ನ್ಯಾಯಸ್ಥಾಪಕರು 15:18 - ಕನ್ನಡ ಸತ್ಯವೇದವು C.L. Bible (BSI)18 ಇದರಿಂದಾಗಿ ಸಂಸೋನನಿಗೆ ಬಹಳ ದಾಹವಾಯಿತು. ಅವನು ಸರ್ವೇಶ್ವರನಿಗೆ, “ನೀವು ನಿಮ್ಮ ದಾಸನ ಮುಖಾಂತರ ಇಂಥ ಮಹಾ ಜಯವನ್ನು ದಯಪಾಲಿಸಿದಿರಿ. ಆದರೆ ಈಗ ನಾನು ದಾಹದಿಂದ ಸತ್ತು ಸುನ್ನತಿಯಿಲ್ಲದವರ ಕೈಯಲ್ಲಿ ಬೀಳಬೇಕೇ?’ ಎಂದು ಮೊರೆಯಿಟ್ಟನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201918 ಅವನು ಬಹಳ ಬಾಯಾರಿದವನಾಗಿ ಯೆಹೋವನಿಗೆ, “ನೀನು ನಿನ್ನ ಸೇವಕನ ಮೂಲಕವಾಗಿ ಈ ಮಹಾಜಯವನ್ನುಂಟುಮಾಡಿದ ಮೇಲೆ ನಾನು ದಾಹದಿಂದ ಸತ್ತು ಸುನ್ನತಿಯಿಲ್ಲದವರ ಕೈಯಲ್ಲಿ ಬೀಳಬೇಕೋ” ಎಂದು ಮೊರೆಯಿಡಲು ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)18 ಮತ್ತು ಅವನು ಬಹಳ ದಾಹವುಳ್ಳವನಾಗಿ ಯೆಹೋವನಿಗೆ - ನೀನು ನಿನ್ನ ಸೇವಕನ ಮೂಲಕವಾಗಿ ಈ ಮಹಾಜಯವನ್ನುಂಟು ಮಾಡಿದ ಮೇಲೆ ನಾನು ದಾಹದಿಂದ ಸತ್ತು ಸುನ್ನತಿಯಿಲ್ಲದವರ ಕೈಯಲ್ಲಿ ಬೀಳಬೇಕೋ ಎಂದು ಮೊರೆಯಿಡಲು ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್18 ಸಂಸೋನನಿಗೆ ತುಂಬ ನೀರಡಿಕೆಯಾಗಿತ್ತು. ಅವನು ಯೆಹೋವನಿಗೆ, “ನಾನು ನಿನ್ನ ಸೇವಕನಾಗಿದ್ದೇನೆ. ನೀನು ನನಗೆ ಈ ಮಹಾವಿಜಯವನ್ನು ಕೊಟ್ಟಿರುವೆ. ದಯವಿಟ್ಟು ಈಗ ನಾನು ನೀರಡಿಕೆಯಿಂದ ಸಾಯಲು ಬಿಡಬೇಡ. ಸುನ್ನತಿ ಮಾಡಿಸಿಕೊಂಡಿಲ್ಲದವರು ನನ್ನನ್ನು ಹಿಡಿದುಕೊಡುವಂತೆ ಮಾಡಬೇಡ” ಎಂದು ಪ್ರಾರ್ಥಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ18 ಅವನಿಗೆ ಬಹಳ ಬಾಯಾರಿಕೆಯಾದದರಿಂದ ಅವನು ಯೆಹೋವ ದೇವರಿಗೆ ಮೊರೆಯಿಟ್ಟನು, “ನಿಮ್ಮ ಸೇವಕನಿಗೆ ನೀವು ಈ ಮಹಾ ರಕ್ಷಣೆಯನ್ನು ಕೊಟ್ಟಿದ್ದೀರಿ. ಈಗ ಬಾಯಾರಿಕೆಯಿಂದ ಬಳಲಿ, ಸುನ್ನತಿಯಾಗದ ಈ ಜನರ ಕೈಯಲ್ಲಿ ನಾನು ಬೀಳಬೇಕೋ?” ಎಂದನು. ಅಧ್ಯಾಯವನ್ನು ನೋಡಿ |