ನ್ಯಾಯಸ್ಥಾಪಕರು 9:43 - ಕನ್ನಡ ಸತ್ಯವೇದವು C.L. Bible (BSI)43 ಇದು ಅಬೀಮೆಲೆಕನಿಗೆ ಗೊತ್ತಿದ್ದುದರಿಂದ ಅವನು ತನ್ನ ಜನರನ್ನು ಮೂರು ಗುಂಪುಮಾಡಿ ಅವರನ್ನು ತೆಗೆದುಕೊಂಡು ಬಂದು ಹೊಲಗಳಲ್ಲಿ ಹೊಂಚುಹಾಕುತ್ತಿದ್ದನು. ಜನರು ಪಟ್ಟಣದಿಂದ ಹೊರಟು ಬರುವುದನ್ನು ಇವನು ಕಾಣುತ್ತಲೆ ಅಲ್ಲಿಂದ ಎದ್ದು ಅವರ ಮೇಲೆ ದಾಳಿಮಾಡಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201943 ಇದು ಅಬೀಮೆಲೆಕನಿಗೆ ಗೊತ್ತಿದ್ದುದರಿಂದ ಅವನು ತನ್ನ ಜನರನ್ನು ಮೂರು ಗುಂಪು ಮಾಡಿ ಅವರನ್ನು ಕರೆದುಕೊಂಡು ಬಂದು ಹೊಲಗಳಲ್ಲಿ ಹೊಂಚಿ ನೋಡುತ್ತಿದ್ದನು. ಜನರು ಪಟ್ಟಣದಿಂದ ಹೊರಟು ಬರುವುದನ್ನು ಇವನು ಕಾಣುತ್ತಲೇ, ಅಲ್ಲಿಂದ ಎದ್ದು ಅವರನ್ನು ಹೊಡೆದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)43 ಇದು ಅಬೀಮೆಲೆಕನಿಗೆ ಗೊತ್ತಿದ್ದದರಿಂದ ಅವನು ತನ್ನ ಜನರನ್ನು ಮೂರು ಗುಂಪು ಮಾಡಿ ಅವರನ್ನು ತೆಗೆದುಕೊಂಡು ಬಂದು ಹೊಲಗಳಲ್ಲಿ ಹೊಂಚಿ ನೋಡುತ್ತಿದ್ದನು. ಜನರು ಪಟ್ಟಣದಿಂದ ಹೊರಟು ಬರುವದನ್ನು ಇವನು ಕಾಣುತ್ತಲೆ ಅಲ್ಲಿಂದ ಎದ್ದು ಅವರನ್ನು ಹೊಡೆದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್43 ಅಬೀಮೆಲೆಕನು ತನ್ನ ಸೈನ್ಯವನ್ನು ಮೂರು ಗುಂಪುಗಳಾಗಿ ವಿಂಗಡಿಸಿದನು. ಅವನು ಶೆಕೆಮಿನ ಜನರ ಮೇಲೆ ಹಠಾತ್ತನೆ ಧಾಳಿ ಮಾಡಬಯಸಿದ್ದನು. ಆದ್ದರಿಂದ ಅವನು ತನ್ನ ಜನರನ್ನು ಹೊಲಗಳಲ್ಲಿ ಅಡಗಿಸಿಟ್ಟನು. ನಗರದಿಂದ ಜನರು ಹೊರಗೆ ಬರುವುದನ್ನು ನೋಡಿದ ತಕ್ಷಣ ಅವನು ನೆಗೆದೆದ್ದು ಅವರ ಮೇಲೆ ಧಾಳಿಮಾಡಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ43 ಅವನು ಸೈನಿಕರನ್ನು ತೆಗೆದುಕೊಂಡು, ಅವರನ್ನು ಮೂರು ಗುಂಪುಗಳಾಗಿ ಮಾಡಿ, ಹೊಲದಲ್ಲಿ ಹೊಂಚಿಹಾಕಿಕೊಂಡನು. ಆಗ ಜನರು ಪಟ್ಟಣದಿಂದ ಹೊರಗೆ ಬಂದರು. ಅವನು ಅವರ ಮೇಲೆ ಎದ್ದು ಬಂದು, ಅವರನ್ನು ಹೊಡೆದನು. ಅಧ್ಯಾಯವನ್ನು ನೋಡಿ |