Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನ್ಯಾಯಸ್ಥಾಪಕರು 11:27 - ಕನ್ನಡ ಸತ್ಯವೇದವು C.L. Bible (BSI)

27 ನಾನು ನಿನಗೆ ಯಾವ ಅನ್ಯಾಯವನ್ನೂ ಮಾಡಲಿಲ್ಲ. ನೀನು ಈಗ ನನಗೆ ವಿರೋಧವಾಗಿ ಯುದ್ಧಕ್ಕೆ ಬಂದದ್ದರಿಂದ ನೀನೇ ಅನ್ಯಾಯಮಾಡಿದ ಹಾಗಾಯಿತು. ನ್ಯಾಯಸ್ಥಾಪಕರಾದ ಸರ್ವೇಶ್ವರಸ್ವಾಮಿಯೇ ಈ ಹೊತ್ತು ಇಸ್ರಯೇಲರಿಗೂ ಅಮ್ಮೋನಿಯರಿಗೂ ಮಧ್ಯೆ ನ್ಯಾಯ ತೀರಿಸಲಿ,” ಎಂದು ಹೇಳಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

27 ನಾನು ನಿನಗೆ ಯಾವ ಅನ್ಯಾಯವನ್ನೂ ಮಾಡಲಿಲ್ಲ. ನೀನು ಈಗ ನನಗೆ ವಿರೋಧವಾಗಿ ಯುದ್ಧಕ್ಕೆ ಬಂದದ್ದರಿಂದ ನೀನೇ ಅನ್ಯಾಯ ಮಾಡಿದ ಹಾಗಾಯಿತು. ನ್ಯಾಯಸ್ಥಾಪಕನಾದ ಯೆಹೋವನೇ ಈ ಹೊತ್ತು ಇಸ್ರಾಯೇಲರ ಮತ್ತು ಅಮ್ಮೋನಿಯರ ಮಧ್ಯದಲ್ಲಿ ನ್ಯಾಯತೀರಿಸಲಿ” ಎಂದು ಹೇಳಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

27 ನಾನು ನಿನಗೆ ಯಾವ ಅನ್ಯಾಯವನ್ನೂ ಮಾಡಲಿಲ್ಲ. ನೀನು ಈಗ ನನಗೆ ವಿರೋಧವಾಗಿ ಯುದ್ಧಕ್ಕೆ ಬಂದದರಿಂದ ನೀನೇ ಅನ್ಯಾಯಮಾಡಿದ ಹಾಗಾಯಿತು. ನ್ಯಾಯಸ್ಥಾಪಕನಾದ ಯೆಹೋವನೇ ಈ ಹೊತ್ತು ಇಸ್ರಾಯೇಲ್ಯರಿಗೂ ಅಮ್ಮೋನಿಯರಿಗೂ ಮಧ್ಯದಲ್ಲಿ ನ್ಯಾಯತೀರಿಸಲಿ ಎಂದು ಹೇಳಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

27 ಇಸ್ರೇಲರು ನಿಮ್ಮ ವಿರುದ್ಧ ಯಾವ ಪಾಪವನ್ನೂ ಮಾಡಿಲ್ಲ. ಆದರೆ ನೀನು ಇಸ್ರೇಲರ ವಿರುದ್ಧ ಬಹಳ ಕೆಟ್ಟದ್ದನ್ನು ಮಾಡುತ್ತಿರುವೆ. ನ್ಯಾಯವು ಇಸ್ರೇಲರ ಪರವಾಗಿದೆಯೋ ಅಥವಾ ಅಮ್ಮೋನಿಯರ ಪರವಾಗಿದೆಯೋ ಎಂಬುದನ್ನು ನಿಜವಾದ ನ್ಯಾಯಾಧೀಶನಾದ ಯೆಹೋವನೇ ತೀರ್ಮಾನಿಸಬೇಕು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

27 ಆದ್ದರಿಂದ ನಾನು ನಿನಗೆ ವಿರೋಧವಾಗಿ ಪಾಪಮಾಡಲಿಲ್ಲ. ನೀನೇ ನನ್ನ ಮೇಲೆ ಯುದ್ಧ ಮಾಡುವುದರಿಂದ ನನಗೆ ಕೆಟ್ಟದ್ದನ್ನು ಮಾಡುತ್ತೀಯೆ. ನ್ಯಾಯಾಧಿಪತಿಯಾದ ಯೆಹೋವ ದೇವರು ಈ ಹೊತ್ತು ಇಸ್ರಾಯೇಲರಿಗೂ, ಅಮ್ಮೋನಿಯರಿಗೂ ಮಧ್ಯದಲ್ಲಿ ನ್ಯಾಯತೀರಿಸಲಿ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನ್ಯಾಯಸ್ಥಾಪಕರು 11:27
27 ತಿಳಿವುಗಳ ಹೋಲಿಕೆ  

ಸರ್ವೇಶ್ವರ ನ್ಯಾಯಾಧಿಪತಿಯಾಗಿ ನಮ್ಮಿಬ್ಬರ ವ್ಯಾಜ್ಯವನ್ನು ತೀರಿಸಲಿ; ಅವರೇ ನೋಡಿ ನನ್ನ ಪರವಾಗಿ ವಾದಿಸಿ ನನ್ನನ್ನು ನಿಮ್ಮ ಕೈಯಿಂದ ತಪ್ಪಿಸಲಿ,” ಎಂದು ಹೇಳಿದನು.


ಸರ್ವೇಶ್ವರನೇ ನಮ್ಮ ಉಭಯರ ವ್ಯಾಜ್ಯವನ್ನು ತೀರಿಸಲಿ; ಅವರೇ ನನಗಾಗಿ ನಿಮಗೆ ಮುಯ್ಯಿಸಲ್ಲಿಸಲಿ; ನಾನಂತೂ ನಿಮಗೆ ವಿರೋಧವಾಗಿ ಕೈಯೆತ್ತುವುದಿಲ್ಲ.


ಹೀಗೆ ದುಷ್ಟರಿಗೂ ಶಿಷ್ಟರಿಗೂ ಭೇದಮಾಡದೆ ದುಷ್ಟರ ಸಂಗಡ ಸಜ್ಜನರನ್ನೂ ಸಂಹರಿಸುವುದು ನಿಮ್ಮಿಂದ ಎಂದಿಗೂ ಆಗಬಾರದು. ಇಡೀ ಜಗತ್ತಿನ ನ್ಯಾಯಾಧಿಪತಿ ಸರಿಯಾಗಿ ನ್ಯಾಯತೀರಿಸಬೇಕಲ್ಲವೇ?" ಎಂದನು.


ಆಗ ಸಾರಯಳು ಅಬ್ರಾಮನಿಗೆ, “ನನಗೆ ಅನ್ಯಾಯವಾಗುತ್ತಿದೆ; ಇದಕ್ಕೆ ನೀವೇ ಹೊಣೆ, ನನ್ನ ದಾಸಿಯನ್ನು ನಿಮಗೆ ಉಪಪತ್ನಿಯಾಗಿ ಕೊಟ್ಟೆನಷ್ಟೆ; ಇವಳೋ, ತಾನು ಗರ್ಭಿಣಿಯಾದೆನೆಂದು ತಿಳಿದದ್ದೆ, ನನ್ನನ್ನು ತಾತ್ಸಾರ ಮಾಡುತ್ತಿದ್ದಾಳೆ; ಈಗ ಸರ್ವೇಶ್ವರ ಸ್ವಾಮಿಯೇ ನಿಮಗೂ ನನಗೂ ನ್ಯಾಯ ತೀರಿಸಬೇಕು,” ಎಂದು ದೂರಿದಳು.


ಅಬ್ರಹಾಮನ ದೇವರು. ನಾಹೋರನ ದೇವರು, ಅವರ ತಂದೆಗಳ ದೇವರು ನಿನಗೂ ನನಗೂ ನ್ಯಾಯ ತೀರಿಸಲಿ,” ಎಂದನು. ಅದೇ ಮೇರೆಗೆ ಯಕೋಬನು, ತನ್ನ ತಂದೆಯಾದ ಇಸಾಕನು ಭಯಭಕ್ತಿಯಿಂದ ಆರಾಧಿಸುವ ದೇವರ ಮೇಲೆ ಆಣೆಯಿಟ್ಟು ಪ್ರಮಾಣಮಾಡಿದನು.


ಇನ್ನು ನನಗೆ ಉಳಿದಿರುವುದು ಒಂದೇ: ಸಜ್ಜನರಿಗೆ ಸಲ್ಲುವಂಥ ಜಯಮಾಲೆ ನನಗೀಗ ಸಿದ್ಧವಾಗಿದೆ. ಅದನ್ನು ನೀತಿವಂತ ನ್ಯಾಯಾಧಿಪತಿಯಾದ ಪ್ರಭು ಆ ದಿನದಂದು ನನಗೆ ಕೊಡುವರು; ನನಗೆ ಮಾತ್ರವಲ್ಲ, ಅವರ ಪ್ರತ್ಯಕ್ಷತೆಯನ್ನು ಪ್ರೀತಿಯಿಂದ ನಿರೀಕ್ಷಿಸುತ್ತಿರುವ ಎಲ್ಲರಿಗೂ ಕೊಡುವರು.


ನಾವು ಎಲ್ಲರೂ ನ್ಯಾಯವಿಚಾರಣೆಗಾಗಿ ಕ್ರಿಸ್ತಯೇಸುವಿನ ಮುಂದೆ ನಿಲ್ಲಲೇಬೇಕು. ಪ್ರತಿಯೊಬ್ಬನೂ ತನ್ನ ದೈಹಿಕ ಜೀವನದಲ್ಲಿ ಮಾಡಿದ ಪಾಪ ಪುಣ್ಯಕಾರ್ಯಗಳಿಗೆ ತಕ್ಕ ಪ್ರತಿಫಲವನ್ನು ಪಡೆಯಲೇಬೇಕು.


ಏಕೆನೆ ಬರುವನಾತ ಇಹಲೋಕಕೆ ನ್ಯಾಯತೀರಿಸಲು I ಜಗಕು, ಜನತೆಗು, ನ್ಯಾಯನೀತಿಗನುಸಾರ ತೀರ್ಪುಕೊಡಲು II


ಪ್ರಭೂ, ಲೋಕದ ನ್ಯಾಯಾಧಿಪತಿ I ಏಳು, ಗರ್ವಿಗಳಿಗೆ ಮಾಡು ತಕ್ಕಶಾಸ್ತಿ II


ಎದ್ದೇಳು ದೇವ, ಸ್ಥಾಪಿಸು ನ್ಯಾಯವನು ಧರೆಯೊಳು I ನಿನ್ನ ಸೊತ್ತಾಗಿವೆಯಲ್ಲವೆ ಸಮಸ್ತ ರಾಷ್ಟ್ರಗಳು II


ನ್ಯಾಯತೀರ್ಪು ಬರುವುದು ದೇವನಿಂದಲೇ I ಉನ್ನತಿಯು ಅವನತಿಯು ಆತನಿಂದಲೇ II


ದೇವನೇ ಸತ್ಯಸ್ವರೂಪಿ, ನ್ಯಾಯಾಧಿಪತಿ I ಇದನು ಸಾರಿ ಹೇಳಲಿ ಆಕಾಶ ಪ್ರಕೃತಿ II


ನ್ಯಾಯಕ್ಕನುಸಾರ ತೀರ್ಪನೀಡುವಂಥವನು ದೇವನು I ದುರುಳರ ಮೇಲೆ ದಿನಬಿಡದೆ ಕೋಪವುಳ್ಳವನು ಆತನು II


ಅಲ್ಲಿ ಸಜ್ಜನನಿಗೆ ಮಾತ್ರ ವಾದಿಸಲು ಸಾಧ್ಯ. ನಿತ್ಯವಾದ ಬಿಡುಗಡೆ ಆ ನ್ಯಾಯಾಧೀಶನಿಂದ ನನಗೆ ಲಭ್ಯ.


ನಾನು ಸತ್ಯವಂತನಾಗಿದ್ದರೂ ವಾದಿಸಲಾರೆನು ನನ್ನ ನ್ಯಾಯಾಧೀಶನಲ್ಲಿ ದಯೆಯನು ಕೋರುವೆನು.


ಚದರಿಹೋಗುವರು ಸರ್ವೇಶ್ವರನ ವಿರೋಧಿಗಳು ಆಗಸದಿಂದಾತ ಅವರ ವಿರುದ್ಧ ಗರ್ಜಿಸಲು! ನ್ಯಾಯ ತೀರಿಸುವನಾತ ಜಗದ ಕಟ್ಟಕಡೆಯವರೆಗೆ ಶಕ್ತಿಸಾಮರ್ಥ್ಯವನೀವನು ತಾ ನೇಮಿಸಿದರಸನಿಗೆ ಏರಿಸುವನು ತನ್ನಭಿಷಿಕ್ತನ ಒಲುಮೆಯನು ಉನ್ನತಿಗೆ.


ಸ್ವರ್ಗದಲ್ಲಿ ದಾಖಲೆಯಾಗಿರುವ ಜೇಷ್ಠಪುತ್ರನ ಸಭೆಗೆ; ನೀವು ಬಂದಿರುವುದು ಸಕಲ ಮಾನವರ ನ್ಯಾಯಮೂರ್ತಿಯಾದ ದೇವರ ಸನ್ನಿಧಿಗೆ; ಸಿದ್ಧಿಗೆ ಬಂದ ಸತ್ಪುರುಷರ ಆತ್ಮಗಳ ಸಮೂಹಕ್ಕೆ;


ನಿಮ್ಮಿಂದ ನಾನು ಏನನ್ನೂ ತೆಗೆದುಕೊಳ್ಳುತ್ತಿಲ್ಲವೇಕೆ? ನಿಮ್ಮ ಮೇಲೆ ಪ್ರೀತಿ ಇಲ್ಲದ್ದರಿಂದಲೋ? ಇಲ್ಲ, ನಿಮ್ಮ ಮೇಲೆ ನಮಗಿರುವ ಪ್ರೀತಿ ಎಷ್ಟೆಂದು ದೇವರೇ ಬಲ್ಲರು.


ದೇವರು ಎಲ್ಲ ಕಾರ್ಯಗಳನ್ನು, ರಹಸ್ಯವಾದುವುಗಳನ್ನು ಕೂಡ, ಅವು ಒಳ್ಳೆಯದಾಗಿರಲಿ, ಕೆಟ್ಟದಾಗಿರಲಿ, ನ್ಯಾಯವಿಚಾರಣೆಗೆ ಗುರಿಮಾಡುವರು.


ಆದರೆ ಯೆಪ್ತಾಹನು ಹೇಳಿಕಳುಹಿಸಿದ ಮಾತುಗಳಿಗೆ ಅಮ್ಮೋನಿಯರ ಅರಸನು ಕಿವಿಗೊಡಲಿಲ್ಲ.


ನಮ್ಮ ದೇವರೇ, ಅವರನ್ನು ದಂಡಿಸದೆ ಬಿಡುವಿರೋ? ನಮ್ಮ ಮೇಲೆ ಬಂದಿರುವ ಈ ಮಹಾಸಮೂಹದ ಮುಂದೆ ನಿಲ್ಲುವುದಕ್ಕೆ ನಮ್ಮಲ್ಲಿ ಬಲವಿಲ್ಲ; ಏನು ಮಾಡಬೇಕೆಂದೂ ತಿಳಿಯದು; ನಮ್ಮ ಕಣ್ಣುಗಳು ನಿಮ್ಮನ್ನೇ ನೋಡುತ್ತಿವೆ,” ಎಂದು ಪ್ರಾರ್ಥಿಸಿದನು.


ಇಸ್ರಯೇಲರಲ್ಲಿ ‘ಕೆಟ್ಟವರಿಂದಲೇ ಕೇಡು’ ಎಂಬುದಾಗಿ ಹಿರಿಯರಿಂದ ಬಂದ ಗಾದೆಯುಂಟು. ನಾನು ನಿಮಗೆ ವಿರೋಧವಾಗಿ ಕೈಯೆತ್ತುವುದಿಲ್ಲ.


ದಾವೀದನ ಮಾತುಗಳು ಮುಗಿದನಂತರ ಸೌಲನು, “ದಾವೀದನೇ, ನನ್ನ ಮಗನೇ, ಇದು ನಿಜವಾಗಿಯೂ ನಿನ್ನ ಸ್ವರವೇ?” ಎಂದು ಗಟ್ಟಿಯಾಗಿ ಅತ್ತನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು