ನ್ಯಾಯಸ್ಥಾಪಕರು 3:28 - ಕನ್ನಡ ಸತ್ಯವೇದವು C.L. Bible (BSI)28 ಏಹೂದನು ಅವರಿಗೆ ನಾಯಕನಾಗಿ, “ನನ್ನನ್ನು ಹಿಂಬಾಲಿಸಿ ಬನ್ನಿ; ಸರ್ವೇಶ್ವರ ನಿಮ್ಮ ಶತ್ರುಗಳಾದ ಮೋವಾಬ್ಯರನ್ನು ನಿಮ್ಮ ಕೈಗೊಪ್ಪಿಸಿದ್ದಾರೆ,” ಎಂದನು. ಅಂತೆಯೇ ಅವರು ಅವನನ್ನು ಹಿಂಬಾಲಿಸಿ ಮೋವಾಬಿಗೆ ಹೋಗುವ ಹಾಯಗಡಗಳನ್ನೆಲ್ಲ ಹಿಡಿದುಕೊಂಡು ಯಾರನ್ನೂ ದಾಟಗೊಡಲಿಲ್ಲ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201928 ಅವನು ಅವರ ನಾಯಕನಾಗಿ, “ನನ್ನನ್ನು ಹಿಂಬಾಲಿಸಿರಿ; ಯೆಹೋವನು ನಿಮ್ಮ ಶತ್ರುಗಳಾದ ಮೋವಾಬ್ಯರನ್ನು ನಿಮ್ಮ ಕೈಗೆ ಒಪ್ಪಿಸಿದ್ದಾನೆ” ಎಂದು ಹೇಳಲು, ಅವರು ಅವನನ್ನು ಹಿಂಬಾಲಿಸಿ ಮೋವಾಬಿಗೆ ಹೋಗುವ ಹಾಯಗಡಗಳನ್ನೆಲ್ಲಾ (ನದಿಯಲ್ಲಿ ಹಾದು ಹೋಗಬಹುದಾದ ಸ್ಥಳಗಳು) ಹಿಡಿದರು; ಯಾರನ್ನೂ ದಾಟಗೊಡಲಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)28 ಅವನು ಅವರ ನಾಯಕನಾಗಿ - ನನ್ನನ್ನು ಹಿಂಬಾಲಿಸಿರಿ; ಯೆಹೋವನು ನಿಮ್ಮ ಶತ್ರುಗಳಾದ ಮೋವಾಬ್ಯರನ್ನು ನಿಮ್ಮ ಕೈಗೆ ಒಪ್ಪಿಸಿದ್ದಾನೆಂದು ಹೇಳಲು ಅವರು ಅವನನ್ನು ಹಿಂಬಾಲಿಸಿ ಮೋವಾಬಿಗೆ ಹೋಗುವ ಹಾಯಗಡಗಳನ್ನೆಲ್ಲಾ ಹಿಡಿದರು; ಯಾರನ್ನೂ ದಾಟಗೊಡಲಿಲ್ಲ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್28 ಏಹೂದನು ಇಸ್ರೇಲರಿಗೆ, “ನನ್ನನ್ನು ಹಿಂಬಾಲಿಸಿರಿ, ನಮ್ಮ ಶತ್ರುಗಳಾದ ಮೋವಾಬ್ಯರನ್ನು ಸೋಲಿಸಲು ಯೆಹೋವನು ನಮಗೆ ಸಹಾಯ ಮಾಡಿದ್ದಾನೆ” ಎಂದನು. ಇಸ್ರೇಲರು ಏಹೂದನನ್ನು ಹಿಂಬಾಲಿಸಿದರು. ಅವರು ಜೋರ್ಡನ್ ನದಿಯ ಹಾಯಗಡಗಳನ್ನೆಲ್ಲಾ ವಶಪಡಿಸಿಕೊಂಡರು. ಆ ಸ್ಥಳಗಳು ಮೋವಾಬಿಗೆ ಹೋಗುವ ದಾರಿಯಲ್ಲಿದ್ದವು. ಜೋರ್ಡನ್ ನದಿಯನ್ನು ದಾಟಿಹೋಗಲು ಇಸ್ರೇಲರು ಯಾರಿಗೂ ಅವಕಾಶ ಕೊಡಲಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ28 ಅವರಿಗೆ, “ನೀವು ನನ್ನ ಹಿಂದೆ ಬನ್ನಿರಿ. ಏಕೆಂದರೆ ಯೆಹೋವ ದೇವರು ನಿಮ್ಮ ಶತ್ರುಗಳಾದ ಮೋವಾಬ್ಯರನ್ನು ನಿಮ್ಮ ಕೈಯಲ್ಲಿ ಒಪ್ಪಿಸಿಕೊಟ್ಟರು,” ಎಂದನು. ಅವರು ಅವನ ಹಿಂದೆ ಬಂದು, ಮೋವಾಬ್ಯರಿಗೆ ಎದುರಾದ ಯೊರ್ದನ್ ನದಿ ರೇವುಗಳನ್ನು ಹಿಡಿದು, ಒಬ್ಬರನ್ನಾದರೂ ದಾಟಗೊಡದೆ, ಅಧ್ಯಾಯವನ್ನು ನೋಡಿ |
ಇದಲ್ಲದೆ, ಗಿದ್ಯೋನನು ಎಫ್ರಯಿಮ್ ಪರ್ವತ ಪ್ರದೇಶಗಳಿಗೆ ದೂತರನ್ನು ಅಟ್ಟಿ ಆ ಜನರಿಗೆ, “ನೀವು ಮಿದ್ಯಾನ್ಯರಿಗೆ ವಿರೋಧವಾಗಿ ಹೊರಟು, ಅವರು ಬೇತ್ ಬಾರದವರೆಗಿರುವ ಪ್ರವಾಹಗಳನ್ನೂ ಜೋರ್ಡನ್ ನದಿಯನ್ನೂ ದಾಟಿಹೋಗದಂತೆ ಅಡ್ಡಗಟ್ಟಿರಿ,” ಎಂದು ಹೇಳಿಕಳಿಸಿದನು. ಆಗ ಎಫ್ರಯಿಮ್ಯರೆಲ್ಲರೂ ಬೇತ್‍ಬಾರದವರೆಗಿರುವ ಪ್ರವಾಹಗಳಿಗೂ ಜೋರ್ಡನ್ ನದಿಗೂ ಬಂದು ಅವುಗಳ ಹಾಯಗಡಗಳನ್ನೆಲ್ಲಾ ಹಿಡಿದರು.