Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನ್ಯಾಯಸ್ಥಾಪಕರು 3:11 - ಕನ್ನಡ ಸತ್ಯವೇದವು C.L. Bible (BSI)

11 ನಾಡಿನಲ್ಲಿ ನಾಲ್ವತ್ತು ವರ್ಷಗಳ ಕಾಲ ನೆಮ್ಮದಿ ನೆಲಸಿತ್ತು. ತರುವಾಯ ಕೆನಜನ ಮಗ ಒತ್ನೀಯೇಲನು ಮರಣ ಹೊಂದಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ದೇಶದಲ್ಲಿ ನಲ್ವತ್ತು ವರ್ಷಗಳ ಕಾಲ ಸಮಾಧಾನವಿತ್ತು. ತರುವಾಯ ಕೆನಜನ ಮಗನಾದ ಒತ್ನೀಯೇಲನು ಮರಣಹೊಂದಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ದೇಶದಲ್ಲಿ ನಾಲ್ವತ್ತು ವರುಷಗಳ ಪರ್ಯಂತರ ಸಮಾಧಾನವಿತ್ತು. ತರುವಾಯ ಕೆನಜನ ಮಗನಾದ ಒತ್ನೀಯೇಲನು ಮರಣಹೊಂದಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಆದ್ದರಿಂದ ನಲವತ್ತು ವರ್ಷಗಳ ಕಾಲದವರೆಗೆ ಅಂದರೆ ಕೆನಜನ ಮಗನಾದ ಒತ್ನೀಯೇಲನ ಮರಣದವರೆಗೆ ಆ ಪ್ರದೇಶದಲ್ಲಿ ಶಾಂತಿ ನೆಲೆಸಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ದೇಶವು ನಾಲ್ವತ್ತು ವರ್ಷದವರೆಗೆ ವಿಶ್ರಾಂತಿಯಿಂದಿತ್ತು. ತರುವಾಯ ಕೆನಾಜನ ಮಗ ಒತ್ನಿಯೇಲನು ಮರಣಹೊಂದಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನ್ಯಾಯಸ್ಥಾಪಕರು 3:11
11 ತಿಳಿವುಗಳ ಹೋಲಿಕೆ  

ಮಿದ್ಯಾನ್ಯರು ಇಸ್ರಯೇಲರ ಮುಂದೆ ಬಹಳವಾಗಿ ತಗ್ಗಿಹೋದರು. ಅವರು ಮರಳಿ ತಲೆಯೆತ್ತಲಾಗಲಿಲ್ಲ. ಗಿದ್ಯೋನನ ಜೀವಮಾನದಲ್ಲಿ ನಾಲ್ವತ್ತು ವರ್ಷಗಳ ಕಾಲಪರ್ಯಂತ ದೇಶದಲ್ಲಿ ಶಾಂತಿಸಮಾಧಾನವಿತ್ತು.


ಸರ್ವೇಶ್ವರನ ಶತ್ರುಗಳೆಲ್ಲರು ನಾಶವಾಗಲಿ ಇವರಂತೆ ಆತನ ಭಕ್ತರು ಬೆಳಗಲಿ ಉದಯಕಾಲದ ಸೂರ್ಯನಂತೆ! ನಾಡಿನಲಿ ನಾಲ್ವತ್ತು ವರ್ಷಕಾಲ ಶಾಂತಿ ನೆಲಸಿತ್ತು!


ಮೋವಾಬ್ಯರು ಇಸ್ರಯೇಲರಿಗೆ ಶರಣಾದರು; ನಾಡಿನಲ್ಲಿ ಎಂಬತ್ತು ವರ್ಷ ನೆಮ್ಮದಿ ಇತ್ತು.


ಸರ್ವೇಶ್ವರ ಮೋಶೆಯ ಮುಖಾಂತರ ವಾಗ್ದಾನ ಮಾಡಿದ್ದ ಪ್ರದೇಶವನ್ನೆಲ್ಲಾ ಯೆಹೋಶುವ ಹಿಡಿದುಕೊಂಡನು, ಇಸ್ರಯೇಲ್ ಕುಲಭಾಗಗಳಿಗನುಸಾರ ಅದನ್ನು ಹಂಚಿಕೊಟ್ಟನು. ಯುದ್ಧ ನಿಂತಿತು. ದೇಶದಲ್ಲೆಲ್ಲಾ ಶಾಂತಿಸಮಾಧಾನ ನೆಲೆಸಿತು.


ಆ ದಿಗಳಲ್ಲಿ ಯೆಹೂದ್ಯರಿಗೆ ಶತ್ರುಗಳ ಕಾಟ ತಪ್ಪಿ ವಿಶ್ರಾಂತಿ ದೊರೆಯಿತು. ಆ ತಿಂಗಳಿನಲ್ಲಿ ಸಂಕಟವು ಪರಿಹಾರವಾಗಿ ಸಂತೋಷ ಪ್ರಾಪ್ತಿಯಾಯಿತು; ದುಃಖವು ಕಳೆದು ಸುಖಕಾಲ ಬಂದಿತು. ಆದ್ದರಿಂದ ಆ ದಿನಗಳಲ್ಲಿ ಹಬ್ಬದ ಭೋಜನಮಾಡಿ ಪರಸ್ಪರ ತಿಂಡಿತೀರ್ಥಗಳನ್ನು ವಿನಿಮಯಮಾಡಿಕೊಳ್ಳಬೇಕು. ಹಾಗೂ ಬಡಬಗ್ಗರಿಗೆ ದಾನಧರ್ಮ ಮಾಡಬೇಕು.


ಕೆನಜನ ಮಕ್ಕಳು - ಒತ್ನೀಯೇಲ್, ಸೆರಾಯ ಎಂಬವರು. ಒತ್ನೀಯೇಲನಿಗೆ ಹತತ್, ಮೆಯೋನೋತೈ ಎಂಬಿಬ್ಬರು ಮಕ್ಕಳಿದ್ದರು.


ಇಸ್ರಯೇಲರು ಮೊರೆಯಿಟ್ಟಾಗ ಅವರನ್ನು ಬಿಡುಗಡೆ ಮಾಡಲು ಸರ್ವೇಶ್ವರ ಒಬ್ಬ ವ್ಯಕ್ತಿಯನ್ನು ಎಬ್ಬಿಸಿದರು; ಆತನೇ ಕಾಲೇಬನ ತಮ್ಮನೂ ಕೆನಜನ ಮಗನೂ ಆದ ಒತ್ನೀಯೇಲ್.


ಕೆನಜನ ಮಗನೂ ಕಾಲೇಬನ ತಮ್ಮನೂ ಆದ ಒತ್ನಿಯೇಲನು ಅದರ ಮೇಲೆ ದಾಳಿಮಾಡಿ ತೆಗೆದುಕೊಂಡನು. ಅವನಿಗೆ ಕಾಲೇಬನು ತನ್ನ ಮಗಳಾದ ಅಕ್ಷಾ ಎಂಬಾಕೆಯನ್ನು ಮದುವೆ ಮಾಡಿಕೊಟ್ಟನು.


ಸರ್ವೇಶ್ವರನ ಆತ್ಮ ಅವನ ಮೇಲೆ ಬಂದುದರಿಂದ ಅವನು ಇಸ್ರಯೇಲರಿಗೆ ನ್ಯಾಯ ದೊರಕಿಸಲು ಯುದ್ಧಕ್ಕೆ ಹೊರಟನು. ಎರಡು ನದಿಗಳ ಮಧ್ಯೆಯಿರುವ ಅರಾಮ್ ರಾಜ್ಯದ ಅರಸ ಕೂಷನ್ ರಿಷಾತಯಿಮನನ್ನು ಸರ್ವೇಶ್ವರ ಆತನ ಕೈಗೊಪ್ಪಿಸಿದ್ದರಿಂದ ಅವನನ್ನು ಸಂಪೂರ್ಣವಾಗಿ ಸೋಲಿಸಿಬಿಟ್ಟನು.


ಇಸ್ರಯೇಲರು ಮತ್ತೆ ಸರ್ವೆಶ್ವರನ ದೃಷ್ಟಿಯಲ್ಲಿ ದ್ರೋಹಿಗಳಾದರು. ಮೋವಾಬ್ಯರ ಅರಸ ಎಗ್ಲೋನನನ್ನು ಇಸ್ರಯೇಲರಿಗೆ ವಿರುದ್ಧ ಸರ್ವೇಶ್ವರ ಬಲಪಡಿಸಿದರು.


ಶಾಂತಿ ಸವಿದದ್ದೇ ದ್ರೋಹಿಗಳಾಗಿ ನಡೆದರು ಮತ್ತೆ ನೀವಿತ್ತಿರವರನು ದೊರೆತನ ನಡೆಸುವ ವೈರಿಗಳ ಕೈಗೆ. ಪಶ್ಚಾತ್ತಾಪಪಟ್ಟು ಕೂಗಿಕೊಳ್ಳಲು, ಆಲಿಸಿದಿರಿ ಪರದಿಂದ ರಕ್ಷಿಸಿದಿರಿ ಪದೇ ಪದೇ ಅಪರಿಮಿತ ಕರುಣೆಯಿಂದ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು