Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪರಮಗೀತೆ 1:2 - ಕನ್ನಡ ಸತ್ಯವೇದವು C.L. Bible (BSI)

2 ಚುಂಬಿಸೆನ್ನನು ನಿನ್ನ ತುಟಿಗಳಿಂದ ನಿನ್ನ ಪ್ರೀತಿ ಅತಿ ಮಧುರ ಮಧುಪಾನಕ್ಕಿಂತ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ನಿನ್ನ ಬಾಯ ಮುದ್ದುಗಳಿಂದ ನನಗೆ ಮುದ್ದಿಡು ನಿನ್ನ ಪ್ರೀತಿಯು ದ್ರಾಕ್ಷಾರಸಕ್ಕಿಂತಲೂ ಉತ್ತಮ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಬಾಯ ಮುದ್ದುಗಳಿಂದ ನನ್ನನ್ನು ಮುದ್ದಿಸಲಿ; ನಿನ್ನ ಲಾಲನೆಯು ದ್ರಾಕ್ಷಾರಸಕ್ಕಿಂತಲೂ ಮೇಲು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ನಿನ್ನ ಬಾಯಿಂದ ನನ್ನನ್ನು ಮುದ್ದಾಡು, ನಿನ್ನ ಪ್ರೀತಿ ದ್ರಾಕ್ಷಾರಸಕ್ಕಿಂತಲೂ ಉತ್ತಮ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಬಾಯಿಯ ಮುದ್ದುಗಳಿಂದ ನನಗೆ ಮುದ್ದಿಡಲಿ, ನಿನ್ನ ಪ್ರೀತಿಯು ದ್ರಾಕ್ಷಾರಸಕ್ಕಿಂತ ಉತ್ತಮ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪರಮಗೀತೆ 1:2
20 ತಿಳಿವುಗಳ ಹೋಲಿಕೆ  

ನನ್ನ ಪ್ರಿಯಳೇ, ನನ್ನ ವಧುವೇ, ನಿನ್ನ ಪ್ರೀತಿ ಎಷ್ಟೋ ರಮ್ಯ ! ನಿನ್ನ ಪ್ರೇಮ ಮಧುಪಾನಕ್ಕಿಂತ ಎಷ್ಟೋ ಮಧುರ ! ನಿನ್ನ ತೈಲದ ಪರಿಮಳ ಸುಗಂಧ ದ್ರವ್ಯಗಳಿಗಿಂತ ಎಷ್ಟೋ ಮನೋಹರ !


ನನ್ನನ್ನು ತುಸು ಎಳೆ, ಓಡೋಣ ನಾವು ಮುಂದಕ್ಕೆ; ಅರಸನಾಗಿರು ನನಗೆ ಕರೆದೊಯ್ಯಿ ನನ್ನನ್ನು ಅಂತಃಪುರಕ್ಕೆ. ಹರ್ಷಿಸೋಣ, ಒಂದಿಗೆ ಆನಂದಿಸೋಣ ಮಧುಪಾನಕ್ಕಿಂತ ನಿನ್ನ ಪ್ರೀತಿ ಸ್ತುತ್ಯಾರ್ಹ ನಿನ್ನನ್ನು ಪ್ರೀತಿಸುವುದು ಎನಿತು ಸಹಜ!


ನಿನ್ನಚಲ ಪ್ರೀತಿ, ಹೇ ದೇವಾ, ಎಷ್ಟೋ ಅಮೂಲ್ಯ I ನಿನ್ನಕ್ಕರೆಯ ರೆಕ್ಕೆಗಳಡಿ ನರಮಾನವರಿಗಾಶ್ರಯ II


ಅಂತೆಯೇ ಎದ್ದು ತಂದೆಯ ಬಳಿಗೆ ಹೊರಟ. “ಮಗನು ಇನ್ನೂ ಅಷ್ಟು ದೂರದಲ್ಲಿ ಇರುವಾಗಲೇ ತಂದೆ ನೋಡಿದ. ಆತನ ಹೃದಯ ಕನಿಕರದಿಂದ ಕರಗಿಹೋಯಿತು. ಓಡಿಹೋಗಿ, ಮಗನನ್ನು ಬಿಗಿಯಾಗಿ ತಬ್ಬಿಕೊಂಡು ಮುತ್ತಿಟ್ಟ.


ಅವರೆಲ್ಲರೂ ಊಟಮಾಡುತ್ತಿರುವಾಗ ಯೇಸುಸ್ವಾಮಿ ರೊಟ್ಟಿಯನ್ನು ತೆಗೆದುಕೊಂಡು ದೈವಸ್ತುತಿಮಾಡಿ, ಅದನ್ನು ಮುರಿದು, ಶಿಷ್ಯರಿಗೆ ಕೊಡುತ್ತಾ, “ಇದನ್ನು ತೆಗೆದುಕೊಂಡು ಭುಜಿಸಿರಿ, ಇದು ನನ್ನ ಶರೀರ,” ಎಂದರು.


ಇದಲ್ಲದೆ ಸೇನಾಧೀಶ್ವರ ಸರ್ವೇಶ್ವರ ಈ ಪರ್ವತದಲ್ಲಿ ಸಕಲ ರಾಷ್ಟ್ರಗಳಿಗೆ ಸಾರವತ್ತಾದ ಮೃಷ್ಟಾನ್ನವನ್ನೂ ಶ್ರೇಷ್ಟವಾದ ದ್ರಾಕ್ಷಾರಸವನ್ನೂ ಭೋಜನಕ್ಕಾಗಿ ಅಣಿಗೊಳಿಸುವರು.


ಬೆಳಗ್ಗೆ ಹೊರಟು ತೋಟಗಳಿಗೆ ಹೋಗೋಣ ಬಾ ದ್ರಾಕ್ಷಿ ಚಿಗುರಿದೆಯೋ, ಅದರ ಹೂ ಅರಳಿದೆಯೋ ದಾಳಿಂಬೆ ಹೂ ಬಿಟ್ಟಿದೆಯೋ ನೋಡೋಣ ಬಾ ಅಲ್ಲೆ ನಿನಗೆ ನನ್ನ ಪ್ರೀತಿಯನರ್ಪಿಸುವೆ ಬಾ.


ನಿನ್ನ ಚುಂಬನ ಶ್ರೇಷ್ಠವಾದ ಮಧುಪಾನ ನನ್ನ ಇನಿಯನ ಬಾಯಲ್ಲಿಳಿಯಲಿ ಆ ರಸಪಾನ ನಿದ್ರಿಸುವವನಾ ತುಟಿಗಳಲಿ ಹರಿಯಲಿ ಆ ಪಾನ !


ಬರಮಾಡಿಕೊಂಡನು ನನ್ನನು ಔತಣದ ಮನೆಗೆ ನನ್ನ ಮೇಲೆತ್ತಿದನು ‘ಪ್ರೀತಿ’ ಎಂಬ ತನ್ನ ಪತಾಕೆ.


ಇಲ್ಲದಿರೆ ಭುಗಿಲೆದ್ದೀತು ಆತನ ಕೋಪಾವೇಶ I ಮಾರ್ಗಮಧ್ಯದಲೇ ಕಾದಿರಬಹುದು ನಿಮಗೆ ವಿನಾಶ I ಆತನನು ಆಶ್ರಯಿಸುವವರಿಗಿದೆ ಸೌಭಾಗ್ಯ ಸಂತೋಷ II


ಟೈರ್‍ನಿಂದ ಹೊರಟು ಪ್ತೊಲೊಮಾಯ ಎಂಬಲ್ಲಿಗೆ ಬಂದಿಳಿದೆವು. ಅಲ್ಲಿ ಭಕ್ತಾದಿಗಳನ್ನು ವಂದಿಸಿ ಅವರೊಡನೆ ಒಂದು ದಿನ ಇದ್ದೆವು.


ಪ್ರೇಮವೇ, ಸಕಲ ಸೌಭಾಗ್ಯಗಳಿಂದ ನೀನೆಷ್ಟು ಸುಂದರ? ನೀನೆಷ್ಟು ಮನೋಹರ !


ಅವನ ಮಾತು ಮಧುರ ಅವನು ಸರ್ವಾಂಗ ಸುಂದರ. ಜೆರುಸಲೇಮಿನ ಮಹಿಳೆಯರೇ, ಇವನೇ ನನ್ನ ಪ್ರಿಯನು ಇವನೇ ನನ್ನ ಇನಿಯನು.


ಪ್ರೀತಿಯ ಮುದ್ದನ್ನಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ. ಯೇಸುಕ್ರಿಸ್ತರಲ್ಲಿರುವ ನಿಮ್ಮೆಲ್ಲರಿಗೂ ಶಾಂತಿಸಮಾಧಾನ ಲಭಿಸಲಿ!


ತನ್ನ ಅಣ್ಣಂದಿರಲ್ಲಿ ಪ್ರತಿಯೊಬ್ಬನಿಗೂ ಮುದ್ದಿಟ್ಟು ಅವರನ್ನು ಅಪ್ಪಿಕೊಂಡು ಕಣ್ಣೀರಿಟ್ಟನು. ತರುವಾಯ ಅವರು ಅವನ ಸಂಗಡ ಮಾತನಾಡತೊಡಗಿದರು.


ಅನಂತರ ರಾಖೇಲಳಿಗೆ ಮುದ್ದಿಟ್ಟನು; ಸಂತೋಷ ಉಕ್ಕಿಬಂದು ಗಟ್ಟಿಯಾಗಿ ಅತ್ತನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು