ನ್ಯಾಯಸ್ಥಾಪಕರು 1:30 - ಕನ್ನಡ ಸತ್ಯವೇದವು C.L. Bible (BSI)30 ಜೆಬುಲೂನ್ ಕುಲದವರು ಕಿಟ್ರೋನ್, ನಹಲೋಲ್ ಎಂಬ ಪಟ್ಟಣಗಳ ನಿವಾಸಿಗಳನ್ನು ಅಟ್ಟಿಬಿಡಲಿಲ್ಲ. ಆದರೆ ಆ ಕಾನಾನ್ಯರು ಅವರಿಗೆ ಗುಲಾಮರಾಗಿ ಅವರ ಮಧ್ಯದಲ್ಲೇ ವಾಸಮಾಡಿದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201930 ಜೆಬುಲೂನ್ಯರು ಕಿತ್ರೋನ್, ನಹಲೋಲ್ ಎಂಬ ಪಟ್ಟಣಗಳ ನಿವಾಸಿಗಳನ್ನು ಓಡಿಸಲಿಲ್ಲ. ಇದರಿಂದ ಕಾನಾನ್ಯರು ಅವರ ಮಧ್ಯದಲ್ಲೇ ವಾಸಮಾಡುವವರಾದರು. ಆದರೆ ಜೆಬುಲೂನ್ಯರು ಕಾನಾನ್ಯರನ್ನು ಗುಲಾಮರನ್ನಾಗಿ ಮಾಡಿಕೊಂಡರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)30 ಜೆಬುಲೂನ್ಯರು ಕಿಟ್ರೋನ್, ನಹಲೋಲ್ ಎಂಬ ಪಟ್ಟಣಗಳ ನಿವಾಸಿಗಳನ್ನು ಅಟ್ಟಿಬಿಡಲಿಲ್ಲ. ಆದರೆ ಆ ಕಾನಾನ್ಯರು ಅವರಿಗೆ ದಾಸರಾಗಿ ಅವರ ಮಧ್ಯದಲ್ಲೇ ವಾಸಮಾಡುವವರಾದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್30 ಜೆಬುಲೂನ್ಯರ ಸಂಗಡವೂ ಹೀಗೆಯೇ ಆಯಿತು. ಕಿಟ್ರೋನ್ ಮತ್ತು ನಹಲೋಲ್ ನಗರಗಳಲ್ಲಿ ಕೆಲವು ಕಾನಾನ್ಯರು ವಾಸಮಾಡಿಕೊಂಡಿದ್ದರು. ಜೆಬುಲೂನ್ಯರು ಅವರನ್ನು ಆ ಪ್ರದೇಶದಿಂದ ಹೊರದೂಡಲಿಲ್ಲ. ಆ ಕಾನಾನ್ಯರು ಅಲ್ಲಿಯೇ ಉಳಿದುಕೊಂಡು ಜೆಬುಲೂನ್ಯರೊಂದಿಗೆ ವಾಸಮಾಡಿದರು. ಆದರೆ ಜೆಬುಲೂನ್ಯರು ಅವರನ್ನು ತಮ್ಮ ಗುಲಾಮರಂತೆ ಕೆಲಸಮಾಡಲು ಹಚ್ಚಿದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ30 ಜೆಬುಲೂನ್ಯರು ಕಿಟ್ರೋನಿನ ವಾಸಿಗಳನ್ನೂ ನಹಲೋಲಿನ ವಾಸಿಗಳನ್ನೂ ಹೊರಡಿಸಿಬಿಡಲಿಲ್ಲ. ಕಾನಾನ್ಯರಾದ ಇವರು ಅವರಲ್ಲಿ ದಾಸರಾಗಿ ವಾಸಮಾಡುವವರಾದರು. ಅಧ್ಯಾಯವನ್ನು ನೋಡಿ |