Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪರಮಗೀತೆ 2:7 - ಕನ್ನಡ ಸತ್ಯವೇದವು C.L. Bible (BSI)

7 ಜೆರುಸಲೇಮಿನ ಮಹಿಳೆಯರೇ, “ತಾನೇ ಏಳುವುದಕ್ಕೆ ಮುಂಚೆ ನನ್ನ ಪ್ರಿಯನನ್ನು ಎಚ್ಚರಿಸದಿರಿ ಆತನ ವಿಶ್ರಾಂತಿಗೆ ಭಂಗ ತರದಿರಿ” ಎಂದು ನಿಮಗೆ ವಿಧಿಸಿರುವೆ ಆಣೆಯಿಟ್ಟು ವನದ ಹುಲ್ಲೆ ಹರಿಣಿಗಳ ಮೇಲೆ. ನಲ್ಲೆ :

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಯೆರೂಸಲೇಮಿನ ಮಹಿಳೆಯರೇ, ಆತನು ತಾನಾಗಿ ಎಚ್ಚರಗೊಳ್ಳುವವರೆಗೆ ಯಾರೂ ನನ್ನ ಪ್ರಿಯನನ್ನು ಎಚ್ಚರಿಸದಿರಿ, ಆತನ ವಿಶ್ರಾಂತಿಗೆ ಯಾರೂ ಭಂಗ ಮಾಡದಿರಿ ಎಂದು ವನದ ಜಿಂಕೆ ಹರಿಣಗಳ ಮೇಲೆ ನಿಮ್ಮಿಂದ ಪ್ರಮಾಣಮಾಡಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಯೆರೂಸಲೇವಿುನ ಸ್ತ್ರೀಯರೇ, ಉಚಿತಕಾಲಕ್ಕೆ ಮುಂಚೆ ಪ್ರೀತಿಯನ್ನು ಹುಟ್ಟಿಸಿ ಬೆಳೆಯಿಸಬಾರದೆಂದು ಅಡವಿಯ ಹುಲ್ಲೆಗಳ ಮೇಲೆಯೂ ಹರಿಣಿಗಳ ಮೇಲೆಯೂ ನಿಮ್ಮಿಂದ ಪ್ರಮಾಣಮಾಡಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಜೆರುಸಲೇಮಿನ ಸ್ತ್ರೀಯರೇ, ತಕ್ಕಕಾಲಕ್ಕೆ ಮೊದಲೇ ಪ್ರೀತಿಯನ್ನು ಹುಟ್ಟಿಸಿ, ಬೆಳೆಯಿಸುವುದಿಲ್ಲವೆಂದು ಜಿಂಕೆಗಳ ಮೇಲೆಯೂ ಕಾಡುಹುಲ್ಲೆಗಳ ಮೇಲೆಯೂ ನನಗೆ ಪ್ರಮಾಣ ಮಾಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಯೆರೂಸಲೇಮಿನ ಪುತ್ರಿಯರೇ, ಮೆಚ್ಚುವ ಕಾಲಕ್ಕೆ ಮುಂಚೆ ನೀವು ಪ್ರೀತಿಯನ್ನು ಎಬ್ಬಿಸಬೇಡಿರಿ. ಎಚ್ಚರಿಸಲೂ ಬೇಡಿರಿ ಎಂದು ಅಡವಿಯ ಹುಲ್ಲೆ ಹರಿಣಿಗಳ ಮೇಲೆ ನಿಮ್ಮಿಂದ ಪ್ರಮಾಣಮಾಡಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪರಮಗೀತೆ 2:7
15 ತಿಳಿವುಗಳ ಹೋಲಿಕೆ  

ಜೆರುಸಲೇಮಿನ ಮಹಿಳೆಯರೇ, “ತಾನೇ ಏಳುವುದಕ್ಕೆ ಮುಂಚೆ ನನ್ನ ಪ್ರಿಯನನ್ನು ಎಚ್ಚರಿಸದಿರಿ ಆತನ ವಿಶ್ರಾಂತಿಗೆ ಭಂಗ ತರದಿರಿ” ಎಂದು ನಿಮಗೆ ವಿಧಿಸಿರುವೆನು ವನದ ಹುಲ್ಲೆ ಹರಿಣಿಗಳ ಮೇಲೆ ಆಣೆಯಿಟ್ಟು.


“ಜೆರುಸಲೇಮಿನ ಮಹಿಳೆಯರೇ, ತಾನೇ ಏಳುವುದಕ್ಕೆ ಮುಂಚೆ ನನ್ನ ಪ್ರಿಯನನ್ನು ಎಚ್ಚರಿಸದಿರಿ ಅವನ ವಿಶ್ರಾಂತಿಗೆ ಭಂಗ ತರದಿರಿ” ಎಂದು ನಾನು ನಿಮಗೆ ಆಣೆಯಿಟ್ಟು ಹೇಳುತ್ತೇನೆ. ಮಹಿಳೆಯರು :


ಓ ಜೆರುಸಲೇಮಿನ ಮಹಿಳೆಯರೇ, ನಾನು ಕಪ್ಪಾಗಿರುವೆ ಕೇದಾರಿನ ಗುಡಾರಗಳಂತೆ ಆದರೂ ಚೆಲುವೆ ಸೊಲೊಮೋನನಾ ಪರದೆಗಳಂತೆ.


ಆಕೆ ಮನೋಹರವಾದ ಹರಿಣಿ, ಸುಂದರವಾದ ಜಿಂಕೆಮರಿ, ಆಕೆಯ ಸ್ತನಗಳು ನಿನ್ನನ್ನು ಸರ್ವದಾ ತೃಪ್ತಿಪಡಿಸಲಿ, ಆಕೆಯ ಒಲವಿನಲ್ಲೇ ಸದಾ ತಲ್ಲೀನನಾಗಿರು.


ಅವನ ಮಾತು ಮಧುರ ಅವನು ಸರ್ವಾಂಗ ಸುಂದರ. ಜೆರುಸಲೇಮಿನ ಮಹಿಳೆಯರೇ, ಇವನೇ ನನ್ನ ಪ್ರಿಯನು ಇವನೇ ನನ್ನ ಇನಿಯನು.


ನನ್ನ ಪ್ರಿಯನು ಇಹನು ಜಿಂಕೆಯಂತೆ, ಎಳೆಯ ಹುಲ್ಲೆಯಂತೆ ಇಗೋ, ನಿಂತಿಹನು ಗೋಡೆಯ ಹಿಂಭಾಗದಲೆ, ದೃಷ್ಟಿಸಿ ನೋಡುತಿಹನು ಕಿಟಕಿಗಳಲಿ ಇಣುಕು ಹಾಕುತಿಹನು ಜಾಲಾಂತರಗಳಲಿ.


ಆದರೆ ಯೇಸು ಮೌನವಾಗಿದ್ದರು. “ಜೀವಂತ ದೇವರ ಮೇಲೆ ಆಣೆಯಿರಿಸಿ ನಾನು ನಿನ್ನನ್ನು ಕೇಳುತ್ತಿದ್ದೇನೆ, ‘ನೀನು ದೇವರ ಪುತ್ರ ಹಾಗೂ ಅಭಿಷಿಕ್ತನಾದ ಲೋಕೋದ್ಧಾರಕನೋ?’ ನಮಗೆ ಹೇಳು,” ಎಂದನು ಆ ಪ್ರಧಾನಯಾಜಕ.


ನಫ್ತಾಲಿ ಸ್ವಚ್ಛಂದ ಜಿಂಕೆಮರಿಯಂತೆ ಸಿಗುವುದವನಲಿ ಸುಮಧುರವಾದ ಮಾತುಕತೆ.


ನನಗಿತ್ತನಾತ ಹುಲ್ಲೆಯಂತ ಮೊನೆಗಾಲು I ಎನ್ನ ಬಿಗಿ ನಿಲ್ಲಿಸಿದ ಮಲೆಗಳ ಮೇಲೂ II


ಬೇಡನಿಂದ ಓಡುವ ಜಿಂಕೆಯಂತೆ, ಬೇಟೆಗಾರನ ಕೈಯಿಂದ ಹಾರಿಹೋಗುವ ಹಕ್ಕಿಯಂತೆ, ಆ ಬಲೆಯಿಂದ ತಪ್ಪಿಸಿಕೊ.


ಕತ್ತಲು ಕಳೆಯುವ ಮುನ್ನ ಹೊತ್ತು ಮೂಡುವ ಮುನ್ನ ಹೊರಟು ಬಾ, ನನ್ನ ಕಾಂತ ಜಿಂಕೆಯಂತಿರು ಪ್ರಾಯದ ಹುಲ್ಲೆಯಂತಿರು ಬೇತೆರ್ ಪರ್ವತದ ಮೇಲಿರು.


ಸುಗಂಧಸಸ್ಯ ಪರ್ವತದಿಂದಲೆ ಜಿಂಕೆಯಂತೆ, ಪ್ರಾಯದ ಹುಲ್ಲೆಯಂತೆ ತ್ವರೆಮಾಡಿ ಬಾ ನನ್ನಿನಿಯನೇ.


ಸ್ವಾಮಿ ಸರ್ವೇಶ್ವರ ನೀಡುವನೆನಗೆ ಧೀರತೆ ಚುರುಕುಗೊಳಿಸುವನಾತ ನನ್ನ ಕಾಲುಗಳನು ಜಿಂಕೆಯಂತೆ ಮಾಡುವನು ಬೆಟ್ಟಗುಡ್ಡಗಳಲಿ ನಾನು ಓಡಾಡುವಂತೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು