Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನ್ಯಾಯಸ್ಥಾಪಕರು 15:11 - ಕನ್ನಡ ಸತ್ಯವೇದವು C.L. Bible (BSI)

11 ಮೂರು ಸಾವಿರ ಮಂದಿ ಯೆಹೂದ್ಯರು ಏಟಾಮ್ ಗಿರಿಗೆ ಹೋಗಿ ಸಂಸೋನನಿಗೆ, “ಫಿಲಿಷ್ಟಿಯರು ನಮ್ಮ ಮೇಲೆ ದೊರೆತನ ಮಾಡುತ್ತಿದ್ದಾರೆಂಬುದು ನಿನಗೆ ಗೊತ್ತಿಲ್ಲವೇ? ಹೀಗೆ ಏಕೆ ಮಾಡಿದೆ,” ಎಂದು ಕೇಳಲು ಅವನು, “ಅವರು ನನಗೆ ಮಾಡಿದಂತೆಯೇ ನಾನು ಅವರಿಗೆ ಮಾಡಿದ್ದೇನೆ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಮೂರು ಸಾವಿರ ಮಂದಿ ಯೆಹೂದ್ಯರು ಏಟಾಮ್ ಗಿರಿಗೆ ಹೋಗಿ ಸಂಸೋನನಿಗೆ, “ಫಿಲಿಷ್ಟಿಯರು ನಮ್ಮ ಮೇಲೆ ದೊರೆತನಮಾಡುತ್ತಿದ್ದಾರೆ ಎಂಬುದು ನಿನಗೆ ಗೊತ್ತಿಲ್ಲವೋ? ಹೀಗೆ ಯಾಕೆ ಮಾಡಿದಿ?” ಎಂದು ಕೇಳಲು ಅವನು, “ಅವರು ನನಗೆ ಮಾಡಿದಂತೆಯೇ ನಾನು ಅವರಿಗೆ ಮಾಡಿದ್ದೇನೆ” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಮೂರು ಸಾವಿರ ಮಂದಿ ಯೆಹೂದ್ಯರು ಏಟಾಮ್ ಗಿರಿಗೆ ಹೋಗಿ ಸಂಸೋನನಿಗೆ - ಫಿಲಿಷ್ಟಿಯರು ನಮ್ಮ ಮೇಲೆ ದೊರೆತನ ಮಾಡುತ್ತಿದ್ದಾರೆಂಬದು ನಿನಗೆ ಗೊತ್ತಿಲ್ಲವೋ? ಹೀಗೆ ಯಾಕೆ ಮಾಡಿದಿ ಎಂದು ಕೇಳಲು ಅವನು - ಅವರು ನನಗೆ ಮಾಡಿದಂತೆಯೇ ನಾನು ಅವರಿಗೆ ಮಾಡಿದ್ದೇನೆ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಆಗ ಯೆಹೂದಕುಲದ ಮೂರು ಸಾವಿರ ಜನರು ಸಂಸೋನನಲ್ಲಿಗೆ ಹೋದರು. ಅವರು ಏಟಾಮಿನ ಬಂಡೆಯ ಬಳಿಯಲ್ಲಿದ್ದ ಗುಹೆಗೆ ಬಂದು ಅವನಿಗೆ, “ನೀನು ನಮಗೆ ಮಾಡಿರುವುದೇನು? ಫಿಲಿಷ್ಟಿಯರು ನಮ್ಮನ್ನು ಆಳುತ್ತಿದ್ದಾರೆ ಎಂಬುದು ನಿನಗೆ ಗೊತ್ತಿಲ್ಲವೇ?” ಎಂದು ಕೇಳಿದರು. ಸಂಸೋನನು, “ಅವರು ನನಗೆ ಮಾಡಿದ ದ್ರೋಹಕ್ಕಾಗಿ ನಾನು ಅವರನ್ನು ಶಿಕ್ಷಿಸಿದೆ” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಆಗ ಯೆಹೂದದಲ್ಲಿ ಮೂರು ಸಾವಿರ ಜನರು ಏಟಾಮ್ ಬಂಡೆಯ ಮೇಲಕ್ಕೆ ಏರಿಹೋಗಿ, ಸಂಸೋನನಿಗೆ, “ಫಿಲಿಷ್ಟಿಯರು ನಮ್ಮನ್ನು ಆಳುತ್ತಾ ಇದ್ದಾರೆಂದು ನಿನಗೆ ಗೊತ್ತಿಲ್ಲವೋ? ನೀನು ನಮಗೆ ಹೀಗೆ ಏಕೆ ಮಾಡಿದೆ?” ಎಂದರು. ಅದಕ್ಕವನು, “ಅವರು ನನಗೆ ಮಾಡಿದ ಪ್ರಕಾರವೇ, ನಾನು ಅವರಿಗೆ ಮಾಡಿದೆನು,” ಎಂದು ಅವರಿಗೆ ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನ್ಯಾಯಸ್ಥಾಪಕರು 15:11
10 ತಿಳಿವುಗಳ ಹೋಲಿಕೆ  

ಫಿಲಿಷ್ಟಿಯರ ದಂಡನೆಗೆ ಕಾರಣವನ್ನು ಹುಡುಕುತ್ತಿದ್ದ ಸರ್ವೇಶ್ವರನ ಪ್ರೇರಣೆಯಿಂದಲೇ ಇದೆಲ್ಲ ಸಂಭವಿಸಿತೆಂದು ಅವನ ತಂದೆತಾಯಿಗಳಿಗೆ ಗೊತ್ತಾಗಲಿಲ್ಲ. ಆ ಕಾಲದಲ್ಲಿ ಫಿಲಿಷ್ಟಿಯರು ಇಸ್ರಯೇಲರ ಮೇಲೆ ದೊರೆತನ ನಡೆಸುತ್ತಿದ್ದರು.


ಇಸ್ರಯೇಲರು ಮತ್ತೊಮ್ಮೆ ಸರ್ವೇಶ್ವರಸ್ವಾಮಿಯ ದೃಷ್ಟಿಯಲ್ಲಿ ದ್ರೋಹಿಗಳಾದರು. ಆದುದರಿಂದ ಅವರನ್ನು ನಾಲ್ವತ್ತು ವರ್ಷಗಳ ತನಕ ಫಿಲಿಷ್ಟಿಯರ ಕೈಗೆ ಒಪ್ಪಿಸಲಾಯಿತು.


ನಾನು ಈಗ ನಿಮಗೆ ಬೋಧಿಸುವ ಮಾತುಗಳನ್ನು ನೀವು ಬಿಟ್ಟು ಎಡಬಲಕ್ಕೆ ಹೋಗದೆ, ಬೇರೆ ದೇವರುಗಳನ್ನು ಅವಲಂಬಿಸದೆ, ನಿಮ್ಮ ದೇವರಾದ ಸರ್ವೇಶ್ವರನ ಆಜ್ಞೆಗಳಲ್ಲೇ ಲಕ್ಷ್ಯವಿಟ್ಟು ಅವುಗಳನ್ನೇ ಅನುಸರಿಸಿ ನಡೆದರೆ ಅವರು ಇತರರಿಗೆ ನಿಮ್ಮನ್ನು ಅಧೀನಮಾಡದೆ, ಎಲ್ಲರಿಗೂ ಶಿರಸ್ಸನ್ನಾಗಿಯೇ ಮಾಡುವರು; ನೀವು ಎಲ್ಲರಿಗಿಂತಲೂ ಮೇಲಿನವರಾಗುವಿರೇ ಹೊರತು ಕೆಳಗಿನವರಾಗಿ ಇರುವುದಿಲ್ಲ.


ಶತ್ರುಗಳ ಕತ್ತಿಯ ಮೂಲಕ ನಿಮ್ಮನ್ನು ಸಂಹರಿಸುವೆನು.ನೀವು ನನ್ನ ನಿಬಂಧನವನ್ನು ಮೀರಿದುದರಿಂದ ಆ ಕತ್ತಿ ಪ್ರತಿದಂಡನೆ ಮಾಡುವುದು. ನೀವು ನಿಮ್ಮ ಪಟ್ಟಣಗಳಲ್ಲಿ ಕೂಡಿರುವಾಗ ಅಂಟುರೋಗವುಂಟಾಗುವಂತೆ ಮಾಡುವೆನು. ಹೀಗೆ ನೀವು ಶತ್ರುಗಳಿಗೆ ಶರಣಾಗುವಿರಿ.


ನಿಮ್ಮ ಮಧ್ಯೆಯಿರುವ ಅನ್ಯರು ನಿಮಗಿಂತಲೂ ಹೆಚ್ಚೆಚ್ಚಾಗಿ ಅಭಿವೃದ್ಧಿಗೆ ಬರುವರು; ನೀವೋ ಕಡಿಮೆ ಆಗುತ್ತಾ ಹೀನಸ್ಥಿತಿಗೆ ಇಳಿಯುವಿರಿ.


“ನೀವು ನಮಗೆ ವಿರೋಧವಾಗಿ ಯುದ್ಧಕ್ಕೆ ಬಂದದ್ದೇಕೆ?” ಎಂದು ಯೆಹೂದ್ಯರು ಅವರನ್ನು ಕೇಳಿದರು. ಅವರು, “ಸಂಸೋನನನ್ನು ಹಿಡಿದು, ಬಂಧಿಸಿ, ಅವನು ನಮಗೆ ಮಾಡಿದಂತೆಯೇ ಅವನಿಗೂ ಮಾಡಬೇಕೆಂದು ಬಂದೆವು,” ಎಂದು ಉತ್ತರಕೊಟ್ಟರು.


ಅವರು, “ನಾವು ನಿನ್ನನ್ನು ಕಟ್ಟಿ ಫಿಲಿಷ್ಟಿಯರ ಕೈಗೆ ಒಪ್ಪಿಸಬೇಕೆಂದು ಬಂದಿದ್ದೇವೆ,” ಎನ್ನಲು ಸಂಸೋನನು, “ಹಾಗಾದರೆ ನೀವು ನನ್ನನ್ನು ಕೊಲ್ಲುವುದಿಲ್ಲವೆಂದು ಆಣೆಮಾಡಿ” ಎಂದನು.


ಕಾಲೇಬನಿಗೆ ಅವನ ಹೆಂಡತಿ ಎಫ್ರಾತಹಳಿಂದ ಜನಿಸಿದ ಚೊಚ್ಚಲು ಮಗ ಹೂರನು. ಅವನ ವಂಶಜರು ಬೆತ್ಲೆಹೇಮ್ ಪಟ್ಟಣವನ್ನು ಕಟ್ಟಿಸಿದರು. ಹೂರನಿಗೆ ಏತಾಮ, ಪೆನುವೇಲ, ಏಜಾರ್ ಎಂಬ ಮೂವರು ಮಕ್ಕಳಿದ್ದರು. ಏತಾಮನಿಗೆ ಇಜ್ರೆಯೇಲ್, ಇಷ್ಮ, ಇಬ್ಬಾಷ್ ಎಂಬ ಮೂರು ಜನ ಗಂಡುಮಕ್ಕಳೂ ಹಚೆಲೆಲ್ ಪೋನೀ ಎಂಬ ಮಗಳೂ ಇದ್ದರು. ಪೆನೂವೇಲ್, ಗೆದೋರ್ ಪಟ್ಟಣವನ್ನೂ ಏಜೆರ್, ಹುಷಾ ಪಟ್ಟಣವನ್ನೂ ಸ್ಥಾಪಿಸಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು