Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪರಮಗೀತೆ 3:1 - ಕನ್ನಡ ಸತ್ಯವೇದವು C.L. Bible (BSI)

1 ನಲ್ಲೆ : ನನ್ನ ಪ್ರಾಣಕಾಂತನನ್ನು ರಾತ್ರಿಯೆಲ್ಲಾ ಹುಡುಕಿದೆ ಹಾಸಿಗೆಯ ಮೇಲೆ ಹಾತೊರೆದೆ ಹುಡುಕಿ ಹುಡುಕಿ ಸಿಗಲಾರದೆ ಬೇಸತ್ತೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ರಾತ್ರಿಯಲ್ಲಿ ಹಾಸಿಗೆಯ ಮೇಲೆ ನನ್ನ ಪ್ರಾಣಪ್ರಿಯನನ್ನು ಹುಡುಕಿದೆನು, ಎಷ್ಟು ಹುಡುಕಿದರೂ ಸಿಕ್ಕಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ರಾತ್ರಿ ರಾತ್ರಿಯಲ್ಲಿಯೂ ಹಾಸಿಗೆಯ ಮೇಲೆ ನನ್ನ ಪ್ರಾಣಪ್ರಿಯನನ್ನು ಹುಡುಕಿದೆನು; ಎಷ್ಟು ಹುಡುಕಿದರೂ ಸಿಕ್ಕಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ರಾತ್ರಿಯಲ್ಲಿಯೂ ನನ್ನ ಪ್ರಾಣಪ್ರಿಯನಿಗಾಗಿ ಹಾಸಿಗೆಯ ಮೇಲೆ ಹುಡುಕಿದೆನು. ಎಷ್ಟು ಹುಡುಕಿದರೂ ಅವನು ಸಿಕ್ಕಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ರಾತ್ರಿಯೆಲ್ಲಾ ನನ್ನ ಹಾಸಿಗೆಯ ಮೇಲಿದ್ದೆನು; ನನ್ನ ಪ್ರಾಣ ಪ್ರಿಯನನ್ನು ಹುಡಕಿದೆನು. ಅವನನ್ನು ಎಷ್ಟು ಹುಡುಕಿದರೂ ಅವನು ಸಿಗಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪರಮಗೀತೆ 3:1
16 ತಿಳಿವುಗಳ ಹೋಲಿಕೆ  

ಕ್ರಿಸ್ತಯೇಸುವನ್ನು ನೀವು ನೋಡದಿದ್ದರೂ ಅವರನ್ನು ಪ್ರೀತಿಸುತ್ತೀರಿ. ನೀವೀಗ ಕಣ್ಣಾರೆ ಕಾಣದಿದ್ದರೂ ಅವರನ್ನು ವಿಶ್ವಾಸಿಸುತ್ತೀರಿ.


ಬಾಗಿಲ ತೆರೆದು ನೋಡಿದೆ ನನ್ನಿನಿಯನಿಗಾಗಿ ಅಷ್ಟರೊಳಗೆ ಹೋಗಿಬಿಟ್ಟಿದ್ದನವನು ಹಿಂದಿರುಗಿ. ನಿಂತಂತಾಯಿತು ಅವನ ದನಿಗೆ ನನ್ನೆದೆಯ ತುಡಿತ ಎಷ್ಟೋ ಹುಡುಕಿದೆ, ಆದರೆ ಸಿಗಲಿಲ್ಲ ಎಷ್ಟೋ ಕೂಗಿದೆ, ಆದರೆ ಉತ್ತರವೇ ಇಲ್ಲ.


ನನ್ನ ಪ್ರಾಣಪ್ರಿಯನೇ ಹೇಳು: ನಿನ್ನ ಮಂದೆಯನ್ನು ನೀನು ಮೇಯಿಸುವುದೆಲ್ಲಿ? ನಡುಹಗಲಲ್ಲಿ ಅದು ವಿಶ್ರಮಿಸುವುದೆಲ್ಲಿ? ನಾನೇಕೆ ಅಲೆಯಬೇಕು ಮುಸುಕು ಹಾಕಿದವಳಂತೆ ನಿನ್ನ ಗೆಳೆಯರ ಮಂದೆಗಳ ಹಿಂದೆ? ನಲ್ಲ :


ಅರಸಿರಿ ಸರ್ವೇಶ್ವರನನು ಆತ ದೊರಕುವ ವೇಳೆಯಲಿ ವಿನಂತಿಸಿರಿ ಆತನಿರುವಾಗಲೆ ಸಮೀಪದಲಿ.


ಹಾರೈಸಿದೆ ಎನ್ನಾತ್ಮ ನಿನ್ನನು ಇರುಳೊಳು ಅರಸಿತೆನ್ನ ಮನ ನಿನ್ನನು ಮುಂಜಾನೆಯೊಳು. ನೀನೀಯುವಾಗ ಜಗಕೆ ನ್ಯಾಯತೀರ್ಪನು ಕಲಿತುಕೊಳ್ಳುವರು ಭೂನಿವಾಸಿಗಳು ನ್ಯಾಯನೀತಿಯನು.


ಜೆರುಸಲೇಮಿನ ಮಹಿಳೆಯರೇ, ಆಣೆಯಿಟ್ಟು ಹೇಳುತ್ತೇನೆ ನಿಮಗೆ : “ನೀವು ನನ್ನ ಕಾಂತನನ್ನು ಕಂಡರೆ ಅನುರಾಗದಿಂದ ನಾನು ಅಸ್ವಸ್ಥಳಾಗಿರುವೆ ಎಂದು ತಿಳಿಸಿರಿ ಅವನಿಗೆ” ಮಹಿಳೆಯರು :


ಹಗಲೆಲ್ಲ ಕೂಗಿಕೊಂಡರೂ ನೀ ಬರಲಿಲ್ಲವಲ್ಲಾ I ಇರುಳೆಲ್ಲಾ ಮೊರೆಯಿಟ್ಟರೂ ನೆಮ್ಮದಿಯಿಲ್ಲವಲ್ಲಾ II


ಮೂರನೇ ಬಾರಿಯೂ ಯೇಸು, “ಯೊವಾನ್ನನ ಮಗನಾದ ಸಿಮೋನನೇ, ನೀನು ನನ್ನನ್ನು ಪ್ರೀತಿಸುತ್ತೀಯಾ?” ಎಂದು ಕೇಳಿದರು. “ನೀನು ನನ್ನನ್ನು ಪ್ರೀತಿಸುತ್ತೀಯಾ?” ಎಂದು ಯೇಸು ಮೂರನೇ ಬಾರಿ ಕೇಳಿದ್ದನ್ನು ಕಂಡು ಪೇತ್ರನು ನೊಂದುಕೊಂಡನು. “ಪ್ರಭುವೇ, ನಿಮಗೆ ಎಲ್ಲವು ತಿಳಿದೇ ಇದೆ. ನಾನು ನಿಮ್ಮನ್ನು ಪ್ರೀತಿಸುತ್ತೇನೆ ಎಂದೂ ನಿಮಗೆ ತಿಳಿದಿದೆ,” ಎಂದು ಹೇಳಿದನು. ಅದಕ್ಕೆ ಯೇಸು, “ನನ್ನ ಕುರಿಗಳನ್ನು ಮೇಯಿಸು;


ಆಗ ಯೇಸು ಜನರಿಗೆ, “ಇಕ್ಕಟ್ಟಾದ ಬಾಗಿಲಿನಿಂದಲೇ ಒಳಹೋಗಲು ಸರ್ವಪ್ರಯತ್ನ ಮಾಡಿ. ಏಕೆಂದರೆ, ಅನೇಕರು ಒಳಕ್ಕೆ ಹೋಗಲು ಖಂಡಿತವಾಗಿ ಪ್ರಯತ್ನಿಸುವರು; ಆದರೆ ಅದು ಅವರಿಂದಾಗದು.


ದಣಿದಿರುವೆ ನಾ ದುಃಖದಿಂದ ನರಳಿ ನರಳಿ I ತೊಯ್ದಿದೆ ಹಾಸಿಗೆ ಇರುಳಿರುಳ ಕಂಬನಿಯಲಿ I ತೇಲಿದೆ ಮಂಚ ಈ ಕಣ್ಣೀರ ಪ್ರವಾಹದಲಿ II


ಕೋಪಗೊಂಡರೂ ದೂರವಿರು ಪಾಪದಿಂದ I ಶಯನದಲ್ಲಿದ್ದರೂ ಧ್ಯಾನಿಸು ಹೃದಯದಿಂದ II


ಇದನ್ನು ಕೇಳಿದ ಮರಿಯಳು ತಟ್ಟನೆ ಎದ್ದು ಯೇಸುವನ್ನು ಕಾಣಹೋದಳು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು