Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 14:6 - ಕನ್ನಡ ಸತ್ಯವೇದವು C.L. Bible (BSI)

6 ಮತ್ತೊಬ್ಬ ದೇವದೂತನು ಆಕಾಶ ಮಧ್ಯದಲ್ಲಿ ಹಾರುತ್ತಿರುವುದನ್ನು ಕಂಡೆ. ಸಕಲ ದೇಶ, ಭಾಷೆ, ಕುಲ, ಗೋತ್ರದ ಜನರಿಗೂ ಸಾರಬೇಕಾದ ಅಮರ ಸಂದೇಶ ಆತನಲ್ಲಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಮತ್ತೊಬ್ಬ ದೇವದೂತನು ಆಕಾಶಮಧ್ಯದಲ್ಲಿ ಹಾರಾಡುತ್ತಿರುವುದನ್ನು ಕಂಡೆನು. ಭೂನಿವಾಸಿಗಳಾಗಿರುವ ಸಕಲ ಜನಾಂಗ, ಕುಲ, ಭಾಷೆ, ಜನಗಳೆಲ್ಲರಿಗೆ ಸಾರಿಹೇಳುವುದಕ್ಕಾಗಿ ನಿತ್ಯವಾದ ಶುಭವರ್ತಮಾನವು ಆತನಲ್ಲಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಮತ್ತೊಬ್ಬ ದೇವದೂತನು ಆಕಾಶಮಧ್ಯದಲ್ಲಿ ಹಾರಿಹೋಗುವದನ್ನು ಕಂಡೆನು. ಭೂನಿವಾಸಿಗಳಾಗಿರುವ ಸಕಲ ಜನಾಂಗ ಕುಲ ಪ್ರಜೆಗಳವರಿಗೂ ಸಕಲ ಭಾಷೆಗಳನ್ನಾಡುವವರಿಗೂ ಸಾರಿಹೇಳುವದಕ್ಕೆ ನಿತ್ಯವಾದ ಶುಭವರ್ತಮಾನವು ಅವನಲ್ಲಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ನಂತರ ಇನ್ನೊಬ್ಬ ದೇವದೂತನು ವಾಯುಮಂಡಲದಲ್ಲಿ ಅತಿ ಎತ್ತರದಲ್ಲಿ ಹಾರುತ್ತಿರುವುದನ್ನು ನಾನು ನೋಡಿದೆನು. ಭೂಮಿಯ ಮೇಲೆ ವಾಸಿಸುವ ಸಕಲ ಜನಾಂಗ, ಕುಲ, ಪ್ರಜೆ, ಭಾಷೆಗಳ ಜನರಿಗೆಲ್ಲಾ ಬೋಧಿಸುವುದಕ್ಕೆ ನಿತ್ಯವಾದ ಸುವಾರ್ತೆಯು ಆ ದೇವದೂತನಲ್ಲಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಮತ್ತೊಬ್ಬ ದೇವದೂತನು ಆಕಾಶದ ಮಧ್ಯದಲ್ಲಿ ಹಾರುತ್ತಿರುವುದನ್ನು ಕಂಡೆನು. ಭೂನಿವಾಸಿಗಳಾಗಿರುವ ಸಕಲ ರಾಷ್ಟ್ರ, ಹಿನ್ನಲೆ, ಭಾಷೆ ಹಾಗೂ ಪ್ರಜೆಗಳವರಿಗೂ ಸಾರಿ ಹೇಳುವುದಕ್ಕೆ ನಿತ್ಯ ಸುವಾರ್ತೆಯು ಅವನಲ್ಲಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

6 ಮಾನಾ ಮಳ್ಬಾ ವರ್ತಿ ಹುಡ್ತಲೊ ಅನಿಎಕ್ ದೆವ್‍ದುತಾ ಮಿಯಾ ಬಗಟ್ಲೊ, ತೊ ಹ್ಯಾ ಜಗಾತ್ಲ್ಯಾ ಸಗ್ಳ್ಯಾ ಲೊಕಾಕ್ನಿ ಸಗ್ಳ್ಯಾ ಕುಳಿಯಾ, ಘರಾನ್ಯಾಚೆ ಬಾಶಾ, ಅನಿ ದೆಶಾಂಚ್ಯಾ ಲೊಕಾಕ್ನಿ ಸಾಂಗ್ತಲಿ ಎಕ್ ಕನ್ನಾಚ್ ಸರಿನಸಲ್ಲಿ ಬರ್‍ಯಾ ಖಬ್ರೆಚಿ ಬಾತ್ಮಿ ಘೆವ್ನ್ ಯೆಲ್ಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 14:6
30 ತಿಳಿವುಗಳ ಹೋಲಿಕೆ  

ಬಳಿಕ ಅವರಿಗೆ, “ನೀವು ವಿಶ್ವದ ಎಲ್ಲೆಡೆಗಳಿಗೂ ಹೋಗಿ, ಜಗತ್ತಿಗೆಲ್ಲಾ ಶುಭಸಂದೇಶವನ್ನು ಪ್ರಬೋಧಿಸಿರಿ.


ಅನಂತರ ಆಕಾಶಮಧ್ಯದಲ್ಲಿ ಒಂದು ಗರುಡ ಪಕ್ಷಿ ಹಾರಾಡುತ್ತಿರುವುದನ್ನು ನಾನು ಕಂಡೆ. ಅದರ ಕೂಗು ನನಗೆ ಕೇಳಿಸಿತು. ಅದು, “ಇನ್ನು ಉಳಿದ ಮೂವರು ದೇವದೂತರು ತುತೂರಿಯನ್ನು ಊದುವಾಗ ಭೂನಿವಾಸಿಗಳಿಗೆ ಕೇಡು, ಕೇಡು, ಕೇಡು,” ಎಂದು ಗಟ್ಟಿಯಾಗಿ ಕೂಗುತ್ತಿತ್ತು.


ಸೈರಣೆಯಿಂದಿರಬೇಕೆಂಬ ನನ್ನ ಉಪದೇಶವನ್ನು ನೀನು ಪಾಲಿಸಿದ್ದರಿಂದ ಭೂಲೋಕದ ನಿವಾಸಿಗಳೆಲ್ಲರನ್ನು ಪರಿಶೋಧಿಸಲೆಂದು ಇಡೀ ಜಗತ್ತಿನ ಮೇಲೆ ಬರಲಿರುವ ಕಡುಶೋಧನೆಯ ಕಾಲದಲ್ಲಿ ನಾನು ನಿನ್ನನ್ನು ಸುರಕ್ಷಿತವಾಗಿ ಕಾಪಾಡುತ್ತೇನೆ.


ನುಸಿ ಅವರನ್ನು ತಿಂದುಹಾಕುವುದು ಬಟ್ಟೆಯಂತೆ ಹುಳು ಅವರನ್ನು ಮೆದ್ದುಬಿಡುವುದು ಉಣ್ಣೆಯಂತೆ. ನಾ ನೀಡುವ ಮುಕ್ತಿಯೋ ನಿಲ್ಲುವುದು ಶಾಶ್ವತವಾಗಿ ನಾ ಕೊಡುವ ವಿಮೋಚನೆ ಸದಾ ಇರುವುದು ನೆಲೆಯಾಗಿ.”


ಆಕಾಶಮಂಡಲವನು ನೋಡಿ ಕಣ್ಣೆತ್ತಿ ಭೂಮಂಡಲದತ್ತ ನೋಡಿ ಕೆಳಗೆ ದಿಟ್ಟಿಸಿ. ಆಕಾಶ ಚದರಿಹೋಗುವುದು ಹೊಗೆಯಂತೆ ಭೂಮಿ ಹರಿದುಹೋಗುವುದು ಬಟ್ಟೆಯಂತೆ ಸಾಯುವರು ಭೂನಿವಾಸಿಗಳು ಅದರಂತೆ. ನಾ ಕೊಡುವ ವಿಮೋಚನೆಯೋ ನಿಲ್ಲುವುದು ಶಾಶ್ವತವಾಗಿ ನಾ ನೀಡುವ ಮುಕ್ತಿಯೋ ಅಳಿದುಹೋಗದು ಭಂಗವಾಗಿ.


ಕೇಡಿದೆಯೇ ನೋಡು ನನ್ನ ಮಾರ್ಗದಲಿ I ನಡೆಸೆನ್ನನು ಆ ಸನಾತನ ಪಥದಲಿ II


“ಅನಾದಿಯಿಂದಲೂ ಗುಪ್ತವಾಗಿದ್ದ ರಹಸ್ಯವು ಈಗ ಪ್ರಕಟವಾಗಿದೆ. ಶಾಶ್ವತ ದೇವರ ಆಜ್ಞೆಯ ಮೇರೆಗೆ ಅನ್ಯಧರ್ಮೀಯರೂ ವಿಧೇಯರಾಗಿ ವಿಶ್ವಾಸಿಸುವಂತೆ ಪ್ರವಾದನಾ ಗ್ರಂಥಗಳ ಮೂಲಕ ಆ ರಹಸ್ಯವನ್ನು ಈಗ ಅವರಿಗೆ ತಿಳಿಸಲಾಗುತ್ತಿದೆ.


ಶಾಶ್ವತವಾದುದು ನಿನ್ನ ರಾಜ್ಯವು I ಇರುವುದೆಂದಿಗು ನಿನ್ನ ಆಳ್ವಿಕೆಯು II


ನಮ್ಮನ್ನು ಪ್ರೀತಿಸಿ ನಿತ್ಯಾದರಣೆಯನ್ನೂ ಉತ್ತಮ ನಿರೀಕ್ಷೆಯನ್ನೂ ಅನುಗ್ರಹವಾಗಿ ಕೊಟ್ಟಿರುವ ನಮ್ಮ ಪ್ರಭುವಾದ ಯೇಸುಕ್ರಿಸ್ತರು ಹಾಗೂ ಪಿತನಾದ ದೇವರು ನಿಮ್ಮ ಹೃನ್ಮನಗಳನ್ನು ಉತ್ತೇಜನಗೊಳಿಸಲಿ.


ಹೀಗೆ ಪ್ರಾರ್ಥನೆ ಮಾಡುತ್ತಿರುವಾಗಲೇ, ಮೊದಲು ನನ್ನ ಕನಸಿನಲ್ಲಿ ಕಂಡ ಗಬ್ರಿಯೇಲೆಂಬ ವ್ಯಕ್ತಿ ಅಸುರುಸುರಾಗಿ ಹಾರಿಬಂದು, ಸಂಧ್ಯಾನೈವೇದ್ಯ ಸಮಯದಲ್ಲಿ ನನ್ನನ್ನು ಸೇರಿ, ನನ್ನೊಂದಿಗೆ ಮಾತಾಡಿ, ಹೀಗೆಂದು ಉಪದೇಶ ಮಾಡಿದನು:


ಇದಲ್ಲದೆ, ದೇವಜನರ ವಿರುದ್ಧ ಯುದ್ಧಮಾಡಿ, ಜಯಗಳಿಸುವಂತೆ ಅದಕ್ಕೆ ಅವಕಾಶವನ್ನು ಕೊಡಲಾಯಿತು. ಸಕಲ ದೇಶ, ಭಾಷೆ, ಕುಲ, ಗೋತ್ರಗಳ ಮೇಲೆ ಅದಕ್ಕೆ ಅಧಿಕಾರವನ್ನು ನೀಡಲಾಯಿತು.


ಸಭೆಯೆಂಬ ಕುರಿಮಂದೆಗೆ ಮಹಾಪಾಲಕರಾದ ಯೇಸುಸ್ವಾಮಿ ಶಾಶ್ವತ ಒಡಂಬಡಿಕೆಯನ್ನು ನಿಶ್ಚಯಪಡಿಸುವುದಕ್ಕಾಗಿ ತಮ್ಮ ರಕ್ತವನ್ನು ಸುರಿಸಿದರು. ಶಾಂತಿದಾತರಾದ ದೇವರು ನಮ್ಮ ಪ್ರಭುವನ್ನು ಸಾವಿನಿಂದ ಜೀವಕ್ಕೆ ಎಬ್ಬಿಸಿದರು.


ಇನ್ನು ನೀವು ವಿಶ್ವಾಸದಲ್ಲಿ ದೃಢವಾಗಿ ಮುನ್ನಡೆಯಬೇಕು. ಶುಭಸಂದೇಶವನ್ನು ಕೇಳಿದಾಗ ನೀವು ಹೊಂದಿದ ಭರವಸೆಯನ್ನು ಕಳೆದುಕೊಳ್ಳದಂತೆ ಜಾಗರೂಕರಾಗಿರಬೇಕು. ಪೌಲನಾದ ನಾನು ಇದೇ ಶುಭಸಂದೇಶದ ಪ್ರಚಾರಕ. ಈ ಶುಭಸಂದೇಶವನ್ನು ಜಗತ್ತಿನಲ್ಲಿರುವ ಸರ್ವಸೃಷ್ಟಿಗೂ ಸಾರಲಾಗುತ್ತಿದೆ.


ನಾನು ಕತ್ತಲಲ್ಲಿ ಹೇಳುವುದನ್ನು ನೀವು ಬೆಳಕಿನಲ್ಲಿ ಪ್ರಚುರಪಡಿಸಿರಿ, ಕಿವಿಮಾತಾಗಿ ಕೇಳಿದ್ದನ್ನು ಮನೆಮಾಳಿಗೆಯ ಮೇಲೆ ನಿಂತು ಸಾರಿರಿ.


ಅನಂತರ, ದೇವದೂತನು ನನಗೆ, “ನೀನು ಇನ್ನೂ ಅನೇಕ ಜನರ, ಜನಾಂಗಗಳ, ಭಾಷೆಗಳನ್ನಾಡುವವರ ಹಾಗು ಅರಸರಾದವರ ವಿರುದ್ಧ ಪ್ರವಾದನೆಯನ್ನು ಸಾರಬೇಕು,” ಎಂದು ಆಜ್ಞಾಪಿಸಿದನು.


ಜಗದಲ್ಲಿ ವಾಸಿಸುವ ಎಲ್ಲಾ ಜನಾಂಗದವರಿಗೂ ಕುಲದವರಿಗೂ ಭಾಷೆಯವರಿಗೂ ರಾಜ ನೆಬೂಕದ್ನೆಚ್ಚರನು ಹೊರಡಿಸಿದ ಪ್ರಕಟಣೆ - “ನಿಮಗೆ ಹೆಚ್ಚೆಚ್ಚು ಸುಖಶಾಂತಿ ಲಭಿಸಲಿ!


ಆ ಜೀವಿಗಳು ಮಿಂಚಿನಂತೆ ಮುಂದಕ್ಕೂ ಹಿಂದಕ್ಕೂ ಸರಿದಾಡುತ್ತಿದ್ದವು.


ಇಸ್ರಯೇಲಿಗಾದರೋ, ದೊರೆವುದು ಶಾಶ್ವತ ರಕ್ಷಣೆ ಸರ್ವೇಶ್ವರನಿಂದ; ಯುಗಯುಗಾಂತರಕ್ಕೂ ಅದಕ್ಕಾಗದು ಲಜ್ಜೆ, ಮಾನಭಂಗ.”


ನಿನ್ನ ನೀತಿ ನಿತ್ಯ I ನಿನ್ನ ಶಾಸ್ತ್ರ ಸತ್ಯ II


ಹೌದು, ಸರ್ವೇಶ್ವರನ ಸನ್ನಿಧಿಯಲಿ ನನ್ನ ಮನೆತನ ಸುಸ್ಥಿರ ಆತನೊಂದಿಗೆ ನಾ ಮಾಡಿಲ್ಲವೆ ಚಿರವಾದ ಒಪ್ಪಂದ? ಅದೆಲ್ಲದರಲು ಸುವ್ಯವಸ್ಥಿತ, ಅದೆಂದಿಗೂ ನಿರ್ಭೀತ. ಆತನೇ ನನ್ನುದ್ಧಾರಕ್ಕೆ ಮೂಲಾಧಾರ ನನ್ನ ಆಶೆ ಆಕಾಂಕ್ಷೆಗಳ ಪೂರೈಸುವಾತ.


ಒಣಗಿ ಹೋಗುವುದಾ ಹುಲ್ಲು, ಬಾಡಿಹೋಗುವುದಾ ಹೂವು, ನಮ್ಮ ದೇವರ ನುಡಿಯಾದರೋ ಇರುವುದು ಚಿರಕಾಲವು.”


ಬಳಿಕ ದೇವರು, “ಜಲರಾಶಿಯ ನಡುವೆ ವಿಸ್ತಾರವಾದ ಒಂದು ಗುಮ್ಮಟವು ಉಂಟಾಗಲಿ, ಅದು ಕೆಳಗಿನ ನೀರನ್ನೂ ಮೇಲಿನ ನೀರನ್ನೂ ಬೇರೆಬೇರೆ ಮಾಡಲಿ,” ಎಂದರು. ಹಾಗೆಯೇ ಆಯಿತು.


ಅವರ ಸುತ್ತಲು ಸೆರಾಫಿಯರೆಂಬ ತೇಜಸ್ವಿಗಳು ಇದ್ದರು. ಪ್ರತಿಯೊಬ್ಬರಿಗೂ ಆರಾರು ರೆಕ್ಕೆಗಳಿದ್ದವು. ಎರಡು ರೆಕ್ಕೆಗಳಿಂದ ಅವರ ಮುಖ ಮುಚ್ಚಿತ್ತು. ಇನ್ನೆರಡು ರೆಕ್ಕೆಗಳಿಂದ ಅವರ ಪಾದಗಳು ಮುಚ್ಚಿದ್ದವು. ಮತ್ತೆರಡು ರೆಕ್ಕೆಗಳನ್ನು ಬಡಿಯುತ್ತಾ ನೆಲಸೋಕದೆ ನಿಂತಿದ್ದರು.


ಈ ವಾಕ್ಯವೇ ನಿಮಗೆ ಸಾರಲಾದ ಶುಭಸಂದೇಶ.


ಅವರು ಈ ಹೊಸ ಗೀತೆಯನ್ನು ಹಾಡುತ್ತಿದ್ದರು: :ಸುರುಳಿಯನ್ನು ಸ್ವೀಕರಿಸಲು ನೀ ಯೋಗ್ಯನು ಅದರ ಮುದ್ರೆಗಳನ್ನು ಮುರಿಯಲು ನೀ ಶಕ್ತನು. ಸಮರ್ಪಿಸಿಕೊಂಡಿರುವೆ ನಿನ್ನನೇ ನೀ ಬಲಿಯರ್ಪಣೆಯಾಗಿ ಸಕಲ ದೇಶ, ಭಾಷೆ, ಕುಲಗೋತ್ರಗಳಿಂದ ಕೊಂಡುಕೊಂಡಿರುವೆ ಮಾನವರನು ನಿನ್ನ ರಕ್ತದಿಂದ.


ಏಳನೆಯ ದೇವದೂತನು ತುತೂರಿಯನ್ನು ಊದುವನು. ಆಗ ದೇವರು ಇದುವರೆಗೆ ನಿಗೂಢವಾಗಿಟ್ಟಿದ್ದ ತಮ್ಮ ಯೋಜನೆಯನ್ನು ತಮ್ಮ ದಾಸರಾದ ಪ್ರವಾದಿಗಳಿಗೆ ಮುಂತಿಳಿಸಿದ್ದ ಪ್ರಕಾರ ಈಡೇರಿಸುವರು.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು