Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನೆಹೆಮೀಯ 8:17 - ಕನ್ನಡ ಸತ್ಯವೇದವು C.L. Bible (BSI)

17 ನೂನನ ಮಗ ಯೆಹೋಶುವನ ಕಾಲದಿಂದ ಆವರೆಗೂ ಇಸ್ರಯೇಲರು ಹೀಗೆ ಮಾಡಿರಲಿಲ್ಲ. ಸೆರೆಯಿಂದ ಹಿಂತಿರುಗಿಬಂದ ಸರ್ವಸಮಾಜದವರು ಪರ್ಣಕುಟೀರಗಳನ್ನು ಮಾಡಿಕೊಂಡು, ಅವುಗಳಲ್ಲಿ ವಾಸಿಸುತ್ತಾ, ಬಹು ಸಂತೋಷಪಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ನೂನನ ಮಗನಾದ ಯೆಹೋಶುವನ ಕಾಲದಿಂದ ಆ ವರೆಗೂ ಇಸ್ರಾಯೇಲರು ಹೀಗೆ ಮಾಡಿರಲಿಲ್ಲ. ಸೆರೆಯಿಂದ ಹಿಂತಿರುಗಿ ಬಂದ ಸರ್ವ ಸಮೂಹದವರಾದರೋ ಬಿಡಾರಗಳನ್ನು ಮಾಡಿಕೊಂಡು ಅವುಗಳಲ್ಲಿ ವಾಸಮಾಡುತ್ತಾ ಬಹಳ ಸಂತೋಷಪಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ನೂನನ ಮಗನಾದ ಯೆಹೋಶುವನ ಕಾಲದಿಂದ ಆವರೆಗೂ ಇಸ್ರಾಯೇಲ್ಯರು ಹೀಗೆ ಮಾಡಿದ್ದಿಲ್ಲ. ಸೆರೆಯಿಂದ ತಿರಿಗಿ ಬಂದ ಸರ್ವಸಮೂಹದವರಾದರೋ ಪರ್ಣಶಾಲೆಗಳನ್ನು ಮಾಡಿಕೊಂಡು ಅವುಗಳಲ್ಲಿ ವಾಸಿಸುತ್ತಾ ಬಹು ಸಂತೋಷಪಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಸೆರೆವಾಸದಿಂದ ಮರಳಿಬಂದ ಇಸ್ರೇಲರು ಬಿಡಾರಗಳನ್ನು ಹಾಕಿಕೊಂಡು ಅವುಗಳಲ್ಲಿ ವಾಸಿಸಿದರು. ನೂನನ ಮಗನಾದ ಯೆಹೋಶುವನ ಕಾಲದಿಂದ ಇಂದಿನವರೆಗೂ ಇಸ್ರೇಲರು ಇಂಥ ಪರ್ಣಶಾಲೆಗಳ ಹಬ್ಬವನ್ನು ಆಚರಿಸಲಿಲ್ಲ. ಪ್ರತಿಯೊಬ್ಬರೂ ಬಹು ಸಂತೋಷಗೊಂಡಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಈ ಪ್ರಕಾರ ಸೆರೆಯಿಂದ ತಿರುಗಿ ಬಂದ ಸಭೆಯವರೆಲ್ಲರು ಪರ್ಣಶಾಲೆಗಳನ್ನು ಹಾಕಿ, ಅದರಲ್ಲಿ ವಾಸವಾಗಿದ್ದರು. ನೂನನ ಮಗ ಯೆಹೋಶುವನ ದಿನವು ಮೊದಲುಗೊಂಡು ಆ ದಿವಸದವರೆಗೂ ಇಸ್ರಾಯೇಲರು ಹಾಗೆ ಮಾಡಿರಲಿಲ್ಲ. ಅಲ್ಲಿ ಅವರಿಗೆ ಬಹಳ ಸಂತೋಷವಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನೆಹೆಮೀಯ 8:17
13 ತಿಳಿವುಗಳ ಹೋಲಿಕೆ  

ಮೋಶೆಯ ಆಜ್ಞೆಯಂತೆ, ಸಬ್ಬತ್‍ದಿನ, ಅಮಾವಾಸ್ಯೆ, ಇವುಗಳಲ್ಲೂ ಹುಳಿರಹಿತ ರೊಟ್ಟಿಗಳ ಜಾತ್ರೆ, ಪಂಚಾಶತ್ತಮ ದಿನದ ಜಾತ್ರೆ, ಪರ್ಣಕುಟೀರಗಳ ಜಾತ್ರೆ ಎಂಬೀ ಮೂರು ವಾರ್ಷಿಕ ಜಾತ್ರೆಗಳಲ್ಲೂ ಆಯಾ ದಿವಸಗಳಿಗೆ ನೇಮಕವಾದ ದಹನಬಲಿಗಳನ್ನು ಸಮರ್ಪಿಸುತ್ತಿದ್ದನು.


ಇದಲ್ಲದೆ ಶಾಸ್ತ್ರದಲ್ಲಿ ಬರೆದಿರುವಂತೆ ಅವರು ಪರ್ಣಕುಟೀರಗಳ ಜಾತ್ರೆಯನ್ನು ಆಚರಿಸಿ, ದಿನಕ್ಕೆ ಇಷ್ಟಿಷ್ಟೆಂಬ ವಿಧಿಗನುಸಾರವಾಗಿ ಪ್ರತಿದಿನವೂ ದಹನಬಲಿಗಳನ್ನರ್ಪಿಸಿದರು.


ಇವರೆಲ್ಲರೂ ವಿಶ್ವಾಸವುಳ್ಳವರಾಗಿಯೇ ಮೃತರಾದರು. ದೇವರು ವಾಗ್ದಾನಮಾಡಿದವುಗಳನ್ನು ಪಡೆಯದಿದ್ದರೂ ಅವುಗಳನ್ನು ದೂರದಿಂದಲೇ ನೋಡಿ ಸ್ವಾಗತಿಸಿ ಸಂತೋಷಪಟ್ಟರು; ತಾವು ಜಗತ್ತಿನಲ್ಲಿ ಕೇವಲ ಪರದೇಶಿಗಳೂ ಪ್ರವಾಸಿಗರೂ ಎಂಬುದನ್ನು ಒಪ್ಪಿಕೊಂಡರು.


ದೇವರು ವಾಗ್ದಾನ ಮಾಡಿದ ನಾಡಿಗೆ ಬಂದಾಗಲೂ ಆತನು ಅದೇ ವಿಶ್ವಾಸದ ನಿಮಿತ್ತ ಒಬ್ಬ ಅನ್ಯದೇಶಿಯನಂತೆ ಬಾಳಿದನು. ಡೇರೆಗಳಲ್ಲಿದ್ದುಕೊಂಡು ಒಬ್ಬ ಪ್ರವಾಸಿಗನಂತೆ ಜೀವಿಸಿದನು. ಅದೇ ವಾಗ್ದಾನಕ್ಕೆ ಸಹಬಾಧ್ಯಸ್ಥರಾದ ಇಸಾಕನೂ ಯಕೋಬನೂ ಅವನಂತೆಯೇ ಡೇರೆಗಳಲ್ಲಿ ವಾಸಿಸಿದರು.


ಯೆಹೋಶುವನು ಆ ಜನರನ್ನು ವಾಗ್ದತ್ತ ವಿಶ್ರಾಂತಿಗೆ ಸೇರಿಸಿದ್ದರೆ ದೇವರು ಬೇರೊಂದು ದಿನವನ್ನು ಗೊತ್ತುಮಾಡುತ್ತಿರಲಿಲ್ಲ.


ಆ ದಿವ್ಯವಾಣಿ ಮನುಷ್ಯ ಆದರು. ಮನುಷ್ಯನಾಗಿ ನಮ್ಮೊಡನೆ ವಾಸಮಾಡಿದರು. ಅವರ ಮಹಿಮೆಯನ್ನು ನಾವು ನೋಡಿದೆವು, ಪಿತನಿಂದ ಪಡೆದ ಆ ಮಹಿಮೆ ಏಕೈಕ ಪುತ್ರನಿಗೆ ಮೀಸಲಾದ ಮಹಿಮೆಯೇ. ಎಂದೇ ಅವರು ವರಪ್ರಸಾದದಿಂದಲೂ ಸತ್ಯದಿಂದಲೂ ಪರಿಪೂರ್ಣರಾಗಿದ್ದರು.


ಇಂಥಾ ಪಾಸ್ಕಹಬ್ಬ ಪ್ರವಾದಿ ಸಮುವೇಲನ ದಿವಸಗಳಿಂದ ಇಸ್ರಯೇಲರಲ್ಲಿ ನಡೆದಿರಲಿಲ್ಲ. ಯೋಷೀಯನು, ಯಾಜಕರು, ಲೇವಿಯರು, ಕೂಡಿಬಂದಿದ್ದ ಇಸ್ರಯೇಲರು, ಯೆಹೂದ್ಯರು, ಹಾಗು ಜೆರುಸಲೇಮಿನವರು ಈ ಪಾಸ್ಕಹಬ್ಬವನ್ನು ಆಚರಿಸಿದಂತೆ ಇಸ್ರಯೇಲ್ ಅರಸರಲ್ಲಿ ಒಬ್ಬನೂ ಆಚರಿಸಿರಲಿಲ್ಲ.


ದಾವೀದನ ಮಗನೂ ಇಸ್ರಯೇಲರ ಅರಸನೂ ಆದ ಸೊಲೊಮೋನನ ಕಾಲದಿಂದ ಜೆರುಸಲೇಮಿನಲ್ಲಿ ಅಂಥ ಉತ್ಸವ ನಡೆದಿರಲಿಲ್ಲ. ಆದುದರಿಂದ ಜೆರುಸಲೇಮಿನಲ್ಲಿ ಹೇಳತೀರದ ಆನಂದವಿತ್ತು.


ಸರ್ವೇಶ್ವರನ ಸನ್ನಿಧಿಯಲ್ಲಿ ಮಹಾಸಂತೋಷದಿಂದ ಅನ್ನಪಾನಗಳನ್ನು ತೆಗೆದುಕೊಂಡರು. ದಾವೀದನ ಮಗ ಸೊಲೊಮೋನನನ್ನು ಮತ್ತೆ ಅರಸನನ್ನಾಗಿ ಆರಿಸಿಕೊಂಡು, ಅವನು ರಾಜನಾಗುವುದಕ್ಕೂ ಚಾದೋಕನು ಯಾಜಕನಾಗುವುದಕ್ಕೂ ಅಭಿಷೇಕಿಸಿ, ಸರ್ವೇಶ್ವರನಿಗೆ ಪ್ರತಿಷ್ಠಿಸಿದರು.


ಸರ್ವೇಶ್ವರಸ್ವಾಮಿ, ತಮ್ಮ ದಾಸ ಮೋಶೆ ಮರಣಹೊಂದಿದ ಮೇಲೆ ಅವನ ಶಿಷ್ಯನಾದ ನೂನನ ಮಗ ಯೆಹೋಶುವನಿಗೆ ಹೀಗೆಂದು ಆಜ್ಞಾಪಿಸಿದರು:


ನಿಮ್ಮ ಸರ್ವೇಶ್ವರ ಆರಿಸಿಕೊಳ್ಳುವ ಸ್ಥಳದಲ್ಲಿ ನೀವು ಏಳು ದಿನವೂ ಆ ಜಾತ್ರೆಯನ್ನು ಆಚರಿಸಬೇಕು. ನಿಮ್ಮ ವ್ಯವಸಾಯವನ್ನೂ ಬೇರೆ ಎಲ್ಲಾ ಕೆಲಸಗಳನ್ನೂ ಅವರು ಸಫಲಗೊಳಿಸಿದ್ದರಿಂದ ನೀವು ಬಹಳ ಆನಂದದಿಂದಿರಬೇಕು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು