Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನ್ಯಾಯಸ್ಥಾಪಕರು 17:13 - ಕನ್ನಡ ಸತ್ಯವೇದವು C.L. Bible (BSI)

13 “ಒಬ್ಬ ಲೇವಿ ನನ್ನ ಮನೆಯಲ್ಲಿ ಯಾಜಕನಾಗಿರುವುದರಿಂದ ಸರ್ವೇಶ್ವರ ನನ್ನನ್ನು ಆಶೀರ್ವದಿಸುವರೆಂದು ಬಲ್ಲೆ,” ಎಂದುಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 “ಒಬ್ಬ ಲೇವಿಯು ನನ್ನ ಮನೆಯಲ್ಲಿ ಯಾಜಕನಾಗಿರುವುದರಿಂದ ಯೆಹೋವನು ನನ್ನನ್ನು ಆಶೀರ್ವದಿಸುವನೆಂದು ಬಲ್ಲೆನು” ಅಂದುಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಒಬ್ಬ ಲೇವಿಯು ತನ್ನ ಮನೆಯಲ್ಲಿ ಯಾಜಕನಾಗಿರುವದರಿಂದ ಯೆಹೋವನು ನನ್ನನ್ನು ಆಶೀರ್ವದಿಸುವನೆಂದು ಬಲ್ಲೆನು ಅಂದುಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಮೀಕನು ತನ್ನೊಳಗೆ, “ಯೆಹೋವನು ನನಗೆ ಕೃಪೆ ತೋರುವನು. ಏಕೆಂದರೆ ನನ್ನ ಮನೆಯಲ್ಲಿ ಲೇವಿಕುಲದ ಒಬ್ಬನು ಯಾಜಕನಾಗಿದ್ದಾನೆ” ಎಂದುಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಆಗ ಮೀಕನು, “ನನಗೆ ಒಬ್ಬ ಲೇವಿಯನು ಯಾಜಕನಾಗಿರುವುದರಿಂದ, ಯೆಹೋವ ದೇವರು ನನಗೆ ಒಳ್ಳೆಯದನ್ನು ಮಾಡುವರೆಂದು ಈಗ ತಿಳಿಯುತ್ತೇನೆ,” ಎಂದುಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನ್ಯಾಯಸ್ಥಾಪಕರು 17:13
11 ತಿಳಿವುಗಳ ಹೋಲಿಕೆ  

“ನನ್ನ ವಿಷಯದಲ್ಲಿ ಹೇಳುವುದಾದರೆ, ಒಮ್ಮೆ ನಾನು ಯೇಸುವಿನ ನಾಮವನ್ನೇ ನಿರ್ಮೂಲಮಾಡಬೇಕೆಂದಿದ್ದೆ; ಅದಕ್ಕೆ ಅಗತ್ಯವಾದುದನ್ನೆಲ್ಲ ಮಾಡುವುದು ನನ್ನ ಕರ್ತವ್ಯ ಎಂದು ಎಣಿಸಿದ್ದೆ.


ಜನರು, ನಿಮ್ಮನ್ನು ಪ್ರಾರ್ಥನಾಮಂದಿರದಿಂದ ಬಹಿಷ್ಕರಿಸುವರು, ಅಷ್ಟೇ ಅಲ್ಲ, ನಿಮ್ಮನ್ನು ಕೊಲ್ಲುವವನು ತಾನು ದೇವರಿಗೆ ಬಲಿಕೊಟ್ಟೆನೆಂದು ಭಾವಿಸುವ ಕಾಲವೂ ಬರಲಿದೆ.


ಅದಕ್ಕೆ ಯೇಸು, “ನನ್ನ ಪರಮಪಿತನು ನೆಡದ ಗಿಡಗಳನ್ನೆಲ್ಲಾ ಬೇರುಸಹಿತ ಕಿತ್ತುಹಾಕಲಾಗುವುದು.


ಈ ಜನರೆನಗೆ ಮಾಡುವ ಆರಾಧನೆ ವ್ಯರ್ಥ!’ ಎಂದರು.”


ಅಂಥವನು ಮುಕ್ಕುವುದು ಬೂದಿಯನ್ನೇ; ಅವನ ಹೃದಯ ಮೋಸಗೊಂಡು ಅವನನ್ನು ತಪ್ಪುದಾರಿಗೆ ಎಳೆದಿದೆ. ಎಂದೇ, ಅವನು ಅಂಗೈ ಹುಣ್ಣಿನಂತಿರುವ ಆ ಸುಳ್ಳನ್ನೂ ಅರಿಯದೆ ಇದ್ದಾನೆ; ತನ್ನನ್ನೇ ರಕ್ಷಿಸಿಕೊಳ್ಳಲು ಆಗದೆ ಇದ್ದಾನೆ.


ಒಂದು ಮಾರ್ಗ ಒಬ್ಬನಿಗೆ ನೇರವೆಂದು ತೋರಬಹುದು; ಕೊನೆಗೆ ಅದು ಮರಣಕ್ಕೊಯ್ಯುವ ಹಾದಿಯಾಗಬಹುದು.


ಮೀಕನು ಯೌವನಸ್ಥನಾದ ಆ ಲೇವಿಯನನ್ನು ಯಾಜಕ ಸೇವೆಗಾಗಿ ಪ್ರತಿಷ್ಠಿಸಿ ತನ್ನ ಮನೆಯಲ್ಲೇ ಇಟ್ಟುಕೊಂಡನು.


ಆ ಕಾಲದಲ್ಲಿ ಇಸ್ರಯೇಲರಿಗೆ ಅರಸನಿರಲಿಲ್ಲ. ದಾನ್ ಕುಲದವರಿಗೆ ಆವರೆಗೂ ಇಸ್ರಯೇಲರಲ್ಲಿ ಆಸ್ತಿಪಾಸ್ತಿ ಸಿಕ್ಕದೆ ಇದ್ದುದರಿಂದ ಅವರು ತಮಗಾಗಿ ವಾಸಸ್ಥಳವನ್ನು ಹುಡುಕುತ್ತಿದ್ದರು.


ಅವನು, “ನೀವು ಯಾಜಕನನ್ನೂ ನಾನು ಮಾಡಿಸಿಕೊಂಡ ದೇವರುಗಳನ್ನೂ ಅಪಹರಿಸಿಕೊಂಡಿದ್ದೀರಿ, ನನಗೆ ಇನ್ನೇನಿದೆ; ಹೀಗಿರಲಾಗಿ ನಿನಗೇನಾಯಿತೆಂದು ನೀವೇ ನನ್ನನ್ನು ಕೇಳುವುದು ಹೇಗೆ?” ಎಂದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು