Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನೆಹೆಮೀಯ 5:3 - ಕನ್ನಡ ಸತ್ಯವೇದವು C.L. Bible (BSI)

3 ಇನ್ನು ಕೆಲವರು, “ನಮ್ಮ ಹೊಲ, ತೋಟ, ಮನೆಗಳನ್ನು ಅಡವು ಇಟ್ಟಾಯಿತು; ಹಾಗೆ ಮಾಡಿಯಾದರೂ ಈ ಬರಗಾಲದಲ್ಲಿ ಧಾನ್ಯವನ್ನು ಸಂಪಾದಿಸಿಕೊಳ್ಳಬೇಕಾಗಿದೆ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಇನ್ನು ಕೆಲವರು, “ಬರಗಾಲದಲ್ಲಿ ಧಾನ್ಯವನ್ನು ಸಂಪಾದಿಸಿಕೊಳ್ಳಲು ನಮ್ಮ ಹೊಲ, ದ್ರಾಕ್ಷಿತೋಟ, ಮನೆಗಳನ್ನು ಒತ್ತೆ ಇಟ್ಟಿದ್ದೇವೆ” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಇನ್ನು ಕೆಲವರು - ನಮ್ಮ ಹೊಲ ತೋಟಮನೆಗಳನ್ನು ಒತ್ತೆ ಹಾಕಿ ಆಯಿತು; ಈ ಬರಗಾಲದಲ್ಲಿ ಧಾನ್ಯವನ್ನು [ಹೇಗಾದರೂ] ಸಂಪಾದಿಸಿಕೊಳ್ಳೋಣ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಇನ್ನು ಕೆಲವರು, “ನಮಗೀಗ ಬರಗಾಲ ಪ್ರಾಪ್ತಿಯಾಗಿದೆ. ನಮಗೆ ದವಸಧಾನ್ಯ ಕೊಂಡುಕೊಳ್ಳಲು ನಮ್ಮ ಹೊಲಗದ್ದೆಗಳನ್ನು ಮಾರಬೇಕಾಗುತ್ತದೆ” ಅಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಕೆಲವರು, “ಈ ಬರಗಾಲದಲ್ಲಿ ನಾವು ಧಾನ್ಯ ಕೊಂಡುಕೊಳ್ಳುವ ಹಾಗೆ ನಮ್ಮ ಹೊಲಗಳನ್ನೂ, ದ್ರಾಕ್ಷಿತೋಟಗಳನ್ನೂ, ಮನೆಗಳನ್ನೂ ಒತ್ತೆ ಇಟ್ಟೆವು,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನೆಹೆಮೀಯ 5:3
7 ತಿಳಿವುಗಳ ಹೋಲಿಕೆ  

“ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಕೊಡುವ ನಾಡಿನ ಯಾವ ಊರಲ್ಲಿಯಾದರೂ ಸ್ವದೇಶದವನಾದ ಬಡವನು ಇದ್ದರೆ, ನೀವು ಆ ಬಡ ಸಹೋದರನ ಬಗ್ಗೆ ಮನಸ್ಸನ್ನು ಕಠಿಣಮಾಡಿಕೊಳ್ಳಬೇಡಿ. ಅವನಿಗೆ ಸಹಾಯಮಾಡದೆ ಇರಬೇಡಿ.


ಕೆಲವರು, “ನಮಗೆ ಗಂಡುಹೆಣ್ಣು ಮಕ್ಕಳು ಬಹುಮಂದಿ ಇದ್ದಾರೆ; ನಮ್ಮ ಜೀವನಕ್ಕಾಗಿ ಕಾಳುಕಡ್ಡಿಗಳನ್ನು ಹೇಗಾದರೂ ಸಂಪಾದಿಸಿಕೊಳ್ಳಬೇಕಾಗಿ ಇದೆ,” ಎಂದರು.


ಮತ್ತೆ ಕೆಲವರು “ಸರಕಾರಕ್ಕೆ ಕಂದಾಯ ಕೊಡುವುದಕ್ಕಾಗಿ ನಮ್ಮ ಹೊಲ, ತೋಟಗಳ ಮೇಲೆ ಸಾಲ ತೆಗೆದುಕೊಳ್ಳಬೇಕಾಯಿತು;


ಅವರ ಹೊಲ, ದ್ರಾಕ್ಷೀತೋಟ, ಎಣ್ಣೆಮರಗಳ ತೋಪು, ಮನೆ ಇವುಗಳನ್ನು ಹಿಂದಕ್ಕೆ ಕೊಟ್ಟುಬಿಡಿ. ನೀವು ಕೊಟ್ಟ ಹಣ, ಧಾನ್ಯ, ದ್ರಾಕ್ಷಾರಸ, ಎಣ್ಣೆ ಇವುಗಳಿಗೆ ಶೇಕಡಾ ಇಷ್ಟೆಂದು ವಸೂಲಿಮಾಡುವ ಹಕ್ಕನ್ನೂ ಕೂಡ ದಯವಿಟ್ಟು ಈ ದಿನವೇ ರದ್ದುಗೊಳಿಸಿ,” ಎಂದು ಹೇಳಿದೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು