Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನೆಹೆಮೀಯ 9:12 - ಕನ್ನಡ ಸತ್ಯವೇದವು C.L. Bible (BSI)

12 ಹಗಲಲಿ ಅವರ ಮುಂದೆ ಸಾಗಿದಿರಿ ಮೇಘಸ್ತಂಭದಂತೆ ಇರುಳಲಿ ದಾರಿತೋರಿದಿರಿ ಬೆಳಕನೀವ ಅಗ್ನಿಸ್ತಂಭದಂತೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಹಗಲಿನಲ್ಲಿ ಮೇಘಸ್ತಂಭವಾಗಿಯೂ, ರಾತ್ರಿ ವೇಳೆಯಲ್ಲಿ ಅವರು ನಡೆಯತಕ್ಕ ದಾರಿಯಲ್ಲಿ ಬೆಳಕುಕೊಡುವುದಕ್ಕೆ ಅಗ್ನಿಸ್ತಂಭವಾಗಿಯೂ ಅವರ ಮುಂದೆ ನೀನು ನಡೆದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಹಗಲುಹೊತ್ತಿನಲ್ಲಿ ಮೇಘಸ್ತಂಭದಲ್ಲಿಯೂ ರಾತ್ರಿವೇಳೆಯಲ್ಲಿ ಅವರು ನಡೆಯ ತಕ್ಕ ದಾರಿಯಲ್ಲಿ ಬೆಳಕುಕೊಡುವದಕ್ಕೆ ಅಗ್ನಿ ಸ್ತಂಭದಲ್ಲಿಯೂ ಅವರ ಮುಂದೆ ಹೋದಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಹಗಲಿನಲ್ಲಿ ಅವರನ್ನು ನಡೆಸಲು ಮೇಘಸ್ತಂಭವನ್ನು ಉಪಯೋಗಿಸಿದೆ. ರಾತ್ರಿವೇಳೆಯಲ್ಲಿ ಅಗ್ನಿಸ್ತಂಭವನ್ನು ಉಪಯೋಗಿಸಿದೆ. ಹೀಗೆ ಅವರ ಮಾರ್ಗವನ್ನು ಬೆಳಕಿನಿಂದ ಹೊದಿಸಿದೆ. ಎಲ್ಲಿಗೆ ಹೋಗಬೇಕೆಂದು ಅವರಿಗೆ ತೋರಿಸಿದಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಇದಲ್ಲದೆ ಹಗಲಿನಲ್ಲಿ ಮೇಘಸ್ತಂಭದಿಂದಲೂ, ಅವರು ನಡೆಯಬೇಕಾದ ಮಾರ್ಗದಲ್ಲಿ ಅವರಿಗೆ ಬೆಳಕಾಗುವ ಹಾಗೆ ರಾತ್ರಿಯಲ್ಲಿ ಅಗ್ನಿ ಸ್ತಂಭದಿಂದಲೂ ಅವರನ್ನು ನಡೆಸಿದಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನೆಹೆಮೀಯ 9:12
12 ತಿಳಿವುಗಳ ಹೋಲಿಕೆ  

ಹೀಗಿದ್ದರು ನೀವಾದಿರಿ ಅವರಿಗೆ ಕರುಣಾನಿಧಿ ತೊರೆದುಬಿಡಲಿಲ್ಲ ನೀವವರನು ಮರುಭೂಮಿಯಲಿ. ಬಿಟ್ಟುಹೋಗಲಿಲ್ಲ ದಾರಿತೋರಿದಾ ಮೇಘಸ್ತಂಭ ಹಗಲಲಿ ಮುನ್ನಡೆಯಿತು ಬೆಳಕನೀಯುತಾ ಅಗ್ನಿಸ್ತಂಭ ಇರುಳಲಿ.


ಬೆಳಿಗ್ಗೆ ಸ್ಮರಿಸಮಾಡು ನಿನ್ನಚಲ ಪ್ರೀತಿಯನು I ನಿನ್ನಲ್ಲಿಯೆ ಇಟ್ಟಿರುವೆನು ನನ್ನ ನಂಬಿಕೆಯನು I ತೋರಿಸು ನನಗೆ ನಾ ಹಿಡಿಯಬೇಕಾದ ಮಾರ್ಗವನು I ನಿನ್ನ ಕಡೆಗೆ ಎತ್ತಿರುವೆನು ನನ್ನ ಹೃನ್ಮನಗಳನು II


ಸರಿಯಾದ ದಾರಿಯಲಿ ನಡೆಸಿದನವರನು I ಸೇರಮಾಡಿದನು ಜನವಾಸಿಸುವ ಊರನು II


ಹಗಲೊಳು ಮೋಡವಿತ್ತನವರಿಗೆ ನೆರಳಿಗೋಸ್ಕರ I ಇರುಳೊಳು ಬೆಂಕಿಯಿತ್ತನವರಿಗೆ ಬೆಳಕಿಗೋಸ್ಕರ II


ಹಗಲಲಿ ಕರೆದೊಯ್ದನು ಮೇಘದ ನೆರಳಲಿ I ಇರುಳೊಳು ನಡೆಸಿದನು ಜ್ವಾಲೆಯ ಬೆಳಕಲಿ II


ನೀ ಬಿಡುಗಡೆ ಮಾಡಿದ ಜನರನ್ನು ನಡೆಸಿಕೊಂಡೆ ಪ್ರೀತಿಯಿಂದ ನಿನ್ನ ಶ್ರೀನಿವಾಸದ ತನಕ ಅವರನ್ನು ಬರಮಾಡಿದೆ ಶಕ್ತಿಯಿಂದ.


ಅದು ಸದಾ ಹಾಗೆಯೇ ಇರುತ್ತಿತ್ತು. ಆ ಮೇಘ ದೇವಸ್ಥಾನವನ್ನು ಆವರಿಸಿಕೊಳ್ಳುತ್ತಿತ್ತು; ರಾತ್ರಿವೇಳೆಯಲ್ಲಿ ಬೆಂಕಿಯಂತೆ ಕಾಣಿಸುತ್ತಿತ್ತು.


ನೀವು ಹೋಗಬೇಕಾದ ದಾರಿಯನ್ನು ತೋರಿಸುವುದಕ್ಕೂ ಕಂಡು ಇಳಿಯಬೇಕಾದ ಸ್ಥಳಗಳನ್ನು ಗೊತ್ತುಮಾಡುವುದಕ್ಕೂ ಇರುಳಲ್ಲಿ ಬೆಂಕಿಯಲ್ಲೂ ಹಗಲಲ್ಲಿ ಮೇಘದಲ್ಲೂ ನಿಮ್ಮ ಮುಂದುಗಡೆ ಹೋದ ದೇವರನ್ನು ನೀವು ನಂಬಲಿಲ್ಲ.


ಕೆಲವೊಮ್ಮೆ ಆ ಮೇಘ ಸಾಯಂಕಾಲದಿಂದ ಹೊತ್ತಾರೆಯವರೆಗೆ ಇರುತ್ತಿತ್ತು. ಬೆಳಿಗ್ಗೆ ಅದು ಮೇಲಕ್ಕೆ ಎದ್ದಾಗ ಜನರು ಪ್ರಯಾಣ ಮಾಡುತ್ತಿದ್ದರು. ಕೆಲವು ಸಲ ಅದು ಹಗಲಿರುಳೂ ನಿಂತಿರುತ್ತಿತ್ತು. ಅದು ಯಾವಾಗ ಮೇಲೇಳುತ್ತಿತ್ತೋ ಆಗ ಜನರು ಹೊರಡುತ್ತಿದ್ದರು.


ನಾನು ಅವರಿಗೆ ‘ನಾಡುಗಳಲ್ಲೆಲ್ಲ ಶ್ರೀಮಂತವಾದ ನಾಡನ್ನು ನಿಮಗಾಗಿ ನೋಡಿದ್ದೇನೆ; ನಾನು ನಿಮ್ಮನ್ನು ಈಜಿಪ್ಟ್ ದೇಶದಿಂದ ಉದ್ಧರಿಸಿ ಹಾಲೂ ಜೇನೂ ಹರಿಯುವ ಆ ನಾಡಿಗೆ ಸೇರಿಸುವೆನು’ ಎಂದು ಪ್ರಮಾಣಮಾಡಿದೆ;


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು