ನೆಹೆಮೀಯ 9:15 - ಕನ್ನಡ ಸತ್ಯವೇದವು C.L. Bible (BSI)15 ಹಸಿದಿದ್ದಾಗ ಅವರಿಗಿತ್ತಿರಿ ಉಣವನು ಆಗಸದಿಂದ ಬಾಯಾರಿದ್ದಾಗ ನೀರ ಬರಮಾಡಿದಿರಿ ಬಂಡೆಯೊಳಗಿಂದ ವಾಗ್ದತ್ತ ನಾಡ ಸೇರಿ ಸ್ವಾಧೀನಪಡಿಸಿಕೊಂಡರು ನಿಮ್ಮಾಜ್ಞೆಯಿಂದ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201915 ಅವರಿಗೆ ಹಸಿವಾದಾಗ ಪರಲೋಕದಿಂದ ಆಹಾರವನ್ನು ಕೊಟ್ಟು, ಬಾಯಾರಿದಾಗ ಬಂಡೆಯೊಳಗಿಂದ ನೀರನ್ನು ಬರಮಾಡಿ, ಪ್ರಮಾಣಪೂರ್ವಕವಾಗಿ ವಾಗ್ದಾನಮಾಡಿದ ದೇಶದಲ್ಲಿ ನೀವು ಸೇರಿ ಅದನ್ನು ಸ್ವಾಧೀನಮಾಡಿಕೊಳ್ಳಿರಿ ಎಂದು ಅವರಿಗೆ ಆಜ್ಞಾಪಿಸಿದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)15 ಅವರು ಹಸಿದಾಗ ಆಕಾಶದಿಂದ ಆಹಾರವನ್ನು ಕೊಟ್ಟು ಬಾಯಾರಿದಾಗ ಬಂಡೆಯೊಳಗಿಂದ ನೀರನ್ನು ಬರಮಾಡಿ ಪ್ರಮಾಣಪೂರ್ವಕವಾಗಿ ವಾಗ್ದಾನಮಾಡಿದ ದೇಶದಲ್ಲಿ ನೀವು ಸೇರಿ ಅದನ್ನು ಸ್ವಾಧೀನಮಾಡಿಕೊಳ್ಳಿರಿ ಎಂದು ಅವರಿಗೆ ಆಜ್ಞಾಪಿಸಿದಿ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್15 ಅವರು ಹಸಿದಿದ್ದಾಗ ಪರಲೋಕದಿಂದ ಊಟವನ್ನು ಅವರಿಗೆ ದಯಪಾಲಿಸಿದೆ. ಅವರು ಬಾಯಾರಿದಾಗ ಬಂಡೆಯಿಂದ ಅವರಿಗೆ ನೀರನ್ನು ಕೊಟ್ಟೆ. ನೀನು ಅವರಿಗೆ, ‘ಬನ್ನಿ, ಈ ದೇಶವನ್ನು ತೆಗೆದುಕೊಳ್ಳಿರಿ’ ಎಂದು ಹೇಳಿದೆ. ನಿನ್ನ ಪರಾಕ್ರಮವನ್ನು ತೋರಿಸಿದೆ. ಅವರಿಗಾಗಿ ಭೂಮಿಯನ್ನು ತೆಗೆದುಕೊಂಡೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ15 ಅವರು ಹಸಿದಾಗ ಆಕಾಶದಿಂದ ಆಹಾರವನ್ನು ಕೊಟ್ಟು, ಬಾಯಾರಿದಾಗ ಬಂಡೆಯೊಳಗಿಂದ ನೀರನ್ನು ಬರಮಾಡಿದಿರಿ. ನಿಮ್ಮ ಉನ್ನತ ಹಸ್ತದಿಂದ ವಾಗ್ದಾನ ಮಾಡಿದ ದೇಶದಲ್ಲಿ ನೀವು ಅವರನ್ನು ಸೇರಿಸಿ, ಅದನ್ನು ಸ್ವಾಧೀನಮಾಡಿಕೊಳ್ಳಿರಿ ಎಂದು ಅವರಿಗೆ ಹೇಳಿದಿರಿ. ಅಧ್ಯಾಯವನ್ನು ನೋಡಿ |