, ಕಸ್ದೀಯರ ಭವ್ಯಭೂಷಣ. ಆದರೆ ದೇವರಾದ ನಾನು ಸೊದೋಮ್ ಮತ್ತು ಗೊಮೋರಾ ನಾಡುಗಳನ್ನು ನಾಶಮಾಡಿದಂತೆ ಇದನ್ನೂ ಕೆಡಿಸಿ ನಾಶಮಾಡುವೆನು.


ನಿನ್ನ ಕಂಡಿಗಳ ಭದ್ರಪಡಿಸಿಹರು, ನಿನ್ನಲ್ಲಿ ಸೇರಿದ್ದ ಗೆಬಲಿನ ಜಾಣರು, ಹಿರಿಯರು. ನಿನಗೆ ಸರಕುಗಳ ತಂದೊಪ್ಪಿಸುತ್ತಿದ್ದರು ಸಕಲ ನಾವೆಗಳು, ಸಕಲ ನಾವಿಕರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು