Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪರಮಗೀತೆ 3:11 - ಕನ್ನಡ ಸತ್ಯವೇದವು C.L. Bible (BSI)

11 ಸಿಯೋನಿನ ಮಹಿಳೆಯರೇ, ಹೊರಟುಬನ್ನಿ ಅರಸ ಸೊಲೊಮೋನನನ್ನು ನೋಡಬನ್ನಿ ಆತನ ವಿವಾಹಮಹೋತ್ಸವ ದಿನದಂದು ಆತನ ತಾಯಿ ತೊಡಿಸಿದ ಮುಕುಟವನ್ನು ಆತ ಧರಿಸಿರುವುದನ್ನು ನೋಡಬನ್ನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಚೀಯೋನಿನ ಮಹಿಳೆಯರೇ, ಹೊರಟು ಬನ್ನಿ ರಾಜನಾದ ಸೊಲೊಮೋನನನ್ನು ನೋಡ ಬನ್ನಿ. ಅವನು ವಿವಾಹ ದಿನದ ಉತ್ಸವದಂದು ಆತನ ತಾಯಿ ಆತನಿಗೆ ತೊಡಿಸಿದ ಕಿರೀಟವನ್ನು ಆತ ಧರಿಸಿರುವುದನ್ನು ನೋಡಬನ್ನಿ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಚೀಯೋನಿನ ನಾರಿಯರೇ, ಹೊರಟು ಹೋಗಿ ರಾಜನಾದ ಸೊಲೊಮೋನನನ್ನು ನೋಡಿರಿ. ಅವನು ವಿವಾಹವಾಗಿ ಉಲ್ಲಾಸಪಟ್ಟ ದಿನದಲ್ಲಿ ತಾಯಿಯು ಅವನ ತಲೆಗಿಟ್ಟ ಕಿರೀಟವನ್ನು ಧರಿಸಿಕೊಂಡಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಚೀಯೋನಿನ ಸ್ತ್ರೀಯರೇ, ಹೊರಗೆ ಹೋಗಿ ರಾಜನಾದ ಸೊಲೊಮೋನನನ್ನು ನೋಡಿರಿ. ಅವನ ಮದುವೆಯ ದಿನದಲ್ಲಿ ಹೃದಯವು ಹರ್ಷಗೊಂಡಿದ್ದಾಗ ಅವನ ತಾಯಿ ತಲೆಗಿಟ್ಟ ಕಿರೀಟವನ್ನು ಧರಿಸಿಕೊಂಡಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಚೀಯೋನಿನ ಪುತ್ರಿಯರೇ, ನೀವು ಹೊರಗೆ ಬನ್ನಿರಿ. ಅರಸನಾದ ಸೊಲೊಮೋನನನ್ನು ನೋಡಿರಿ. ಅವನ ಮದುವೆಯ ದಿನದಂದು, ಅವನ ಹೃದಯ ಸಂತೋಷಗೊಂಡ ದಿನದಲ್ಲಿ, ಅವನ ತಾಯಿ ಅವನಿಗೆ ತೊಡಿಸಿದ ಕಿರೀಟವನ್ನು ಅವನು ಧರಿಸಿರುವುದನ್ನು ಬಂದು ನೋಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪರಮಗೀತೆ 3:11
31 ತಿಳಿವುಗಳ ಹೋಲಿಕೆ  

ಯುವಕನು ಕನ್ಯೆಯುವತಿಯನು ವರಿಸುವಂತೆ ವರಿಸುವನು ಸೃಷ್ಟಿಕರ್ತನು ನಿನ್ನನು. ವರನು ವಧುವಿನಲಿ ಆನಂದಿಸುವಂತೆ ನಿನ್ನಲಿ ಆನಂದಿಸುವನು ನಿನ್ನ ದೇವನು.


“ನೀನು ಹೋಗಿ ಜೆರುಸಲೇಮ್ ನಗರಕ್ಕೇ ಕೇಳಿಸುವಂತೆ ಈ ಸಂದೇಶವನ್ನು ಸಾರು : ನೀನು ಯೌವನದಲ್ಲಿ ನನ್ನ ಮೇಲಿಟ್ಟಿದ್ದ ಪ್ರೀತಿಯನ್ನು, ನವ ವಧುವಾಗಿ ನನಗೆ ತೋರಿಸಿದ ಪ್ರೇಮವನ್ನು, ಹಾಗು ಬಿತ್ತನೆಯಿಲ್ಲದ ಅರಣ್ಯಮಾರ್ಗವಾಗಿ ನನ್ನನ್ನು ಹಿಂಬಾಲಿಸಿದಾಗ ಅನುಸರಿಸುತ್ತಿದ್ದ ನಿನ್ನ ಪಾತಿವ್ರತ್ಯವನ್ನು ನನ್ನ ನೆನಪಿನಲ್ಲಿ ಇಟ್ಟುಕೊಂಡಿದ್ದೇನೆ; ಇದು ನಿನ್ನ ಹಿತಕ್ಕಾಗಿಯೇ.


ಇಗೋ ನೋಡು, ಮೇಘಾರೂಢನಾಗಿ ಬರುತಿಹನು ಪ್ರತಿಯೊಂದು ಕಣ್ಣೂ ಕಾಣುವುದು ಆತನನು, ಆತನನ್ನು ಇರಿದವರೂ ವೀಕ್ಷಿಸುವರು, ಗೋಳಾಡುವರಾತನನ್ನು ಕಂಡು ಲೋಕದ ಜನರೆಲ್ಲರು. ಹೌದು, ಅದರಂತೆಯೇ ಆಗುವುದು, ಆಮೆನ್.


ಅಂತೆಯೇ ನಾವು ಅವರ ನಿಮಿತ್ತ ನಮಗೆ ಬರುವ ನಿಂದೆ ಅವಮಾನಗಳನ್ನು ಹೊತ್ತು ನಮ್ಮ ಪಾಳೆಯದಿಂದಾಚೆ ಅವರ ಬಳಿಗೆ ಹೋಗೋಣ.


ಅದೇ ತೀರ್ಪಿನ ದಿನ ದಕ್ಷಿಣ ದೇಶದ ರಾಣಿ ಈ ಪೀಳಿಗೆಗೆ ಎದುರಾಗಿ ನಿಂತು ಇದನ್ನು ಅಪರಾಧಿಯೆಂದು ಖಂಡಿಸುವಳು. ಆಕೆ ಸೊಲೊಮೋನನ ಜ್ಞಾನೋಕ್ತಿಗಳನ್ನು ಕೇಳುವುದಕ್ಕಾಗಿ ದೂರ ದೇಶದಿಂದ ಬಂದಳು. ಆದರೆ ಸೊಲೊಮೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ.


ಪ್ರಸನ್ನವಾಗಿಹನು ದೇವ, ಸರ್ವೇಶ ನಿನ್ನ ಮಧ್ಯೆ ಕೊಡುವನಾ ಶೂರ ನಿನಗೆ ರಕ್ಷಣೆ ಹರ್ಷಾನಂದಗೊಳ್ಳುವನು ನಿನ್ನ ವಿಷಯದಲಿ ಪುನಶ್ಚೇತನಗೊಳಿಸುವನು ನಿನ್ನನು ಪ್ರಶಾಂತ ಪ್ರೀತಿಯಲಿ ಗಾನಗೀತೆಗಳಿಂದ ತೋಷಿಸುವನು ನಿನ್ನಲಿ ಹಬ್ಬಹುಣ್ಣಿಮೆಗಳ ತರದಲಿ.


ಆಗ ಸಿಯೋನ್ ನಗರಿಯ ದ್ವಾರದಲೆ ನಿಲ್ಲುವೆನು I ನಿನ್ನ ಗುಣಾತಿಶಯಗಳನು ಪ್ರಸಿದ್ಧಪಡಿಸುವೆನು I ನೀನಿತ್ತ ಮುಕ್ತಿಗಾಗಿ ಆನಂದಗೊಳ್ಳುವೆನು II


ಆತನ ಕಣ್ಣುಗಳು ಬೆಂಕಿಯ ಕೆಂಡಗಳಂತಿವೆ; ತಲೆಯ ಮೇಲೆ ಅನೇಕ ಕಿರೀಟಗಳಿವೆ.ಆತನ ಹೆಸರನ್ನು ಬರೆದಿಟ್ಟಿದೆ; ಅದು ಆತನಿಗೇ ಹೊರತು ಬೇರೆ ಯಾರಿಗೂ ತಿಳಿಯದು.


ಬಂದಿದೆ ಯಜ್ಞದ ಕುರಿಮರಿಯ ಶುಭ ವಿವಾಹ ಸಿದ್ಧಳಿಹಳು ಮದುಮಗಳು ಶೃಂಗಾರ ಸಹಿತ ಸಂತೋಷಿಸೋಣ, ಸಂಭ್ರಮಿಸೋಣ ! ಆತನ ಮಹಿಮೆಯನು ಕೀರ್ತಿಸೋಣ;


ದೇವದೂತರಿಗಿಂತ ಕೊಂಚಕಾಲವೇ ತುಸು ತಗ್ಗಿಸಲಾದ ಒಬ್ಬರನ್ನು, ಅಂದರೆ ಯೇಸುವನ್ನು ಮಾತ್ರ ನಾವು ಕಾಣುತ್ತೇವೆ. ಇವರು ಯಾತನಾ ಮರಣವನ್ನು ಅನುಭವಿಸಿದ್ದರಿಂದ ‘ಘನಗೌರವವನ್ನೂ ಸಿರಿಮಹಿಮೆಯನ್ನೂ ಮುಕುಟವಾಗಿ’ ಪಡೆದುದನ್ನು ನಾವು ಕಾಣುತ್ತೇವೆ. ದೈವಾನುಗ್ರಹದಿಂದ ಎಲ್ಲಾ ಮಾನವರ ಕಲ್ಯಾಣಕ್ಕಾಗಿ ಅವರು ಸಾವನ್ನು ಅನುಭವಿಸಬೇಕಾಗಿತ್ತು.


ಸಭೆಯೆಂಬ ಶರೀರಕ್ಕೆ ಶಿರಸ್ಸಾತ, ಆದಿಸಂಭೂತ, ಆಗಲೆಲ್ಲದರಲೂ ಅಗ್ರಸ್ಥ, ಸತ್ತವರಿಂದ ಮೊದಲೆದ್ದು ಬಂದನಾತ.


“ನನ್ನಲ್ಲಿರುವ ಆನಂದವು ನಿಮ್ಮಲ್ಲಿ ಇರಬೇಕೆಂತಲೂ ನಿಮ್ಮ ಆನಂದವು ತುಂಬಿ ತುಳುಕಬೇಕೆಂತಲೂ ಇದನ್ನೆಲ್ಲಾ ನಿಮಗೆ ಹೇಳುತ್ತಿದ್ದೇನೆ.


ಮದುಮಗಳು ಮದುಮಗನಿಗೆ ಸೇರಿದವಳು. ಮದುಮಗನ ಗೆಳೆಯನಾದರೋ ಪಕ್ಕದಲ್ಲಿದ್ದು ಮದುಮಗನ ಕರೆಗೆ ಕಿವಿಗೊಡುತ್ತಾನೆ; ಆತನ ಸ್ವರ ಕೇಳಿ ಹರ್ಷಿಸುತ್ತಾನೆ. ಇಂಥ ಆನಂದದಿಂದ ನಾನೀಗ ಭರಿತನಾಗಿದ್ದೇನೆ.


ಈ ನಿನ್ನ ತಮ್ಮ ನಮ್ಮ ಪಾಲಿಗೆ ಸತ್ತುಹೋಗಿದ್ದ. ಈಗ ಬದುಕಿಬಂದಿದ್ದಾನೆ. ತಪ್ಪಿಹೋಗಿದ್ದ; ಈಗ ಸಿಕ್ಕಿದ್ದಾನೆ. ಆದುದರಿಂದ ನಾವು ಹಬ್ಬಮಾಡಿ ಆನಂದಿಸುವುದು ಸಹಜವಲ್ಲವೆ?’ ಎಂದನು.”


ಅವರಿಗೆ ಒಳಿತನ್ನು ಮಾಡುವುದರಲ್ಲಿ ಸಂತೋಷಿಸುವೆನು.


ತೃಪ್ತನಾಗುವನಾತ ಕಂಡು ತನ್ನ ಪ್ರಾಣಯಾತನೆಯ ಫಲವನು. ಸಜ್ಜನನಾದ ಆ ನನ್ನ ದಾಸ ತರುವನು ಸನ್ಮಾರ್ಗಕೆ ಬಹುಜನರನು. ತಾನೇ ಹೊತ್ತುಕೊಳ್ಳುವನು ಅವರ ಅಪರಾಧಗಳ ಹೊರೆಯನು.


ಮಗುವೊಂದು ಹುಟ್ಟಿತೆಮಗೆ ವರಪುತ್ರನನು ಕೊಟ್ಟರೆಮಗೆ. ಆತನ ಕೈಯಲ್ಲಿಹುದು ರಾಜ್ಯಾಡಳಿತ ‘ಅದ್ಭುತಶಾಲಿ’, ಮಂತ್ರಿಶ್ರೇಷ್ಠ’ ‘ಪರಾಕ್ರಮದೇವ’, ‘ಅನಂತ ಪಿತ’, ‘ಶಾಂತಿ ನೃಪ’ - ಇವು ಆತನ ನಾಮಾಂಕಿತ.


ಆಗ ಒಡೆಯರಾದ ಸ್ವಾಮಿ ನ್ಯಾಯನಿರ್ಣಯ ಮಾಡುವ ತಮ್ಮ ಚೈತನ್ಯದಿಂದಲೂ ಸುಟ್ಟು ಶುಚಿಮಾಡುವ ಚೈತನ್ಯದಿಂದಲೂ ಸಿಯೋನಿನ ಮಹಿಳೆಯರ ಕಲ್ಮಶವನ್ನು ತೊಡೆದುಹಾಕುವರು.


ನಲ್ಲನನ್ನು ಒರಗಿಕೊಂಡು ಅಡವಿಯಿಂದ ಬರುವ ಈಕೆ ಯಾರು? ನಲ್ಲೆ : ಎಬ್ಬಿಸಿದೆ ನಿನ್ನನ್ನು ಸೇಬುಮರದ ಅಡಿಯಲಿ ನಿನ್ನ ತಾಯಿ ಪ್ರಸವವೇದನೆಯಿಂದ ಹಡೆದಾ ಸ್ಥಳದಲಿ ನಿನ್ನನ್ನು ಆಕೆ ಗರ್ಭಧರಿಸಿದಾ ಜಾಗದಲಿ.


ಎನ್ನಿನಿಯನೇ, ಬಾ ಹೋಗೋಣ ವನಕೆ ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುವುದಕೆ.


ಜೆರುಸಲೇಮಿನ ಮಹಿಳೆಯರೇ, “ತಾನೇ ಏಳುವುದಕ್ಕೆ ಮುಂಚೆ ನನ್ನ ಪ್ರಿಯನನ್ನು ಎಚ್ಚರಿಸದಿರಿ ಆತನ ವಿಶ್ರಾಂತಿಗೆ ಭಂಗ ತರದಿರಿ” ಎಂದು ನಿಮಗೆ ವಿಧಿಸಿರುವೆ ಆಣೆಯಿಟ್ಟು ವನದ ಹುಲ್ಲೆ ಹರಿಣಿಗಳ ಮೇಲೆ. ನಲ್ಲೆ :


ಓ ಜೆರುಸಲೇಮಿನ ಮಹಿಳೆಯರೇ, ನಾನು ಕಪ್ಪಾಗಿರುವೆ ಕೇದಾರಿನ ಗುಡಾರಗಳಂತೆ ಆದರೂ ಚೆಲುವೆ ಸೊಲೊಮೋನನಾ ಪರದೆಗಳಂತೆ.


ಸಿಯೋನ್ ಪಟ್ಟಣಿಗರು ಹರ್ಷಗೊಳ್ಳಲಿ I ಯೆಹೂದ್ಯ ನಗರಗಳು ಆನಂದಪಡಲಿ I ನಿನ್ನ ನ್ಯಾಯವನು ನೆನಪಿಸಿಕೊಳ್ಳಲಿ II


ಅವರಿಂದ ಪಡೆದ ಬೆಳ್ಳಿಬಂಗಾರಗಳನ್ನು ತೆಗೆದುಕೊಂಡು ಒಂದು ಕಿರೀಟವನ್ನು ಮಾಡಿಸು. ಅದನ್ನು ಯೆಹೋಚಾದಾಕನ ಮಗನೂ ಮಹಾಯಾಜಕನೂ ಆದ ಯೆಹೋಶುವನ ತಲೆಗೆ ತೊಡಿಸು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು