Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನೆಹೆಮೀಯ 9:33 - ಕನ್ನಡ ಸತ್ಯವೇದವು C.L. Bible (BSI)

33 ನಮ್ಮ ಮೇಲೆ ನೀವೆಷ್ಟೇ ಕೇಡನು ಬರಮಾಡಿದರೂ ನೀವು ನ್ಯಾಯವಂತರು, ಸತ್ಯಸ್ವರೂಪಿ, ನಾವೋ ದುಷ್ಟರು!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

33 ನೀನು ನಮ್ಮ ಮೇಲೆ ಎಷ್ಟು ಕೇಡನ್ನು ಬರಮಾಡಿದರೂ ನೀನು ನೀತಿಸ್ವರೂಪನೇ. ನೀನು ಸತ್ಯವನ್ನೇ ನಡಿಸಿದೆ. ನಾವಾದರೋ ದುಷ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

33 ನೀನು ನಮ್ಮ ಮೇಲೆ ಎಷ್ಟು ಕೇಡನ್ನು ಬರಮಾಡಿದರೂ ನೀನು ಧರ್ಮಸ್ವರೂಪನೇ; ನೀನು ಸತ್ಯವನ್ನೇ ನಡಿಸಿದಿ, ನಾವಾದರೋ ದುಷ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

33 ಆದರೆ ದೇವರೇ, ನಮಗೆ ಸಂಭವಿಸುವ ಪ್ರತಿಯೊಂದರಲ್ಲೂ ನಿನ್ನದೇನೂ ತಪ್ಪಿಲ್ಲ. ನೀನು ನ್ಯಾಯವಂತನೇ ಸರಿ. ನಾವೇ ತಪ್ಪಿತಸ್ಥರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

33 ನೀವು ನಮ್ಮ ಮೇಲೆ ಬರಮಾಡಿದ ಎಲ್ಲದರಲ್ಲಿಯೂ ನ್ಯಾಯವಂತರಾಗಿರುವಿರಿ. ಏಕೆಂದರೆ ನೀವು ಮಾಡಿದ್ದು ಸತ್ಯಕ್ಕನುಸಾರವಾದದ್ದು. ಆದರೆ ನಾವು ದುಷ್ಟರಾಗಿ ನಡೆದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನೆಹೆಮೀಯ 9:33
16 ತಿಳಿವುಗಳ ಹೋಲಿಕೆ  

ನಮ್ಮ ಪಿತೃಗಳಂತೆಯೆ ಪಾಪಿಗಳು ನಾವು I ಅಕ್ರಮಗೈದೆವು, ಅಪರಾಧಿಗಳಾದೆವು II


ಹೀಗೆ ದುಷ್ಟರಿಗೂ ಶಿಷ್ಟರಿಗೂ ಭೇದಮಾಡದೆ ದುಷ್ಟರ ಸಂಗಡ ಸಜ್ಜನರನ್ನೂ ಸಂಹರಿಸುವುದು ನಿಮ್ಮಿಂದ ಎಂದಿಗೂ ಆಗಬಾರದು. ಇಡೀ ಜಗತ್ತಿನ ನ್ಯಾಯಾಧಿಪತಿ ಸರಿಯಾಗಿ ನ್ಯಾಯತೀರಿಸಬೇಕಲ್ಲವೇ?" ಎಂದನು.


“ಸರ್ವೇಶ್ವರನು ನ್ಯಾಯಸ್ವರೂಪಿ, ನಾನಾದರೊ ಆತನ ಆಜ್ಞೆ ಮೀರಿದ ದ್ರೋಹಿ. ಜನಾಂಗಗಳೇ, ನೀವೆಲ್ಲರು ಕಿವಿಗೊಡಿ, ನನ್ನ ಸಂಕಟ ನೋಡಿ ! ನನ್ನ ಯುವಕ ಯುವತಿಯರು, ಇಗೋ, ಸೆರೆಹೋಗಿರುವರು ನೋಡಿ.


ಸರ್ವೇಶ್ವರಾ, ನೀವು ಸತ್ಯಸ್ವರೂಪಿ. ನಿಮ್ಮೊಡನೆ ವ್ಯಾಜ್ಯ ನನಗೆ ಅಸಾಧ್ಯ. ಆದರೂ ನಿಮ್ಮೊಡನೆ ಚರ್ಚಿಸಬೇಕೆಂದಿರುವೆ ಈ ನ್ಯಾಯ : ದುರುಳರ ಬಾಳು ಬೆಳಗುತ್ತಿರುವುದು ಏಕೆ? ದ್ರೋಹಿಗಳೆಲ್ಲರು ನೆಮ್ಮದಿಯಾಗಿರುವುದು ಏಕೆ?


ಎಲ್ಲ ಜೀವಿಗಳಿಗೆ ನೀ ಕೈ ನೀಡುವವನು I ಎಲ್ಲರ ಕೋರಿಕೆಗಳನು ಈಡೇರಿಸುವವನು II


ಹೇ ಪ್ರಭೂ, ನೀನು ಸತ್ಯವಂತ I ನಿನ್ನ ವಿಧಿಯು ನ್ಯಾಯಸಮ್ಮತ II


ದೇವರು ಮನುಷ್ಯನ ಮೇಲೆ ಹೆಚ್ಚು ಗಮನ ಇಡಬೇಕಾಗಿಲ್ಲ ಅವನನ್ನು ನ್ಯಾಯವಿಚಾರಣೆಗೆ ಕರೆಯುವ ಅವಶ್ಯಕತೆ ಇಲ್ಲ.


ಆಗ ಅವನು ಜನರ ಮುಂದೆ ಈ ಪರಿ ಹಾಡುವನು: ‘ಪಾಪ ಮಾಡಿದೆ; ಸನ್ಮಾರ್ಗ ಬಿಟ್ಟು ನಡೆದೆ ಆದರೂ ದಂಡಿಸಲಿಲ್ಲ ದೇವರು ನನ್ನ ಪಾಪಕ್ಕೆ ತಕ್ಕಂತೆ.


ಸರ್ವೇಶ್ವರಾ, ಇಸ್ರಯೇಲ್ ದೇವರೇ, ಈಗಿರುವಷ್ಟು ಜನರನ್ನು ನಮ್ಮಲ್ಲಿ ಉಳಿಸಿದ್ದರಿಂದ ನೀವು ಧರ್ಮಸ್ವರೂಪರೆಂದು ಸ್ಪಷ್ಟವಾಯಿತು. ನಾವಾದರೋ ನಿಮ್ಮ ದೃಷ್ಟಿಯಲ್ಲಿ ಅಪರಾಧಿಗಳು, ಈ ನಮ್ಮ ದುಷ್ಕೃತ್ಯದ ಸಲುವಾಗಿ ನಿಮ್ಮೆದುರಿನಲ್ಲಿ ನಿಲ್ಲಲಾರೆವು.”


ನಮ್ಮ ಅರಸರು, ರಾಜ್ಯಪಾಲರು, ಯಾಜಕರು, ಹಿರಿಯರು ಅನುಸರಿಸಲಿಲ್ಲ, ನಿಮ್ಮಾಜ್ಞೆಯನು, ಧರ್ಮೋಪದೇಶವನು. ಲಕ್ಷಿಸಲಿಲ್ಲ ನೀವಿತ್ತ ಎಚ್ಚರಿಕೆಯ ಮಾತುಗಳನು.


ಅಲ್ಲಿನವರು ತಮಗೂ ನಿಮಗೂ ಮತ್ತು ನಿಮ್ಮ ಪೂರ್ವಜರಿಗೂ ತಿಳಿಯದ ಅನ್ಯದೇವತೆಗಳಿಗೆ ಧೂಪಾರತಿ ಎತ್ತಿ ಪೂಜಿಸುವುದಕ್ಕೆ ತವಕಪಟ್ಟರು. ನನ್ನನ್ನು ಕೆಣಕಬೇಕೆಂದೇ ಈ ದುರಾಚಾರವನ್ನು ನಡೆಸಿದರು. ಆದ್ದರಿಂದಲೇ ಆ ಸ್ಥಳಗಳು ಹಾಳಾದವು, ನಿರ್ಜನಪ್ರದೇಶಗಳಾದವು.


ಅಂತೆಯೇ ಮೋಶೆ ಸರ್ವೇಶ್ವರನ ಬಳಿಗೆ ಮರಳಿ ಬಂದು, “ಅಕಟಕಟಾ, ಚಿನ್ನದಿಂದ ದೇವರನ್ನು ಮಾಡಿಕೊಂಡು ಈ ಜನರು ಮಹಾಪಾಪವನ್ನು ಕಟ್ಟಿಕೊಂಡಿದ್ದಾರೆ! ಆದರೂ ಕರುಣೆಯಿಟ್ಟು ಅವರ ಪಾಪವನ್ನು ಕ್ಷಮಿಸಿಬಿಡಿ.


ಆತ ಪ್ರಾಮಾಣಿಕ ವ್ಯಕ್ತಿಯೆಂದು ಗುರುತಿಸಿದಿರಿ ಕಾನಾನ್ಯರ, ಹಿತ್ತಿಯರ, ಅಮೋರಿಯರ, ಪೆರಿಜ್ಜೀಯರ, ಯೆಬೂಸಿಯರ, ಗಿರ್ಗಾಷಿಯರ ನಾಡನು ಆತನ ಸಂತಾನದವರಿಗೆ ವಾಗ್ದಾನ ಮಾಡಿದಿರಿ. ಅಂತೆಯೇ ಸತ್ವ ಸ್ವರೂಪರಾದ ನೀವು ಅದನು ಈಡೇರಿಸಿದಿರಿ.


ನಾನೇ ಸರ್ವೇಶ್ವರ ಎಂದು ನಿಮಗೆ ಗೊತ್ತಾಗುವುದು; ನೀವು ನನ್ನ ವಿಧಿಗಳನ್ನು ಕೈಗೊಳ್ಳದೆ, ನನ್ನ ನಿಯಮಗಳನ್ನು ಅನುಸರಿಸದೆ, ನಿಮ್ಮ ಸುತ್ತಲಿನ ಜನಾಂಗಗಳ ಆಚಾರಗಳನ್ನೇ ಅನುಸರಿಸಿದ್ದರಿಂದ ಇದೆಲ್ಲಾ ಆಗುವುದು.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು