ಸರ್ವೇಶ್ವರ ಇಂತೆನ್ನುತ್ತಾರೆ: “ಸಿಯೋನ್ ನಗರಿಯೇ, ಎದ್ದು ಒಕ್ಕಣೆಮಾಡು. ಇದಕ್ಕಾಗಿ ನಿನ್ನ ಕೊಂಬನ್ನು ಕಬ್ಬಿಣವಾಗಿಸುವೆನು. ನಿನ್ನ ಗೊರಸನ್ನು ಕಂಚನ್ನಾಗಿ ಮಾಡುವೆನು. ಅನೇಕ ರಾಷ್ಟ್ರಗಳನ್ನು ನೀನು ತುಳಿದು ಧ್ವಂಸಮಾಡುವೆ. ಅವುಗಳನ್ನು ಕೊಳ್ಳೆಹೊಡೆದು ತಂದ ಸ್ವತ್ತನ್ನು ಸರ್ವೇಶ್ವರಸ್ವಾಮಿಗೆ ಮೀಸಲಾಗಿಡುವೆ. ಅವುಗಳಿಂದ ಬಂದ ಆಸ್ತಿಯನ್ನು ಲೋಕದೊಡೆಯನಿಗೆ ಪ್ರತ್ಯೇಕಿಸಿಡುವೆ.”