Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನೆಹೆಮೀಯ 9:31 - ಕನ್ನಡ ಸತ್ಯವೇದವು C.L. Bible (BSI)

31 ಆದರೆ, ನೀವು ದಯಾಪೂರಿತರು, ಕರುಣಾಮಯ ದೇವರು! ನಿಮ್ಮ ಮಹಾಕೃಪಾನುಸಾರ, ಕೈಬಿಡಲಿಲ್ಲ, ನಾಶಮಾಡಲಿಲ್ಲ ಅವರನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

31 ಆದರೆ ನೀನು ದಯೆಯೂ ಕನಿಕರವೂ ಉಳ್ಳ ದೇವರಾಗಿರುವುರಿಂದ ನಿನ್ನ ಮಹಾಕೃಪಾನುಸಾರವಾಗಿ ಅವರನ್ನು ನಾಶಮಾಡಲಿಲ್ಲ, ಕೈಬಿಡಲೂ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

31 ಆದರೆ ನೀನು ದಯೆಯೂ ಕನಿಕರವೂ ಉಳ್ಳ ದೇವರಾಗಿರುವದರಿಂದ ನಿನ್ನ ಮಹಾ ಕೃಪಾನುಸಾರವಾಗಿ ಅವರನ್ನು ನಾಶಮಾಡಿಬಿಡಲಿಲ್ಲ, ಕೈಬಿಡಲೂ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

31 “ಆದರೂ ನೀನು ದಯಾವಂತನು, ಅವರನ್ನು ಸಂಪೂರ್ಣವಾಗಿ ನಾಶಮಾಡಲಿಲ್ಲ. ಅವರನ್ನು ತೊರೆಯಲಿಲ್ಲ. ನೀನು ಅಂಥಾ ದಯಾಪರನಾದ ದೇವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

31 ಆದರೂ ನೀವು ನಿಮ್ಮ ಮಹಾ ಕರುಣೆಯಲ್ಲಿ ಅವರನ್ನು ನಾಶಮಾಡಲಿಲ್ಲ. ಅವರನ್ನು ಕೈಬಿಡಲೂ ಇಲ್ಲ. ಏಕೆಂದರೆ ನೀವು ಕೃಪೆಯೂ, ಕರುಣೆಯೂ ಉಳ್ಳ ದೇವರಾಗಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನೆಹೆಮೀಯ 9:31
15 ತಿಳಿವುಗಳ ಹೋಲಿಕೆ  

ಸರ್ವೇಶ್ವರ ಸ್ವಾಮಿ ಹೀಗೆಂದಿದ್ದಾರೆ : ನಾಡೆಲ್ಲ ಬಟ್ಟಬರಿದಾಗುವುದು; ಆದರೆ ನಾನು ಅದನ್ನು ಸಂಪೂರ್ಣವಾಗಿ ಲಯಮಾಡುವುದಿಲ್ಲ.


ಮರೆತುಬಿಟ್ಟರು ನೀವೆಸಗಿದ ಮಹಾತ್ಕಾರ್ಯಗಳನು ಹಟಹಿಡಿದರು ತಮಗೊಬ್ಬ ನಾಯಕನ ನೇಮಿಸಿಕೊಳ್ಳಲು; ಈಜಿಪ್ಟಿಗೆ ತೆರಳಲಿದ್ದರು ಮರಳಿ ಗುಲಾಮರಾಗಲು. ನೀವಾದರೋ ಪಾಪಿಗಳನು ಕ್ಷಮಿಸುವವರು ದಯಾಪೂರಿತರು, ದೀರ್ಘಶಾಂತರು, ಕೃಪಾಳು ದೇವರು, ಅವರನು ಕೈಬಿಡದೆ ಕಾಪಾಡಿ ನಡೆಸಿದವರು.


ನಾವು ಉಳಿದಿರುವುದು ಸರ್ವೇಶ್ವರನ ಕರುಣೆಯಿಂದ ಆತನ ಕೃಪಾವರಗಳಿಗೆ ಕೊನೆಯೇ ಇಲ್ಲ.


“ಆದರೂ ಆ ದಿನಗಳಲ್ಲಿ ನಾನು ನಿಮ್ಮನ್ನು ಸಂಪೂರ್ಣವಾಗಿ ನಿರ್ಮೂಲ ಮಾಡುವುದಿಲ್ಲ. ಇದು ಸರ್ವೇಶ್ವರನಾದ ನನ್ನ ನುಡಿ.


ಆಕ್ರಮಣಕಾರರಿಗೆ ಕರೆ; ಸಿಯೋನೆಂಬ ದ್ರಾಕ್ಷಾತೋಟದ ಸಾಲುಗಿಡಗಳನ್ನು ಹಾಳುಮಾಡಿ. ಆದರೆ ಅದನ್ನು ನಿರ್ಮೂಲಮಾಡಬೇಡಿ. ಅದರ ರೆಂಬೆಗಳನ್ನು ಕಿತ್ತುಹಾಕಿ. ಅವು ಸರ್ವೇಶ್ವರನಾದ ನನಗೆ ಸೇರಿದವುಗಳಲ್ಲ.


ನಮ್ಮ ದೇವರಾದ ಸರ್ವೇಶ್ವರ, ನಮ್ಮನ್ನು ಕರುಣಿಸುವವರೂ ಕ್ಷಮಿಸುವವರೂ ಆಗಿದ್ದಾರೆ. ಆದರೆ ನಾವು ಅವರಿಗೆ ವಿರುದ್ಧ ತಿರುಗಿಬಿದ್ದೆವು.


ನೀವು ಸರ್ವೇಶ್ವರನಿಗೆ ಅಭಿಮುಖರಾದರೆ, ನಿಮ್ಮ ಸಹೋದರರೂ ಮಕ್ಕಳೂ ತಮ್ಮನ್ನು ಸೆರೆಯೊಯ್ದವರ ದೃಷ್ಟಿಯಲ್ಲಿ ದಯೆಗೆ ಪಾತ್ರರಾಗಿ, ಮರಳಿ ಸ್ವದೇಶಕ್ಕೆ ಬರುವರು. ನಿಮ್ಮ ದೇವರಾದ ಸರ್ವೇಶ್ವರ ದಯಾವಂತರು, ಕನಿಕರವುಳ್ಳವರು. ತಮಗೆ ಅಭಿಮುಖರಾಗುವ ನಿಮ್ಮನ್ನು ಕಟಾಕ್ಷಿಸದೆ ಇರುವುದಿಲ್ಲ.”


ಆದರೂ ಸರ್ವೇಶ್ವರ ಅವರನ್ನು ಸಂಪೂರ್ಣವಾಗಿ ಹಾಳುಮಾಡಗೊಡಲಿಲ್ಲ. ಅವರನ್ನು ಈ ಕಾಲದಲ್ಲಿಯೂ ತಮ್ಮ ಸನ್ನಿಧಿಯಿಂದ ತಳ್ಳಿಬಿಡಲಿಲ್ಲ. ತಾವು ಅಬ್ರಹಾಮ್, ಇಸಾಕ್, ಯಕೋಬರೊಡನೆ ಮಾಡಿಕೊಂಡ ಒಡಂಬಡಿಕೆಯನ್ನು ಸ್ಮರಿಸಿ, ಅವರಿಗೆ ದಯೆತೋರಿಸಿದರು; ಕರುಳುಕರಗಿದವರಾಗಿ ಅವರಿಗೆ ಪ್ರಸನ್ನರಾದರು.


ನಿಮ್ಮ ದೇವರಾದ ಸರ್ವೇಶ್ವರ ದಯಾಮಯ ದೇವರು. ಅವರು ನಿಮ್ಮನ್ನು ಅಲಕ್ಷ್ಯ ಮಾಡುವುದಿಲ್ಲ. ವಿನಾಶಕ್ಕೆ ಬಿಟ್ಟುಬಿಡುವುದಿಲ್ಲ. ನಿಮ್ಮ ಪೂರ್ವಜರ ಸಂಗಡ ಅವರು ಪ್ರಮಾಣಪೂರ್ವಕವಾಗಿ ಮಾಡಿಕೊಂಡ ಒಡಂಬಡಿಕೆಯನ್ನು ಮರೆತುಬಿಡುವುದಿಲ್ಲ.


ಹೀಗಿದ್ದರು ನೀವಾದಿರಿ ಅವರಿಗೆ ಕರುಣಾನಿಧಿ ತೊರೆದುಬಿಡಲಿಲ್ಲ ನೀವವರನು ಮರುಭೂಮಿಯಲಿ. ಬಿಟ್ಟುಹೋಗಲಿಲ್ಲ ದಾರಿತೋರಿದಾ ಮೇಘಸ್ತಂಭ ಹಗಲಲಿ ಮುನ್ನಡೆಯಿತು ಬೆಳಕನೀಯುತಾ ಅಗ್ನಿಸ್ತಂಭ ಇರುಳಲಿ.


ಆದರೂ ನನ್ನ ಹೆಸರು ಕೆಡದಂತೆ ತಡೆಹಿಡಿವೆನು ನಿನ್ನ ಮೇಲಣ ಕೋಪವನು; ನನ್ನ ಕೀರ್ತಿಗೆ ಕಳಂಕ ಬಾರದಂತೆ ತಾಳಿಕೊಳ್ಳುವೆನು, ನಿರ್ಮೂಲಮಾಡದೆ ನಿನ್ನನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು