Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪರಮಗೀತೆ 6:10 - ಕನ್ನಡ ಸತ್ಯವೇದವು C.L. Bible (BSI)

10 “ಉದಯಿಸುತ್ತಿರುವಳಿವಳು ಅರುಣೋದಯದಂತೆ ಸುಂದರಿಯಾಗಿಹಳು ಚಂದ್ರನಂತೆ ಶುಭ್ರಳಾಗಿಹಳು ಸೂರ್ಯನಂತೆ ಭಯಂಕರಳು ಪತಾಕಿನಿಯಂತೆ ಎಂಥವಳಿರಬಹುದು ಇವಳು ಪೇಳೈ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಅರುಣೋದಯದಂತೆ ಉದಯಿಸುವಂತಿರುವಳು, ಚಂದ್ರನಂತೆ ಸೌಮ್ಯ ಸುಂದರಿಯಿವಳು, ಸೂರ್ಯನಂತೆ ಶುಭ್ರಳು, ಧ್ವಜಗಳುಳ್ಳ ಸೈನ್ಯದ ಹಾಗೆ ಭಯಂಕರಳು ಆಗಿರುವ ಇವಳಾರು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಅರುಣೋದಯವು ದೃಷ್ಟಿಸುವಂತಿರುವ ಇವಳಾರು? ಚಂದ್ರನಂತೆ ಸೌಮ್ಯಳು, ಸೂರ್ಯನಂತೆ ಶುಭ್ರಳು, ಪತಾಕಿನಿಯಂತೆ ಭಯಂಕರಳು ಆಗಿರುವ ಇವಳಾರು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಸೂರ್ಯೋದಯದಂತೆ ಪ್ರಕಾಶಿಸುತ್ತಿರುವ ಈ ಯುವತಿ ಯಾರು? ಚಂದ್ರನಂತೆ ಸೌಮ್ಯಳೂ ಸೂರ್ಯನಂತೆ ಶುಭ್ರಳೂ ಜಯಧ್ವಜವೆತ್ತಿರುವ ಸೈನ್ಯದಂತೆ ಪ್ರಭಾವವುಳ್ಳವಳೂ ಆಗಿರುವ ಇವಳಾರು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಮೆರವಣೆಗೆಯಲ್ಲಿ ನಕ್ಷತ್ರಗಳ ಹಾಗೆ ಗಂಭೀರಳೂ, ಚಂದ್ರನ ಹಾಗೆ ಸುಂದರಿಯೂ, ಸೂರ್ಯನ ಹಾಗೆ ಪ್ರಕಾಶಿಸುವವಳೂ ಆಗಿರುವ ಈ ಉದಯವಂತೆ ಯಾರು?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪರಮಗೀತೆ 6:10
24 ತಿಳಿವುಗಳ ಹೋಲಿಕೆ  

ನನ್ನ ಪ್ರಿಯಳೇ, ನೀನು ಸುಂದರಿ, ತಿರ್ಚನಗರದಂತೆ ಮನೋಹರಿ, ಜೆರುಸಲೇಮಿನಂತೆ ಭಯಂಕರಿ, ಪತಾಕಿನಿಯಂತೆ.


ಆಕಾಶದಲ್ಲಿ ಚಿಹ್ನೆಯೊಂದು ಕಾಣಿಸಿಕೊಂಡಿತು. ಮಹಿಳೆಯೊಬ್ಬಳು ಸೂರ್ಯಭೂಷಿತಳಾಗಿದ್ದಳು. ಆಕೆಯ ಪಾದದಡಿ ಚಂದ್ರನಿದ್ದನು. ತಲೆಯ ಮೇಲೆ ಹನ್ನೆರಡು ನಕ್ಷತ್ರ ಖಚಿತವಾದ ಕಿರೀಟವಿತ್ತು.


ಪ್ರಕಾಶಮಯ ಸೂರ್ಯನನು ನೋಡಿ ಕಾಂತಿಯುತ ಚಂದ್ರನ ಚಲನೆಯನು ದಿಟ್ಟಿಸಿ,


ರಾತ್ರಿ ಎಂಬುದೇ ಅಲ್ಲಿ ಇರದು; ದೀಪದ ಇಲ್ಲವೇ ಸೂರ್ಯನ ಬೆಳಕಿನ ಅವಶ್ಯಕತೆಯೂ ಇರದು; ದೇವರಾದ ಪ್ರಭುವೇ ಅವರಿಗೆ ಬೆಳಕಾಗಿರುವರು. ಯುಗಯುಗಾಂತರಕ್ಕೂ ಅವರು ರಾಜ್ಯವಾಳುವರು.


ನಾನು ಮತ್ತೊಂದು ದೃಶ್ಯವನ್ನು ಕಂಡೆ. ಒಬ್ಬ ಬಲಿಷ್ಠ ದೇವದೂತನು ಸ್ವರ್ಗದಿಂದ ಇಳಿದುಬಂದನು. ಅವನು ಮೇಘಾಂಬರನಾಗಿದ್ದನು. ಅವನ ತಲೆಯ ಮೇಲೆ ಮುಗಿಲು ಬಿಲ್ಲೊಂದು ಇತ್ತು. ಮುಖವು ಸೂರ್ಯನಂತೆ ಇತ್ತು. ಕಾಲುಗಳು ಅಗ್ನಿಸ್ತಂಭಗಳಂತಿದ್ದವು.


ಧರ್ಮಸಭೆ ಕಳಂಕಕಲ್ಮಷವಾಗಲಿ, ಸುಕ್ಕುಬೊಕ್ಕೆಯಾಗಲಿ ಇಲ್ಲದ ಸೌಂದರ್ಯವತಿಯಾಗಿ ತಮಗೆ ಅರ್ಪಿಸಿಕೊಳ್ಳುವಂತೆ ಹೀಗೆ ಮಾಡಿದರು.


ಅಲ್ಲಿ ಆ ಶಿಷ್ಯರ ಕಣ್ಣೆದುರಿಗೇ ಸ್ವಾಮಿ ರೂಪಾಂತರ ಹೊಂದಿದರು, ಅವರ ಮುಖ ಸೂರ್ಯನಂತೆ ಪ್ರಕಾಶಿಸಿತು. ಅವರ ಉಡುಪು ಬೆಳಕಿನಂತೆ ಪ್ರಜ್ವಲಿಸಿತು.


“ಇದನ್ನು ಆಚರಿಸುವಾಗ ನೀವು ಉದಯಕಾಲದ ಸೂರ್ಯನಂತೆ ಪ್ರಜ್ವಲಿಸುವಿರಿ. ಆರೋಗ್ಯಭಾಗ್ಯವು ನಿಮಗೆ ಬೇಗನೆ ದೊರಕುವುದು. ನಿಮ್ಮ ಸದಾಚಾರವೆ ನಿಮಗೆ ಮುಂಬಲವಾಗಿ ನಡೆಸುವುದು; ಸರ್ವೇಶ್ವರ ಸ್ವಾಮಿಯ ಮಹಿಮೆ ನಿಮಗೆ ಹಿಂಬಲವಾಗಿ ಇರುವುದು.


ವರ್ತಕರು ಮಾರುವ ಸಕಲ ಸುಗಂಧ ತೈಲಗಳಿಂದ ರಸಗಂಧ ಸಾಂಬ್ರಾಣಿ ಮುಂತಾದ ದ್ರವ್ಯಗಳಿಂದ ಧೂಮಸ್ತಂಭಗಳೋಪಾದಿ ಹೊರಹೊಮ್ಮುತ್ತಿರುವ ಅರಣ್ಯದ ಮಾರ್ಗವಾಗಿ ಬರುತ್ತಿರುವ ಆ ಮೆರವಣಿಗೆ ಯಾರದು?


ದೇವರಲ್ಲಿ ಭಯಭಕ್ತಿಯುಳ್ಳ ರಾಜನು ನೀತಿಯಿಂದ ಪ್ರಜೆಗಳನಾಳುವಾತನು ಉದಯಕಾಲದ ಸೂರ್ಯನಿಗೆ ಸಮಾನನು ಏರುವನಾತ ಮೇಘರಹಿತ ಪ್ರಾತಃಕಾಲದೊಳು ತೇಜೋಮಯನಾಗಿ ಮೊಳೆಯಿಸುವನು ಪಚ್ಚೆಪಸಿರನು ಮಳೆ ತೋಯ್ದ ನೆಲದೊಳು ಹುಲುಸಾಗಿ.


“ಯೇಸುವೆಂಬ ನಾನೇ ನನ್ನ ಸಭೆಗಳ ಪ್ರಯೋಜನಾರ್ಥವಾಗಿ ಈ ಸಂಗತಿಗಳ ಬಗ್ಗೆ ನಿಮಗೆ ಸಾಕ್ಷಿನೀಡಲೆಂದು ನನ್ನ ದೂತನನ್ನು ಕಳುಹಿಸಿದೆನು. ನಾನು ದಾವೀದಕುಲಪುತ್ರ. ಅದೇ ವಂಶದ ಕುಡಿ; ಉದಯಕಾಲದ ಉಜ್ವಲ ನಕ್ಷತ್ರ!


ನಗರಕ್ಕೆ ಬೆಳಕನ್ನು ಕೊಡಲು ಸೂರ್ಯನ ಇಲ್ಲವೆ ಚಂದ್ರನ ಅವಶ್ಯಕತೆ ಇಲ್ಲ. ಏಕೆಂದರೆ, ದೇವರ ತೇಜಸ್ಸೇ ಅದಕ್ಕೆ ಬೆಳಕು; ಯಜ್ಞದ ಕುರಿಮರಿಯೇ ಅದಕ್ಕೆ ಜ್ಯೋತಿ.


ನಮ್ಮನ್ನು ಪ್ರೀತಿಸಿದ ಯೇಸುಕ್ರಿಸ್ತರ ಮುಖಾಂತರ ಇವೆಲ್ಲವುಗಳಲ್ಲಿಯೂ ನಾವು ಪೂರ್ಣ ಜಯಶಾಲಿಗಳಾಗುತ್ತೇವೆ.


ಸದ್ಧರ್ಮಿಗಳು ತಮ್ಮ ತಂದೆಯ ಸಾಮ್ರಾಜ್ಯದಲ್ಲಿ ಸೂರ್ಯನಂತೆ ಪ್ರಕಾಶಿಸುವರು. ಕಿವಿಯುಳ್ಳವನು ಕೇಳಿಸಿಕೊಳ್ಳಲಿ!


“ನನ್ನ ನಾಮದಲ್ಲಿ ಭಯಭಕ್ತಿಯಿಂದ ಇರುವ ನಿಮಗಾದರೋ ಜೀವೋದ್ಧಾರಕನೆಂಬ ಸೂರ್ಯನು ಉದಯಿಸಿ, ಸುಕ್ಷೇಮವನ್ನೀಯುವ ಕಿರಣಗಳನ್ನು ಬೀರುವನು. ಕೊಟ್ಟಿಗೆಯಿಂದ ಹೊರಬಂದ ಕರುಗಳಂತೆ ನೀವು ಕುಣಿದು ಕುಪ್ಪಳಿಸುವಿರಿ.


ಖಂಡತುಂಡವಾದ ತೀರ್ಪುನೀಡುವ, ಕತ್ತಿಯಂತೆ ಹರಿತವಾಗಿ ಮಾತನಾಡುವ ನನ್ನ ಪ್ರವಾದಿಗಳನ್ನು ನಿಮ್ಮ ಬಳಿಗೆ ಕಳುಹಿಸಿದ್ದೇನೆ. ನನ್ನ ನ್ಯಾಯದಂಡನೆ ಮಿಂಚಿನಂತೆ ಹೊರಡುವುದು.


“ಎದೋಮಿನ ಬೊಚ್ರನಗರದಿಂದ ಬರುವ ಈತನು ಯಾರು? ರಕ್ತಗೆಂಪಾದ ಉಡುಪನ್ನುಟ್ಟು ಥಳಥಳಿಸುವ ವಸ್ತ್ರಗಳನ್ನು ಧರಿಸಿಕೊಂಡು, ಮಹಾಶೌರ್ಯದಿಂದ ಮೆರೆಯುತ್ತಾ ನಡೆದುಬರುವ ಈತನು ಯಾರು? “ಆತನು ನಾನೇ, ಸತ್ಯವನು ಘೋಷಿಸುವವನು, ಆತನು ನಾನೇ, ಉದ್ಧರಿಸಲು ಸಮರ್ಥನು".


ನಲ್ಲನನ್ನು ಒರಗಿಕೊಂಡು ಅಡವಿಯಿಂದ ಬರುವ ಈಕೆ ಯಾರು? ನಲ್ಲೆ : ಎಬ್ಬಿಸಿದೆ ನಿನ್ನನ್ನು ಸೇಬುಮರದ ಅಡಿಯಲಿ ನಿನ್ನ ತಾಯಿ ಪ್ರಸವವೇದನೆಯಿಂದ ಹಡೆದಾ ಸ್ಥಳದಲಿ ನಿನ್ನನ್ನು ಆಕೆ ಗರ್ಭಧರಿಸಿದಾ ಜಾಗದಲಿ.


ಸಜ್ಜನರ ಮಾರ್ಗ ಪ್ರಾತಃಕಾಲದ ಬೆಳಕಿನಂತೆ; ಅದರ ಬೆಳಕು ಹೆಚ್ಚುತ್ತಿರುತ್ತದೆ ಬಟ್ಟ ಹಗಲವರೆಗೆ.


ಸಜ್ಜನರ ಸಂಗದೊಳು ದೇವನಿರಲು I ದುರ್ಜನರಿದೋ ದಿಗ್ಭ್ರಾಂತರಾಗುವರು II


ಆಗ ನಿನ್ನ ಬಾಳು ನಡುಹಗಲಿಗಿಂತ ಪ್ರಜ್ವಲ ಕತ್ತಲು ಕೂಡ ಪ್ರಾತಃಕಾಲದಂತೆ ಉಜ್ವಲ!


ಅವರ ಬಲಗೈಯಲ್ಲಿ ಏಳು ನಕ್ಷತ್ರಗಳಿದ್ದವು. ಬಾಯೊಳಗಿಂದ ಹರಿತವಾದ ಇಬ್ಬಾಯಿಯ ಖಡ್ಗವು ಹೊರಬಂದಿತ್ತು. ಅವರ ಮುಖ ನಡುಮಧ್ಯಾಹ್ನದ ಸೂರ್ಯನಂತೆ ಪ್ರಕಾಶಿಸುತ್ತಿತ್ತು.


ಆಹಾ, ನನ್ನ ಪ್ರಿಯಳೇ, ನೀನೆಷ್ಟು ಚೆಲುವೆ ಆಹಾ, ನೀನೆಷ್ಟು ಕೋಮಲೆ ನಿನ್ನ ನೇತ್ರಗಳು ಪಾರಿವಾಳಗಳಂತೆ! ನಲ್ಲೆ :


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು