Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನೆಹೆಮೀಯ 9:7 - ಕನ್ನಡ ಸತ್ಯವೇದವು C.L. Bible (BSI)

7 ಸರ್ವೇಶ್ವರಾ, ಅಬ್ರಾಮನನು ನೀವು ಆರಿಸಿಕೊಂಡಿರಿ ಬಾಬಿಲೋನಿನ ‘ಊರ್’ ನಗರದಿಂದ ಆತನನು ಬರಮಾಡಿದಿರಿ ದೇವರಾದ ನೀವೇ ಆತನಿಗೆ ‘ಅಬ್ರಹಾಮ’ ಎಂದು ಹೆಸರಿಟ್ಟಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಯೆಹೋವನೇ, ಅಬ್ರಾಮನನ್ನು ಆರಿಸಿಕೊಂಡು ಕಸ್ದೀಯರ ಊರ್ ಎಂಬ ಪಟ್ಟಣದಿಂದ ಬರಮಾಡಿ, ಅವನಿಗೆ ಅಬ್ರಹಾಮನೆಂಬ ಹೆಸರನ್ನು ಕೊಟ್ಟ ದೇವರು ನೀನೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಆಕಾಶ ಸೈನ್ಯದವರು ನಿನಗೆ ಅಡ್ಡಬೀಳುತ್ತಾರೆ. ಯೆಹೋವನೇ, ಅಬ್ರಾಮನನ್ನು ಆರಿಸಿಕೊಂಡು ಕಸ್ದೀಯರ ಊರ್ ಎಂಬ ಪಟ್ಟಣದಿಂದ ಬರಮಾಡಿ ಅವನಿಗೆ ಅಬ್ರಹಾಮನೆಂಬ ಹೆಸರನ್ನು ಕೊಟ್ಟ ದೇವರು ನೀನೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ನೀನೇ ದೇವರಾದ ಯೆಹೋವನು. ಅಬ್ರಾಮನನ್ನು ನೀನೇ ಆರಿಸಿಕೊಂಡೆ. ಬಾಬಿಲೋನಿನ ಊರ್ ಎಂಬಲ್ಲಿಂದ ನೀನು ಅವನನ್ನು ನಡೆಸಿದೆ. ಅವನ ಹೆಸರನ್ನು ಬದಲಾಯಿಸಿ ಅಬ್ರಹಾಮನೆಂದು ಕರೆದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 “ನೀವು ಅಬ್ರಾಮನನ್ನು ಆಯ್ದುಕೊಂಡಿರುವ ಯೆಹೋವ ದೇವರು. ನೀವು ಅವನನ್ನು ಊರ್ ಎಂಬ ಕಸ್ದೀಯರ ಪಟ್ಟಣದಿಂದ ಹೊರಗೆ ಬರಮಾಡಿ, ಅವನಿಗೆ ಅಬ್ರಹಾಮ್ ಎಂದು ಹೆಸರಿಟ್ಟಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನೆಹೆಮೀಯ 9:7
11 ತಿಳಿವುಗಳ ಹೋಲಿಕೆ  

ಇನ್ನು ಮುಂದೆ ನಿನಗೆ ‘ಅಬ್ರಾಮ’ ಎಂಬ ಹೆಸರಿರುವುದಿಲ್ಲ. ನಿನ್ನನ್ನು ನಾನು ಅನೇಕಾನೇಕ ರಾಷ್ಟ್ರಗಳಿಗೆ ಮೂಲಪುರುಷನನ್ನಾಗಿ ನೇಮಿಸುವುದರಿಂದ ನಿನಗೆ ‘ಅಬ್ರಹಾಮ’ ಎಂಬ ಹೆಸರಿರುವುದು.


ತೆರಹನು ತನ್ನ ಮಗನಾದ ಅಬ್ರಾಮನನ್ನು ಮತ್ತು ತನಗೆ ಮೊಮ್ಮಗನೂ ಹಾರಾನನಿಗೆ ಮಗನೂ ಆದ ಲೋಟನನ್ನೂ ಹಾಗು ತನಗೆ ಸೊಸಯೂ ಅಬ್ರಾಮನಿಗೆ ಹೆಂಡತಿಯೂ ಆದ ಸಾರಯಳನ್ನೂ ಕರೆದುಕೊಂಡು ಬಾಬಿಲೋನಿನ ಊರ್ ಎಂಬ ಪಟ್ಟಣವನ್ನು ಬಿಟ್ಟು ಕಾನಾನ್ ನಾಡಿಗೆ ತೆರಳಿದನು. ಅವರು ಹಾರಾನ್ ಎಂಬ ಪಟ್ಟಣವನ್ನು ತಲುಪಿ ಅಲ್ಲಿ ವಾಸಮಾಡಿಕೊಂಡರು.


ನೆನೆಯಿರಿ ನಿಮ್ಮ ಮೂಲಪುರುಷ ಅಬ್ರಹಾಮನನು ಅವನ ಸತಿ ಸಾರಳನು. ಅಬ್ರಹಾಮನನ್ನು ನಾ ಕರೆದಾಗ ಆತನು ಒಬ್ಬಂಟಿಗನು ಆಶೀರ್ವಾದದಿ ನಾ ಬೆಳೆಸಿದೆ ಆತನ ಸಂತಾನವನು.


ಆದರೂ ಅವರು ನಿಮ್ಮ ಪಿತೃಗಳಲ್ಲಿ ಇಷ್ಟವುಳ್ಳವರಾಗಿ ಅವರನ್ನು ಪ್ರೀತಿಸಿದರು. ಈಗ ನಿಮ್ಮ ಅನುಭವಕ್ಕೆ ಬಂದಿರುವಂತೆ, ಅವರ ತರುವಾಯ ಅವರ ಸಂತತಿಯವರಾದ ನಿಮ್ಮನ್ನೇ ಎಲ್ಲ ಜನಾಂಗಗಳಿಂದ ಆರಿಸಿಕೊಂಡರು.


ಸವೇಶ್ವರ ಬಳಿಕ ಅಬ್ರಾಮನಿಗೆ ಇಂತೆಂದರು: “ಈ ನಾಡನ್ನು ನಿನಗೆ ಸೊತ್ತಾಗಿ ಕೊಡಬೇಕೆಂದು ಬಾಬಿಲೋನಿನಲ್ಲಿರುವ ಊರ್ ಪಟ್ಟಣದಿಂದ ನಿನ್ನನ್ನು ಬರಮಾಡಿದ ಸರ್ವೇಶ್ವರ ನಾನೇ,” ಎಂದರು.


ಅವನು ತನ್ನ ಪುತ್ರಪೌತ್ರರಿಗೆ, ‘ನೀವು ನ್ಯಾಯನೀತಿಯನ್ನು ಪಾಲಿಸುತ್ತಾ ಸರ್ವೇಶ್ವರ ಸ್ವಾಮಿಯ ಮಾರ್ಗದಲ್ಲೇ ನಡೆಯಬೇಕು; ಹಾಗೆ ಮಾಡಿದರೆ ವಾಗ್ದಾನ ಮಾಡಿದುದನ್ನೆಲ್ಲ ಈಡೇರಿಸುವರು,’ ಎಂದು ಬೋಧಿಸಲೆಂದೇ ನಾನು ಅವನನ್ನು ಆರಿಸಿಕೊಂಡಿದ್ದೇನೆ".


ಅಬ್ರಾಮ್ (ಇವನು ಅಬ್ರಹಾಮ ಎಂದೂ ಹೆಸರು ಹೊಂದಿದವನು).


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು