Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನ್ಯಾಯಸ್ಥಾಪಕರು 3:13 - ಕನ್ನಡ ಸತ್ಯವೇದವು C.L. Bible (BSI)

13 ಎಗ್ಲೋನನು ಅಮ್ಮೋನಿಯರನ್ನೂ ಅಮಾಲೇಕ್ಯರನ್ನೂ ಕೂಡಿಸಿಕೊಂಡು ಬಂದು ಇಸ್ರಯೇಲರನ್ನು ಸೋಲಿಸಿ ಖರ್ಜೂರ ನಗರವನ್ನು ಗೆದ್ದುಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಇವನು ಅಮ್ಮೋನಿಯರನ್ನೂ, ಅಮಾಲೇಕ್ಯರನ್ನೂ ಕೂಡಿಸಿಕೊಂಡು ಹೊರಟು ಬಂದು ಇಸ್ರಾಯೇಲರನ್ನು ಸೋಲಿಸಿ ಖರ್ಜೂರನಗರವನ್ನು ಹಿಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಇವನು ಅಮ್ಮೋನಿಯರನ್ನೂ ಅಮಾಲೇಕ್ಯರನ್ನೂ ಕೂಡಿಸಿಕೊಂಡು ಹೊರಟು ಬಂದು ಇಸ್ರಾಯೇಲ್ಯರನ್ನು ಸೋಲಿಸಿ ಖರ್ಜೂರನಗರವನ್ನು ಹಿಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಇವನು ಅಮ್ಮೋನಿಯರಿಂದ ಮತ್ತು ಅಮಾಲೇಕ್ಯರಿಂದ ಸಹಾಯವನ್ನು ಪಡೆದನು. ಅವರು ಅವನೊಂದಿಗೆ ಸೇರಿಕೊಂಡು ಇಸ್ರೇಲರ ಮೇಲೆ ಧಾಳಿಮಾಡಿದರು. ಎಗ್ಲೋನ್ ಮತ್ತು ಅವನ ಸೈನಿಕರು ಇಸ್ರೇಲರನ್ನು ಸೋಲಿಸಿ ಅವರನ್ನು ಜೆರಿಕೊ ಎಂಬುವ ಖರ್ಜೂರ ನಗರದಿಂದ ಹೊರದೂಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಅವನು ಅಮ್ಮೋನನ ಮತ್ತು ಅಮಾಲೇಕ್ಯರನ್ನು ಕೂಡಿಸಿಕೊಂಡು ಬಂದು, ಇಸ್ರಾಯೇಲರನ್ನು ಹೊಡೆದು, ಖರ್ಜೂರ ಗಿಡಗಳಿರುವ ಪಟ್ಟಣವನ್ನು ಸ್ವಾಧೀನಮಾಡಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನ್ಯಾಯಸ್ಥಾಪಕರು 3:13
9 ತಿಳಿವುಗಳ ಹೋಲಿಕೆ  

ಕೇನ್ಯನೂ ಮೋಶೆಯ ಮಾವನೂ ಆದ ಹೋಬಾಬನ ವಂಶದವರು ಖರ್ಜೂರ ನಗರದಿಂದ ಹೊರಟು ಯೆಹೂದ ಕುಲದವರ ಜೊತೆಯಲ್ಲಿ ಆರಾದಿನ ದಕ್ಷಿಣದಲ್ಲಿರುವ ಯೆಹೂದ ಮರುಭೂಮಿಗೆ ಬಂದು ಅಲ್ಲಿಯ ಜನರ ಸಂಗಡ ವಾಸಮಾಡಿದರು.


ದಕ್ಷಿಣ ಪ್ರದೇಶ, ಚೋಗರೂರಿನ ತನಕ ಇದ್ದ ಜೆರಿಕೋ ಖರ್ಜೂರಗಳ ಪಟ್ಟಣದ ಸುತ್ತಲಿನ ಬಯಲು, ಇದನ್ನೆಲ್ಲಾ ಅವನಿಗೆ ತೋರಿಸಿದರು.


ಬಂದರು ಅಮಾಲೇಕ್ಯರ ಪ್ರದೇಶದೊಳು ನೆಲೆಗೊಂಡ ಎಫ್ರಯೀಮ್ಯರು, ಅವರೊಂದಿಗೆ ಬಂದರು ಬೆನ್ಯಾಮೀನ್ಯರು, ಮಾಕೀರನ ಗೋತ್ರದ ಪ್ರಧಾನರು, ಜೆಬುಲೂನ್ ಕುಲದೊಳು ದಂಡಧಾರಿಗಳಾದ ಸೇನಾನಾಯಕರು.


ಹದಿನೆಂಟು ವರ್ಷಕಾಲ ಇಸ್ರಯೇಲರು ಅವನಿಗೆ ಗುಲಾಮರಾಗಿದ್ದರು.


ಸರ್ವೇಶ್ವರ ಅವರಿಗೆ, “ಈಜಿಪ್ಟ್, ಅಮೋರಿಯ, ಅಮ್ಮೋನಿಯ, ಫಿಲಿಷ್ಟಿಯ, ಚೀದೋನ್ಯ, ಅಮಾಲೇಕ್ಯ, ಮಾವೋನ್ಯ


ಇವರು ಮಾಡುತ್ತಿದ್ದ ಬಿತ್ತನೆಯನ್ನು ಮಿದ್ಯಾನ್ಯರು, ಅಮಾಲೇಕ್ಯರು, ಹಾಗು ಪೂರ್ವದೇಶದವರು ಇವರಿಗೆ ವಿರುದ್ಧ ದಂಡೆತ್ತಿ ಬಂದು ಹಾಳು ಮಾಡುತ್ತಿದ್ದರು.


ಇದಲ್ಲದೆ ಅಮ್ಮೋನಿಯರು ಜೋರ್ಡನ್ ನದಿಯನ್ನು ದಾಟಿ ಯೆಹೂದ, ಬೆನ್ಯಾಮೀನ್, ಎಫ್ರಯಿಮ್ ಕುಲಗಳೊಡನೆ ಯುದ್ಧಮಾಡಿದ್ದರಿಂದ ಇಸ್ರಯೇಲರು ಬಹಳ ಕಷ್ಟಕ್ಕೀಡಾದರು.


ಇವೇ ಮೊದಲಾದ ಜನಾಂಗಗಳು ನಿಮ್ಮನ್ನು ಪೀಡಿಸಿದಾಗ ನೀವು ನನಗೆ ಮೊರೆಯಿಟ್ಟಿರಿ; ನಾನು ಅವುಗಳಿಂದ ನಿಮ್ಮನ್ನು ಬಿಡಿಸಿದೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು