Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನ್ಯಾಯಸ್ಥಾಪಕರು 14:18 - ಕನ್ನಡ ಸತ್ಯವೇದವು C.L. Bible (BSI)

18 ಅವರು ಏಳನೆಯ ದಿನ ಸೂರ್ಯಾಸ್ತಮಾನಕ್ಕೆ ಮೊದಲೇ ಅವನಿಗೆ, “ಜೇನಿಗಿಂತ ಸಿಹಿಯಾದದ್ದು ಯಾವುದು” ಸಿಂಹಕ್ಕಿಂತ ಕ್ರೂರವಾದದ್ದು ಯಾವುದು?” ಎಂದು ಹೇಳಿದರು. ಅವನು, “ನೀವು ನನ್ನ ಕಡಸಿನಿಂದ ಉಳದಿದ್ದರೆ ಒಗಟನ್ನು ಬಿಡಿಸಲು ನಿಮ್ಮಿಂದಾಗುತ್ತಿರಲಿಲ್ಲ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ಅವರು ಏಳನೆಯ ದಿನ ಸೂರ್ಯ ಮುಳುಗುವುದಕ್ಕಿಂತ ಮೊದಲು ಅವನಿಗೆ, “ಜೇನಿಗಿಂತ ಸಿಹಿಯಾದದ್ದು ಯಾವುದು? ಸಿಂಹಕ್ಕಿಂತ ಬಲಿಷ್ಠವಾದದ್ದು ಯಾವುದು?” ಎಂದು ಹೇಳಲು ಅವನು, “ನೀವು ನನ್ನ ಕಡಸಿನಿಂದ ಉಳದೇ ಹೋಗಿದ್ದರೆ ಒಗಟನ್ನು ಬಿಚ್ಚುವುದು ನಿಮ್ಮಿಂದಾಗುತ್ತಿರಲಿಲ್ಲ” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ಅವರು ಏಳನೆಯ ದಿನ ಸೂರ್ಯಾಸ್ತಮಾನಕ್ಕೆ ಮೊದಲು ಅವನಿಗೆ - ಜೇನಿಗಿಂತ ಸಿಹಿಯಾದದ್ದು ಯಾವದು? ಸಿಂಹಕ್ಕಿಂತ ಕ್ರೂರವಾದದಾವದು ಎಂದು ಹೇಳಲು ಅವನು - ನೀವು ನನ್ನ ಕಡಸಿನಿಂದ ಉಳದಿದ್ದರೆ ಒಗಟನ್ನು ಬಿಚ್ಚುವದು ನಿಮ್ಮಿಂದಾಗುತ್ತಿರಲಿಲ್ಲ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ಔತಣದ ಏಳನೆಯ ದಿನ ಸೂರ್ಯಾಸ್ತಮಾನಕ್ಕಿಂತ ಮುಂಚೆ ಫಿಲಿಷ್ಟಿಯರಿಗೆ ಅರ್ಥ ಗೊತ್ತಾಯಿತು. ಅವರು ಸಂಸೋನನಲ್ಲಿಗೆ ಬಂದು ಅವನಿಗೆ, “ಜೇನಿಗಿಂತ ಸಿಹಿಯಾದದ್ದು ಯಾವುದು; ಸಿಂಹಕ್ಕಿಂತ ಕ್ರೂರವಾದದ್ದು ಯಾವುದು” ಎಂದರು. ಅದಕ್ಕೆ ಸಂಸೋನನು ಅವರಿಗೆ, “ನೀವು ನನ್ನ ಹಸುವಿನಿಂದ ನೇಗಿಲು ಹೊಡೆಯದ್ದಿದ್ದರೆ ಒಗಟನ್ನು ಬಿಡಿಸುವುದು ನಿಮ್ಮಿಂದ ಆಗುತ್ತಿರಲಿಲ್ಲ” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ಏಳನೆಯ ದಿವಸದಲ್ಲಿ ಸೂರ್ಯ ಮುಳುಗುವುದಕ್ಕಿಂತ ಮುಂಚೆ ಆ ಊರಿನವರು ಅವನಿಗೆ, “ಜೇನಿಗಿಂತ ಸಿಹಿಯಾದದ್ದೇನು? ಸಿಂಹಕ್ಕಿಂತ ಬಲಿಷ್ಠವಾದದ್ದೇನು?” ಎಂದು ಹೇಳಿದರು. ಅವನು ಉತ್ತರವಾಗಿ ಅವರಿಗೆ, “ನೀವು ನನ್ನ ಕಡಸಿನಿಂದ ಉಳದೆ ಇದ್ದರೆ, ನನ್ನ ಒಗಟನ್ನು ಗ್ರಹಿಸಲಾರಿರಿ.”

ಅಧ್ಯಾಯವನ್ನು ನೋಡಿ ನಕಲು ಮಾಡಿ




ನ್ಯಾಯಸ್ಥಾಪಕರು 14:18
6 ತಿಳಿವುಗಳ ಹೋಲಿಕೆ  

ಆಕೆ ಔತಣದ ಏಳು ದಿನಗಳಲ್ಲೂ ಅವನ ಮುಂದೆ ಅಳುತ್ತಿದ್ದಳು. ಏಳನೆಯ ದಿನ ಆಕೆ ಬಹಳವಾಗಿ ಪೀಡಿಸಿದ್ದರಿಂದ ಅವನು ಹೇಳೇಬಿಟ್ಟನು. ಆಕೆ ಒಗಟಿನ ಅರ್ಥವನ್ನು ತನ್ನ ಜನರಿಗೆ ತಿಳಿಸಿದಳು.


ಸರ್ವೇಶ್ವರನ ಆತ್ಮ ಫಕ್ಕನೆ ಅವನ ಮೇಲೆ ಬಂದಿತು. ಅವನು ಅಷ್ಕೆಲೋನಿಗೆ ಹೋಗಿ ಅಲ್ಲಿನ ಮೂವತ್ತು ಮಂದಿಯನ್ನು ಹೊಡೆದು ಅವರ ವಸ್ತ್ರಗಳನ್ನು ಸುಲಿದುಕೊಂಡು ಒಗಟನ್ನು ಬಿಡಿಸಿದವರಿಗೆ ತಂದುಕೊಟ್ಟನು. ಬಳಿಕ ಕೋಪಗೊಂಡು ತನ್ನ ತಂದೆಯ ಮನೆಗೆ ಹೋದನು.


ಸೌಮ್ಯರು, ಅತಿಪ್ರಿಯರು, ಆ ಸೌಲ-ಯೋನಾತಾನರು ಬಾಳಿನಲು, ಸಾವಿನಲು ಬಿಟ್ಟಗಲದವರು. ಹದ್ದಿಗಿಂತ ಅಧಿಕ ವೇಗ ಅವರದು ಸಿಂಹಕ್ಕಿಂತ ಹೆಚ್ಚಿನ ಶಕ್ತಿ ಅವರದು!


ಯಾವುದಕ್ಕೂ ಹೆದರಿ ಓರೆಯಾಗದ ಮೃಗರಾಜನಾದ ಸಿಂಹ,


“ನಿಮಗಾದರೋ ಬಡಿಸುತ್ತಿದ್ದೆ ಅತ್ಯುತ್ತಮ ಗೋದಿಯನು I ಉಣಿಸುತ್ತಿದ್ದೆ ನಾ ನಿಮಗೆ ಬೆಟ್ಟದ ಜೇನುತುಪ್ಪವನು” II


ಅವುಗಳ ಮುಖ ಲಕ್ಷಣಗಳು ಹೀಗಿದ್ದವು: ಒಂದೊಂದರ ಮುಂದಿನ ಮುಖ ಮನುಷ್ಯ ಮುಖದಂತಿತ್ತು; ಬಲಗಡೆಯ ಮುಖ ಸಿಂಹನಂತಿತ್ತು; ಎಡಗಡೆಯ ಮುಖ ಹೋರಿಯ ಮುಖದಂತಿತ್ತು; ಹಿಂದಿನ ಮುಖ ಗರುಡ ಪಕ್ಷಿಯ ಮುಖದಂತಿತ್ತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು