Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನ್ಯಾಯಸ್ಥಾಪಕರು 5:13 - ಕನ್ನಡ ಸತ್ಯವೇದವು C.L. Bible (BSI)

13 ಚದರಿಹೋದವರು ಕೂಡಿಬಂದರು ನಾಯಕರ ಬಳಿಗೆ ಸರ್ವೇಶ್ವರನ ಶೂರಜನರು ವೀರರಂತೆ ನೆರೆದುಬಂದರು ನನ್ನ ಸಹಾಯಕ್ಕೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 “ಆಗ ಚದರಿಹೋದವರು ನಾಯಕರ ಬಳಿಗೆ ಕೂಡಿಬಂದರು. ಯೆಹೋವನ ಜನರು ವೀರರಾಗಿ ನನ್ನ ಸಹಾಯಕ್ಕೆ ನೆರೆದು ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಆಗ ಚದರಿಹೋದವರು ನಾಯಕರ ಬಳಿಗೆ ಕೂಡಿಬಂದರು; ಯೆಹೋವನ ಜನರು ವೀರರಾಗಿ ನನ್ನ ಸಹಾಯಕ್ಕೆ ನೆರೆದು ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 “ಆಗ ಬದುಕಿಕೊಂಡಿದ್ದವರು ನಾಯಕರ ಬಳಿಗೆ ಹೋದರು. ಯೆಹೋವನ ಜನರೇ, ನನ್ನೊಂದಿಗೂ ಸೈನಿಕರೊಂದಿಗೂ ಬನ್ನಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 “ಆಗ ಉಳಿದವನನ್ನು ಅವರು ಜನರಲ್ಲಿ ಶ್ರೇಷ್ಠರಾದವರ ಮೇಲೆ ಆಳುವಂತೆ ಮಾಡಿದರು. ಯೆಹೋವ ದೇವರ ಜನರು ನನ್ನ ಸಹಾಯಕ್ಕಾಗಿ ಬಂದು, ಪರಾಕ್ರಮಶಾಲಿಗಳ ವಿರುದ್ಧ ಯುದ್ಧಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನ್ಯಾಯಸ್ಥಾಪಕರು 5:13
11 ತಿಳಿವುಗಳ ಹೋಲಿಕೆ  

ತಾವು ಯೆಹೂದ್ಯರೆಂದು ಕೊಚ್ಚಿಕೊಳ್ಳುವ ‘ಸೈತಾನನ ಕೂಟಕ್ಕೆ’ ಸೇರಿದ ಕೆಲವರಿದ್ದಾರೆ. ಆದರೆ ಅವರು ವಾಸ್ತವವಾಗಿ ಯೆಹೂದ್ಯರಲ್ಲ; ಸುಳ್ಳುಗಾರರು. ಇಗೋ ನೋಡು, ಅವರು ಬಂದು ನಿನ್ನ ಪಾದಗಳಿಗೆ ಅಡ್ಡಬಿದ್ದು ಶರಣಾಗುವಂತೆ ಮಾಡುತ್ತೇನೆ. ನಿನ್ನ ಬಗ್ಗೆ ನನಗಿರುವ ಪ್ರೀತಿ ಅವರಿಗೆ ತಿಳಿಯುವಂತೆ ಮಾಡುತ್ತೇನೆ.


ನಮ್ಮನ್ನು ಪ್ರೀತಿಸಿದ ಯೇಸುಕ್ರಿಸ್ತರ ಮುಖಾಂತರ ಇವೆಲ್ಲವುಗಳಲ್ಲಿಯೂ ನಾವು ಪೂರ್ಣ ಜಯಶಾಲಿಗಳಾಗುತ್ತೇವೆ.


ಆಶ್ರಯ ಪಡೆವುವು ಅದರ ರೆಂಬೆಗಳ ನೆರಳಲಿ, ಆಗ ತಿಳಿವುವು ವನದ ವೃಕ್ಷಗಳು: ಎತ್ತರವಾದ ಮರಗಳ ತಗ್ಗಿಸುವವನು ತಗ್ಗಾದುದನು ಎತ್ತರಪಡಿಸುವವನು ಹಸುರಾದುದನು ಒಣಗಿಸುವವನು ಒಣಗಿದುದನು ಚಿಗುರಿಸುವವನು ಸರ್ವೇಶ್ವರ ನಾನೇ ಎಂದು ಇದ ನುಡಿದವ ನಾನು, ನುಡಿದುದನು ನಡೆಸುವವ ನಾನು.”


ನ್ಯಾಯತೀರ್ಪು ಬರುವುದು ದೇವನಿಂದಲೇ I ಉನ್ನತಿಯು ಅವನತಿಯು ಆತನಿಂದಲೇ II


ದೂಡುವನು ಅವರನು ಕುರಿಹಿಂಡಿನಂತೆ ಪಾತಾಳಕೆ I ಮರಣವೇ ಕುರಿಗಾಹಿ ಆ ನಿಧನ ನಿವಾಸಿಗಳಿಗೆ I ವಿನಾಶಗೊಳ್ವುದು ಆ ತಳದಲ್ಲಿ ಅವರ ರೂಪರೇಖೆ I ಆಳುವರು ಸಜ್ಜನರು ಅವರೆಲ್ಲರನು ಉದಯಕಾಲಕೆ II


ಎಚ್ಚರಗೊಳ್ಳು, ಎಚ್ಚರಗೊಳ್ಳು, ದೆಬೋರಾ, ಎಚ್ಚರಗೊಳ್ಳು, ಎಚ್ಚರಗೊಳ್ಳು, ಮಾಡು ನೀ ಗುಣಗಾನ, ಬಾರಾಕನೇ, ಏಳು; ಅಬೀನೋವಮನ ಮಗನೇ, ಏಳು, ಸೆರೆಹಿಡಿದವರನು ನೀ ಸಾಗಿಸಿಕೊಂಡು ಹೋಗು.


ಬಂದರು ಅಮಾಲೇಕ್ಯರ ಪ್ರದೇಶದೊಳು ನೆಲೆಗೊಂಡ ಎಫ್ರಯೀಮ್ಯರು, ಅವರೊಂದಿಗೆ ಬಂದರು ಬೆನ್ಯಾಮೀನ್ಯರು, ಮಾಕೀರನ ಗೋತ್ರದ ಪ್ರಧಾನರು, ಜೆಬುಲೂನ್ ಕುಲದೊಳು ದಂಡಧಾರಿಗಳಾದ ಸೇನಾನಾಯಕರು.


‘ಶಾಪಹಾಕಿರಿ ಮೇರೋಜ್ ಊರಿಗೆ, ಅದರ ನಿವಾಸಿಗಳಿಗೆ ಬರಲಿಲ್ಲ ಅವರು ಯುದ್ಧವೀರರ ಜೊತೆಗೆ ಸರ್ವೇಶ್ವರನ ಸಹಾಯಕ್ಕೆ. ಶಪಿಸಿರಿ ಅವರನ್ನು’ ಎಂದು ಕರೆಗೊಟ್ಟನು ಸರ್ವೇಶ್ವರನ ದೂತನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು